ಮುಂಬೈ: ಕರ್ನಾಟಕ ಮೂಲದ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕಿನ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್, ಆ ಬ್ಯಾಂಕಿನ ಪರವಾನಗಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಿದೆ. ತಕ್ಷಣಕ್ಕೆ ಲಿಕ್ವಿಡೇಟರ್ ನೇಮಿಸಲು ಆದೇಶ ಹೊರಡಿಸುವಂತೆ, ಕರ್ನಾಟಕ ಸಹಕಾರ ಸಂಘದ ರಿಜಿಸ್ಟ್ರಾರ್, ರಿಸರ್ವ್ ಬ್ಯಾಂಕ್ ಅನ್ನು ಕೋರಿದೆ.
https://chat.whatsapp.com/FCEnlTkAKCC0MGPhXtX4i4
ಕರ್ನಾಟಕದ ಗಡಿಭಾಗ ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿರುವ ಶ್ರೀ ಮಹಾಲಕ್ಷ್ಮಿ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಲೈಸೆನ್ಸ್ ಅನ್ನು ಪರವಾನಗಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ, ಭಾರತೀಯ ರಿಸರ್ವ್ ಬ್ಯಾಂಕ್ ರದ್ದು ಮಾಡಿದೆ. ಗುರುವಾರದಿಂದ (ಜೂನ್ 18) ಯಾವುದೇ ವಹಿವಾಟು ನಡೆಸದಂತೆ ನಿರ್ಬಂಧ ಹೇರಿದೆ. ಬ್ಯಾಂಕಿನ ಆರ್ಥಿಕ ಪರಿಸ್ಥಿತಿ ಹದೆಗೆಟ್ಟ ಹಿನ್ನಲೆಯಲ್ಲಿ, ರಿಸರ್ವ್ ಬ್ಯಾಂಕ್ ಈ ನಿರ್ಧಾರ ತೆಗೆದುಕೊಂಡಿದೆ. ಬ್ಯಾಂಕ್ ವಹಿವಾಟು ಮುಕ್ತಾಯಗೊಳಿಸಲು, ಲಿಕ್ವಿಡೇಟರ್ ನೇಮಿಸಲು ಆದೇಶ ಹೊರಡಿಸುವಂತೆ, ಕರ್ನಾಟಕ ಸಹಕಾರ ಸಂಘಗಳ ರಿಜಿಸ್ಟ್ರಾರ್ ರಿಸರ್ವ್ ಬ್ಯಾಂಕಿಗೆ ( RBI ) ಮನವಿ ಸಲ್ಲಿಸಿದೆ.
ಭವಿಷ್ಯದಲ್ಲಿ ಮತ್ತೆ ಲಾಭ ಗಳಿಸುವ ಆಶಾಭಾವ ಇಲ್ಲದ ಕಾರಣ ಲೈಸೆನ್ಸ್ ರದ್ದು ಮಾಡಲಾಗಿದೆ ಎಂದು ಹೇಳಲಾಗಿದೆ. ಬ್ಯಾಂಕ್ ತನ್ನ ಗ್ರಾಹಕರಿಗೆ ಹಣ ಪಾವತಿಸಲು ಅಸಮರ್ಥವಾಗಿರುವುದು, ಬ್ಯಾಂಕಿನಲ್ಲಿ ಸಾಕಷ್ಟು ಬಂಡವಾಳ ಇಲ್ಲದಿರುವ ಕಾರಣದಿಂದಲೂ ಭಾರತೀಯ ರಿಸರ್ವ್ ಬ್ಯಾಂಕ್, ಲೈಸೆನ್ಸ್ ರದ್ದು ಮಾಡುವ ನಿರ್ಧಾರಕ್ಕೆ ಬಂದಿದೆ.
ಬ್ಯಾಂಕ್ ದಿವಾಳಿಯಾದಲ್ಲಿ (ಲಿಕ್ವಿಡೇಷನ್) ಸುಮಾರು ಶೇ. 97.9ರಷ್ಟು ಠೇವಣಿದಾರರು ಡಿಐಸಿಜಿಸಿ ಇಲಾಖೆಯ ಮೂಲಕ, ತಮ್ಮ ಸಂಪೂರ್ಣ ಠೇವಣಿ ಹಣ ವಾಪಸ್ ಪಡೆಯಲಿದ್ದಾರೆ. ಗುರುವಾರ, ಹೊರಡಿಸಲಾದ ಪ್ರಕಟಣೆಯಲ್ಲಿ ಬ್ಯಾಂಕಿನ ವ್ಯವಹಾರಗಳನ್ನು ಸಂಪೂರ್ಣವಾಗಿ ನಿಲ್ಲಿಸಲು, ಲಿಕ್ವಿಡೇಟರ್ ಅನ್ನು ನೇಮಿಸುವಂತೆ, ರಿಸರ್ವ್ ಬ್ಯಾಂಕ್ ಅನ್ನು ಕೋರಲಾಗಿದೆ. ಬ್ಯಾಂಕ್ ದಿವಾಳಿಯಾದರೆ, ಪ್ರತಿಯೊಬ್ಬ ಠೇವಣಿದಾರರು ತಮ್ಮ ಠೇವಣಿಯ ಮೊತ್ತವನ್ನು ಡಿಐಸಿಜಿಸಿ (Deposit Insurance And Credit Guarantee Corporation) ಇಲಾಖೆಯಿಂದ, ಐದು ಲಕ್ಷ ರೂಪಾಯಿವರೆಗಿನ ವಿಮಾ ಹಣದ ಮರುಪಾವತಿಯನ್ನು ನಿಯಮಾವಳಿಗಳ ಪ್ರಕಾರ, ಪಡೆಯಲು ಅರ್ಹರಾಗಿರುತ್ತಾರೆ. ಬ್ಯಾಂಕಿನ ಬಹುತೇಕ ಠೇವಣಿದಾರರು, ತಮ್ಮ ಸಂಪೂರ್ಣ ಹಣವನ್ನು ಮರಳಿ ಪಡೆಯಲಿದ್ದಾರೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.
ಶ್ರೀ ಮಹಾಲಕ್ಷ್ಮಿ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್, ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949ರ ಪ್ರಕಾರ, ರಿಸರ್ವ್ ಬ್ಯಾಂಕಿನ ನಿಬಂಧನೆಗಳನ್ನು ಅನುಸರಿಸಿರಲಿಲ್ಲ ಎಂದು ಹೇಳಲಾಗುತ್ತಿದೆ. ಬ್ಯಾಂಕಿನ ಸದ್ಯದ ಹಣಕಾಸು ಪರಿಸ್ಥಿತಿ, ಠೇವಣಿದಾರರಿಗೆ ಹಣವನ್ನು ಹಿಂದಿರುಗಿಸುವ ಸ್ಥಿತಿಯಲ್ಲಿಲ್ಲ. ಹಾಗಾಗಿ, ಬ್ಯಾಂಕ್ ವಹಿವಾಟನ್ನು ಹೀಗೇ ಮುಂದುವರಿಸಿದರೆ, ಠೇವಣಿದಾರರ ಹಿತಾಸಕ್ತಿಗೆ ಧಕ್ಕೆ ತರುತ್ತದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

