ಎಸ್.ಕೆ ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋಆಪರೇಟಿವ್ ಸೊಸೈಟಿಯಿಂದ ಆಯೋಜನೆ
ಪುತ್ತೂರು: ವಜ್ರಮಹೋತ್ಸವ ವರ್ಷ ಆಚರಿಸುತ್ತಿರುವ ಎಸ್.ಕೆ.ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋಆಪರೇಟಿವ್ ಸೊಸೈಟಿ ಮಂಗಳೂರು, ವಿಶ್ವಬ್ರಾಹ್ಮಣ ಸೇವಾ ಸಂಘ ಬೊಳುವಾರು, ವಿಶ್ವಕರ್ಮ ಯುವ ಸಮಾಜ ಬೊಳುವಾರು, ವಿಶ್ವಕರ್ಮ ಮಹಿಳಾ ಮಂಡಳಿ ಬೊಳುವಾರು ಜಂಟಿ ಪ್ರಾಯೋಜಕತ್ವದಲ್ಲಿ ರೋಟರಿ ಕ್ಯಾಂಪ್ಕೋ-ಬ್ಲಡ್ ಬ್ಯಾಂಕ್ ಪುತ್ತೂರು, ರೋಟರಿ ಕಣ್ಣಿನ ಆಸ್ಪತ್ರೆ, ಪ್ರಸಾದ್ ನೇತ್ರಾಲಯ, ಕೆಎಂಸಿ ಆಸ್ಪತ್ರೆ ಮಂಗಳೂರು ಹಾಗೂ ರೋಟರಾಕ್ಟ್ ಕ್ಲಬ್ ಸಹಕಾರದೊಂದಿಗೆ ಇತ್ತೀಚೆಗೆ ಪುತ್ತೂರಿನ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ರಕ್ತದಾನ, ನೇತ್ರ ತಪಾಸಣೆ, ಹೃದಯ ತಪಾಸಣಾ ಉಚಿತ ಶಿಬಿರ ನಡೆಯಿತು.
https://chat.whatsapp.com/Ge11n7QCiMj5QyPvCc0H19
ಎಸ್.ಕೆ ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನರ ಆರೋಗ್ಯದ ಕಾಳಜಿಯ ಉದ್ದೇಶದಿಂದ ಸಂಘ ಸಂಸ್ಥೆಗಳು ಜತೆಗೂಡಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಬೇಕು. ಸೊಸೈಟಿಯು ವಜ್ರಮಹೋತ್ಸವ ಸಂಭ್ರಮದಲ್ಲಿದ್ದು, ಹಲವು ಜನೋಪಯೋಗಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ವಿಶ್ವಕರ್ಮ ಯುವ ಸಮಾಜ ಅಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ರಕ್ತದಾನ ಶ್ರೇಷ್ಠವಾದ ದಾನ. ಇದರೊಂದಿಗೆ ನೇತ್ರ ತಪಾಸಣೆ ಹಾಗೂ ಅತಿ ಅವಶ್ಯಕವಾದ ಹೃದಯ ತಪಾಸಣಾ ಶಿಬಿರ ಉಚಿತವಾಗಿ ಮಾಡಲಾಗುತ್ತಿದೆ ಎಂದು ಹೇಳಿದರು. ಪುತ್ತೂರು ರೋರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ಪಿ.ವಿ.ಸುಬ್ರಮಣಿ ಮಾತನಾಡಿ ಹಣವಿದ್ದವ ಶ್ರೀಮಂತನಲ್ಲ, ಆರೋಗ್ಯ ಇದ್ದವನು ಮಾತ್ರ ಶ್ರೀಮಂತ ಎಂದರು. ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಡಾ| ಶ್ರೀಪತಿ ರಾವ್ ಮಾತನಾಡಿ, ಯುವಕರಲ್ಲಿ ಕಂಡು ಬರುವ ಹಾರ್ಟ್ ಅಟ್ಯಾಕ್, ಸಣ್ಣ ಪುಟ್ಟ ವಿಷಯಕ್ಕೆ ಒತ್ತಡ ಮೊದಲಾದ ಸಮಸ್ಯೆಗಳಿಗೆ ನಮ್ಮ ಜೀವನ ಶೈಲಿ ಕಾರಣ, ಇಂತಹ ಆರೋಗ್ಯ ಸಮಸ್ಯೆಗಳನ್ನು ತಡೆಯಬೇಕು ಎಂದರು.
ಶ್ರೀಧರ ಆಚಾರ್ಯ ಕೊಕ್ಕಡ ಅಧ್ಯಕ್ಷತೆ ವಹಿಸಿದ್ದರು. ಕೆ.ಎಂ.ಸಿ. ಮಂಗಳೂರಿನ ಹೃದಯ ರೋಗ ತಜ್ಞ ಡಾ|ನರಸಿಂಹ ಪೈ ಮುಖ್ಯ ಅತಿಥಿಗಳಾಗಿದ್ದರು. ವಿಶ್ವಕರ್ಮ ಮಹಿಳಾ ಮಂಡಳಿಯ ಅಧ್ಯಕ್ಷೆ ಇಂದಿರಾ ಪುರುಷೋತ್ತಮ್, ಎಸ್.ಕೆ ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಎ.ಆನಂದ ಆಚಾರ್ಯ, ನಿರ್ದೇಶಕ ವೈ.ವಿ.ವಿಶ್ವಜ್ಞಮೂರ್ತಿ, ರೋಟರಿ ಕ್ಯಾಂಪ್ಕೋ-ಬ್ಲಡ್ ಬ್ಯಾಂಕಿನ ಡಾ|ರಾಮಚಂದ್ರ ಹಾಗೂ ಸೀತಾರಾಮ ಭಟ್ ಉಪಸ್ಥಿತರಿದ್ದರು.
ಪ್ರಸಾದ್ ನೇತ್ರಾಲಯ, ಅತ್ತಾವರ ಕೆಎಂಸಿ, ರೋಟರಿ, ಕ್ಯಾಂಪ್ಕೊ ಸಿಬ್ಬಂದಿಗಳನ್ನು ಗೌರವಿಸಲಾಯಿತು. ಎಸ್.ಕೆ ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ಕೆ.ಶಶಿಕಾಂತ ಆಚಾರ್ಯ, ರೋಹಿಣಿ ಎಂ.ಪಿ. ಹಾಗೂ ಶ್ರೀ ಕೆ.ಪ್ರಕಾಶ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಭವ್ಯ ವಾದಿರಾಜ್ ಪ್ರಾರ್ಥಿಸಿದರು, ವಿಶ್ವಬ್ರಾಹ್ಮಣ ಸೇವಾ ಸಂಘದ ಭುಜಂಗ ಆಚಾರ್ಯ ಸ್ವಾಗತಿಸಿ, ವಿಶ್ವಕರ್ಮ ಮಹಿಳಾ ಮಂಡಳಿ ಅಧ್ಯಕ್ಷೆ ಇಂದಿರಾ ಪುರುಷೋತ್ತಮ ಆಚಾರ್ಯ ವಂದಿಸಿದರು. ಕಿಶನ್ ಬಿ.ವಿ. ಕಾರ್ಯಕ್ರಮ ನಿರೂಪಿಸಿದರು. 36 ಯುನಿಟ್ ರಕ್ತ ಸಂಗ್ರಹಣೆಯಾಗಿದ್ದು, 140 ಸದಸ್ಯರು ಇಸಿಜಿ ಹಾಗೂ 135 sದಸ್ಯರು ನೇತ್ರ ತಪಾಸಣೆಯ ಪ್ರಯೋಜನ ಪಡೆದುಕೊಂಡರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com