ಬೆಂಗಳೂರು: ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.೦ ತಂತ್ರಾಂಶದಲ್ಲೇ ಡಿಜಿಟಲ್ ಇ ಸ್ಟಾಂಪ್ ಸೇವೆ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕೆ ಪ್ರತಿ ಉಪ ನೋಂದಣಿ ಕಚೇರಿಯಲ್ಲೂ ಡಿಜಿಟಲ್ ಇ-ಸ್ಟಾಂಪ್ ತರಬೇತಿ ನೀಡಲು ಮಾರ್ಗಸೂಚಿ ಹೊರಡಿಸಿದೆ.
https://chat.whatsapp.com/FCEnlTkAKCC0MGPhXtX4i4
ಕಾನೂನು ದಾಖಲೆಗಳಿಗೆ ಅಗತ್ಯವಾಗಿದ್ದ ಛಾಪಾ ಕಾಗದ ಮಾಯವಾಗಿ ಇ -ಸ್ಟಾಂಪ್ ಜಾರಿಗೆ ತರಲಾಗಿತ್ತು. ಇದೀಗ ಇ-ಸ್ಟಾಂಪ್‌ಗೂ ಬದಲಿ ವ್ಯವಸ್ಥೆ ಮಾಡಲಾಗಿದ್ದು, ಡಿಜಿಟಲ್ ಇ-ಸ್ಟಾಂಪ್ ಪರಿಚಯಿಸಲಾಗುತ್ತಿದೆ. ಇದಕ್ಕಾಗಿ ಕರ್ನಾಟಕ ಮುದ್ರಾಂಕ (ಡಿಜಿಟಲ್ ಇ-ಸ್ಟಾಂಪ್) ನಿಯಮಗಳು 2025 ಅನ್ನು ರಚಿಸಲಾಗಿದೆ. ಇದರ ಪ್ರಕಾರ ಜನ ಮನೆಯಿಂದಲೇ ಆನ್‌ಲೈನ್ ಮೂಲಕ ಇ-ಸ್ಟಾಂಪ್ ಪಡೆಯಬಹುದು.
ಈ ವಿಷಯಕ್ಕೆ ಸಂಬಂಧಿಸಿ, ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರ ಕಚೇರಿಯಿಂದ ರಾಜ್ಯಾದ್ಯಂತ ಡಿಜಿಟಲ್ ಇ-ಸ್ಟಾಂಪ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ಸೌಹಾರ್ದ ಸಹಕಾರಿಗಳ ಸಿಬ್ಬಂದಿಗಳಿಗೆ ಪ್ರತಿ ಉಪ ನೋಂದಣಿ ಕಚೇರಿಯಲ್ಲಿ ಡಿಜಿಟಲ್ ಇ-ಸ್ಟಾಂಪ್ ವಿತರಣೆ ಕುರಿತು ತರಬೇತಿಯನ್ನು ಜನವರಿ 8ರಿಂದ ಪ್ರಾರಂಭಿಸಿ ಜನವರಿ 14ರ ಒಳಗೆ ಪೂರ್ಣಗೊಳಿಸುವಂತೆ ರಾಜ್ಯದ ಎಂಟು ಜಿಲ್ಲಾ ನೋಂದಣಾಧಿಕಾರಿಗಳಿಗೆ ನೋಡೆಲ್ ಅಧಿಕಾರಿಯನ್ನಾಗಿ ನೇಮಿಸಿ ಮಾರ್ಗಸೂಚಿ ನೀಡಲಾಗಿದೆ.
ಈ ತರಬೇತಿಯಲ್ಲಿ ಸೌಹಾರ್ದ ಸಹಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಉಪ ನೋಂದಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ತರಬೇತಿ ದಿನಾಂಕ ತಿಳಿದುಕೊಂಡು ತರಬೇತಿ ಪಡೆದುಕೊಳ್ಳಲು ಪ್ರಕಟನೆ ಮೂಲಕ ಸೂಚಿಸಲಾಗಿದೆ.
ಉಪ ನೋಂದಣಾಧಿಕಾರಿಗಳ ಕಛೇರಿ ಸಂಪರ್ಕಿಸಲು: https://igr.karnataka.gov.in/page/Contact+Us/Sub+Registrars/en
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com


