Author: admin

ಹೊಸಪೇಟೆಯಲ್ಲಿ ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರಿ ಸಂಘದ ನೂತನ ಶಾಖೆ ಉದ್ಘಾಟಿಸಿ ಬಸವಲಿಂಗ ಸ್ವಾಮೀಜಿ ಅಭಿಪ್ರಾಯ ವಿಜಯನಗರ: ಸಮಾಜದ ಸಮಗ್ರವಾದ ಅಭಿವೃದ್ಧಿಗೆ ಸಹಕಾರಿ ಸಂಘಗಳು ಬಹಳ ಅವಶ್ಯಕ ಎಂದು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಬಸವಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು. https://chat.whatsapp.com/FCEnlTkAKCC0MGPhXtX4i4 ಹೊಸಪೇಟೆಯಲ್ಲಿ ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರಿ ಸಂಘದ ನೂತನ ಶಾಖೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಸಹಕಾರಿ ಸಂಘಗಳು ಸಣ್ಣ ರೈತರು, ಕುಶಲಕರ್ಮಿಗಳು ಮತ್ತು ವ್ಯಾಪಾರಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸದೃಢಗೊಳಿಸುತ್ತದೆ ಎಂದು ಹೇಳಿದರು. ಸಂಘದ ಅಧ್ಯಕ್ಷರಾದ ಕಲ್ಗುಡಿ ಮಂಜುನಾಥ ಮಾತನಾಡಿ, ಬಡವರಿಗಾಗಿ ಸಹಕಾರಿ ಸಂಘದಿಂದ ವಿಶೇಷ ಯೋಜನೆ ಜಾರಿಗೆ ತರಲಾಗಿದೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಸಂಡೂರಿನ ಪ್ರಭುದೇವರ ವಿರಕ್ತ ಮಠದ ಪ್ರಭುಸ್ವಾಮಿ, ವಿಧಾನ ಪರಿಷತ್‌ ಸದಸ್ಯರಾದ ಎಸ್.ವಿ.ಸಂಕನೂರ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘದ ಅಧ್ಯಕ್ಷರಾದ ಜಿ.ನಂಜನ…

Read More

ಬಂಟ್ವಾಳ: ಸಹಕಾರ ಕ್ಷೆತ್ರದಲ್ಲಿ ಗಣನೀಯ ಸಾಧನೆ ಮಾಡಿ ವಿವಿಧ ಕ್ಷೆತ್ರದಲ್ಲಿ ಸಲ್ಲಿಸಿದ ಸಮಾಜಸೇವೆಯನ್ನು ಗುರುತಿಸಿ ರಾಜ್ಯದ ಕನ್ನಡಪ್ರಭ ದಿನಪತ್ರಿಕೆ ಹಾಗೂ ರಾಜ್ಯದ ಪ್ರಮುಖ ಸುದ್ದಿವಾಹಿನಿ ಏಷಿಯಾನೆಟ್ ಸುವರ್ಣ ನ್ಯೂಸ್ ಕೊಡಮಾಡುವ ರಾಜ್ಯಮಟ್ಟದ ಕರ್ನಾಟಕ ಸಹಕಾರ ಶಿರೋಮಣಿ 2025 ಪ್ರಶಸ್ತಿಗೆ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಭಾಜನರಾಗಿದ್ದಾರೆ. https://chat.whatsapp.com/FCEnlTkAKCC0MGPhXtX4i4 ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ, ಪ್ರಸ್ತುತ ಅಧ್ಯಕ್ಷರಾಗಿ ಕಳೆದ ಆರು ವರ್ಷಗಳಲ್ಲಿ ಸಹಕಾರ ಸಂಘವನ್ನು ಆರ್ಥಿಕವಾಗಿ ಅಭಿವೃದ್ಧಿ ಪಡಿಸಿರುವುದಲ್ಲದೆ ಸಂಘದ ವತಿಯಿಂದ ಸಾಧಕರಿಗೆ ಅಭಿನಂದನೆ, ವಿದ್ಯಾರ್ಥಿಗಳಿಗೆ ನೆರವು, ಅನಾರೋಗ್ಯ ವ್ಯಕ್ತಿಗಳ ಚಿಕಿತ್ಸೆ ವೆಚ್ಚಕ್ಕೆ ಸಹಕಾರ, ಕೋವಿಡ್ ಸಮಯದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಆರ್ಥಿಕ ಸಹಾಯದೊಂದಿಗೆ ಗೌರವಾರ್ಪಣೆ, ಮಹಿಳೆಯರಿಗೆ ಉಚಿತ ಸ್ವಉದ್ಯೋಗ ಟೈಲರಿಂಗ್ ತರಬೇತಿಗಳು ಸೇರಿದಂತೆ ಹತ್ತು ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿವಿಧ ಯೋಜನೆಗಳ ಬಗ್ಗೆ ಮತ್ತು ಸಾರ್ವಜನಿಕ ಬೇಡಿಕೆಗಳ ಕುರಿತು ಸರಕಾರದ ಗಮನ ಸೆಳೆದು ಸಹಕಾರ ಸಂಘವನ್ನು…

Read More

ಉಜಿರೆ: ಸ್ವಚ್ಛ ಪರಿಸರ ಪ್ರತಿಯೊಬ್ಬ ನಾಗರಿಕನ ಮೂಲಭೂತ ಜವಾಬ್ದಾರಿಯಾಗಿದೆ. ನಮ್ಮ ಪರಿಸರದ ಸ್ವಚ್ಛತೆಯ ಜವಾಬ್ದಾರಿ ನಮ್ಮದಾದರೆ ನಮ್ಮ ಪರಿಸರ ಸ್ವಚ್ಛವಾಗುತ್ತದೆ. ಅಂತಿಮವಾಗಿ ಗಾಂಧೀಜಿ ಕಂಡ ಸ್ವಚ್ಛ ಭಾರತದ ಕನಸು ನನಸಾಗುತ್ತದೆ. ಈ ನಿಟ್ಟಿನಲ್ಲಿ ನಡೆಯುವ ಸ್ವಚ್ಛತಾ ಶ್ರಮದಾನವು ಸಮಾಜ ಜಾಗೃತಿಯ ದ್ಯೋತಕವಾಗಿದೆ ಎಂದು ವಿಶ್ವಕರ್ಮ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಹೇಳಿದರು. https://chat.whatsapp.com/FCEnlTkAKCC0MGPhXtX4i4 ಅವರು ವಿಶ್ವಕರ್ಮ ಬ್ಯಾಂಕಿನ ಉಜಿರೆ ಶಾಖೆಯ ವತಿಯಿಂದ “ಸ್ವಚ್ಛತಾ ಹೀ ಸೇವಾ” ಎಂಬ ಧ್ಯೇಯದೊಂದಿಗೆ ಉಜಿರೆಯಲ್ಲಿ ನಡೆದ 26ನೇ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಉದ್ಘಾಟಿಸಿ ಹೇಳಿದರು. ಆದರ್ಶ ಸೇವಾ ಟ್ರಸ್ಟ್ ಹಳೇಪೇಟೆ ಇದರ ಕೋಶಾಧಿಕಾರಿ ರಾಮದಾಸ್ ಭಂಡಾರ್ಕರ್ , ಸಾಮಾಜಿಕ ಮುಖಂಡ ಝಕಾರಿಯಾ ಕುಂಟಿನಿ ಹಾಗೂ ಕರಾಟೆ ತರಬೇತುದಾರ ಅಬ್ದುಲ್ ರಹಿಮಾನ್ ಹಸಿರು ನಿಶಾನೆ ತೋರುವ ಮೂಲಕ ಸ್ವಚ್ಛತಾ ಶ್ರಮದಾನಕ್ಕೆ ಚಾಲನೆ ನೀಡಿದರು. ಉಜಿರೆ ಗ್ರಾಮದ ಕುಂಟಿನಿ ಪರಿಸರದ ಸುತ್ತಮುತ್ತಲಿನಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶ್ರಮದಾನ ಕಾರ್ಯಕ್ರಮ ನಡೆಯಿತು. ಮೊಹಿಯುದ್ದೀನ್ ಜುಮ್ಮಾ…

Read More

ಮಂಗಳೂರು: ಶ್ರೀಶಾ ಸೌಹಾರ್ದ ಸೊಸೈಟಿಯ ವತಿಯಿಂದ ಭಾನುವಾರ ಮಂಗಳೂರು ನಗರದ ಹೊರವಲಯದ ಸೋಮೇಶ್ವರ ಕಡಲ ತಡಿಯಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. https://chat.whatsapp.com/FCEnlTkAKCC0MGPhXtX4i4 ಶ್ರೀಶಾ ಸೊಸೈಟಿಯ ಎಲ್ಲಾ ಸಿಬ್ಬಂದಿಗಳು ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರು ಭಾಗವಹಿಸಿದ್ದು, ಈ ಸ್ವಚ್ಛತಾ ಕಾರ್ಯದಲ್ಲಿ ಬೀಚ್ ನಲ್ಲಿ ಹೇರಳವಾಗಿ ಬಿದ್ದಿದ್ದ ಪ್ಲಾಸ್ಟಿಕ್ ಮತ್ತು ಗ್ಲಾಸ್ ಬಾಟಲಿಗಳು, ಪ್ಲಾಸ್ಟಿಕ್ ಇತರೆ ತುಣುಕುಗಳನ್ನು ಹೆಕ್ಕಿ ಸಂಗ್ರಹಿಸಲಾಯಿತು. ಬೀಚ ನಲ್ಲಿ ಸುಮಾರು ಒಂದು ಕಿಲೋಮೀಟರ್ ವರೆಗೆ ಶ್ರಮದಾನ ಮೂಲಕ ಪ್ಲಾಸ್ಟಿಕ್ ಮುಕ್ತಗೊಳಿಸಲಾಯಿತು. ಬೆಳಗ್ಗೆ 7 ಗಂಟೆಯಿಂದ 9ರವರಿಗೆ ನಡೆದ ಸ್ವಚ್ಛತಾ ಕಾರ್ಯದಲ್ಲಿ 20ಕ್ಕೂ ಹೆಚ್ಚು ಮೂಟೆಗಳಷ್ಟು ತ್ಯಾಜ್ಯವನ್ನು ಸಂಗ್ರಹಿಸಲಾಯಿತು. ನಂತರ ಸಾಂದರ್ಭಿಕವಾಗಿ ಮಾತನಾಡಿದ ಶ್ರೀಶಾ ಸೊಸೈಟಿಯ ಅಧ್ಯಕ್ಷ ಎಂ. ಎಸ್. ಗುರುರಾಜ್, ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಡಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯ. ಸ್ವಚ್ಛತೆ ಇದ್ದಲ್ಲಿ ದೇವರ ಸಾನ್ನಿಧ್ಯ ಇರುತ್ತದೆ. ಅಲ್ಲದೆ ಪರಿಸರ ಸ್ವಚ್ಛತೆಯಿಂದ ನಮ್ಮ ಸ್ವಾಸ್ತ್ಯವೂ ಹೆಚ್ಚುತ್ತದೆ. ಪ್ಲಾಸ್ಟಿಕ್ ಪರಿಸರಕ್ಕೆ ದೊಡ್ಡ ಮಾರಕ. ಅವನ್ನು ಸಮುದ್ರದ ಹಾಗೂ ನೆಲದ ಪ್ರಾಣಿ ಸಂಕುಲಗಳು…

Read More

ಬೆಂದೂರ್‌ವೆಲ್‌ ಶಾಖೆಯ ೧೪ನೇ ವಾರ್ಷಿಕೋತ್ಸವ, ಗ್ರಾಹಕರ ಸಭೆಯಲ್ಲಿ ಶಂಕರ ಶೆಟ್ಟಿ ಅಭಿಪ್ರಾಯ ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಹಿರಿಯ ಸದಸ್ಯರ ಮನೆಗೆ ಬಂದು ಬ್ಯಾಂಕಿಂಗ್ ಸೇವೆ ನೀಡುತ್ತಿರುವುದು ಶ್ಲಾಘನೀಯ. ಹಿರಿಯ ನಾಗರಿಕರಿಗೆ ಇದರಿಂದ ತುಂಬಾ ಪ್ರಯೋಜನವಾಗುತ್ತಿದೆ ಎಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸದಸ್ಯರಾದ ಶಂಕರ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಬೆಂದೂರುವೆಲ್ ಶಾಖೆಯ 14ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯಲ್ಲಿ ಅವರು ಮಾತನಾಡಿದರು. https://chat.whatsapp.com/FCEnlTkAKCC0MGPhXtX4i4 ಕಾರ್ಯಕ್ರಮವನ್ನು ಸಂಘದ ಸದಸ್ಯರಾದ ಕೃತೀಶ್ ಕುಮಾರ್, ಪುಷ್ಪಲತಾ ಕೆ., ಮಾಧವ ಕೋಟ್ಯಾನ್, ಗೋಪಾಲ್ ಸುವರ್ಣ, ಕರುಣಾನಂದ ರಾವ್ ಹಾಗೂ ಅನಂತರಾಮ್ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಘದ ಸದಸ್ಯರಾದ ಕೃತೀಶ್ ಕುಮಾರ್ ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರ ನೇತೃತ್ವದಲ್ಲಿ ಸಂಘದ ಸದಸ್ಯರಿಗೆ ಉತ್ತಮವಾದ ಸೇವೆ ನೀಡುತ್ತಿದೆ. ಬೆಂದೂರ್‌ವೆಲ್ ಶಾಖೆಯಲ್ಲಿ ಗ್ರಾಹಕರ ಸಂಖ್ಯೆ ಜಾಸ್ತಿ ಇದ್ದು ಇಲ್ಲಿ ಸ್ಥಳದ ಕೊರತೆ…

Read More

ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಚಾರ ಇಲಾಖೆಯಿಂದ ಪರಿಷ್ಕೃತ ಅಧಿಸೂಚನೆ ನವದೆಹಲಿ: ಕೇಂದ್ರ ಸರ್ಕಾರವು “ಸ್ಟಾರ್ಟ್‌ಅಪ್” ಪದವನ್ನು ಮರು ವ್ಯಾಖ್ಯಾನಿಸಿ, “ಡೀಪ್ ಟೆಕ್ ಸ್ಟಾರ್ಟ್‌ಅಪ್” ವರ್ಗವನ್ನು ಪರಿಚಯಿಸುವ ಪರಿಷ್ಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಇದರ ಅಡಿಯಲ್ಲಿ ಸಹಕಾರಿ ಸಂಘಗಳನ್ನು ಔಪಚಾರಿಕವಾಗಿ ಸ್ಟಾರ್ಟ್‌ಅಪ್ ಗುರುತಿಸುವಿಕೆಯ ಚೌಕಟ್ಟಿನೊಳಗೆ ತರಲಿದೆ. https://chat.whatsapp.com/FCEnlTkAKCC0MGPhXtX4i4 ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧೀನದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಪ್ರಚಾರ ಇಲಾಖೆ (DPIIT) ಹೊರಡಿಸಿದ ಪರಿಷ್ಕೃತ ಅಧಿಸೂಚನೆಯು 2019ರ ಸ್ಟಾರ್ಟ್‌ಅಪ್ ಅಧಿಸೂಚನೆಯನ್ನು ಬದಲಾಯಿಸಿದೆ. ಹೊಸ ಅಧಿಸೂಚನೆಯ ಪ್ರಕಾರ, ಭಾರತದಲ್ಲಿ ಖಾಸಗಿ ಸೀಮಿತ ಕಂಪನಿ, ಪಾಲುದಾರಿಕೆ ಸಂಸ್ಥೆ, ಸೀಮಿತ ಹೊಣೆಗಾರಿಕೆ ಪಾಲುದಾರಿಕೆ, ಬಹು-ರಾಜ್ಯ ಸಹಕಾರಿ ಸಂಘ ಅಥವಾ ಸಂಬಂಧಿತ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಸಹಕಾರಿ ಸಂಘಗಳ ಕಾಯ್ದೆಯಡಿಯಲ್ಲಿ ನೋಂದಾಯಿಸಲಾದ ಸಹಕಾರಿ ಸಂಘವಾಗಿ ನೋಂದಾಯಿಸಿದ್ದರೆ ಅದನ್ನು ಸ್ಟಾರ್ಟ್‌ಅಪ್ ಎಂದು ಗುರುತಿಸಲಾಗುತ್ತದೆ. ಸ್ಟಾರ್ಟ್ಅಪ್ ಆಗಿ ಅರ್ಹತೆ ಪಡೆಯಲು, ಆ ಸಂಸ್ಥೆಯು ಅದರ ಸ್ಥಾಪನೆ ಅಥವಾ ನೋಂದಣಿಯ ಹತ್ತು ವರ್ಷಗಳ ಒಳಗೆ ಇರಬೇಕು ಮತ್ತು ನೋಂದಣಿಯ…

Read More

ಮೂಡುಬಿದಿರೆ: ಮೂಡುಬಿದಿರೆ ತಾಲೂಕಿನ ಗ್ರಾಮಾಂತರ ಪ್ರದೇಶ ಶಿರ್ತಾಡಿಯಲ್ಲಿ 13 ವರ್ಷಗಳ ಹಿಂದೆ ಪ್ರಾರಂಭವಾದ ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮೈತ್ರಿ ಸೌಧ -ಸಹಕಾರಿ ಸಂಘದ ವಾಣಿಜ್ಯ ಸಂಕೀರ್ಣ ಹಾಗೂ ಸಂಘದ ಕೇಂದ್ರ ಕಚೇರಿಯ ಉದ್ಘಾಟನಾ ಸಮಾರಂಭ ಫೆ.8ರ ಭಾನುವಾರ ಲೋಕಾರ್ಪಣೆಗೊಳ್ಳಲಿದೆ. https://chat.whatsapp.com/FCEnlTkAKCC0MGPhXtX4i4 ಫೆಬ್ರವರಿ 8ರ ಸಂಜೆ 5.30ಕ್ಕೆ ಮೈತ್ರಿ ಸೌಧವನ್ನು ಶಿರ್ತಾಡಿಯ ಭುವನಜ್ಯೋತಿ ರೆಸಿಡೆನ್ಶಿಯಲ್‌ ಶಾಲೆಯ ಪ್ರಾಂಶುಪಾಲರಾದ ಪ್ರಶಾಂತ್‌ ಡಿಸೋಜ ಉದ್ಘಾಟಿಸಲಿದ್ದಾರೆ. ವಕೀಲ ಮಯೂರಕೀರ್ತಿ ಸಹಕಾರಿಯ ಕೇಂದ್ರ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ದಕ್ಷಿಣ ಕನ್ನಡ ಒಕ್ಕೂಟ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಭಾಸ್ಕರ ದೇವಸ್ಯ, ಕರ್ನಾಟಕ ಸೌಹಾರ್ದ ಸಂಯುಕ್ತ ಸಹಕಾರಿಯ ಪ್ರಾಂತೀಯ ಅಧಿಕಾರಿ ಗುರುಪ್ರಸಾದ್‌ ಬಂಗೇರ, ಮಾತೃಭೂಮಿ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ಕೊಂಪದವು, ಶಿರ್ತಾಡಿಯ ಹೆಲೆನ್‌ ಮರಿಯ ಲೋಬೊ, ನಾರಾವಿಯ ಆಶಾ ಸುರೇಶ್‌ ಗೌರವ ಉಪಸ್ಥಿತಿ ಇರಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ರಾತ್ರಿ 7 ಗಂಟೆಗೆ ಶರತ್‌ ಶೆಟ್ಟಿ ಕಿನ್ನಿಗೋಳಿ ನೇತೃತ್ವದ ವಿಜಯ ಕಲಾವಿದರು ಕಿನ್ನಿಗೋಳಿ ಇವರಿಂದ ವಿಜಯ…

Read More

ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಬೆಂದೂರುವೆಲ್ ಶಾಖೆಯ 14ನೇ ವಾರ್ಷಿಕೋತ್ಸವ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಜಪ್ಪಿನಮೊಗರು ಇದರ ಗುರು ಮಂದಿರದ ಪ್ರತಿಷ್ಠಾಪನಾ ವರ್ಧಂತ್ಯುತ್ಸವದ ಪ್ರಯುಕ್ತ, ಎನ್.ಜಿ ವರ್ಲ್ಡ್‌ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವರ ಸಹಯೋಗದೊಂದಿಗೆ ಫೆ.8ರಂದು ಭಾನುವಾರ ಬೆಳಗ್ಗೆ 9.30ರಿಂದ ಮದ್ಯಾಹ್ನ 12.30ರವರೆಗೆ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ಚಿಕಿತ್ಸಾ ಶಿಬಿರವನ್ನು ಜಪ್ಪಿನಮೊಗರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಕಂರ್ಭಿಬೈದೆದಿ ಚಾವಡಿಯಲ್ಲಿ ಆಯೋಜಿಸಲಾಗಿದೆ. https://chat.whatsapp.com/FCEnlTkAKCC0MGPhXtX4i4 ಈ ವೈದ್ಯಕೀಯ ಶಿಬಿರದಲ್ಲಿ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಮುಕ್ಕ ಸುರತ್ಕಲ್ ಮಂಗಳೂರು ಇವರ ನುರಿತ ವೈದ್ಯರ ತಂಡದವರಿಂದ ದಂತ ತಪಾಸಣೆ ಮತ್ತು ಜಾಗೃತಿ, ಹುಳುಕು ಹಲ್ಲುಗಳ ಭರ್ತಿ ಮಾಡುವುದು, ಹಲ್ಲುಗಳನ್ನು ಶುಚಿಗೊಳಿಸುವುದು, ಹಲ್ಲುಗಳನ್ನು ಕೀಳುವುದು ಹಾಗೂ ಮಂಗಳ ಕಾಲೇಜು, ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಫೌಂಡೇಶನ್, ಕದ್ರಿ, ಮಂಗಳೂರು ಇವರ ನುರಿತ ವೈದ್ಯರ ತಂಡದವರಿಂದ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ…

Read More

ಬೆಳ್ತಂಗಡಿ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಳದಂಗಡಿ ಶಾಖೆಯ ಮೂರನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರ ಅಧ್ಯಕ್ಷತೆಯಲ್ಲಿ ಅಳದಂಗಡಿ ಶಾಖೆಯಲ್ಲಿ ಜರುಗಿತು. https://chat.whatsapp.com/FCEnlTkAKCC0MGPhXtX4i4 ಸಂಘದ ಸದಸ್ಯರಾದ ತುಳುಪುಲೆ, ರಾಜು ಪೂಜಾರಿ, ವಿಶ್ವನಾಥ್ ಕುದ್ಯಾಡಿ, ಪೂರ್ಣೇಶ್, ರತ್ನಾಕರ ಕೋಟ್ಯಾನ್, ಅಜರುದ್ದೀನ್, ದಯಾಕರ ರೈ, ಜಲಜಾ ವಿ.ಸಾಲ್ಯಾನ್, ಶೋಭಾ ಹಾಗೂ ನೀಲಯ್ಯ ಗೌಡ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು. ಸಂಘದ ಸದಸ್ಯರಾದ ಮನೋಹರ ಶೆಟ್ಟಿ ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರ ಅಧ್ಯಕ್ಷತೆಯಲ್ಲಿ ಸಂಘದ ಸಿಬ್ಬಂದಿಗಳು ಗುಣಮಟ್ಟದ ಬ್ಯಾಂಕಿಂಗ್ ಸೇವೆ ನೀಡುತ್ತಿದ್ದಾರೆ. ಇನ್ನೂ ಹೆಚ್ಚಿನ ಸೇವೆಯನ್ನು ನೀಡುವಂತಾಗಲಿ ಎಂದು ಶುಭ ಹಾರೈಸಿದರು. ನೀಲಯ್ಯ ಗೌಡ ಮಾತನಾಡಿ ಶಾಖೆ ಆರಂಭದಿಂದಲೂ ಉತ್ತಮ ವ್ಯವಹಾರ ನಡೆಸುತ್ತಿದ್ದು, ಸಂಘದ ಸದಸ್ಯರ ಬೇಡಿಕೆಗಳನ್ನು ಈಡೇರಿಸುತ್ತಿದೆ ಎಂದು ಶ್ಲಾಘಿಸಿದರು. ಸುರೇಖಾ ಮಾತನಾಡಿ ಉಳಿತಾಯದ ದೃಷ್ಟಿಯಿಂದ ಆವರ್ತನ ಖಾತೆಯಲ್ಲಿ ಹಣ ಉಳಿತಾಯ ಮಾಡಿದ್ದು, ಇದರಿಂದ…

Read More

ಮಂಗಳೂರು: ಬೆಳ್ತಂಗಡಿ ತಾಲೂಕಿನ ಗುರುವಾಯನಕರೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 21ನೇ ಹವಾನಿಯಂತ್ರಿತ ಶಾಖೆಯು ವಾಮಂಜೂರು ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಮೊದಲನೇ ಮಹಡಿಯಲ್ಲಿ ಗುರುವಾರ ಉದ್ಘಾಟನೆಗೊಂಡಿತು. https://chat.whatsapp.com/FCEnlTkAKCC0MGPhXtX4i4 ವಾಮಂಜೂರು ಚರ್ಚ್ ಧರ್ಮಗುರು ವಂದನೀಯ ಜೇಮ್ಸ್ ಡಿಸೋಜ ಉದ್ಘಾಟನೆ ನೆರವೇರಿಸಿ ಮಾತನಾಡಿ, ವಾಮಂಜೂರು ಪ್ರದೇಶದಲ್ಲಿ ಈ ಸೊಸೈಟಿ ತನ್ನ ಶಾಖೆ ಆರಂಭಿಸಿ ಜನರ ಸೇವೆಗೆ ಮುಂದಾಗಿದ್ದು ಇಲ್ಲಿನ ಜನರಿಗೆ ಅತ್ಯುತ್ತಮ ಸೇವೆ ಲಭಿಸಲಿ. ದೇವರ ಆಶೀರ್ವಾದ ನಿರಂತರ ಇರಲಿ ಎಂದು ಶುಭ ಹಾರೈಸಿದರು. ಗುರುಪುರ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಶೆಡ್ಡೆ ಮಾತನಾಡಿ, ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆದು ಹೆಚ್ಚಿನ ಶಾಖೆಗಳನ್ನು ಪ್ರಾರಂಭಿಸುವಂತಾಗಲಿ ಎಂದರು. ಮಾಜಿ ಕಾರ್ಪೊರೇಟರ್‌ ಹೇಮಲತಾ ರಘು ಸಾಲ್ಯಾನ್ ಶುಭ ಹಾರೈಸಿದರು. ವಿಜಯ ಸೊಸೈಟಿಯ ಅಧ್ಯಕ್ಷ ಅಜಿತ್ ಜಿ.ಶೆಟ್ಟಿ ಕೊರ್ಯಾರು ಮಾತನಾಡಿ, 2005ರಲ್ಲಿ ಎಸ್. ಜಯರಾಮ ಶೆಟ್ಟಿ ಅವರು ಆರಂಭಿಸಿದ ಸಂಸ್ಥೆ 21ನೇ ಶಾಖೆ ತೆರೆಯುವ ಹಂತಕ್ಕೆ ತಲುಪಿದೆ. ಪ್ರಸ್ತುತ…

Read More