ವಿಜಯಪುರ: ನೂತನವಾಗಿ ನೋಂದಣಿಯಾಗಿರುವ ವಿಜಯಪುರ ಸೌಹಾರ್ದ ಸಹಕಾರಿಗಳ ಒಕ್ಕೂಟದ (ಯೂನಿಯನ್) ಕಚೇರಿ ನಗರದ ಸೋಲಾಪುರ ರಸ್ತೆಯ ಚಾಲುಕ್ಯ ನಗರದಲ್ಲಿ ಆರಂಭಗೊಂಡಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಬುಧವಾರ ಬೆಳಗ್ಗೆ ಮಹಾಲಕ್ಷ್ಮೀ ಪೂಜೆಯೊಂದಿಗೆ ಕಚೇರಿ ಶುಭಾರಂಭಗೊಂಡಿತು. ಒಕ್ಕೂಟದ ಅಧ್ಯಕ್ಷರಾದ ಸಂಜಯ ಪಾಟೀಲ ಕನಮಡಿ , ಉಪಾಧ್ಯಕ್ಷರಾದ ಚಂದ್ರಶೇಖರ ಕವಟಗಿ, ನೂತನ ಆಡಳಿತ ಮಂಡಳಿ ಸದಸ್ಯರಾದ ಅರುಣ ವಾರದ, ಸುರೇಶ ಬಿರಾದಾರ್, ಸಿದ್ದು ಮಲ್ಲಿಕಾರ್ಜುನ ಮಠ, ಅರುಣ ಮಠ, ಮೌನೇಶ ಪತ್ತಾರ, ಸತೀಶ ಶಿಂತ್ರೆ, ವಿವೇಕಾನಂದ ಶಿರೋಳ್ಕರ್ , ಯಮನಪ್ಪ ಸಾತಿಹಾಳ (ವಿಜಯಪುರ ಗ್ರಾಮಾಂತರ) ಭಾಲಚಂದ್ರ ಮುಂಜಾನೆ (ಬಸವನ ಬಾಗೇವಾಡಿ), ರಾಜು ಹಂಚಾಟೆ (ತಾಳಿಕೋಟ್ / ಮುದ್ದೇಬಿಹಾಳ), ಚಂದ್ರಶೇಖರ ಪಾಟೀಲ (ಚಡಚಣ ಇಂಡಿ ) ಮಲಕಪ್ಪ ರೊಟ್ಟಿ (ತಾಂಬಾ, ಇಂಡಿ), ಹಾಗೂ ಸಹಕಾರ ಭಾರತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೀಪಕ ಶಿಂತ್ರೆ , ಪ್ರಧಾನ ಕಾರ್ಯದರ್ಶಿ ಪರಶುರಾಮ ಚಿಂಚಲಿ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

