ಬಂಟ್ವಾಳ: ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಗೆ ಸತತ ಎರಡನೇ ಬಾರಿ ಅಧ್ಯಕ್ಷರಾಗಿ ಜೀವನ್ ಲಾಯ್ಡ್ ಪಿಂಟೊ, ಉಪಾಧ್ಯಕ್ಷರಾಗಿ ವಲೇರಿಯನ್ ಬರೆಟ್ರೊ ಪುನರಾಯ್ಕೆಯಾಗಿದ್ದಾರೆ.
https://chat.whatsapp.com/HEBD1pVmyHz0E5Ycp5rC7h
ಮುಂದಿನ ಐದು ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿಗೆ 2ನೇ ಬಾರಿಗೆ ಅಧ್ಯಕ್ಷರಾಗಿ ಜೀವನ್ ಲಾಯ್ಡ್ ಪಿಂಟೊ ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ. ಸಂಘದ ಪ್ರಧಾನ ಕಛೇರಿಯಲ್ಲಿ ಚುನಾವಣಾಧಿಕಾರಿ ಡಾ.ಜ್ಯೋತಿ ಡಿ(ಸಹಕಾರ ಅಭಿವೃದ್ಧಿ ಅಧಿಕಾರಿ, ಬಂಟ್ವಾಳ ತಾಲೂಕು) ಇವರ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಇತ್ತೀಚೆಗೆ ಸಾಮಾನ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 11 ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಮೂವರು ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ನಿರ್ದೇಶಕರಾಗಿ ಅನಿಲ್ ಹೆರಾಲ್ಡ್ ಫ್ರಾಂಕ್, ಲಾದ್ರು ಮಿನೇಜಸ್, ರೊನಾಲ್ಡ್ ವಿಜಯ್ ಫರ್ನಾಂಡಿಸ್, ಗ್ಲೋರಿಯಾ ಪ್ರೇಮಾ ಕುಟಿನ್ಹ, ವಿನ್ಸೆಂಟ್ ಕ್ಲೋಡಿ ಕಾರ್ಲೊ, ಲಾರೆನ್ಸ್ ಕ್ಲಿಫರ್ಡ್ ಡಿಸೋಜ, ಫ್ರಾನ್ಸಿಸ್ ಮೆಂಡೊನ್ಸಾ, ಹಿಲರಿ ಕ್ರಾಸ್ತಾ, ಪ್ಯೂಬರ್ಟ್ ಲೋಬೊ, ಮಹಿಳಾ ಮೀಸಲಾತಿ ಸ್ಥಾನದಿಂದ ಅನಿತಾ ನೂರೊನ್ಹಾ, ಬೆನೆಡಿಕ್ಷಾ ಸಲ್ದಾನ್ಹ ಹಾಗೂ ಹಿಂದುಳಿದ ವರ್ಗ ಪ್ರವರ್ಗ ‘ಬಿ’ ಸ್ಥಾನದಿಂದ ವಿಶಾಲ್ ಡಿಸೋಜ ಆಯ್ಕೆಗೊಂಡಿರುತ್ತಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com