ಮಂಗಳೂರು; ಇಲ್ಲಿನ ಶ್ರೀ ಭಗವತೀ ಸಹಕಾರ ಬ್ಯಾಂಕಿನ 48ನೇ ಮಹಾಸಭೆ ಭಾನುವಾರ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಕೂಟಕ್ಕಳ ಸಭಾಭವನದಲ್ಲಿ ಜರುಗಿತು.
ಭಗವತೀ ಕ್ಷೇತ್ರದ ಕಲೆಕಾರರಾದ ಗೋಪಾಲದಾಸ್ ದೀಪ ಪ್ರಜ್ವಲನೆ ಮಾಡಿದರು. ಬ್ಯಾಂಕಿನ ಅಧ್ಯಕ್ಷ ಮಾಧವ ಬಿ.ಎಂ. ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕಿ ಸುಷ್ಮಾ 2023-24ರ ಸಾಲಿನ ವರದಿ ಮಂಡಿಸಿದರು. ಉಪಪ್ರಧಾನ ವ್ಯವಸ್ಥಾಪಕಿ ಸರಿತಾ ಬಿ.ಎಂ ಆಯ-ವ್ಯಯ ಮಂಡಿಸಿದರು. ಬ್ಯಾoಕಿನ ಉಪಾಧ್ಯಕ್ಷ ದೇವದಾಸ್ ಕೊಲ್ಯ ಮಾತನಾಡಿ, ಸದಸ್ಯರು ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಮ್ಮ ಬ್ಯಾoಕನ್ನು ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು. 2023-24ರ ಸಾಲಿನಲ್ಲಿ ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿ ಮಾಡಿದ ಸದಸ್ಯರು ಹಾಗೂ ಉತ್ತಮ ಠೇವಣಿದಾರರನ್ನು ಸನ್ಮಾನಿಸಲಾಯಿತು. ಸದಸ್ಯರ ಹಾಗೂ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಅತ್ಯುತ್ತಮ ಶಾಖೆಗಳಾಗಿ ಆಯ್ಕೆಯಾದ ಜಪ್ಪು ಶಾಖೆ ಮತ್ತು ಬಿ.ಸಿ.ರೋಡ್ ಶಾಖೆಗಳ ಸಿಬಂದಿಯನ್ನು ಸನ್ಮಾನಿಸಲಾಯಿತು.
ಬ್ಯಾಂಕಿನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ.ಆನಂದ, ಬ್ಯಾಂಕಿನ ಮಾಜಿ ಅಧ್ಯಕ್ಷ ಕೆ.ನಾರಾಯಣ, ಪ್ರಮುಖರಾದ ಕೆ.ವಿಶ್ವನಾಥ, ರಾಜೇಶ್, ಕಿರಣ್, ರಾಜೇಶ್ ಭಂಡಾರಿ, ಪದ್ಮನಾಭ, ಆಶಾ ಚಂದ್ರಮೋಹನ್, ಶರಿಲ್, ಭಾರತಿ ಮೊದಲಾದವರು ಹಾಜರಿದ್ದರು. ಭಗವತೀ ಕ್ಷೇತ್ರದ ಮೊಕ್ತೇಸರ ಗಣೇಶ್ ಕುoಟಲ್ಪಾಡಿ ಉಪಸ್ಥಿತರಿದ್ದರು. ಬ್ಯಾಂಕಿನ ಸಿಬಂದಿ ರಮೇಶ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ರಾಘವ ಆರ್.ಉಚ್ಚಿಲ್ ವಂದನಾರ್ಪಣೆ ಮಾಡಿದರು.