Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸ್ವಚ್ಛತೆಯ ಸ್ವಯಂಜಾಗೃತಿ ರಾಷ್ಟ್ರೀಯ ಆಂದೋಲನವಾಗಲಿ
    News

    ಸ್ವಚ್ಛತೆಯ ಸ್ವಯಂಜಾಗೃತಿ ರಾಷ್ಟ್ರೀಯ ಆಂದೋಲನವಾಗಲಿ

    adminBy adminDecember 15, 2025

    ವಿಶ್ವಕರ್ಮ ಸಹಕಾರ ಬ್ಯಾಂಕ್‌ ನಿರ್ದೇಶಕರಾದ ಭರತ್ ನಿಡ್ಪಳ್ಳಿ ಆಶಯ

    ಮಂಗಳೂರು: ಸ್ವಚ್ಛತೆಯು ಮನೆ ಮನೆಯಿಂದ ಸ್ವಯಂಜಾಗೃತಿಯೊಂದಿಗೆ ಪ್ರಾರಂಭವಾಗಬೇಕು. ಅದು ಸಾಮೂಹಿಕವಾಗಿ ಪರಿವರ್ತನೆಗೊಂಡು ರಾಷ್ಟ್ರೀಯ ಜಾಗೃತಿಯನ್ನು ಉಂಟು ಮಾಡುತ್ತದೆ. ಆವಾಗ ಮಹಾತ್ಮ ಗಾಂಧೀಜಿಯವರು ಕಂಡ ಸ್ವಚ್ಛ ಭಾರತ್ ಪರಿಕಲ್ಪನೆಯು ಸಾಕಾರಗೊಳ್ಳುತ್ತದೆ ಎಂದು ವಿಶ್ವಕರ್ಮ ಬ್ಯಾಂಕಿನ ನಿರ್ದೇಶಕರಾದ ಭರತ್ ನಿಡ್ಪಳ್ಳಿ ಹೇಳಿದರು.
    ಅವರು ವಿಶ್ವಕರ್ಮ ಸಹಕಾರ ಬ್ಯಾಂಕಿನ ಮಂಗಳೂರು ಶಾಖೆಯ ಆಶ್ರಯದಲ್ಲಿ ಭಾನುವಾರ “ಸ್ವಚ್ಛತಾ ಹೀ ಸೇವಾ” ದ್ಯೇಯದೊಂದಿಗೆ ನಡೆದ ಹನ್ನೆರಡನೇ ಸ್ವಚ್ಛ ಭಾರತ್ ಶ್ರಮದಾನದಲ್ಲಿ ಮಾತನಾಡಿದರು.

    https://chat.whatsapp.com/JVAtKKe2M19AFO3W5629ZS?mode=ems_copy_t
    ಶ್ರಮದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡೊಂಗರಕೇರಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪ್ರವೀಣ್ ಶೇಟ್ ನಾಗ್ವೇಕರ್, ವಿಶ್ವಕರ್ಮ ಬ್ಯಾಂಕ್ ಬ್ಯಾಂಕಿಂಗ್ ಚಟುವಟಿಕೆಗಳೊಂದಿಗೆ ಸಮಾಜಮುಖಿಯಾಗಿ ಸ್ವಚ್ಛ ಭಾರತ್‌ನಂತಹ ಗುರುತರವಾದ ಕಿಷ್ಟಕರ ಕಾರ್ಯವನ್ನು ಸಮಾಜದ ಎಲ್ಲರನ್ನೂ ಸೇರಿಸಿಕೊಂಡು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಸ್ತುತ್ಯರ್ಹವೆಂದು ಹೇಳಿದರು.


    ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಾ.ಎಸ್ ಆರ್ ಹರೀಶ್ ಆಚಾರ್ಯ, ಕುದ್ರೋಳಿ ಯುವಕ ಮಂಡಲದ ಅಧ್ಯಕ್ಷರಾದ ರಾಜೇಶ್ ಕುದ್ರೋಳಿ, ಅಂಜನ ಪಟೇಲ್ ಸಮಾಜ ಟ್ರಸ್ಟ್ ಅಳಕೆ ಇದರ ಅಧ್ಯಕ್ಷ ಪಂಚಾರಾಮ್ ಹಾಗೂ ಲಯನ್ಸ್ ಕ್ಲಬ್ ಕೊಡಿಯಾಲ್‌ಬೈಲ್ ಇದರ ಅಧ್ಯಕ್ಷರಾದ ಮೋಹನ್ ಕೊಪ್ಪಳ ಇವರು ಹಸಿರು ನಿಶಾನೆ ತೋರುವ ಮೂಲಕ ಶ್ರಮದಾನಕ್ಕೆ ಚಾಲನೆ ನೀಡಿದರು. ಬಳಿಕ ಡೊಂಗರೆಕೇರಿ ಶ್ರೀ ವೆಂಕಟರಮಣ ದೇವಸ್ಥಾನದ ಪರಿಸರದಿಂದ ಡೊಂಗರಕೇರಿ ಹಾಗೂ ಅಳಕೆ ಪರಿಸರದಲ್ಲಿ ಸ್ವಚ್ಛತಾ ಶ್ರಮದಾನ ಜರುಗಿತು.


    ವಿಶ್ವಕರ್ಮ ಸಹಕಾರ ಬ್ಯಾಂಕಿನ ನಿರ್ದೇಶಕರಾದ ಬಿ.ಗುರುಪ್ರಸಾದ್ ಶೆಟ್ಟಿ, ಬಿಜು ಜಯ ಆಚಾರ್, ಹರಿಪ್ರಸಾದ್, ವ್ಯವಸ್ಥಾಪಕ ನಿರ್ದೇಶಕರಾದ ವಸಂತ ಅಡ್ಯಂತಾಯ, ಗರೆಕೇರಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಶ್ರೀನಿವಾಸ್ ಪುಂಡಲೀಕ ಶೇಟ್ ಹಾಗೂ ಸಮಿತಿ ಸದಸ್ಯರು, ವೈಶ್ಯ ಸೇವಾ ಸಮಿತಿ ಇದರ ಅಧ್ಯಕ್ಷರಾದ ನಾಗಭೂಷಣ್ ಶೇಟ್ ಹಾಗೂ ಸದಸ್ಯರು, ವೈಶ್ಯ ಯುವಕ ವೃಂದ ಇದರ ಅಧ್ಯಕ್ಷರಾದ ಆದಿತ್ಯ ಶೇಟ್ ಹಾಗೂ ಸದಸ್ಯರು, ವೈಶ್ಯ ಮಹಿಳಾ ಮಂಡಳಿ ಇದರ ಅಧ್ಯಕ್ಷೆ ರೇಖಾ ಶೇಟ್ ಹಾಗೂ ಸದಸ್ಯರು, ಲಯನ್ಸ್ ಹಾಗೂ ಲಿಯೋ ಕ್ಲಬ್ ಕೊಡಿಯಾಲಬೈಲ್ ಇದರ ಕಾರ್ಯದರ್ಶಿಗಳಾದ ಸತ್ಯೇಂದ್ರ ಭಟ್ ಹಾಗೂ ಸೂರಜ್ ಆಚಾರ್ಯ ಕದ್ರಿ ಹಾಗೂ ಸದಸ್ಯರು. ಅಂಜನ(ಪಟೇಲ್) ಸಮಾಜ ಟ್ರಸ್ಟ್ ಪ್ರಮುಖರಾದ ಮೂಲರಾಮ್ ಹಾಗೂ ಸದಸ್ಯರು, ಕುದ್ರೋಳಿ ಯುವಕ ಮಂಡಲದ ಪ್ರಮುಖರಾದ ಪ್ರವೀಣ್ ಸಾಲ್ಯಾನ್, ಪ್ರವೀಣ್ ಕುದ್ರೋಳಿ, ಮಹೇಶ್ ಶೆಟ್ಟಿ ಅಳಕೆ ಹಾಗೂ ಸದಸ್ಯರು, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕಾಳಿಕಾಂಬಾ ಶಾಖೆ ಇದರ ಹಿರಿಯ ಯೋಗ ಶಿಕ್ಷಕರಾದ ಉಮೇಶ್ ಆಚಾರ್, ಲೋಕೇಶ್ ಆಚಾರ್, ರವಿರಾಜ್ ಆಚಾರ್, ಜಯಂತಿ ಎಲ್ ಆಚಾರ್, ಜ್ಯೋತಿ ಪ್ರಸಾದ್ ಆಚಾರ್ ಹಾಗೂ ಸದಸ್ಯರು, ಬೆಸೆಂಟ್ ಮಹಿಳಾ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ರವಿಪ್ರಭಾ, ಕಾರ್ಯದರ್ಶಿಗಳಾದ ಪ್ರಕೃತಿ ಪಿ ಶೆಟ್ಟಿ ಹಾಗೂ ರಕ್ಷಿತಾ ಶೆಟ್ಟಿ ಹಾಗೂ ಸ್ವಯಂಸೇವಕ ವಿದ್ಯಾರ್ಥಿಗಳು, ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷರಾದ ಜಗದೀಶ್ ಸಿದ್ದಕಟ್ಟೆ ಮತ್ತು ಸದಸ್ಯರು, ದಕ್ಷಿಣ ಕನ್ನಡ ಜಿಲ್ಲಾ ಚಿನ್ನದ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಹಳೇಜಿ ಮತ್ತು ಸದಸ್ಯರು, ಬ್ಯಾಂಕಿನ ಸದಸ್ಯರು, ಗ್ರಾಹಕರು ಹಾಗೂ ಸಿಬ್ಬಂದಿಗಳು ಸ್ವಯಂಸೇವಕರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Alake Anjana Patel Samaja Trust Alake Dongarakeri Shree Venkataramana Temple Kudroli Yuvaka Mandala Lions Club Kodialbail Praveen Shet Nagvekar Sahakar Se Swachhatha Abhiyan Swacch Bharath Vishwakarma Sahakara Bank Limited
    Previous Articleಸಹಕಾರ ರತ್ನ ಟಿ.ಜಿ.ರಾಜಾರಾಮ್ ಭಟ್ ಅವರಿಗೆ ಅದ್ದೂರಿಯ ಸನ್ಮಾನ
    Next Article ನಿರ್ದೇಶಕರ ಅವಧಿ 10 ವರ್ಷ ಮಾತ್ರ: ಸಂಚಲನ ಸೃಷ್ಟಿಸಿದ ಆರ್‌ಬಿಐ ಸುತ್ತೋಲೆ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.