ಮಹಿಳಾ ಹಗ್ಗಜಗ್ಗಾಟದಲ್ಲಿ ಪ್ರಥಮ, ವೈಯಕ್ತಿಕ ಸ್ಪರ್ಧೆಗಳಲ್ಲೂ ಹಲವು ಪ್ರಶಸ್ತಿ
ಪುತ್ತೂರು: ಸಹಕಾರ ಭಾರತಿ ಮಂಗಳೂರು ಮಹಾನಗರ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ವತಿಯಿಂದ ಭಾನುವಾರ ಅಡ್ಯಾರ್‌ನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಸಹಕಾರಿ ಕ್ರೀಡೋತ್ಸವದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಕಾವು ಘಟಕ ಹಲವು ಪ್ರಶಸ್ತಿಗಳನ್ನು ಗೆದ್ದಿದೆ.
https://chat.whatsapp.com/FCEnlTkAKCC0MGPhXtX4i4
ಮಹಿಳಾ ಹಗ್ಗಜಗ್ಗಾಟದಲ್ಲಿ ಕ್ಯಾಂಪ್ಕೊ ಕಾವು ತಂಡ ಪ್ರಥಮ ಬಹುಮಾನ ತಮ್ಮದಾಗಿಸಿಕೊಂಡಿದೆ. ಹರಿಣಾಕ್ಷಿ ಕೆ, ವಿನೋಧಿನಿ, ಜ್ಯೋತಿ, ಮಮತಾ ಎನ್, ವಿನುತಾ ಎಸ್., ಶೈಲಜಾ ಸಿ.ಎಚ್., ದಿವ್ಯಾ ಡಿ ಅವರಿದ್ದ ತಂಡ ಎದುರಾಳಿ ತಂಡವನ್ನು ಸೋಲಿಸಿ ಬಹುಮಾನ ಗೆದ್ದುಕೊಂಡಿತು. ಆಶುಭಾಷಣ ಸ್ಪರ್ಧೆಯಲ್ಲಿ ಹರಿಣಾಕ್ಷಿ ಕೆ ಪ್ರಥಮ ಬಹುಮಾನ ತಮ್ಮದಾಗಿಸಿಕೊಂಡರು. 35 ವರ್ಷದವರೊಳಗಿನ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಹರಿಣಾಕ್ಷಿ ಡಿ ಪ್ರಥಮ ಬಹುಮಾನ ಪಡೆದರೆ, ಅಕ್ಷತಾ ತೃತೀಯ ಸ್ಥಾನ ಪಡೆದರು. 200 ಮೀಟರ್ ಓಟದ 35 ವರ್ಷದ ಕೆಳಗಿನವರ ವಿಭಾಗದಲ್ಲಿ ಹರಿಣಾಕ್ಷಿ ಡಿ ಪ್ರಥಮ ಬಹುಮಾನ ಪಡೆದರೆ, ಅಕ್ಷತಾ ತೃತೀಯ ಸ್ಥಾನ ಪಡೆದರು. 35-50 ವರ್ಷದವರ 100 ಮೀಟರ್ ಓಟದಲ್ಲಿ ಭುವನೇಶ್ವರಿ ತೃತೀಯ ಸ್ಥಾನ ಪಡೆದರು. ಇದೇ ವಿಭಾಗದ 200 ಮೀಟರ್ ಓಟದಲ್ಲಿ ವಿನೋಧಿನಿ ತೃತೀಯ ಸ್ಥಾನ ಪಡೆದರು.
ಬಹುಮಾನ ವಿಜೇತರಾದ ಎಲ್ಲರನ್ನೂ ಕ್ಯಾಂಪ್ಕೋ ಆಡಳಿತ ಮಂಡಳಿ ಅಭಿನಂದಿಸಿದೆ.

ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

