ಶೇಕಡಾ 20 ಡಿವಿಡೆಂಡ್ ಘೋಷಣೆ
ಸಿಇಒ ಸತ್ಯಶಂಕರ ಕೆ.ಜಿ.ಬೀಳ್ಕೊಡುಗೆ
ಬೆಳ್ತಂಗಡಿ: ಕಳಿಯ ಕೃಷಿ ಪತ್ತಿನ ಸಹಕಾರಿ ಸಂಘವು ಪ್ರಸಕ್ತ ಸಾಲಿನಲ್ಲಿ 263 ಕೋಟಿ ರೂ. ವ್ಯವಹಾರ ನಡೆಸಿದ್ದು, 1.37 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.20 ಡಿವಿಡೆಂಡ್ ನೀಡಲಾಗುವುದು ಎಂದು ಕಳಿಯ ಪ್ಯಾಕ್ಸ್ ಅಧ್ಯಕ್ಷ ವಸಂತ ಮಜಲು ಪ್ರಕಟಿಸಿದರು.
ಕಳಿಯ-ಗೇರುಕಟ್ಟೆ ಸಹಕಾರಿ ಸಭಾಭವನದಲ್ಲಿ ಭಾನುವಾರ ಕಳಿಯ ಕೃಷಿ ಪತ್ತಿನ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಸಿಇಒ ಸತ್ಯಶಂಕರ ಕೆ.ಜಿ. ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಸಂಘವು ಸ್ಥಾಪನೆಯಾದ ಬಳಿಕ ಪ್ರಥಮ ಬಾರಿ 1.37 ಕೋಟಿ ರೂ. ಲಾಭ ಗಳಿಸಿದೆ. ಸಿಇಒ ಸತ್ಯಶಂಕರ ಅವರು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ್ದಾರೆ. ಪ್ರತಿ ಬಾರಿಯೂ ಕಳಿಯ ಪ್ಯಾಕ್ಸ್ ನ ಮಹಾಸಭೆಗೆ ಅಧಿಕ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಗೌರವ ಸ್ವೀಕರಿಸಿ ಮಾತನಾಡಿದ ನಿರ್ಗಮನ ಸಿಇಒ ಸತ್ಯಶಂಕರ ಕೆ.ಜಿ. ಮಾತನಾಡಿ, ಪ್ರೀತಿ, ವಿಶ್ವಾಸ ನೀಡಿ ಸೇವೆಯಲ್ಲಿ ಸಹಕರಿಸಿದ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ, ಭಾವುಕರಾದರು.
ಸೊಸೈಟಿ ನಿರ್ದೇಶಕರಾದ ಎಂ.ಹರಿದಾಸ ಪಡಂತ್ತಾಯ ಮಲವೂರು, ಚಂದ್ರಾವತಿ ಕಟ್ಟದಬೈಲ್, ಮಮತಾ ನಾಳ, ಗೋಪಾಲ ನಾಯ್ಕ್ ಬನ, ಕುಶಾಲಪ್ಪ ಗೌಡ ಕಲಾಯಿದೊಟ್ಟು, ಬಾಲಕೃಷ್ಣ ಗೌಡ ಬಿರ್ಮೊಟ್ಟು, ಉದಿತ್ ಕುಮಾರ್ ಬರಾಯ, ಲೋಕೇಶ್ ಎನ್.ನಾಳ, ಕೇಶವ ಪೂಜಾರಿ , ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು. ಜನಾರ್ಧನ ಪೂಜಾರಿ, ಹೇಮಂತ್ ಪೂಜಾರಿ, ಸುರೇಶ ಆರ್. ಎನ್ ಹಾಗೂ ಕೇಶವ ಪೂಜಾರಿ ಅನಿಸಿಕೆ ವ್ಯಕ್ತಪಡಿಸಿದರು. ಪ್ರಭಾರ ಸಿಇಒ ಕವಿತಾ ಅವರಿಗೆ ಶುಭ ಹಾರೈಸಲಾಯಿತು. ನಿರ್ದೇಶಕ ಶೇಖರ ನಾಯ್ಕ್ ಸ್ಪೂರ್ತಿ ಗೇರುಕಟ್ಟೆ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಶಂಕರ್ ಕೆ.ಜಿ. ವಾರ್ಷಿಕ ವರದಿ ವಾಚಿಸಿದರು. ಸಿಬ್ಬಂದಿ ಸಂತೋಷ್ ವಂದಿಸಿ, ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ಸಂಜೆ ನಮಸ್ಕಾರ ಮಾಸ್ಟ್ರೆ ತುಳು ನಾಟಕ ಪ್ರದರ್ಶನಗೊಂಡಿತು.
ಸಾಧಕರಿಗೆ ಗೌರವಾರ್ಪಣೆ
ಸುದೀರ್ಘ 37 ವರ್ಷ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಿಇಒ ಸತ್ಯಶಂಕರ ಕೆ.ಜಿ. ಮತ್ತು ರಾಜಶ್ರೀ ದಂಪತಿಯನ್ನು ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಅಧಿಕ ಅಂಕ ಗಳಿಸಿದ ಸದಸ್ಯರ 39 ಮಕ್ಕಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು. ದಂತ ವೈದ್ಯಕೀಯ ವಿದ್ಯಾಭ್ಯಾಸದಲ್ಲಿ 90ನೇ ರಾಂಕ್ ಗಳಿಸಿದ ಗೇರುಕಟ್ಟೆಯ ಡಾ.ಅನುಧೀಕ್ಷಾ ಎಸ್.ಆರ್ ಅವರನ್ನು ಸನ್ಮಾನಿಸಲಾಯಿತು. ಸಂಘದಲ್ಲಿ ಅತ ಹೆಚ್ಚು ವ್ಯ
ವಹಾರ ಮಾಡಿದ ಕಳಿಯ, ಓಡಿಲ್ನಾಳ ಮತ್ತು ನ್ಯಾಯತರ್ಪು ಗ್ರಾಮದ ಸದಸ್ಯ ಕೃಷಿಕರಾದ ಹೇಮಂತ್, ಮಾಥ್ಯೂ ಫಿಲಿಪ್ಸ್, ಅರವಿಂದ ಕೆ, ಅಲಿಯಮ್ಮ ,ಆನಂದ ಗೌಡ ಹಾಗೂ ಸರೀನಾ ಮಲೀನ ಡಿಸೋಜ ಅವರಿಗೆ ಕೃಷಿ ಸಲಕರಣೆ ನೀಡಿ ಗೌರವಿಸಲಾಯಿತು.