ಮಂಗಳೂರು: ಪ್ರತಿಷ್ಠಿತ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಕೆ.ಜೈರಾಜ್ ಬಿ. ರೈ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮೀ ಜಯಪಾಲ ಶೆಟ್ಟಿ ಆಯ್ಕೆಯಾಗಿದ್ದಾರೆ.
https://chat.whatsapp.com/EbVKVnWB6rlHT1mWtsgbch
ಮುಂದಿನ ಐದು ವರ್ಷ (2025ರಿಂದ 2030) ತನಕ ಇವರ ನೇತೃತ್ವದ ಆಡಳಿತ ಮಂಡಳಿ ಕಾರ್ಯ ನಿರ್ವಹಿಸಲಿದ್ದು, ಈ ಇಬ್ಬರೂ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನವೀನ್ ಕುಮಾರ್ ಎಂ.ಎಸ್ ಪ್ರಕಟಿಸಿದ್ದಾರೆ. ಸಂಘದ ಅಧ್ಯಕ್ಷರಾಗಿ ಸತತ ಮೂರನೇ ಅವಧಿಗೆ ಅವಿರೋಧವಾಗಿ ಪುನರಾಯ್ಕೆಯಾದ ಕೆ.ಜೈರಾಜ್ ಬಿ.ರೈಯವರು ಸಹಕಾರ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಪಾರ ಅನುಭವವುಳ್ಳವರಾಗಿದ್ದು, ಸಂಘವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.
ಆಡಳಿತ ಮಂಡಳಿ ನಿರ್ದೇಶಕರಾಗಿ ಎ.ರತ್ನಕಾಂತಿ ಶೆಟ್ಟಿ, ಕೆ.ಸೀತಾರಾಮ ರೈ ಸವಣೂರು, ಡಾ|ಕೆ.ಸುಭಾಶ್ಚಂದ್ರ ಶೆಟ್ಟಿ, ಪಿ.ಶಿವರಾಮ ಅಡ್ಯಂತಾಯ, ಸಿಎ ಎಚ್.ಆರ್.ಶೆಟ್ಟಿ, ವಿಠಲ ಪಿ.ಶೆಟ್ಟಿ, ಎಂ.ರಾಮಯ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಪಿ.ಬಿ.ದಿವಾಕರ ರೈ, ರವೀಂದ್ರನಾಥ ಜಿ.ಹೆಗ್ಡೆ, ಕುಂಬ್ರ ದಯಾಕರ ಆಳ್ವ, ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಎ.ಚಿಕ್ಕಪ್ಪ ನಾಯ್ಕ್ ಮತ್ತು ಡಾ|ಬಿ.ಸಂಜೀವ ರೈ ಆಯ್ಕೆಯಾಗಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com