Author: admin

ಸಿದ್ದಕಟ್ಟೆ: ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಸಿ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದ ಸಿಬ್ಬಂದಿ ಯಶೋಧರ ಶೆಟ್ಟಿಗಾರ್ ನಿವೃತ್ತರಾಗಿದ್ದು, ಅವರನ್ನು ಸಂಘದ ವಾರ್ಷಿಕ ಮಹಾಸಭೆಯಲ್ಲಿ ಗೌರವಿಸಲಾಯಿತು. https://chat.whatsapp.com/JVAtKKe2M19AFO3W5629ZS?mode=ems_copy_t ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭು ಇವರು ಯಶೋಧರ ಶೆಟ್ಟಿಗಾರ್ ಾವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಸಂದೇಶ ಶೆಟ್ಟಿ, ನಿರ್ದೇಶಕರಾದ ಸತೀಶ್ ಪೂಜಾರಿ, ರಶ್ಮಿತ್ ಶೆಟ್ಟಿ, ದಿನೇಶ್ ಪೂಜಾರಿ, ಚಂದ್ರಶೇಖರ ಶೆಟ್ಟಿ, ವೀರಪ್ಪ ಪರವ, ಜಾರಪ್ಪ ನಾಯ್ಕ, ಶಿವ ಗೌಡ, ವಿಶ್ವನಾಥ ಶೆಟ್ಟಿಗಾರ್, ಮಂದರಾತಿ ಎಸ್ ಶೆಟ್ಟಿ, ಪುಷ್ಪಲತಾ ಎಸ್ ಆರ್, ವೃತ್ತಿಪರ ನಿರ್ದೇಶಕರಾದ ರಾಜೇಶ್ ಶೆಟ್ಟಿ , ನವೀನ್ ಹೆಗ್ಡೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟಿ ಉಪಸ್ಥಿತರಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com

Read More

ಬಂಟ್ವಾಳ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವಿಶೇಷ ತರಬೇತಿ ಶಿಬಿರ ಬಂಟ್ವಾಳ: ಸಹಕಾರ ಕ್ಷೇತ್ರ ಪವಿತ್ರವಾದ ಕ್ಷೇತ್ರ. ರಾಸುಗಳ ಖರೀದಿಗೆ ಒಂದು ಎಕರೆ ಭೂಮಿ ಇರುವವರಿಗೆ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಮೂರು ಲಕ್ಷ ರೂ.ವರೆಗೂ ಬಡ್ಡಿ ರಹಿತ ನೀಡುತ್ತಿದೆ. ಇದರ ಸದುಪಯೋಗದ ಬಗ್ಗೆ ಹೈನುಗಾರ ಸದಸ್ಯರಿಗೆ ತಿಳಿಯಪಡಿಸಬೇಕು. ರೈತ ಬೆಳಗಿದರೆ ಭಾರತ ವಿಕಾಸವಾಗುತ್ತದೆ ಎಂದು ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕರೂ ಆಗಿರುವ ಶಶಿಕುಮಾರ್‌ ರೈ ಬಾಲ್ಯೊಟ್ಟು ಅಭಿಪ್ರಾಯಪಟ್ಟರು. https://chat.whatsapp.com/JVAtKKe2M19AFO3W5629ZS?mode=ems_copy_t ಬಂಟ್ವಾಳ ವ್ಯವಸಾಯ ಸೇವಾ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ದ.ಕ ಜಿಲ್ಲಾ ಸಹಕಾರಿ ಯೂನಿಯನ್, ದ.ಕ. ಹಾಲು ಒಕ್ಕೂಟ ನಿಯಮಿತ ಮಂಗಳೂರು ಹಾಗೂ ಸಹಕಾರ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ…

Read More

ನವದೆಹಲಿ: ಭಾರತದ ಪ್ರಮುಖ ರಸಗೊಬ್ಬರ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಕೃಷಕ್ ಭಾರತಿ ಸಹಕಾರಿ ಲಿಮಿಟೆಡ್ (ಕ್ರಿಭ್ಕೋ)ದ 45ನೇ ವಾರ್ಷಿಕ ಸಾಮಾನ್ಯ ಸಭೆ ಗುರುವಾರ ನವದೆಹಲಿಯಲ್ಲಿ ನಡೆದಿದ್ದು, ಪ್ರತಿಷ್ಠಿತ ಸಹಕಾರಿ ಶಿರೋಮಣಿ ಪ್ರಶಸ್ತಿ ಮತ್ತು ಸಹಕಾರಿ ವಿಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿದೆ. https://chat.whatsapp.com/JVAtKKe2M19AFO3W5629ZS?mode=ems_copy_t ಗುಜರಾತ್‌ನ ಸಹಕಾರಿ ಚಳವಳಿಯ ವಿಶಿಷ್ಟ ನಾಯಕ ಅರವಿಂದಭಾಯಿ ತಗಾಡಿಯಾ ಅವರಿಗೆ ಸಹಕಾರಿ ಶಿರೋಮಣಿ ಪ್ರಶಸ್ತಿ ನೀಡಲಾಯಿತು. ಗುಜರಾತ್‌ನಾದ್ಯಂತ ಸಹಕಾರಿ ಸಂಸ್ಥೆಗಳನ್ನು ಬಲಪಡಿಸುವಲ್ಲಿ ಅರವಿಂದ ತಗಾಡಿಯಾ ಪ್ರಮುಖ ಪಾತ್ರ ವಹಿಸಿದ್ದರಲ್ಲದೆ, ಹಲವಾರು ಪ್ರಮುಖ ಸಹಕಾರಿ ಸಂಸ್ಥೆಗಳ ಮಂಡಳಿಗಳಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸಹಕಾರಿ ಮೌಲ್ಯಗಳನ್ನು ಉತ್ತೇಜಿಸುವಲ್ಲಿ ತಳಮಟ್ಟದ ಸಬಲೀಕರಣ ಮತ್ತು ನಾಯಕತ್ವಕ್ಕಾಗಿ ಅವರ ಸಮರ್ಪಣಾ ಮನೋಭಾವ ಸಹಕಾರಿ ವಲಯದ ಅವರಿಗೆ ಹೆಚ್ಚಿನ ಗೌರವ ತಂದಿದೆ. ಇದೇ ಕಾರ್ಯಕ್ರಮದಲ್ಲಿ ಸಹಕಾರಿ ವಿಭೂಷಣ ಪ್ರಶಸ್ತಿಯನ್ನು ಮಹಾರಾಷ್ಟ್ರದ ಶೈಲಜಾದೇವಿ ಡಿ.ನಿಕಮ್ ಅವರಿಗೆ ಪ್ರದಾನ ಮಾಡಲಾಯಿತು. ದಶಕಗಳಿಂದ ಕ್ರಿಭ್ಕೋ ಜೊತೆ ಸಂಬಂಧ ಹೊಂದಿರುವ ಶೈಲಜಾದೇವಿಯವರು, ಕ್ರಿಭ್ಕೋ ಮಂಡಳಿಯಲ್ಲಿ ಸೇವೆ ಸಲ್ಲಿಸಿರುವುದು ಸೇರಿದಂತೆ 40 ವರ್ಷಗಳಿಗೂ ಹೆಚ್ಚು ಕಾಲ…

Read More

ಸಿದ್ದಕಟ್ಟೆ: ಸಿದ್ದಕಟ್ಟೆ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸತತ 33 ವರ್ಷ ಕಾಲ ಸೇವೆ ಸಲ್ಲಿಸಿ ಪದೋನ್ನತಿಗೊಂಡು ಪ್ರಾಂಶುಪಾಲರಾಗಿ ಸರಕಾರಿ ಪದವಿಪೂರ್ವ ಕಾಲೇಜು ಹೊಸನಗರ, ಶಿವಮೊಗ್ಗ ಜೆಲ್ಲೆಗೆ ವರ್ಗಾವಣೆಗೊಂಡಿರುವ ಶ್ರೀನಿವಾಸ ನಾಯ್ಕ ಅವರನ್ನು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಗೌರವಿಸಲಾಯಿತು. https://chat.whatsapp.com/JVAtKKe2M19AFO3W5629ZS?mode=ems_copy_t ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಅಧ್ಯಕ್ಷರಾದ ಪ್ರಭಾಕರ ಪ್ರಭು ಗೌರವಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಸಂದೇಶ ಶೆಟ್ಟಿ, ನಿರ್ದೇಶಕರಾದ ಸತೀಶ್ ಪೂಜಾರಿ, ರಶ್ಮಿತ್ ಶೆಟ್ಟಿ, ದಿನೇಶ್ ಪೂಜಾರಿ, ಚಂದ್ರಶೇಖರ ಶೆಟ್ಟಿ, ವೀರಪ್ಪ ಪರವ, ಜಾರಪ್ಪ ನಾಯ್ಕ, ಶಿವ ಗೌಡ, ವಿಶ್ವನಾಥ ಶೆಟ್ಟಿಗಾರ್, ಮಂದರಾತಿ ಎಸ್ ಶೆಟ್ಟಿ, ಪುಷ್ಪಲತಾ ಎಸ್ ಆರ್, ವೃತ್ತಿಪರ ನಿರ್ದೇಶಕರಾದ ರಾಜೇಶ್ ಶೆಟ್ಟಿ , ನವೀನ್ ಹೆಗ್ಡೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟಿ ಉಪಸ್ಥಿತರಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com

Read More

ಮಂಗಳೂರು: ಅಂತಾರಾಷ್ಟ್ರೀಯ ಸಹಕಾರ ವರ್ಷಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್‌, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಸಹಕಾರ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಉತ್ತಮ ಆಡಳಿತ ನಿರ್ವಹಣೆ ಬಗ್ಗೆ ವಿಶೇಷ ತರಬೇತಿ ಶಿಬಿರವು ಸೆ.26ರಂದು ಬೆಳಗ್ಗೆ 10ರಿಂದ ಬಿ.ಸಿ.ರೋಡ್‌ ಕೈಕಂಬದ ಪೊಳಲಿ ದ್ವಾರದ ಬಳಿಯ ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ‘ಅಕ್ಷಯ ಸೌಧ’ದಲ್ಲಿ ಆಯೋಜಿಸಲಾಗಿದೆ. https://chat.whatsapp.com/JVAtKKe2M19AFO3W5629ZS?mode=ems_copy_t ದ.ಕ. ಸಹಕಾರಿ ಹಾಲು ಒಕ್ಕೂಟದ ಉಪಾಧ್ಯಕ್ಷರಾದ ಉದಯ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷರಾದ ಶಶಿಕುಮಾ‌ರ್ ರೈ ಬಾಲ್ಗೊಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ದ.ಕ. ಸಹಕಾರಿ ಹಾಲು ಒಕ್ಕೂಟ ಮತ್ತು ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಸವಿತಾ ಎನ್.ಶೆಟ್ಟಿ, ದ.ಕ. ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕರಾದ ಬಿ.ಸುಧಾಕರ…

Read More

ನವದೆಹಲಿ: ಭಾರತದ ಎರಡನೇ ಅತಿದೊಡ್ಡ ಸಹಕಾರಿ ಸಂಸ್ಥೆ ಎನಿಸಿರುವ ಕೃಷಕ್ ಭಾರತಿ ಸಹಕಾರಿ ಲಿಮಿಟೆಡ್ (ಕ್ರಿಭ್ಕೋ)ದ ನೂತನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಎಸ್‌.ಎಸ್‌ ಯಾದವ್‌(ಸುಂದರ್ ಸಿಂಗ್ ಯಾದವ್) ಅವರನ್ನು ನೇಮಕ ಮಾಡಲಾಗಿದೆ. 2019ರ ಡಿಸೆಂಬರ್‌ನಿಂದ ಎಸ್‌.ಎಸ್‌ ಯಾದವ್‌ ಹೆಚ್‌ಆರ್‌ ನಿರ್ದೇಶಕರಾಗಿದ್ದು ಪ್ರಸಕ್ತ ಭಡ್ತಿ ನೀಡಿ ಎಂ.ಆರ್. ಶರ್ಮಾ ಅವರ ಬದಲಿಗೆ ನೇಮಿಸಲಾಗಿದೆ. https://chat.whatsapp.com/JVAtKKe2M19AFO3W5629ZS?mode=ems_copy_t ಕ್ರಿಭ್ಕೋದ 45ನೇ ವಾರ್ಷಿಕ ಮಹಾಸಭೆಯ ಒಂದು ದಿನ ಮೊದಲಷ್ಟೇ ಈ ನೇಮಕಾತಿ ಪ್ರಕಟಣೆ ಘೋಷಣೆಯಾಗಿದೆ. ಇತ್ತೀಚೆಗಷ್ಟೇ ಕ್ರಿಭ್ಕೋದ ಅಧ್ಯಕ್ಷರಾಗಿ ಸುಧಾಕರ್ ಚೌಧರಿ ಆಯ್ಕೆಯಾಗಿದ್ದರು. ತಮ್ಮ ಆಯ್ಕೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್‌.ಎಸ್‌ ಯಾದವ್, ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಮತ್ತು ಹೆಚ್ಚಿನ ಉನ್ನತಿ ಸಾಧಿಸುವ ಗುರಿಯನ್ನು ಹೊಂದಿದ್ದೇವೆ. ಸಹಕಾರಿ ಮಾದರಿಯು ಅಪಾರವಾದ ಸಾಮರ್ಥ್ಯವನ್ನು ಹೊಂದಿದ್ದು, ರೈತರಿಗೆ ನಮ್ಮಿಂದೇನು ಪ್ರಯೋಜನ ಸಿಗಬೇಕೋ ಅದನ್ನು ದೊರಕಿಸಿಕೊಡಲು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಎಸ್.ಎಸ್. ಯಾದವ್ ಸಾರ್ವಜನಿಕ ಸೇವೆ ಮತ್ತು ಸಾಂಸ್ಥಿಕ ನಿರ್ವಹಣೆಯಲ್ಲಿ 30 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಉತ್ತರಾಖಂಡದ ಜಿ.ಬಿ.…

Read More

ಉಪ್ಪಿನಂಗಡಿ: ಇಲ್ಲಿನ ಪೃಥ್ವಿ ಶಾಪಿಂಗ್ ಮಹಲ್ 1ನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಉಪ್ಪಿನಂಗಡಿ ದೀನರ ಕನ್ಯಾಮಾತ ದೇವಾಲಯದ ಮಿನಿ ಹಾಲ್ ನಲ್ಲಿ ಭಾನುವಾರ ಅಧ್ಯಕ್ಷ ರಾಬರ್ಟ್ ಡಿಸೋಜ ಇವರ ಅಧ್ಯಕ್ಷತೆಯಲ್ಲಿ ಜರಗಿತು. https://chat.whatsapp.com/JVAtKKe2M19AFO3W5629ZS?mode=ems_copy_t ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಬರ್ಟ್ ಡಿಸೋಜ ಅವರು ಸಂಘದಲ್ಲಿ ವರದಿ ವರ್ಷಾಂತ್ಯಕ್ಕೆ 483 ಸದಸ್ಯರಿದ್ದು ರೂ. 43.21 ಲಕ್ಷ ಪಾಲು ಬಂಡವಾಳ ಸಂಗ್ರಹವಾಗಿದ್ದು ವಿವಿಧ ಠೇವಣಿ ಮೊತ್ತವು ರೂ.9.33 ಕೋಟಿ ಆಗಿದ್ದು ವಿವಿಧ ರೂಪದಲ್ಲಿ ಸಂಘದ ಸದಸ್ಯರಿಗೆ ರೂ.3,07,48,461.00 ಸಾಲ ನೀಡಿ 31.03.2025 ಕ್ಕೆ ರೂ. 3,12,06,860.00 ಮರುಪಾವತಿ ಆಗಿ ರೂ. 8,38,47,381.00 ಹೊರ ಬಾಕಿ ಇರುತ್ತದೆ. ವರದಿ ವರ್ಷದಲ್ಲಿ ರೂ. 30,06,89,399.98 ವ್ಯವಹಾರ ನಡೆಸಿದ್ದು, 31.03.2025ಕ್ಕೆ ರೂ. 2,04,873.38 ಲಾಭ ಗಳಿಸಿದೆ. ಶೇರು ಬಂಡವಾಳ ಹೊಂದಿದ ಸದಸ್ಯರಿಗೆ 4% ಡಿವಿಡೆಂಡ್‌ ವಿಂಗಡಿಸಲಾಗುವುದು ಎಂದು ಘೋಷಣೆ ಮಾಡಿದರು. ಹಿಂದಿನ ಸಭೆಯ…

Read More

ಬೆಳ್ತಂಗಡಿ: ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಕೆ.ಹರೀಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. https://chat.whatsapp.com/JVAtKKe2M19AFO3W5629ZS?mode=ems_copy_t ಸಂಘದ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮಾತನಾಡಿ ಸಂಘವು ಕಳೆದ ಆರು ವರ್ಷಗಳಿಂದ ಉತ್ತಮ ವ್ಯವಹಾರ ಮಾಡುತ್ತ ಸಹಕಾರಿಗಳಿಗೆ ಸಾಲ ಸೌಲಭ್ಯಗಳನ್ನು ವಿತರಿಸುತ್ತಾ ಬರುತ್ತಿದೆ. ಪುಸಕ್ತ ಸಾಲಿನಲ್ಲಿ ಸಂಘವು ರೂ. 151 ಕೋಟಿ ವ್ಯವಹಾರ ನಡೆಸಿದ್ದು, 54.50 ಲಕ್ಷ ರೂ. ಲಾಭ ಗಳಿಸಿದೆ. ಸದಸ್ಯರಿಗೆ ಶೇ.12 ಡಿವಿಡೆಂಡ್‌ ನೀಡಲಾಗುವುದು. ಜೊತೆಗೆ ಈ ಬಾರಿ ವಿಶೇಷವಾಗಿ ಪ್ರಿಯದರ್ಶಿನಿ ಗೃಹಲಕ್ಷ್ಮಿ ಸಾಲ ಹೊಸ ಯೋಜನೆ ಅನುಷ್ಠಾನಕ್ಕೆ ತರಲಾಗುವುದು ಎಂದರು. ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಗಂಗಾಧರ ಮಿತ್ತಮಾರ್, ನಿರ್ದೇಶಕರಾದ ಉಮೇಶ್ ಎ.ಬಿ, ಬಿ.ಎಂ ಅಬ್ದುಲ್ ಹಮೀದ್, ಜಗದೀಶ್ ಹೆಗ್ಡೆ, ಕೆ.ಎಸ್ ಯೋಗೀಶ್ ಕುಮಾರ್, ಕೆ.ರಾಮಚಂದ್ರ ಗೌಡ, ಶೈಲೇಶ್ ಕುಮಾ‌ರ್, ವಿ.ರಮೇಶ್ ಪೂಜಾರಿ, ಮೋಹನ್ ಶೆಟ್ಟಿಗಾರ್, ರಾಮಚಂದ್ರ ಭಟ್ ಅರೆಕ್ಕಲ್, ಉಷಾ ಶರತ್‌, ರಾಗ್ನೇಶ್, ಅಭಿನಂದನ್ ಹರೀಶ್ ಕುಮಾರ್,…

Read More

ಭಟ್ಕಳ: ಕೆನರಾ ದೈವಜ್ಞ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ, ಸೋನಾರಕೇರಿ ಭಟ್ಕಳ ಇದರ ಏಳನೇ ವರ್ಷದ 2024-25ನೇ ಸಾಲಿನ ವಾಷಿ೯ಕ ಸಾಮಾನ್ಯ ಸಭೆ ದೈವಜ್ಞ ಸಭಾಭವನ ಭಟ್ಕಳದಲ್ಲಿ ನಡೆಯಿತು. https://chat.whatsapp.com/JVAtKKe2M19AFO3W5629ZS?mode=ems_copy_t ಸಹಕಾರಿಯ ಅಧ್ಯಕ್ಷರಾದ ಬಾಲಕೃಷ್ಣ ಎಂ.ಶೇಟ್ ಸಭೆಯ ಅಧ್ಯಕ್ಷತೆ ವಹಿಸಿ, ಉದ್ಘಾಟಿಸಿದರು. ಸಹಕಾರಿ ಸಂಘವು ವರದಿ ವರ್ಷದಲ್ಲಿ 35 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿದ್ದು, ರೂ.14.09 ಲಕ್ಷ ಲಾಭ ಗಳಿಸಿದ್ದು, ಸದಸ್ಯರಿಗೆ 4% ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿ, ಸಹಕಾರಿಯ ಅಭಿವೃದ್ಧಿ ಹಾಗೂ ಮುಂದಿನ ಗುರಿಗಳ ಬಗ್ಗೆ ಮಾತನಾಡಿದರು. ಸಂಸ್ಥೆಯ ನಿರ್ದೇಶಕರಾದ ಸುನೀಲ್ ಆರ್.ಶೇಟ್ ಹಾಗೂ ಸುನೀತಾ ಪಿ.ಶೇಟ್ ಪ್ರಾಸ್ತಾವಿಕ ಮಾತನಾಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಚಿನ್ ಡಿ.ಶೇಟ್ ಕಾರ್ಯಕ್ರಮ ನಿರೂಪಿಸಿ, ವಾರ್ಷಿಕ ವರದಿ ಮಂಡಿಸಿದರು. ಸಹಕಾರಿಯ ಉಪಾಧ್ಯಕ್ಷರಾದ ಸಂದೀಪ್ ಎಸ್.ಕೊಲ್ಲೆ ಹಾಗೂ ನಿರ್ದೇಶಕರಾದ ಸಾಯಿನಾಥ್ ಕೆ.ಶೇಟ್, ದಿನೇಶ್ ಕೆ.ಶೇಟ್, ಸುಬ್ರಮಣ್ಯ ಆರ್.ಶೇಟ್, ಬಬಿತಾ ಎಂ.ಶೇಟ್ ಉಪಸ್ಥಿತರಿದ್ದರು. ಸಹಕಾರಿಯ ಸಿಬ್ಬಂದಿ ಅಭಿಷೇಕ್ ಶೇಟ್ ವಂದಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ…

Read More

ಏಳನೇ ಸಾಮಾನ್ಯ ಸಭೆಯಲ್ಲಿ ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ವೇಣೂರು: ‘ಸೌಹಾರ್ದ ಸಹಕಾರಿಗಳ ನಡೆ – ಸುಸ್ಥಿರ ಅಭಿವೃದ್ಧಿಯ ಕಡೆʼ ಎಂಬ ಸಹಕಾರ ತತ್ವದ ಉದಾತ್ತ ಮನೋಭಾವನೆಯ ಸ್ವಾಯತ್ತತೆ, ಸ್ವಯಂ ಆಡಳಿತ, ಸ್ವಯಂ ನಿಯಂತ್ರಣ ನಮ್ಮ ಧ್ಯೇಯ. ಇದನ್ನು ರೂಢಿಸಿಕೊಂಡು, ಎಲ್ಲರೊಟ್ಟಿಗೆ ಕೂಡಿ ಬಾಳುವ, ಬೆಳೆಯುವ, ಮತ್ತೊಬ್ಬರನ್ನು ಬೆಳೆಸುವ, ಚಿಂತನೆಯಿಂದ ಬೆಳೆದಂತಹ ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿಯು, ಇನ್ನೂ ಸಮಾಜಮುಖಿ ಕೆಲಸಗಳನ್ನು ಮಾಡಿ ಯಶಸ್ವಿಯಾಗಿ ಬೆಳೆಯುವಂತಾಗಲಿ ಎಂದು ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿ ಸಂಸ್ಥೆಯ ಸ್ಥಾಪಕರಾದ ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದರು. https://chat.whatsapp.com/JVAtKKe2M19AFO3W5629ZS?mode=ems_copy_t ಕರಿಂಜೆ ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿ ಸಂಘದ ಏಳನೇ ಸಾಮಾನ್ಯ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಸಂಘದ ಅಧ್ಯಕ್ಷರಾದ ಸುಧಾಕರ ನೂಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು 2024-25ನೇ ಸಾಲಿನಲ್ಲಿ ರೂ.4,74,00,000 ಠೇವಣಿ ಹೊಂದಿದ್ದು, ವರದಿ ಸಾಲಿನಲ್ಲಿ ರೂ. 3,97,00,000 ಸಾಲ ನೀಡಿದ್ದು, ಸಹಕಾರಿಯ ಒಟ್ಟು ದುಡಿಯುವ ಬಂಡವಾಳ ರೂ. 5,38,00,000 ಹೊಂದಿದ್ದು, ವರದಿ…

Read More