ಕಾರ್ಕಳ: ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಾಣೂರು ನರಸಿಂಹ ಕಾಮತ್, ಉಪಾಧ್ಯಕ್ಷರಾಗಿ ರಾಯಲ್ ನೊರೋನ್ಹಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
https://chat.whatsapp.com/EbVKVnWB6rlHT1mWtsgbch
ಚುನಾವಣಾ ಅಧಿಕಾರಿ ಶಹನಾಜ್ ಆಯ್ಕೆ ಪ್ರಕ್ರಿಯೆ ನೆರವೇರಿಸಿದರು. ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಸಂತೋಷ್ ಶೆಟ್ಟಿ, ಹಾಲು ಪರೀಕ್ಷಕಿ ಪ್ರಮೀಳಾ ಸಹಕರಿಸಿದರು. ಆಡಳಿತ ಮಂಡಳಿಗೆ ನೂತನವಾಗಿ ಹೊಸ ನಿರ್ದೇಶಕರಾಗಿ ಆಯ್ಕೆಯಾದ ಪೂರ್ಣಿಮಾ ಕಿಣಿ ಮತ್ತು ದಿಲೀಪ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಹತ್ತು ವರ್ಷಗಳಿಂದ ಸಂಸ್ಥೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಯಶೋದಾ ಸುವರ್ಣ ಅವರನ್ನು ಸನ್ಮಾನಿಸಲಾಯಿತು. ನೂತನ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್ ಮತ್ತು ನೂತನ ಉಪಾಧ್ಯಕ್ಷ ರಾಯಲ್ ನೊರೋನ್ಹಾ ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲಾ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಲಾಯಿತು. ಸಂಘದ ಸ್ಥಾಪಕ ಅಧ್ಯಕ್ಷ ಕೊರಗ ಶೆಟ್ಟಿ, ಸ್ಥಾಪಕ ಕಾರ್ಯದರ್ಶಿ ಜ್ಞಾನದೇವ್, ಹಿರಿಯ ನಿರ್ದೇಶಕರಾದ ಸೋಮಶೇಖರ್, ಸೈಮನ್ ಡಿಸೋಜ, ಜಯಾನಂದ ಶುಭಾಶಂಸನೆಗೈದರು. ನಿರ್ದೇಶಕ ಪ್ರವೀಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಜಯ ಶೆಟ್ಟಿಗಾರ್ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com