Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸಹಕಾರ ಭಾರತಿ ಬಾಗಲಕೋಟೆ, ವಿಜಯಪುರ ಜಿಲ್ಲಾ ವಿಶೇಷ ಸಭೆ
    News

    ಸಹಕಾರ ಭಾರತಿ ಬಾಗಲಕೋಟೆ, ವಿಜಯಪುರ ಜಿಲ್ಲಾ ವಿಶೇಷ ಸಭೆ

    adminBy adminNovember 23, 2025

    ವಿಜಯಪುರ: ಇಲ್ಲಿನ ಶ್ರೀ ಶಾಂತೇಶ್ವರ ವಿವಿಧೋದ್ದೇಶ ಸಹಕಾರಿ ಸಂಘದ ಸಭಾಂಗಣದಲ್ಲಿ ಸಹಕಾರ ಭಾರತಿಯ ವಿಶೇಷ ಸಭೆ ಶುಕ್ರವಾರ ಜರುಗಿತು. ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಪ್ರಮುಖ ನಾಯಕರು, ಕಾರ್ಯಕರ್ತರು ಮತ್ತು ಸಂಘಟನಾ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

    https://chat.whatsapp.com/JVAtKKe2M19AFO3W5629ZS?mode=ems_copy_t
    ಸಹಕಾರ ಭಾರತಿ ಮಹಿಳಾ ಪ್ರಕೋಷ್ಠದ ರಾಷ್ಟ್ರೀಯ ಮುಖ್ಯಸ್ಥೆ ಡಾ. ರೇವತಿ ಶೆಂಡೂರ್ನಿಕರ್ ಅವರು ಸಹಕಾರ ಭಾರತಿಯ ಚಟುವಟಿಕೆಗಳು, ಉದ್ದೇಶಗಳು ಮತ್ತು ಬಲವರ್ಧನೆಯ ಕುರಿತು ಮಾರ್ಗದರ್ಶನ ನೀಡಿದರು. ಸಹಕಾರ ಚಳವಳಿಯ ನವೀನ ದಿಕ್ಕುಗಳನ್ನು ವಿಶ್ಲೇಷಿಸಿ, ಸಂಘಟನೆಯ ಮುಂದಿನ ಕಾರ್ಯಯೋಜನೆಗೆ ಸಂಬಂಧಿಸಿದಂತೆ ಅವರು ಮಹತ್ವದ ವಿಚಾರಗಳನ್ನು ಹಂಚಿಕೊಂಡರು.
    ಸಭೆಯಲ್ಲಿ ಸಹಕಾರ ಭಾರತೀಯ ರಾಜ್ಯ ಉಪಾಧ್ಯಕ್ಷರಾದ ಜಿ.ಎನ್. ಪಾಟೀಲ, ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಡಾ. ಎಂ.ಎಸ್. ದಡ್ಡೇನವರ, ವಿಜಯಪುರ ಜಿಲ್ಲಾಧ್ಯಕ್ಷರಾದ ಹರ್ಷ ಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ: ಅಶೋಕ ಜಿಗಳೂರ, ವಿಜಯಪುರ ಪ್ರಧಾನ ಕಾರ್ಯದರ್ಶಿ ಪರಶುರಾಮ ಚಿಂಚಲ, ವಿಜಯಪುರ ಸಂಘಟನಾ ಕಾರ್ಯದರ್ಶಿ ದೀಪಕ್ ಶಿಂತ್ರೆ, ಬಾಗಲಕೋಟೆ ಜಿಲ್ಲಾ ಮಹಿಳಾ ಸಂಚಾಲಕಿ ಶೈಲಜಾ ಎಸ್. ಸಂಗಳದ, ಸಹ ಸಂಚಾಲಕಿ: ಸವಿತಾ ಹೊಸೂರು ಮೊದಲಾದವರು ಭಾಗವಹಿಸಿದ್ದರು.


    ಸಭೆಯ ನಂತರ, ಸಹಕಾರ ಭಾರತಿಯ ತಂಡವು ನಾಲ್ಕು ವಿವಿಧ ಸಹಕಾರಿ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಪ್ರತಿಯೊಂದು ಸಂಸ್ಥೆಯಲ್ಲಿ ನಡೆಯುತ್ತಿರುವ ಉತ್ತಮ ಕಾರ್ಯಪದ್ಧತಿ, ಸದಸ್ಯರ ಸಹಭಾಗಿತ್ವ, ನವೀನ ಚಟುವಟಿಕೆಗಳು ಮತ್ತು ಆಡಳಿತ ವ್ಯವಸ್ಥೆಗಳ ಬಗ್ಗೆ ವಿಸ್ತೃತ ಹಾಗೂ ಫಲಪ್ರದ ಚರ್ಚೆಗಳು ನಡೆದವು. ಭೇಟಿ ಸಂದರ್ಭದಲ್ಲಿ ಕೆಲವು ಸಂಸ್ಥೆಗಳ ಯಶಸ್ವಿ ಕಾರ್ಯಪಡೆಯ ಅನುಭವಗಳು ಮತ್ತು ಮಾದರಿ ಉಪಕ್ರಮಗಳ ಕುರಿತು ಪ್ರೇರಣಾದಾಯಕ ಮಾಹಿತಿಗಳನ್ನೂ ತಂಡ ಸ್ವೀಕರಿಸಿತು.
    ಈ ವಿಶೇಷ ಸಭೆ ಹಾಗೂ ಸಮಾಜಗಳ ಭೇಟಿಗಳು ಸಹಕಾರ ಚಳವಳಿಗೆ ಹೊಸ ಚೈತನ್ಯ ನೀಡುವಂತಾಗಿದ್ದು, ಸಹಕಾರ ಭಾರತಿಯ ಸಂಘಟನೆ ಬಲವರ್ಧನೆಗೆ ಮತ್ತಷ್ಟು ವೇಗ ನೀಡಲಿವೆ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Bagalkot Sahakara Bharathi Sahakara Bharathi Womens National Wing President Dr. Revathi Shendoornikar Shree Shanteshwara Vividhoddesha Sahakara Sangha Vijayapura Vijayapura District Sahakara Bharathi
    Previous Articleಸಚಿವ ಚಲುವರಾಯಸ್ವಾಮಿ ಪುತ್ರ ಸಚಿನ್‌ ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಆಯ್ಕೆ
    Next Article ಮುಂದಿನ ಪೀಳಿಗೆಗೆ ನಾವು ನೀಡಬಲ್ಲ ಅತ್ಯುತ್ತಮ ಕೊಡುಗೆ ಎಂದರೆ ಸ್ವಚ್ಛ ಪರಿಸರ ಮಾತ್ರ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.