Author: admin
ಮಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ., ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಳ ನಿ., ಬಿ.ಸಿ. ರೋಡ್, ಸಹಕಾರ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪತ್ತಿನ, ಮೂರ್ತೆದಾರರ ಮತ್ತು ಇತರ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಜಿಲ್ಲಾಮಟ್ಟದ ತರಬೇತಿ ಕಾರ್ಯಕ್ರಮ ಫೆಬ್ರವರಿ 21ರ ಶನಿವಾರ ಬೆಳಗ್ಗೆ ಪೂರ್ವಾಹ್ನ 9ರಿಂದ ಬಿ.ಸಿ.ರೋಡ್‌ನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. https://chat.whatsapp.com/FCEnlTkAKCC0MGPhXtX4i4 ದಕ್ಷಿಣ ಕನ್ನಡ ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಕೆ.ಸಂಜೀವ ಪೂಜಾರಿಯವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಬಿ.ಪದ್ಮಶೇಖರ…
ವಿಜಯಪುರ: ವಿಜಯಪುರ ಸೌಹಾರ್ದ ಸಹಕಾರಿಗಳ ಒಕ್ಕೂಟದ ವತಿಯಿಂದ ವಿಜಯಪುರ ಮಹಾನಗರದ ಆನಂದ ನಗರ ಬಿಎಲ್‌ಡಿಇ ಇಂಜಿನಿಯರಿಂಗ್ ಕಾಲೇಜಿನ ಎದುರುಗಡೆಯ ಭಾವಸಾರ ಕ್ಷತ್ರಿಯ ಸಭಾಭವನದಲ್ಲಿ ಫೆಬ್ರವರಿ 18ರಂದು ಬೆಳಗ್ಗೆ 10.30ಕ್ಕೆ ಸೌಹಾರ್ದ ಸಹಕಾರಿಗಳ ಸಮಾವೇಶ ಏರ್ಪಡಿಸಲಾಗಿದೆ. https://chat.whatsapp.com/FCEnlTkAKCC0MGPhXtX4i4 ಷಣ್ಮುಖಾರೂಡ ಮಠ ವಿಜಯಪುರ ಮತ್ತು ಹುಬ್ಬಳಿಯ ಶಾಂತಾಶ್ರಮದ ಪರಮಪೂಜ್ಯ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಅಣ್ಣಾಸಾಹೇಬ ಜೊಲ್ಲೆ, ಸಂಸದರಾದ ರಮೇಶ ಜಿಗಜಿಣಗಿ, ಶಾಸಕರಾದ ಯಶವಂತರಾಯಗೌಡ ಪಾಟೀಲ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಹಿರಿಯ ಸಹಕಾರಿಗಳೂ, ಮಾರ್ಗದರ್ಶಕರಾದ ಅರವಿಂದ ಜಿ.ದೇಶಪಾಂಡೆ ಹಾಗೂ ರಮೇಶ ವೈದ್ಯ ಮಾರ್ಗದರ್ಶನ ಮಾಡಲಿದ್ದಾರೆ. ಸೌಹಾರ್ದ ಫೆಡರಲ್ ಅಧ್ಯಕ್ಷ ನಂಜನಗೌಡ ಮತ್ತು ಸಹಕಾರ ಭಾರತಿ ಅಧ್ಯಕ್ಷ ಪ್ರಭುದೇವ ಮಾಗನೂರ ಉಪಸ್ಥಿತರಿರುವರು. ವಿಜಯಪುರ ಜಿಲ್ಲೆಯ ಸಹಕಾರಿಗಳಾದ ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ವಿಧಾನಸಭಾ ಸದಸ್ಯರಾದ ಅರುಣ ಶಹಾಪುರ ಉಪಸ್ಥಿತರಿರುವರು. ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ಭಾಗ್ಯಶ್ರೀ ಕುಂಬಾರ, ಸಹಕಾರ ಭಾರತಿಯ…
ಕಾರ್ಕಳ: ಮುಂದಿನ ಪೀಳಿಗೆಗೆ ಪರಿಸರವನ್ನು ಸಮೃದ್ಧಗೊಳಿಸಿ ಹಸ್ತಾಂತರಿಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಸ್ವಚ್ಛ ಪರಿಸರವನ್ನು ನಿರ್ಮಿಸುವ ಜವಾಬ್ದಾರಿಯನ್ನು ನಾವು ಹೊರಬೇಕಾಗಿದೆ ಮತ್ತು ಮಕ್ಕಳು ಹಾಗೂ ಯುವಕರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಇಂದೇ ಮಾಡಬೇಕು. ಈ ಮೂಲಕ ಸ್ವಚ್ಛ ಪರಿಸರವನ್ನು ಮುಂದಿನ ಸಮಾಜಕ್ಕೆ ಹಸ್ತಾಂತರಿಸಬೇಕಾಗಿದೆ ಎಂದು ವಿಶ್ವಕರ್ಮ ಬ್ಯಾಂಕಿನ ನಿರ್ದೇಶಕರಾದ ಭರತ್ ನಿಡ್ಪಳ್ಳಿ ಹೇಳಿದರು. https://chat.whatsapp.com/FCEnlTkAKCC0MGPhXtX4i4 ಅವರು ವಿಶ್ವಕರ್ಮ ಸಹಕಾರ ಬ್ಯಾಂಕಿನ ಕಾರ್ಕಳ ಶಾಖೆಯ ವತಿಯಿಂದ ಭಾನುವಾರ “ಸ್ವಚ್ಛತಾ ಹೀ ಸೇವಾ” ಎಂಬ ಧ್ಯೇಯದಂತೆ ನಡೆದ 28ನೇ ಸ್ವಚ್ಛ ಭಾರತ್ ಶ್ರಮದಾನದಲ್ಲಿ ಭಾಗವಹಿಸಿದ ಸ್ವಯಂಸೇವಕರನ್ನು ಉದ್ದೇಶಿಸಿ ಹೇಳಿದರು. ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಗುಣವರ್ಮ ಜೈನ್ ಹಾಗೂ ಎಸ್‌ವಿಟಿ ವಿದ್ಯಾಕೇಂದ್ರದ ಸ್ಕೌಟ್ಸ್ ಆಂಡ್ ಗೈಡ್ಸ್ ಯೋಜನಾಧಿಕಾರಿ ಅಕ್ಷತಾ ಪ್ರಶಾಂತ್ ಆಚಾರ್ಯ ಹಸಿರು ನಿಶಾನೆ ತೋರುವ ಮೂಲಕ ಶ್ರಮದಾನಕ್ಕೆ ಚಾಲನೆ ನೀಡಿದರು. ಕಾರ್ಕಳದ ಆನೆಕೆರೆ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶ್ರಮದಾನ ಕಾರ್ಯಕ್ರಮ ನಡೆಯಿತು. ಸ್ವಚ್ಛ ಬ್ರಿಗೇಡ್…
ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ ಅಭಿಪ್ರಾಯ ಬಂಟ್ವಾಳ: ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಹಕಾರ ಕ್ಷೆತ್ರದಿಂದ ರೈತರಿಗೆ, ಕೃಷಿಕರಿಗೆ ತ್ವರಿತವಾಗಿ ಆರ್ಥಿಕ ಸಹಕಾರವನ್ನು ಸಂಘದ ವತಿಯಿಂದ ನೀಡಿರುವುದಲ್ಲದೆ ತನ್ನ ಕಾರ್ಯವ್ಯಾಪ್ತಿಯಲ್ಲಿ ವಿವಿಧ ರೀತಿಯಲ್ಲಿ ಸಮಾಜಮುಖಿ ಸೇವೆಯೊಂದಿಗೆ ಸಮಾಜದ ಬೇಕು, ಬೇಡ ಮತ್ತು ಸಮಸ್ಯೆಗಳ ಬಗ್ಗೆ ಸರಕಾರ ಮತ್ತು ಅಧಿಕಾರಿಗಳ ಗಮನ ಸೆಳೆಯುವ ಮೂಲಕ ನಿರಂತರವಾಗಿ ಸಮಾಜಸೇವೆ ಸಲ್ಲಿಸುತ್ತಿರುವ ಪ್ರಭಾಕರ ಪ್ರಭುವಿಗೆ ಅರ್ಹವಾಗಿಯೇ ಕರ್ನಾಟಕ ಸಹಕಾರ ಶಿರೋಮಣಿ ಪ್ರಶಸ್ತಿ ಲಭ್ಯವಾಗಿದ್ದು ಸಮಾಜದ ಧ್ವನಿಗೆ ಸಂದ ಗೌರವವಾಗಿದೆ ಎಂದೂ ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ ಅಭಿಪ್ರಾಯ ವ್ಯಕ್ತಪಡಿಸಿದರು. https://chat.whatsapp.com/FCEnlTkAKCC0MGPhXtX4i4 ಕನ್ನಡ ಪ್ರಭ ದಿನಪತ್ರಿಕೆ ಮತ್ತು ಏಷಿಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಕೊಡಮಾಡುವ ಕರ್ನಾಟಕ ಸಹಕಾರ ಶಿರೋಮಣಿ 2025 ಪ್ರಶಸ್ತಿ ಲಭಿಸಿರುವ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು…
ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ ಫೆಬ್ರವರಿ 22ರಂದು ಬೃಹತ್ ಉಚಿತ ವೈದ್ಯಕೀಯ ತಪಾಸಣೆ, ಆರೋಗ್ಯ ಮಾಹಿತಿ ಶಿಬಿರ
ಸವಣೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ, ಎನ್.ಜಿ ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮಂಗಳೂರು, ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಶಾಲಾಭಿವೃದ್ಧಿ ಸಮಿತಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು ಇವುಗಳ ಸಹಯೋಗದೊಂದಿಗೆ ಫೆ.22ರಂದು ಕುದ್ಮಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೃಹತ್ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಆರೋಗ್ಯ ಮಾಹಿತಿ ಶಿಬಿರ ಹಮ್ಮಿಕೊಳ್ಳಲಾಗಿದೆ. https://chat.whatsapp.com/FCEnlTkAKCC0MGPhXtX4i4 ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಶಿಬಿರ ನಡೆಯಲಿದ್ದು, ಸಾಮಾನ್ಯ ರೋಗ ವಿಭಾಗ, ಬಿ.ಪಿ. ಹಾಗೂ ಮಧುಮೇಹ ತಪಾಸಣೆ, ಎಲುಬು ಮತ್ತು ಕೀಲು ರೋಗ ವಿಭಾಗ, ಕಿವಿ, ಮೂಗು ಮತ್ತು ಗಂಟಲು ವಿಭಾಗ, ಹೃದಯ ರೋಗ ವಿಭಾಗ, ಕ್ಯಾನ್ಸರ್ ರೋಗ ತಪಾಸಣೆ ವಿಭಾಗ, ಸ್ತ್ರೀ ರೋಗ ವಿಭಾಗ, ಮಕ್ಕಳ ವಿಭಾಗ, ವೈದ್ಯರು ಸೂಚಿಸಿದಲ್ಲಿ ಉಚಿತ ಇಸಿಜಿ ತಪಾಸಣೆ, ಉಚಿತ ಲಭ್ಯ ಇರುವ ಔಷಧ ವಿತರಣೆ ಇತ್ಯಾದಿ ಸೌಲಭ್ಯಗಳನ್ನು ಈ…
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ತುಂಬೆ ಶಾಖೆ ವತಿಯಿಂದ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣೆ, ರಕ್ತದಾನ ಶಿಬಿರ
ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ತುಂಬೆ ಶಾಖೆಯ ಐದನೇ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ರಕ್ತದಾನ ಶಿಬಿರ, ಕುಲಾಲ ಸೇವಾ ಸಂಘ ಹಾಗೂ ಮಹಿಳಾ ಘಟಕ ತುಂಬೆ, ತುಂಬೆ ಸರಕಾರಿ ಶಾಲಾಭಿವೃದ್ದಿ ಸಮಿತಿ, ಭಾಗ್ಯೋದಯ ಮಿತ್ರ ಕಲಾವೃಂದ ತುಂಬೆ, ಆಶೀರ್ವಾದ ಸೇವಾ ಸಂಘ ಮತ್ತು ಮಹಿಳಾ ಸೇವಾ ಸಂಘ ತುಂಬೆ, ಯುವಶಕ್ತಿ ಮಜಿ, ಶ್ರೀ ಪಿಲಿಚಂಡಿ ತಾಯೇಶ್ವರಿ ಸೇವಾ ಸಮಿತಿ ತಂಜಕರಿಯ ತುಂಬೆ ಇವರ ಜಂಟಿ ಸಹಯೋಗದೊಂದಿಗೆ ಫೆಬ್ರವರಿ 15ರಂದು ಬೆಳಗ್ಗೆ 9ರಿಂದ 12.30ರ ತನಕ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ತುಂಬೆ ಇಲ್ಲಿ ಆಯೋಜಿಸಲಾಗಿದೆ. https://chat.whatsapp.com/FCEnlTkAKCC0MGPhXtX4i4 ಈ ವೈದ್ಯಕೀಯ ಶಿಬಿರದಲ್ಲಿ ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ, ಮಂಗಳೂರು ಇವರ ನುರಿತ ವೈದ್ಯರ ತಂಡದವರಿಂದ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ, ಕನ್ನಡಕ ವಿತರಣೆ, ಮಧುಮೇಹ ತಪಾಸಣೆ, ಬಿ.ಪಿ. ತಪಾಸಣೆ, ಸಾಮಾನ್ಯ ವೈದ್ಯಕೀಯ ಸಮಾಲೋಚನೆ, ಕಿವಿ, ಮೂಗು…
ಬಂಟ್ವಾಳ: ರಾಜ್ಯದ ಪ್ರತಿಷ್ಠಿತ ಪತ್ರಿಕೆ “ಕನ್ನಡ ಪ್ರಭ” ಹಾಗೂ ರಾಜ್ಯದ ಪ್ರಮುಖ ಸುದ್ದಿವಾಹಿನಿ “”ಏಷಿಯಾನೆಟ್ ಸುವರ್ಣನ್ಯೂಸ್” ಕೊಡಮಾಡಿದ ಕರ್ನಾಟಕ ಸಹಕಾರ ಶಿರೋಮಣಿ 2025 ಪ್ರಶಸ್ತಿ ಪಡೆದಿರುವ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರನ್ನು ಸಂಗಬೆಟ್ಟು ಗ್ರಾಮ ಪಂಚಾಯತ್ ಹಾಗೂ ಕುಕ್ಕಿಪಾಡಿ ಗ್ರಾಮ ಪಂಚಾಯತ್ ವತಿಯಿಂದ ಅಭಿನಂದಿಸಲಾಯಿತು. https://chat.whatsapp.com/FCEnlTkAKCC0MGPhXtX4i4 ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜೀವಿ ಕೋಟಿಯಪ್ಪ ಪೂಜಾರಿ, ಉಪಾಧ್ಯಕ್ಷ ಸುರೇಶ್ ಕುಲಾಲ್, ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಅಲಕ್ಕೆ, ಸದಸ್ಯರಾದ ಸಂದೇಶ ಶೆಟ್ಟಿ, ದಾಮೋದರ ಪೂಜಾರಿ, ಉದಯ ಪೂಜಾರಿ, ದೇವಪ್ಪ ಕರ್ಕೇರ, ಸುನೀಲ್ ಶೆಟ್ಟಿಗಾರ್, ವಿಮಲಾ ಮೋಹನ್, ಶಕುಂತಲಾ, ಶಾಂತ, ಪ್ರೇಮ, ವಿದ್ಯಾ ಪ್ರಭು, ಹೇಮಲತಾ, ಬೆನಡಿಕ್ಟ್ ಡಿಕೋಸ್ತ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮಾ ನಾಯ್ಕ್, ಸಿಬ್ಬಂದಿಗಳಾದ ಮಹಾಬಲ ನಾಯ್ಕ್, ಸುರೇಶ, ಸುಮತ, ಮಹಮ್ಮದ್ ಶಾಫಿ, ಕೇಶವತಿ, ಗ್ರಂಥಾಲಯ ಮೇಲ್ವಿಚಾರಕಿ ಶೋಭಾ, ಪ್ರಮುಖರಾದ ದೀಪಕ್ ಶೆಟ್ಟಿಗಾರ್, ಉಮೇಶ್ ಗೌಡ, ಪ್ರವೀಣ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.…
ಒಡಿಯೂರು ಶ್ರೀವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಎ.ಸುರೇಶ್ ರೈ, ಉಪಾಧ್ಯಕ್ಷರಾಗಿ ಲಿಂಗಪ್ಪ ಗೌಡ ಪನೆಯಡ್ಕ ಪುನರಾಯ್ಕೆ
ಬಂಟ್ವಾಳ: ಒಡಿಯೂರು ಶ್ರೀವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಒಡಿಯೂರು ಬಂಟ್ವಾಳ ತಾಲೂಕು ಇದರ 2026-2031ನೇ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಎ.ಸುರೇಶ್ ರೈ, ಉಪಾಧ್ಯಕ್ಷರಾಗಿ ಲಿಂಗಪ್ಪ ಗೌಡ ಪನೆಯಡ್ಕ ಪುನರಾಯ್ಕೆಯಾಗಿದ್ದಾರೆ. https://chat.whatsapp.com/FCEnlTkAKCC0MGPhXtX4i4 ಆಡಳಿತ ಮಂಡಳಿ ನಿರ್ದೇಶಕರಾಗಿ ವೇಣುಗೋಪಾಲ ಮಾರ್ಲ, ಲೋಕನಾಥ ಜಿ. ಶೆಟ್ಟಿ ತಾಳಿಪ್ಪಾಡಿಗುತ್ತು, ಗಣಪತಿ ಭಟ್ ಸೇರಾಜೆ, ಕೆ.ಸೋಮಪ್ಪ ನಾಯ್ಕ್, ಕೆ.ಮೋನಪ್ಪ ಪೂಜಾರಿ, ಎನ್.ಜಯಪ್ರಕಾಶ್ ರೈ, ಅಶೋಕ್ ಕುಮಾರ್ ಯು.ಎಸ್, ಕರುಣಾಕರ ಜೆ.ಉಚ್ಚಿಲ್, ತಾರಾನಾಥ ಶೆಟ್ಟಿ, ಗಣೇಶ್, ಭವಾನಿಶಂಕರ ಶೆಟ್ಟಿ, ಶಾರದಾಮಣಿ ರೈ, ಸರಿತಾ ಅಶೋಕ್, ದೇವಪ್ಪ ನಾಯ್ಕ ಯು. ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾ ರಿಟರ್ನಿಂಗ್ ಅಧಿಕಾರಿಯಾಗಿದ್ದ ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಜೆ.ಸುಧೀರ್ ಕುಮಾರ್ ನಡೆಸಿಕೊಟ್ಟರು. ಮಂಗಳೂರಿನ ಸಹಕಾರ ಸಂಘಗಳ ಉಪ ನಿಬಂಧಕರ ಕಛೇರಿಯ ಅಧೀಕ್ಷಕ ಎನ್.ಜೆ. ಗೋಪಾಲ ಇವರು ಸಹಕರಿಸಿದರು. ಒಡಿಯೂರು ಶ್ರೀವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲ್ ಉಪಸ್ಥಿತರಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ…
ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಬೆಂದೂವೆಲ್ ಶಾಖೆಯ ಹದಿನಾಲ್ಕನೇ ವಾರ್ಷಿಕೋತ್ಸವ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಜಪ್ಪಿನಮೊಗರು ಮಂಗಳೂರು ಇದರ ಗುರುಮಂದಿರದ ಪ್ರತಿಷ್ಠಾಪನಾ ವರ್ಧಂತ್ಯುತ್ಸವದ ಪ್ರಯುಕ್ತ ಎನ್. ಜಿ. ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವರ ಸಹಯೋಗದೊಂದಿಗೆ ಮಂಗಳ ಕಾಲೇಜು, ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಫೌಂಡೇಶನ್, ಕದ್ರಿ ಮಂಗಳೂರು ಹಾಗೂ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಅಫ್ ಡೆಂಟಲ್ ಸಾಯನ್ಸ್ ಮುಕ್ಕ, ಸುರತ್ಕಲ್, ಮಂಗಳೂರು ಇದರ ನುರಿತ ವೈದ್ಯರ ತಂಡದವರಿಂದ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ಚಿಕಿತ್ಸಾ ಶಿಬಿರವು ಕಂರ್ಭಿಬೈದೇದಿ ಚಾವಡಿ, ಬ್ರಹ್ಮಶ್ರೀ ನಾರಾಯಣ ಗುರು ಮಂದಿರ, ಜಪ್ಪಿನಮೊಗರು ಇಲ್ಲಿ ಜರುಗಿತು. https://chat.whatsapp.com/FCEnlTkAKCC0MGPhXtX4i4 ಕಾರ್ಯಕ್ರಮವನ್ನುಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕ್ಷೇತ್ರ, ಕಂಕನಾಡಿ ಇದರ ಮೋಕ್ತಸರರಾದ ಚಂದ್ರನಾಥ್ ಅತ್ತಾವರ ಉದ್ಘಾಟಿಸಿ ಮಾತನಾಡಿ, ಉತ್ತಮ ಆರೋಗ್ಯವನ್ನು ನಮಗೆ ದೇವರು ಕರುಣಿಸುತ್ತಾರೆ ಎಂಬುದು ನಮ್ಮ ನಂಬಿಕೆ. ಆದರೆ ಈ ಆರೋಗ್ಯವನ್ನು ಕಾಪಾಡಿಕೊಂಡು ಬರುವಲ್ಲಿ ನಮ್ಮ ಪಾತ್ರ ಬಹಳ…
ಲೋಕಸಭೆಯಲ್ಲಿ ಸಹಕಾರ ಸಚಿವ ಅಮಿತ್ ಷಾ ಮಾಹಿತಿ ನವದೆಹಲಿ: ಭಾರತದ ಮೊದಲ ಸಹಕಾರಿ ನೇತೃತ್ವದ ರೈಡ್-ಹೇಲಿಂಗ್ ವೇದಿಕೆಯಾದ ಭಾರತ್ ಟ್ಯಾಕ್ಸಿಯು ಸಾರಿಗೆ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿ ಹೊರಹೊಮ್ಮಿದೆ. ಭಾರತ್ ಟ್ಯಾಕ್ಸಿಯ ಬಳಕೆದಾರರ ಸಂಖ್ಯೆ 10 ಲಕ್ಷದ ಸಮೀಪದಲ್ಲಿದ್ದು, ಚಾಲಕರ ದಾಖಲಾತಿ ಸಂಖ್ಯೆ ಮೂರು ಲಕ್ಷ ದಾಟಿದೆ. ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಮಂಗಳವಾರ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದು, ಭಾರತದ ಡಿಜಿಟಲ್ ಆರ್ಥಿಕತೆಯಲ್ಲಿ ಸಹಕಾರಿ ಉದ್ಯಮಗಳ ಹೆಚ್ಚುತ್ತಿರುವ ಪ್ರಸ್ತುತತೆಯನ್ನು ಎತ್ತಿ ತೋರಿಸಿದರು. https://chat.whatsapp.com/FCEnlTkAKCC0MGPhXtX4i4 ಲೋಕಸಭೆಯಲ್ಲಿ ಒದಗಿಸಿದ ಮಾಹಿತಿಯ ಪ್ರಕಾರ, ಈಗಾಗಲೇ ಭಾರತ್ ಟ್ಯಾಕ್ಸಿಯು 9.9 ಲಕ್ಷ ಗ್ರಾಹಕರನ್ನು ನೋಂದಾಯಿಸಿದೆ ಮತ್ತು “ಸಾರಥಿಗಳು” ಎಂದು ಕರೆಯಲ್ಪಡುವ ಮೂರು ಲಕ್ಷಕ್ಕೂ ಹೆಚ್ಚು ಚಾಲಕರನ್ನು ನೋಂದಣಿ ಮಾಡಿದೆ. ವೇದಿಕೆಯು ಈಗಾಗಲೇ 2.91 ಲಕ್ಷ ಸವಾರಿಗಳನ್ನು ಪೂರ್ಣಗೊಳಿಸಿದೆ. ಪ್ರಯಾಣಿಕರ ಸಂಖ್ಯೆ ಮತ್ತು ಚಾಲಕರ ಭಾಗವಹಿಸುವಿಕೆ ಎರಡರಲ್ಲೂ ಸ್ಥಿರವಾದ ಏರಿಕೆಯು, ಇದರ ಜನಪ್ರಿಯತೆಯನ್ನು ಸೂಚಿಸುತ್ತದೆ ಎಂದು ಅಮಿತ್ ಷಾ ಮಾಹಿತಿ ನೀಡಿದರು.…
