ಜನರ ಪ್ರೀತಿ, ವಿಶ್ವಾಸ ಗಳಿಸಿ ವ್ಯವಹಾರ ಮಾಡಿದರೆ ಯಶಸ್ಸು: ಕಟೀಲು ವೆಂಕಟರಮಣ ಆಸ್ರಣ್ಣ
ಬಂಟ್ವಾಳ: ಬಿ.ಸಿ.ರೋಡು ವಿವೇಕನಗರದ ಶಕ್ತಿ ಕಾಂಪೌಂಡ್‌ನ ಒಂದನೇ ಮಹಡಿಯಲ್ಲಿ ಗುರುವಾರ ಶರ್ವಾಣಿ ಕ್ರೆಡಿಟ್ ಸೌಹಾರ್ದ ಕೋಆಪರೇಟಿವ್ ಸೊಸೈಟಿ ಶುಭಾರಂಭಗೊಂಡಿತು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆನುವಂಶಿಕ ಅರ್ಚಕ ವೆಂಕಟರಮಣ ಆಸ್ರಣ್ಣ ದೀಪ ಪ್ರಜ್ವಲನಗೊಳಿಸಿ ಆಶೀರ್ವಚನ ನೀಡಿ ಜನರ ಪ್ರೀತಿ, ವಿಶ್ವಾಸ ಗಳಿಸಿ ವ್ಯವಹಾರ ಮಾಡಿದರೆ ಯಶಸ್ಸು ಸಾಧ್ಯ ಎಂದು ಹೇಳಿದರು.
https://chat.whatsapp.com/EbVKVnWB6rlHT1mWtsgbch
ಆರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಶುಭ ಹಾರೈಸಿದರು. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕಿ ಭಾರತಿ ಜಿ.ಭಟ್ ಮಾತನಾಡಿ, ಮಹಿಳೆಯೊಬ್ಬರು ಸೊಸೈಟಿ ಅಧ್ಯಕ್ಷೆಯಾಗಿರುವುದು ಸಂತಸದ ವಿಷಯ, ಸಹಕಾರ ಮನೋಭಾವನೆಯಿಂದ ಮುನ್ನಡೆಯಿರಿ ಎಂದು ಸಲಹೆ ನೀಡಿದರು. ಭದ್ರತಾ ಕೊಠಡಿ ಉದ್ಘಾಟಿಸಿ ಮಾತನಾಡಿದ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಮೈಸೂರು ಪ್ರಾಂತ ಅಧಿಕಾರಿ ಗುರುಪ್ರಸಾದ್ ಬಂಗೇರ, ಸಹಕಾರ ಕ್ಷೇತ್ರದಲ್ಲಿ ಅನುಭವ ಹೊಂದಿದವರು ಮಾಡಿರುವ ಸಹಕಾರ ಸಂಸ್ಥೆ ಯಶಸ್ವಿಯಾಗಲಿ ಎಂದರು.
ಸಹಕಾರಿ ನಾಮಫಲಕವನ್ನು ಪುತ್ತೂರು ಮಾಜಿ ಪುರಸಭಾಧ್ಯಕ್ಷ ಜೀವಂಧರ ಜೈನ್ ಉದ್ಘಾಟಿಸಿದರು. ನಗದು ಕೌಂಟರ್ ಅನ್ನು ಶ್ರೀಮಾತಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ದಾಮೋದರ ಕುಲಾಲ್ ಉದ್ಘಾಟಿಸಿದರು. ಗಣಕಯಂತ್ರವನ್ನು ದ.ಕ.ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಉದ್ಘಾಟಿಸಿದರು. ನಗದು ಪತ್ರವನ್ನು ವಕೀಲ ಅಶ್ವನಿ ಕುಮಾರ್ ರೈ ಬಿಡುಗಡೆಗೊಳಿಸಿದರು.
ಮುಖ್ಯ ಆತಿಥಿಗಳಾಗಿ ಬಂಟ್ವಾಳ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಜಿಲ್ಲಾ ಅಭಿವೃದ್ಧಿ ಅಧಿಕಾರಿ ವಿಜಯ ಬಿ.ಎಸ್., ರಕ್ತೇಶ್ವರಿ ದೇವಿ ಸನ್ನಿಧಿ ಸೇವಾ ಸಮಿತಿಯ ಅಧ್ಯಕ್ಷ ಬಿ.ವಿಶ್ವನಾಥ್ ಭಾಗವಹಿಸಿದ್ದರು. ಸೊಸೈಟಿ ಅಧ್ಯಕ್ಷೆ ರೋಹಿಣಿ ಉದಯ್ ಅಧ್ಯಕ್ಷತೆ ವಹಿಸಿದ್ದರು. ಸಿಇಒ ಉದಯ ವೆಂಕಟೇಶ ಭಟ್ ಸ್ವಾಗತಿಸಿ, ವಂದಿಸಿದರು. ಉಪಾಧ್ಯಕ್ಷ ಅವಿನಾಶ್ ಕಾಮತ್, ನಿರ್ದೇಶಕರಾದ ಜಯಲಕ್ಷ್ಮೀ, ಜಯಾನಂದ ಆಚಾರ್ಯ, ಅನಿತಾ ನಾಯಕ್, ಬಿಂದು ಕುಡ್ವ, ಪ್ರಜ್ವಲ್ ಪ್ರಸಾದ್ ಕೆ, ಶ್ರದ್ಧಾ, ದಿವ್ಯಾ, ಪರಮೇಶ್ವರ ಮೊಯ್ಲಿ, ಹರಿಣಾಕ್ಷಿ ಹಾಜರಿದ್ದರು. ವಿಜೆ ವಿಖ್ಯಾತ್ ಕಾರ್ಯಕ್ರಮ ನಿರ್ವಹಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com