Author: admin

ಹಣದುಬ್ಬರ–ಆರ್ಥಿಕ ಅನಿಶ್ಚಿತತೆ ನಡುವೆ ‘ತಟಸ್ಥ’ ನಿಲುವು; ಸತತ ನಾಲ್ಕನೇ ನೀತಿ ಸಭೆಯಲ್ಲೂ ದರ ಯಥಾಸ್ಥಿತಿ ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಯು ರೆಪೋ ದರವನ್ನು ಶೇ.5.25ರಲ್ಲೇ ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆ. ಆಗಸ್ಟ್ 3ರಿಂದ 5ರವರೆಗೆ ನಡೆದ ಮೂರು ದಿನಗಳ ಸಭೆಯ ಬಳಿಕ ಈ ನಿರ್ಧಾರ ಪ್ರಕಟಿಸಲಾಗಿದೆ. ಸಮಿತಿಯು ದರದಲ್ಲಿ ಯಾವುದೇ ಬದಲಾವಣೆ ಮಾಡದೆ ‘ತಟಸ್ಥ’ (Neutral) ನೀತಿ ಅನುಸರಿಸುವ ನಿಲುವನ್ನು ಮುಂದುವರಿಸಿದೆ. https://chat.whatsapp.com/FCEnlTkAKCC0MGPhXtX4i4 ರೆಪೋ ದರದಲ್ಲಿ ಬದಲಾವಣೆ ಮಾಡದಿರುವುದರಿಂದ ಬ್ಯಾಂಕ್‌ಗಳ ಅಲ್ಪಾವಧಿಯ ಸಾಲದ ವೆಚ್ಚದ ಮೇಲೆ ತಕ್ಷಣದ ಹೆಚ್ಚುವರಿ ಒತ್ತಡ ಅಥವಾ ಇಳಿಕೆಯ ನಿರೀಕ್ಷೆ ಇಲ್ಲ. ಇದರ ಪರಿಣಾಮ ಗೃಹಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಸೇರಿದಂತೆ ರೆಪೋ ದರಕ್ಕೆ ಸಂಬಂಧಿಸಿದ ಸಾಲಗಳ ಬಡ್ಡಿದರಗಳಲ್ಲೂ ತಕ್ಷಣದ ದೊಡ್ಡ ಬದಲಾವಣೆ ನಿರೀಕ್ಷಿಸಲಾಗುವುದಿಲ್ಲ. ಸಹಕಾರಿ ಬ್ಯಾಂಕ್‌ಗಳಿಗೆ ಏನು ಪರಿಣಾಮ? ರೆಪೋ ದರವು ಬ್ಯಾಂಕಿಂಗ್ ವ್ಯವಸ್ಥೆಯ ಹಣದ ವೆಚ್ಚದ ಮೇಲೆ ಪರಿಣಾಮ ಬೀರುವ ಪ್ರಮುಖ ನೀತಿ ದರವಾಗಿದೆ. ಹೀಗಾಗಿ ದರ…

Read More

ಎರಡು ದಶಕಗಳ ಬಳಿಕ UCB ಪರವಾನಗಿ ಪ್ರಕ್ರಿಯೆಗೆ ಮರುಚಾಲನೆ; ಬಲಿಷ್ಠ ಸಹಕಾರಿ ಸಂಸ್ಥೆಗಳಿಗೆ ಬ್ಯಾಂಕಿಂಗ್ ಕ್ಷೇತ್ರ ಪ್ರವೇಶದ ಅವಕಾಶ ಮುಂಬೈ: ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳ (UCB) ಹೊಸ ಪರವಾನಗಿ ನೀಡುವ ಪ್ರಕ್ರಿಯೆಯನ್ನು ಸುಮಾರು ಎರಡು ದಶಕಗಳ ಬಳಿಕ ಪುನರಾರಂಭಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ (RBI) ಮುಂದಾಗಿದೆ. ಹೊಸ ‘ಆನ್-ಟ್ಯಾಪ್’ ಪರವಾನಗಿ ವ್ಯವಸ್ಥೆಯಡಿ UCB ಆಗಿ ಪರಿವರ್ತನೆಗೊಳ್ಳಲು ಬಯಸುವ ಅರ್ಹ ಕ್ರೆಡಿಟ್ ಸಹಕಾರಿ ಸಂಸ್ಥೆಗಳಿಗೆ ಬಂಡವಾಳ, ಠೇವಣಿ, ಆಡಳಿತ ಹಾಗೂ ಹಣಕಾಸು ಸಾಮರ್ಥ್ಯಕ್ಕೆ ಸಂಬಂಧಿಸಿದ ಕಟ್ಟುನಿಟ್ಟಿನ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. https://chat.whatsapp.com/FCEnlTkAKCC0MGPhXtX4i4 ಆರ್‌ಬಿಐ ಪ್ರಸ್ತಾಪಿಸಿರುವ ಮಾನದಂಡಗಳ ಪ್ರಕಾರ, ಪಟ್ಟಣ ಸಹಕಾರಿ ಬ್ಯಾಂಕ್‌ಗಳ ಪರವಾನಗಿಗಾಗಿ ಅರ್ಜಿ ಸಲ್ಲಿಸುವ ಸಂಸ್ಥೆಯು ಕನಿಷ್ಠ ₹300 ಕೋಟಿ ಬಂಡವಾಳ/ನೆಟ್‌ವರ್ತ್ ಹೊಂದಿರಬೇಕು. ಜತೆಗೆ ಸಂಸ್ಥೆಯು ₹10,000 ಕೋಟಿ ಠೇವಣಿ ಆಧಾರ ಹೊಂದುವ ಸಾಮರ್ಥ್ಯವನ್ನು ಹೊಂದಿರಬೇಕೆಂಬ ಪ್ರಮುಖ ಷರತ್ತನ್ನೂ ಮುಂದಿಡಲಾಗಿದೆ. ಹೊಸ ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳಿಗೆ ಪರವಾನಗಿ ನೀಡುವ ಪ್ರಕ್ರಿಯೆಯನ್ನು ಆರ್‌ಬಿಐ 2004ರಿಂದ ಸ್ಥಗಿತಗೊಳಿಸಿತ್ತು. ಇದೀಗ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದ…

Read More

ಶೀಘ್ರದಲ್ಲೇ ಆರ್‌ಬಿಐನಿಂದ ಕರಡು ಮಾರ್ಗಸೂಚಿ ಪ್ರಕಟ; ಸುಮಾರು ಎರಡು ದಶಕಗಳ ಬಳಿಕ ಹೊಸ ಪರವಾನಗಿ ಪ್ರಕ್ರಿಯೆಗೆ ಚಾಲನೆ ಮುಂಬೈ: ಪಟ್ಟಣ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಹೊಸ ಪಟ್ಟಣ ಸಹಕಾರಿ ಬ್ಯಾಂಕ್‌ಗಳಿಗೆ (UCB) ಪರವಾನಗಿ ನೀಡುವ ‘ಆನ್-ಟ್ಯಾಪ್’ ವ್ಯವಸ್ಥೆಯನ್ನು ಪುನರಾರಂಭಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಈ ಸಂಬಂಧ ಕರಡು ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಪ್ರಕಟಿಸಿ, ಪಾಲುದಾರರಿಂದ ಅಭಿಪ್ರಾಯಗಳನ್ನು ಪಡೆಯಲಾಗುವುದು ಎಂದು ಆರ್‌ಬಿಐ ತಿಳಿಸಿದೆ. https://chat.whatsapp.com/FCEnlTkAKCC0MGPhXtX4i4 ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಬುಧವಾರ ಪ್ರಕಟಿಸಿದ ‘Statement on Developmental and Regulatory Policies’ನಲ್ಲಿ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ಮಹತ್ವದ ಘೋಷಣೆ ಮಾಡಿದ್ದಾರೆ. ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳಿಗೆ ಹೊಸ ಪರವಾನಗಿ ನೀಡುವ ಪ್ರಕ್ರಿಯೆ ಸುಮಾರು ಎರಡು ದಶಕಗಳಿಂದ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ 2026ರ ಜನವರಿ 13ರಂದು ಆರ್‌ಬಿಐ ಯುಸಿಬಿ ಪರವಾನಗಿ ಕುರಿತು ಚರ್ಚಾ ಪತ್ರವನ್ನು ಬಿಡುಗಡೆ ಮಾಡಿ, ವಿವಿಧ ಪಾಲುದಾರರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿತ್ತು. ಚರ್ಚಾ ಪತ್ರಕ್ಕೆ ಬಂದ…

Read More

ಕಟೀಲು: ನಂದಿನಿ ಪತ್ತಿನ ಸಹಕಾರ ಸಂಘ ಕಟೀಲು ಇದರ ನೂತನ ಕಿನ್ನಿಗೋಳಿ ಶಾಖೆಯ ಉದ್ಘಾಟನಾ ಸಮಾರಂಭ ಆಗಸ್ಟ್‌ 23ರಂದು ಭಾನುವಾರ ಬೆಳಗ್ಗೆ 10.30ಕ್ಕೆ ಕಿನ್ನಿಗೋಳಿಯ ಅರೋನ್ ಪ್ಲಾಜಾದಲ್ಲಿ ಉದ್ಘಾಟನೆಗೊಳ್ಳಲಿದೆ. https://chat.whatsapp.com/FCEnlTkAKCC0MGPhXtX4i4 ನಂದಿನಿ ಪತ್ತಿನ ಸಹಕಾರ ಸಂಘ ಕಟೀಲು ಇದರ ಅಧ್ಯಕ್ಷರಾದ ಕೆ.ನೀಲಯ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶೀಯ ಮೊಕ್ತೇಸರರು ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರಾದ ಸನತ್‌ಕುಮಾ‌ರ್ ಶೆಟ್ಟಿ ಕೊಡೆತ್ತೂರುಗುತ್ತು ನೂತನ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆನುವಂಶಿಕ ಅರ್ಚಕರಾದ ವೇದಮೂರ್ತಿ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ ಮತ್ತು ವೇದಮೂರ್ತಿ ಕೆ.ದೇವೀಕುಮಾರ ಆಸ್ರಣ್ಣರು ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಗುರುರಾಜ್ ಮಲ್ಲಿಗೆಯಂಗಡಿ, ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಜೋಸೆಫ್ ಕ್ವಾಡ್ರಸ್, ಸಹಕಾರಿ ಸಂಘಗಳ ಉಪನಿಬಂಧಕರ ಕಚೇರಿ ಮಂಗಳೂರಿನ ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಶಿವಲಿಂಗಯ್ಯ, ಯಕ್ಷಧ್ರುವ ಪಟ್ಲ ಫೌಂಡೇಶನ್, ಕಿನ್ನಿಗೋಳಿ ಘಟಕದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಕೊಡೆತ್ತೂರು ಶ್ರೀ ಅರಸು…

Read More

ಪುತ್ತೂರು: ಪುತ್ತೂರಿನ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕಿನ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಬ್ಯಾಂಕಿನ ಸಭಾಂಗಣದಲ್ಲಿ ಅಧ್ಯಕ್ಷ ಕಿಶೋರ್ ಕೊಳತ್ತಾಯ ಎನ್. ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಈ ಸಾಲಿನಲ್ಲಿ ಬ್ಯಾಂಕ್ 150 ಕೋಟಿ ರೂ.ಗಳ ವ್ಯವಹಾರ ನಡೆಸಿ 1,32,33,636.40 ರೂ. ಲಾಭ ಗಳಿಸಿದೆ. https://chat.whatsapp.com/FCEnlTkAKCC0MGPhXtX4i4 ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಕಿಶೋರ್ ಕೊಳತ್ತಾಯ ಮಾತನಾಡಿ, ಬ್ಯಾಂಕಿನಲ್ಲಿ ವರ್ಷಾಂತ್ಯದಲ್ಲಿ 62 ಕೋಟಿ ರೂಪಾಯಿ ಸಾಲ ಹೊರಬಾಕಿ ಹಾಗೂ 88 ಕೋಟಿ ರೂಪಾಯಿ ಠೇವಣಿ ಇದೆ. ಬ್ಯಾಂಕಿನ ಪ್ರತಿಯೊಂದು ಸಾಧನೆಗೂ ಸದಸ್ಯರು, ಗ್ರಾಹಕರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಪರಿಶ್ರಮ ಕಾರಣವಾಗಿದೆ. ಸದಸ್ಯರಿಗೆ ಈ ಬಾರಿ 12 ಶೇ. ಡಿವಿಡೆಂಡ್ ನೀಡಲಾಗುವುದು. ಮುಂದಿನ ದಿನಗಳಲ್ಲಿ ಶಾಖೆ ತೆರೆಯುವುದು, ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯ, ಬ್ಯಾಂಕಿನ ಸದಸ್ಯರ ಮಕ್ಕಳಿಗೆ ಕೃತಕ ಬುದ್ಧಿಮತ್ತೆ ಕೋರ್ಸ್ ಮತ್ತು ವೃತ್ತಿ ಮಾರ್ಗದರ್ಶನ ನೀಡುವ ವ್ಯವಸ್ಥೆ ಮಾಡಲಾಗುವುದು. ಆಸಕ್ತ ಸದಸ್ಯರಿಗೆ ವಿಮಾ ಸೌಲಭ್ಯ ಒದಗಿಸಲಾಗುವುದು ಎಂದರು. ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಶೇಖರ್ ಶೆಟ್ಟಿಯವರು, 2025-26ನೇ ಸಾಲಿನ…

Read More

ಮಂಗಳೂರು: ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯು ಹೊರತಂದಿರುವ ಬರಹಗಾರ ಅರವಿಂದ ಚೊಕ್ಕಾಡಿಯವರು ರಚಿಸಿರುವ ಸಹಕಾರ ಪಿತಾಮಹ ದಿ.ಮೊಳಹಳ್ಳಿ ಶಿವರಾವ್‌ ಅವರ ಕುರಿತಾದ ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ ಎಂಬ ಆಕರ ಗ್ರಂಥವನ್ನು ಮಂಗಳವಾರ ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ಬಿಡುಗಡೆ ಮಾಡಲಾಯಿತು. https://chat.whatsapp.com/FCEnlTkAKCC0MGPhXtX4i4 ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್‌ ಜಂಟಿ ಆಶ್ರಯದಲ್ಲಿ ಆಯೋಜಿಸಿದ ದಿ.ಮೊಳಹಳ್ಳಿ ಶಿವರಾವ್‌ ಅವರ 146ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಈ ಆಕರ ಗ್ರಂಥವನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾದ ಡಾ.ಎಂ.ಎನ್‌ ರಾಜೇಂದ್ರ ಕುಮಾರ್‌ ಅವರು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಆಕರ ಗ್ರಂಥ ಬರೆದಿರುವ ಬರಹಗಾರ ಅರವಿಂದ ಚೊಕ್ಕಾಡಿ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷರಾದ ಶಶಿಕುಮಾರ್‌ ರೈ ಬಾಲ್ಯೊಟ್ಟು, ಉಪಾಧ್ಯಕ್ಷ ನೀಲಯ ಎಂ ಅಗರಿ, ನಿರ್ದೇಶಕರಾದ ಡಾ.ಎಸ್‌ ಆರ್‌ ಹರೀಶ್‌ ಆಚಾರ್ಯ, ಸತೀಶ್‌ ಕೆ.ಕಾಶಿಪಟ್ಣ, ಎಸ್‌ಸಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷರಾದ ವಿನಯ ಕುಮಾರ್‌ ಸೂರಿಂಜೆ, ಸಿಇಒ ಗೋಪಾಲಕೃಷ್ಣ ಭಟ್‌ ಮೊದಲಾದವರು…

Read More

ಮೊಳಹಳ್ಳಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಆಕರ ಗ್ರಂಥ ಬಿಡುಗಡೆಗೊಳಿಸಿ ಡಾ.ಎಂ.ಎನ್‌ ರಾಜೇಂದ್ರ ಕುಮಾರ್‌ ವಿಶ್ಲೇಷಣೆ ಮಂಗಳೂರು: ಕರಾವಳಿಯ ಸಹಕಾರ ಪಿತಾಮಹ ಎನಿಸಿಕೊಂಡಿರುವ ದಿ.ಮೊಳಹಳ್ಳಿ ಶಿವರಾವ್‌ ಅವರು ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಮಗೆಲ್ಲರಿಗೂ ಆದರ್ಶಪ್ರಾಯರು. ಸಹಕಾರ ಕ್ಷೇತ್ರದಲ್ಲಿ ಏನೆಲ್ಲ ಸಾಧನೆ ಮಾಡಬಹುದೋ ಅವೆಲ್ಲವನ್ನೂ ಮೊಳಹಳ್ಳಿ ಶಿವರಾಯರು ಮಾಡಿ ತೋರಿಸಿದ್ದಾರೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್‌ ರಾಜೇಂದ್ರ ಕುಮಾರ್‌ ಬಣ್ಣಿಸಿದರು. https://chat.whatsapp.com/FCEnlTkAKCC0MGPhXtX4i4 ಎಸ್‌ಸಿಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್‌ ಜಂಟಿ ಆಶ್ರಯದಲ್ಲಿ ದಿ.ಮೊಳಹಳ್ಳಿ ಶಿವರಾಯರ 146ನೇ ಜನ್ಮದಿನಾಚರಣೆ ಹಾಗೂ ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ ಹೊರತಂದಿರುವ ಅರವಿಂದ ಚೊಕ್ಕಾಡಿ ಅವರು ಬರೆದಿರುವ ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ ಎಂಬ ಆಕರ ಗ್ರಂಥ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪಾರ ವಹಿವಾಟುಗಳಿಗೆ ಶಕ್ತಿ ತುಂಬಿರುವುದು ಸಹಕಾರ ಕ್ಷೇತ್ರ. ಈ ಸಹಕಾರ ಕ್ಷೇತ್ರದಲ್ಲಿ ಅವಿರತ…

Read More

ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ; ಠೇವಣಿ ಮೇಲಿನ ಬಡ್ಡಿಗೆ ಸೆಕ್ಷನ್ 80P(2)(d) ಅಡಿ ಹೊಸ ಪ್ರಯೋಜನದ ಪ್ರಸ್ತಾವನೆ ಇಲ್ಲ ನವದೆಹಲಿ: ಸಹಕಾರ ಸಂಘಗಳು ರಾಷ್ಟ್ರೀಕೃತ ಅಥವಾ ಖಾಸಗಿ ಬ್ಯಾಂಕ್‌ಗಳಲ್ಲಿ ಇಡುವ ಠೇವಣಿಗಳ ಮೇಲಿನ ಬಡ್ಡಿ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡುವ ಯಾವುದೇ ಹೊಸ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಇದೇ ವೇಳೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (PACS) ಸಾಲದ ಬಡ್ಡಿದರವನ್ನು ನಿಗದಿಪಡಿಸುವ ಅಧಿಕಾರವನ್ನು ಸಂಬಂಧಿತ ಸಹಕಾರಿ ಬ್ಯಾಂಕ್‌ಗಳಿಗೆ ಬಿಡಲಾಗಿದೆ. https://chat.whatsapp.com/FCEnlTkAKCC0MGPhXtX4i4 ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ, ಸಹಕಾರಿ ಸಂಘಗಳು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಇರಿಸುವ ಠೇವಣಿಗಳ ಮೇಲಿನ ಬಡ್ಡಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80P(2)(d) ಅಡಿ ಹೆಚ್ಚುವರಿ ತೆರಿಗೆ ಪ್ರಯೋಜನ ನೀಡುವ ಯಾವುದೇ ಪ್ರಸ್ತಾವನೆ ಕೇಂದ್ರ ನೇರ ತೆರಿಗೆ ಮಂಡಳಿ (CBDT) ಮುಂದಿಲ್ಲ ಎಂದು ತಿಳಿಸಿದರು. ಗ್ರಾಮೀಣ ಸಹಕಾರಿ ಬ್ಯಾಂಕ್‌ಗಳ ಠೇವಣಿ ಬಡ್ಡಿದರಗಳನ್ನು ಭಾರತೀಯ ರಿಸರ್ವ್…

Read More

ಇಂದು ಮೊಳಹಳ್ಳಿ ಶಿವರಾವ್ ಅವರ ಜನ್ಮದಿನದ ಅಂಗವಾಗಿ ಈ ಲೇಖನ  ಜಾತ್ಯತೀತ, ಧರ್ಮಾತೀತ, ಪಕ್ಷಾತೀತ ಮತ್ತು ವರ್ಣಾತೀತ ಎಂಬ ಎಲ್ಲ ಮಿತಿಗಳನ್ನು ಮೀರಿ, ಯಾವುದೇ ಸೈದ್ಧಾಂತಿಕ ಗಡಿಗಳನ್ನು ದಾಟಿ ಎಲ್ಲರನ್ನೂ ಒಳಗೊಳ್ಳುವ ವ್ಯವಸ್ಥೆಯೇ ಸಹಕಾರ ರಂಗ. ಪರಸ್ಪರ ಸಹಾಯ, ಸಾಮೂಹಿಕತೆ, ಸಮಾನತೆ ಮತ್ತು ಸ್ವಾವಲಂಬನೆ ಎಂಬ ಮೌಲ್ಯಗಳ ಮೇಲೆ ನಿಂತಿರುವ ಈ ವ್ಯವಸ್ಥೆಯನ್ನು ಕೇವಲ ಆರ್ಥಿಕ ಚಟುವಟಿಕೆಯಾಗಿ ಅಲ್ಲದೆ, ಸಮಾಜ ನಿರ್ಮಾಣದ ಪ್ರಬಲ ಸಾಧನವನ್ನಾಗಿ ರೂಪಿಸಿದ ಮಹನೀಯರಲ್ಲಿ ದಿವಂಗತ ಮೊಳಹಳ್ಳಿ ಶಿವರಾಯರು ಅಗ್ರಗಣ್ಯರು. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ಕಾಸರಗೋಡು ಮತ್ತು ಕಾಞಂಗಾಡು ಪ್ರದೇಶಗಳಲ್ಲಿ ಸಹಕಾರ ಚಳವಳಿಗೆ ಭದ್ರ ಅಡಿಪಾಯ ಹಾಕಿ, ಅದನ್ನು ಜನಜೀವನದ ಭಾಗವನ್ನಾಗಿ ರೂಪಿಸಿದ ಕೀರ್ತಿ ಮೊಳಹಳ್ಳಿ ಶಿವರಾಯರಿಗೆ ಸಲ್ಲುತ್ತದೆ. https://chat.whatsapp.com/FCEnlTkAKCC0MGPhXtX4i4 ಮೊಳಹಳ್ಳಿ ಶಿವರಾಯರು ಸಹಕಾರವನ್ನು ಕೇವಲ ಹಣಕಾಸಿನ ವ್ಯವಹಾರಕ್ಕೆ ಸೀಮಿತಗೊಳಿಸಲಿಲ್ಲ. ಅದನ್ನು ಸಮಾಜದ ಸರ್ವಾಂಗೀಣ ಅಭಿವೃದ್ಧಿಯ ಸಾಧನವನ್ನಾಗಿ ಬಳಸಿದರು. ಅವರ ದೃಷ್ಟಿಯಲ್ಲಿ ಸಹಕಾರವೆಂದರೆ ಜನರನ್ನು ಒಗ್ಗೂಡಿಸಿ, ಪರಸ್ಪರ ವಿಶ್ವಾಸ ಬೆಳೆಸಿ, ಎಲ್ಲರ ಪಾಲ್ಗೊಳ್ಳುವಿಕೆಯ ಮೂಲಕ…

Read More

ಮಂಗಳೂರು: ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯು (Institute for Study and development of Cooperation) ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್‌ ಲಿ. ಮಂಗಳೂರು ಸಹಕಾರದಲ್ಲಿ ಹೊರತರುತ್ತಿರುವ ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ ಪುಸ್ತಕದ ಬಿಡುಗಡೆ ಸಮಾರಂಭ ಮೊಳಹಳ್ಳಿ ಶಿವರಾಯರ ಜನ್ಮದಿನವಾದ ಆಗಸ್ಟ್‌ 4ರಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಲಿದೆ. https://chat.whatsapp.com/FCEnlTkAKCC0MGPhXtX4i4 ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಡಾ.ಎಸ್‌ ಆರ್‌ ಹರೀಶ್‌ ಆಚಾರ್ಯ ಅವರ ಮುತುವರ್ಜಿಯಲ್ಲಿ, ಮೊಳಹಳ್ಳಿ ಶಿವರಾಯರ ಕೊಡುಗೆಗಳ ಅಧ್ಯಯನ ಮಾಡಿ ಬರಹಗಾರರಾದ ಅರವಿಂದ ಚೊಕ್ಕಾಡಿಯವರು ಬರೆದ ಮೊಗೆದಷ್ಟೂ ಮೊಳೆಯುವ ಮೊಳಹಳ್ಳಿ ಪುಸ್ತಕವನ್ನು ಆಗಸ್ಟ್‌ 4ರಂದು ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಬೆಳಗ್ಗೆ 10ಕ್ಕೆ ಎಸ್‌ಸಿಡಿಸಿಸಿ ಬ್ಯಾಂಕ್‌ ಮತ್ತು ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ ಸಹಯೋಗದಲ್ಲಿ ಆಯೋಜಿಸಲಿರುವ ದಿ.ಮೊಳಹಳ್ಳಿ ಶಿವರಾವ್‌ ಅವರ 146ನೇ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗುವುದು. ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾದ ಡಾ.ಎಂ.ಎನ್‌ ರಾಜೇಂದ್ರ ಕುಮಾರ್‌ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ರಾಜ್ಯ…

Read More