Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಕ್ಯಾಂಪ್ಕೋ ನಿರ್ದೇಶಕ ಮಂಡಳಿಗೆ ನ.23ರಂದು ಚುನಾವಣೆ
    News

    ಕ್ಯಾಂಪ್ಕೋ ನಿರ್ದೇಶಕ ಮಂಡಳಿಗೆ ನ.23ರಂದು ಚುನಾವಣೆ

    adminBy adminNovember 21, 2025

    13 ನಿರ್ದೇಶಕರು ಅವಿರೋಧ ಆಯ್ಕೆ, 6 ಸ್ಥಾನಗಳಿಗೆ ಸ್ಪರ್ಧೆ

    ಮಂಗಳೂರು: ಕೇಂದ್ರ ಅಡಕೆ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಸಂಸ್ಕರಣಾ ಸಹಕಾರಿ (ಕ್ಯಾಂಪ್ಕೋ) ನಿರ್ದೇಶಕ ಮಂಡಳಿಗೆ ಚುನಾವಣೆ ನವೆಂಬರ್ 23ರಂದು ಭಾನುವಾರ ನಿಗದಿಯಾಗಿದೆ. ಮಂಗಳೂರಿನ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದಲ್ಲಿ ಮತದಾನ ನಡೆಯಲಿದ್ದು ಆರು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕ್ಯಾಂಪ್ಕೋದ ನಿರ್ದೇಶಕ ಮಂಡಳಿಯ 19 ಸ್ಥಾನಗಳಲ್ಲಿ, 13 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಆರು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು ಎಂಟು ಮಂದಿ ಕಣದಲ್ಲಿದ್ದಾರೆ.

    https://chat.whatsapp.com/JVAtKKe2M19AFO3W5629ZS?mode=ems_copy_t
    ಸಹಕಾರ ಭಾರತಿ ಬೆಂಬಲಿತ 13 ಮಂದಿ ನಿರ್ದೇಶಕ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದರೆ ಎಂಟು ಸ್ಥಾನಗಳಿಗೆ ಸ್ಪರ್ಧಿಸಿರುವವರಲ್ಲಿ ಆರು ಮಂದಿ ಸಹಕಾರ ಭಾರತಿ ಬೆಂಬಲಿತರು. ಇತರ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು. 19 ಮಂದಿಯ ನಿರ್ದೇಶಕ ಮಂಡಳಿಗೆ ಒಂಬತ್ತು ಮಂದಿ ಕೇರಳದಿಂದ ಹತ್ತು ಮಂದಿ ಕರ್ನಾಟಕದಿಂದ ಆಯ್ಕೆಯಾಗಬೇಕಿದೆ. ಈ ಪೈಕಿ ಕೇರಳದಿಂದ ಒಂಬತ್ತು ಮಂದಿಯೂ ಅವಿರೋಧ ಆಯ್ಕೆಯಾಗಿದ್ದಾರೆ. ಕರ್ನಾಟಕದಿಂದ ಮಹಿಳಾ ಸ್ಥಾನಕ್ಕೆ ಸುಳ್ಯದ ಕಳಂಜ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಾಲಿನಿ ಪ್ರಸಾದ್‌ ಅವರೋಧ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಗಣೇಶ್‌ ಇಡ್ಕಿದು, ಸೊಸೈಟಿ ಕ್ಷೇತ್ರದಿಂದ ಶಿವಮೊಗ್ಗದ ರಾಘವೇಂದ್ರ ಎಚ್‌.ಎಂ., ಉತ್ತರ ಕನ್ನಡದ ವಿಶ್ವನಾಥ ಈಶ್ವರ ಹೆಗಡೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


    ಜನರಲ್‌ ಕ್ಷೇತ್ರದಿಂದ ಆರು ಮಂದಿಯ ಆಯ್ಕೆಗೆ ಎಂಟು ಮಂದಿ ಕಣದಲ್ಲಿದ್ದಾರೆ. ಸಹಕಾರ ಭಾರತಿ ಬೆಂಬಲಿತರಾದ ಸುಳ್ಯದ ಎಲಿಮಲೆಯ ಎ.ವಿ ತೀರ್ಥರಾಮ, ಕಲ್ಮಡ್ಕದ ಮುರಳೀಕೃಷ್ಣ ಕೆ.ಎನ್‌, ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಎಸ್‌.ಆರ್‌ ಸತೀಶ್ಚಂದ್ರ, ಪುರುಷೋತ್ತಮ ಭಟ್‌, ದಯಾನಂದ ಹೆಗ್ಡೆ, ಮಹೇಶ್‌ ಚೌಟ ಸ್ಪರ್ಧಿಸುತ್ತಿದ್ದು, ಸ್ವತಂತ್ರ ಅಭ್ಯರ್ಥಿಗಳಾಗಿ ಸುಳ್ಯ ಕುಕ್ಕುಜಡ್ಕದ ಎಂ.ಜಿ ಸತ್ಯನಾರಾಯಣ ಮತ್ತು ಪುತ್ತೂರಿನ ರಾಮ್‌ ಪ್ರತೀಕ್‌ ಕಣದಲ್ಲಿದ್ದಾರೆ.
    ಗಮನಾರ್ಹ ವಿಷಯವೆಂದರೆ ಪ್ರಸಕ್ತ ಕ್ಯಾಂಪ್ಕೋದ ಅಧ್ಯಕ್ಷರಾಗಿದ್ದು ಕಳೆದ ಇಪ್ಪತ್ತು ವರ್ಷಗಳಿಂದ ನಿರ್ದೇಶಕ ಮಂಡಳಿಯಲ್ಲಿ ಸೇವೆ ಸಲ್ಲಿಸಿರುವ ನಿರ್ಗಮಿತ ಕ್ಯಾಂಪ್ಕೋ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಜೊತೆಗೆ ಪ್ರಸಕ್ತ ಉಪಾಧ್ಯಕ್ಷರಾಗಿರುವ ಶಂಕರನಾರಾಯಣ ಖಂಡಿಗೆಯವರು ಕೂಡ ಈ ಬಾರಿ ಕಣದಲ್ಲಿಲ್ಲ.
    ಕೇರಳ ರಾಜ್ಯದಿಂದ ಸತೀಶ್ಚಂದ್ರ ಭಂಡಾರಿ, ಸೌಮ್ಯ, ಸದಾನಂದ ಶೆಟ್ಟಿ, ವಿವೇಕಾನಂದ ಗೌಡ, ಸತ್ಯನಾರಾಯಣ ಪ್ರಸಾದ್‌, ರಾಧಾಕೃಷ್ಣ, ಗಣೇಶ್‌ ಕುಮಾರ್‌, ವೆಂಕಟ್ರಮಣ ಭಟ್‌, ಪದ್ಮರಾಜ ಪಟ್ಟಾಜೆ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Campco Election S R Sathischandra Sharada Vidyalaya
    Previous Articleಚಿಕ್ಕಮಗಳೂರಿನ ಸಮಾನ ಪತ್ತಿನ ಸೌಹಾರ್ದ ಸಹಕಾರಿಗೆ ಮೈಸೂರು ವಿಭಾಗದ ಉತ್ತಮ ಸಹಕಾರಿ ಪ್ರಶಸ್ತಿ
    Next Article ಎಂಸಿಸಿ ಬ್ಯಾಂಕಿನ ಅಧ್ಯಕ್ಷರಾದ ಅನಿಲ್ ಲೋಬೊ ಅವರಿಗೆ ತೌಳವ ಸಹಕಾರಿ ಮಾಣಿಕ್ಯ ಪ್ರಶಸ್ತಿ ಪ್ರದಾನ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.