ಮಂಗಳೂರು: ಬಹುನಿರೀಕ್ಷಿತ ಕ್ಯಾಂಪ್ಕೋ ಚುನಾವಣಾ ಪ್ರಕ್ರಿಯೆಯು ಮುಗಿದು ಮತ ಎಣಿಕೆ ಮಂಗಳವಾರ ನಡೆದಿದ್ದು ಆರು ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಸಹಕಾರ ಭಾರತಿಯ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಸಹಕಾರ ಭಾರತಿಯಿಂದ ಸ್ಪರ್ಧಿಸಿದ್ದ ಮುರಳಿಕೃಷ್ಣ ಕೆ.ಎನ್(2261 ಮತ), ಪುರುಷೋತ್ತಮ್ ಭಟ್(2249), ಮಹೇಶ್ ಚೌಟ(2216), ಎಸ್ ಆರ್ ಸತೀಶ್ಚಂದ್ರ (2181), ದಯಾನಂದ ಹೆಗ್ಡೆ (2163) ಮತ್ತು ಎ.ವಿ.ತೀರ್ಥರಾಮ(2052) ಮೇಲುಗೈ ಸಾಧಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಸತ್ಯನಾರಾಯಣ ಎಂ.ಜಿ 620, ರಾಮ ಪ್ರತೀಕ್ 623 ಮತ ಪಡೆದಿದ್ದಾರೆ. ಇಂದು ಮತ ಎಣಿಕೆ ನಡೆದರೂ, ಫಲಿತಾಂಶದ ಅಧಿಕೃತ ಘೋಷಣೆ ಶುಕ್ರವಾರ ನಡೆಯಲಿದೆ.
ಕ್ಯಾಂಪ್ಕೋ ಆಡಳಿತ ಮಂಡಳಿಯ 19 ಸ್ಥಾನಗಳ ಪೈಕಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಉಳಿದ ಆರು ಸಾಮಾನ್ಯ ಸ್ಥಾನಗಳಿಗೆ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದರು. ಕರ್ನಾಟಕ ರಾಜ್ಯದ 10 ಹಾಗೂ ಕೇರಳ ರಾಜ್ಯದ ಒಂಬತ್ತು ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಕೇರಳದ ಎಲ್ಲಾ ಒಂಬತ್ತು ಹಾಗೂ ಕರ್ನಾಟಕದ ನಾಲ್ಕು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು. ಕರ್ನಾಟಕದಿಂದ ಮಾಲಿನಿ ಪ್ರಸಾದ್, ಗಣೇಶ್, ರಾಘವೇಂದ್ರ ಎಂ.ಎಚ್ ಮತ್ತು ವಿಶ್ವನಾಥ ಈಶ್ವರ ಹೆಗಡೆ, ಕೇರಳದಿಂದ ಸೌಮ್ಯ, ಸತೀಶ್ಚಂದ್ರ ಭಂಡಾರಿ, ಸದಾನಂದ ಶೆಟ್ಟಿ, ವಿವೇಕಾನಂದ ಗೌಡ, ಸತ್ಯನಾರಾಯಣ ಪ್ರಸಾದ್, ರಾಧಾಕೃಷ್ಣ, ಗಣೇಶ್ ಕುಮಾರ್. ವೆಂಕಟ್ರಮಣ ಭಟ್ ಹಾಗೂ ಪದ್ಮರಾಜ ಪಟ್ಟಾಜೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com










