29ನೇ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ, 29.37 ಲಕ್ಷ ರೂಪಾಯಿ ಲಾಭ
ಮಂಗಳೂರು: ಶ್ರೀ ಮಂಗಳಾಜ್ಯೋತಿ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ, ಬಿಜೈ, ಮಂಗಳೂರು ಇದರ 29ನೇ ವಾರ್ಷಿಕ ಮಹಾಸಭೆ ಹಾಗೂ 2023-24 ನೇ ಸಾಲಿನ ವಾರ್ಷಿಕ ವರದಿ ಮಂಡನೆ ಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ ಭಾನುವಾರ ಮಂಗಳೂರು ಪೊಲೀಸ್ ಲೈನ್‌ನ “ನಾಸಿಕ್ ಬಿ.ಹೆಚ್. ಬಂಗೇರ ಸಭಾಭವನ”ದಲ್ಲಿ ನಡೆಯಿತು.
https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK
2023 – 24ರ ಸಾಲಿಗೆ ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಣೆ ಮಾಡಲಾಯಿತು. ಸಂಘದ ಲೆಕ್ಕಪರಿಶೋಧನೆಯನ್ನು ಸಿಎ ಸುಜಯ ಡಿ. ಆಳ್ವ ಮಾಡಿಕೊಟ್ಟಿದ್ದು, ವರದಿ ವರ್ಷ ಸಂಘವು 98 ಕೋಟಿ ವ್ಯವಹಾರ ಮಾಡಿದ್ದು, 29.37 ಲಕ್ಷ ರೂ. ಲಾಭ ಗಳಿಸಿದೆ. ಬಿಜೈ ಶಾಖೆಯಲ್ಲಿ ಇ-ಸ್ಟಾಂಪಿಂಗ್ ಸೇವೆ ಆರಂಭಿಸಲಾಗಿದೆ. ಲೆಕ್ಕಪರಿಶೋಧನೆಯಲ್ಲಿ ಪ್ರತಿ ವರ್ಷದಂತೆ ” ಎ” ಶ್ರೇಣಿ ಪಡೆದುಕೊಂಡಿದೆ. ಅದೇ ರೀತಿ 2023 -24ರಲ್ಲಿ ಠೇವಣಿ ಸಂಗ್ರಹದಲ್ಲಿ ಶೇ.20 ಮತ್ತು ಸಾಲ ವಿತರಣೆಯಲ್ಲಿ ಶೇ.37.5 ಅಭಿವೃದ್ಧಿ ಸಾಧಿಸಿದ್ದು, ಸದಸ್ಯರ ಬೇಡಿಕೆಗೆ ಸ್ಪಂದಿಸಿ ವ್ಯವಹಾರ ನಡೆಸುತ್ತಿದೆ ಎಂದು ಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ್ ತಿಳಿಸಿದರು.
ಕಾರ್ಯದರ್ಶಿ ಉದಯ ಆರ್ ವಾರ್ಷಿಕ ವರದಿ ಮಂಡಿಸಿದರು. ಸಂಘದ ವತಿಯಿಂದ ಸದಸ್ಯರ ಮಕ್ಕಳಿಗೆ ವಿದ್ಯಾ ಪ್ರೋತ್ಸಾಹಧನ ವಿತರಿಸಲಾಯಿತು. ಉತ್ತಮವಾಗಿ ಕಾರ್ಯನಿರ್ವಹಿಸಿದ ಪಿಗ್ಮಿ ಸಂಗ್ರಾಹಕರು ಮತ್ತು ಸಿಬ್ಬಂದಿಗಳನ್ನು ಗೌರವಿಸಲಾಯಿತು. ಸಂಘದ ನಿರ್ದೇಶಕರಾದ ಜೀವನ್ ಕುಮಾರ್ ಸ್ವಾಗತಿಸಿದರು. ಭೋಜ ಯು.ಮೂಲ್ಯ ಧನ್ಯವಾದ ಸಲ್ಲಿಸಿದರು. ಉಪಾಧ್ಯಕ್ಷ ಭೋಜ ಎಸ್. ಕುಲಾಲ್, ನಿರ್ದೇಶಕರಾದ ವಿಶ್ವನಾಥ ಬಂಗೇರ, ಎಂ.ಪಿ. ಬಂಗೇರ, ಸುರೇಶ್ ಕೆ.ಕುಲಾಲ್, ಶಕುಂತಳಾ ಬಿ., ಪ್ರಮೀಳಾ ಎ.ಸಾಲ್ಯಾನ್ ಮತ್ತು ವೃತ್ತಿಪರ ನಿರ್ದೇಶಕ ಮೋಹನ್ ದಾಸ್ ಬಿ. ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com