ಹಳೆಯಂಗಡಿ: ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಪಡುಬಿದ್ರಿ ಶಾಖೆಯ ಎರಡನೇ ವರ್ಷಾಚರಣೆಯ ಅಂಗವಾಗಿ ಬಡ ಕುಟುಂಬಗಳ ಅಂಗವಿಕಲರಿಗೆ ಉಚಿತವಾಗಿ ವೀಲ್‌ಚೇರ್ ಅನ್ನು ಪಡುಬಿದ್ರಿ ಶಾಖೆಯಲ್ಲಿ ಸಾಂಕೇತಿಕವಾಗಿ ಇತ್ತೀಚೆಗೆ ವಿತರಿಸಲಾಯಿತು.
ಮುಂದಿನ ದಿನದಲ್ಲಿ ಅಗತ್ಯವಿರುವ ಸಂಘದ ಸದಸ್ಯರ/ ಅವರ ಅವಲಂಬಿತರು ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಶಾಖೆಗಳನ್ನು ಸಂಪರ್ಕಿಸಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆಯ ಅಧ್ಯಕ್ಷ ಎಚ್.ವಸಂತ ಬರ್ನಾರ್ಡ್ ತಿಳಿಸಿದ್ದಾರೆ.
https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ ಕರ್ಣಾಟಕ ಬ್ಯಾಂಕ್ ಪಡುಬಿದ್ರಿ ಶಾಖಾ ಪ್ರಬಂಧಕ ಪ್ರವೀಣ್ ಕುಮಾರ್, ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ನಿಸ್ವಾರ್ಥ ಸೇವೆಯಿಂದ ಜನಮನ ಗೆಲ್ಲುವ ಮೂಲಕ ಉತ್ತಮ ಸಂಸ್ಥೆಯಾಗಿ ಮೂಡಿಬಂದಿದೆ. ಬ್ಯಾಂಕಿನ ಲಾಭಾಂಶದಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡುವುದು ಇತರ ಸಂಘ-ಸಂಸ್ಥೆಗಳಿಗೆ ಮಾದರಿ ಎಂದು ಬಣ್ಣಿಸಿದರು.
ಮುಖ್ಯ ಅಥಿತಿಯಾಗಿ ಪಡುಬಿದ್ರಿ ರೋಟರಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷೆ ಗೀತಾ ಅರುಣ್, ಮಾತೃಸಂಸ್ಥೆಯ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್, ಶಾಖಾ ಪ್ರಬಂಧಕಿ ಪ್ರಜ್ಞಾಶ್ರೀ, ನಿರ್ದೇಶಕರಾದ ಉಮಾನಾಥ್ ಜೆ. ಶೆಟ್ಟಿಗಾರ್ ಹಾಗೂ ಸೊಸೈಟಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com