ಮಂಗಳೂರು: ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತದ ಆಡಳಿತ ಮಂಡಳಿ ಚುನಾವಣೆ ಶನಿವಾರ ನಡೆದಿದ್ದು, ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ.
https://chat.whatsapp.com/EbVKVnWB6rlHT1mWtsgbch
ಸಂಘದ ಅಧ್ಯಕ್ಷರಾಗಿ 20 ವರ್ಷ ಕಾಲ ಮುನ್ನಡೆಸಿದ ಕೆ.ಲವ ಶೆಟ್ಟಿ ನೇತೃತ್ವದ ತಂಡ ಚುನಾವಣೆಯಲ್ಲಿ ಗಳಿಸಿದೆ. ಸಾಲಗಾರರ ಕ್ಷೇತ್ರದ ಸಾಮಾನ್ಯ ಸ್ಥಾನಗಳಿಗೆ ಪುರಂದರ ಎಂ.ಶೆಟ್ಟಿ, ರಘುರಾಮ ಅಡ್ಯಂತಾಯ, ಡಾಲ್ಫಿ ಸಾಂತುಮಯೋರ್, ನಾರಾಯಣ ಕುಂದರ್ ಹಾಗೂ ಶೇಷರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ. ಸಾಲಗಾರರ ಮಹಿಳಾ ಮೀಸಲಾತಿ ಸ್ಥಾನಗಳಿಗೆ ಸುನಂದಾ ಡಿ.ಶೆಟ್ಟಿ ಹಾಗೂ ಶಾಲಿನಿ ಡಿಸೋಜ ಆಯ್ಕೆಯಾಗಿದ್ದಾರೆ. ಸಾಲಗಾರಲ್ಲದ ಕ್ಷೇತ್ರದ ಸಾಮಾನ್ಯ ಸ್ಥಾನಕ್ಕೆ ಜೋಸೆಫ್ ಕ್ವಾಡ್ರಸ್ ಆಯ್ಕೆಯಾಗಿದ್ದಾರೆ. ಹಿಂದುಳಿದ ವರ್ಗ ಪ್ರವರ್ಗ ಎ ಮೀಸಲು ಸ್ಥಾನದಲ್ಲಿ ಲೋಕಯ್ಯ ಸಾಲ್ಯಾನ್, ಪ್ರವರ್ಗ ಬಿ ಮೀಸಲು ಸ್ಥಾನದಲ್ಲಿ ಪ್ರವೀಣ್ ಮಾಡ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಲ್ಲಿ ರಘುರಾಮ ಹಾಗೂ ಪರಿಶಿಷ್ಟ ಪಂಗಡ ಮೀಸಲು ಸ್ಥಾನದಲ್ಲಿ ಬೇಬಿ ಅವಿರೋಧ ಆಯ್ಕೆಯಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯನ್ನು ರಿಟರ್ನಿಂಗ್ ಅಧಿಕಾರಿ ವಿಲಾಸ್ ನಡೆಸಿಕೊಟ್ಟರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com