ಸಹಕಾರ ಸಚಿವ ಅಮಿತ್ ಷಾ ಮುಂದಾಳತ್ವದಲ್ಲಿ ಉನ್ನತ ಮಟ್ಟದ ಸಭೆ
ನವದೆಹಲಿ: ಸಹಕಾರದಿಂದ ಸಮೃದ್ಧಿ ಎಂಬ ಪರಿಕಲ್ಪನೆಯ ಮೂಲಕ ಸಹಕಾರಿ ಸಂಸ್ಥೆಗಳಲ್ಲಿ ಯುವಕರು ಮತ್ತು ಮಹಿಳೆಯರು ಭಾಗವಹಿಸುವುದನ್ನು ಹೆಚ್ಚಿಸಲು ಸಹಕಾರ ಸಚಿವಾಲಯವು ಮಹತ್ವದ ಉಪಕ್ರಮಗಳನ್ನು ತೆಗೆದುಕೊಂಡಿರುವ ಬಗ್ಗೆ ಪರಿಶೀಲಿಸಲು ಗುರುವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಹಕಾರ ಸಚಿವ ಅಮಿತ್ ಷಾ ಮುಂದಾಳತ್ವದಲ್ಲಿ ಸಭೆ ನಡೆಯಿತು.
https://chat.whatsapp.com/EbVKVnWB6rlHT1mWtsgbch
ಸಭೆಯಲ್ಲಿ ಸಹಕಾರ ಸಚಿವಾಲಯದ ಕಾರ್ಯದರ್ಶಿ ಡಾ.ಆಶಿಶ್ ಕುಮಾರ್ ಭೂತಾನಿ, ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ, ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ -2 ಶಕ್ತಿಕಾಂತ ದಾಸ್, ಪ್ರಧಾನಿಯವರ ಸಲಹೆಗಾರ ಅಮಿತ್ ಖರೆ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಭಾರತದ ಸಹಕಾರಿ ವಲಯವನ್ನು ವಿಸ್ತರಿಸಲು ಜಾಗತಿಕ ಸಹಕಾರಿ ಸಂಸ್ಥೆಗಳೊಂದಿಗೆ ಸಹಕರಿಸುವ ಮಹತ್ವದ ಬಗ್ಗೆ ಒತ್ತಿ ಹೇಳಿದರು. ಸಹಕಾರಿ ಜಾಲಗಳ ಮೂಲಕ ಸಾವಯವ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವುದು, ರಫ್ತು ಮಾರುಕಟ್ಟೆಗಳನ್ನು ಅನ್ವೇಷಿಸುವುದು ಮತ್ತು ಕೃಷಿ ಪದ್ಧತಿಗಳನ್ನು ಸುಧಾರಿಸಲು ಮಣ್ಣು ಪರೀಕ್ಷಾ ಮಾದರಿಯನ್ನು ಅಭಿವೃದ್ಧಿಪಡಿಸುವ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಹಣಕಾಸಿನ ವಹಿವಾಟುಗಳನ್ನು ಹೆಚ್ಚಿಸಲು ಅವರು UPI ಅನ್ನು RuPay KCC ಕಾರ್ಡ್‌ಗಳೊಂದಿಗೆ ಸಂಯೋಜಿಸುವ ಬಗ್ಗೆ ಗಮನ ಹರಿಸುವಂತೆಯೂ ಪ್ರಧಾನಿಯವರು ಗಮನ ಸೆಳೆದರು. ಅಲ್ಲದೆ ಸಹಕಾರಿ ಸಂಸ್ಥೆಗಳ ನಡುವೆ ಆರೋಗ್ಯಕರ ಸ್ಪರ್ಧೆ ಬೆಳೆಸಲೂ ಕರೆ ನೀಡಿದರು.
ಸಹಕಾರಿ ಸಂಸ್ಥೆಗಳಲ್ಲಿ ಪಾರದರ್ಶಕತೆ ಹೆಚ್ಚಿಸುವುದು, ಸಹಕಾರಿ ಕೃಷಿಯನ್ನು ಸುಸ್ಥಿರ ಕೃಷಿ ಮಾದರಿಯಾಗಿ ಬೆಳೆಸುವ ಅಗತ್ಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಸಹಕಾರಿ ಸಂಸ್ಥೆಗಳ ಮೂಲಕ ಕೃಷಿ ಸೇವೆಗಳನ್ನು ಸುಧಾರಿಸಲು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಅಗ್ರಿಸ್ಟಾಕ್) ಅನ್ನು ಬಳಸಿಕೊಳ್ಳಲು ಪ್ರಧಾನಿ ಮೋದಿಯವರು ಶಿಫಾರಸು ಮಾಡಿದರು. ಸಹಕಾರಿ ಶಿಕ್ಷಣದ ದೃಷ್ಟಿಯಿಂದ, ಶಾಲೆ, ಕಾಲೇಜುಗಳು ಮತ್ತು IIMಗಳಲ್ಲಿ ಸಹಕಾರಿ ಕೋರ್ಸ್‌ಗಳನ್ನು ಪರಿಚಯಿಸುವ ಬಗ್ಗೆಯೂ ಚರ್ಚೆಯಲ್ಲಿ ಪ್ರಸ್ತಾಪವಾಯಿತು.
ರಾಷ್ಟ್ರೀಯ ಸಹಕಾರ ನೀತಿ ಮತ್ತು ಕಳೆದ ಮೂರೂವರೆ ವರ್ಷಗಳಲ್ಲಿ ಸಹಕಾರ ಸಚಿವಾಲಯ ಸಾಧಿಸಿದ ಪ್ರಮುಖ ಸಾಧನೆಗಳ ಬಗ್ಗೆ ಪ್ರಧಾನಮಂತ್ರಿಯವರಿಗೆ ವಿವರಿಸಲಾಯಿತು. ಸಹಕಾರ ಸಚಿವಾಲಯ ಆರಂಭವಾದಂದಿನಿಂದ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದ್ದು ಸಹಕಾರಿ ಸಂಸ್ಥೆಗಳ ಡಿಜಿಟಲೀಕರಣ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಬಲಪಡಿಸುವಿಕೆ, ಸಹಕಾರಿ ಸಕ್ಕರೆ ಗಿರಣಿಗಳ ಆಧುನೀಕರಣ ವಿಷಯದಲ್ಲಿ ಗಮನ ಕೇಂದ್ರೀಕರಿಸಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com