ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರಿಗಳ ಪಾತ್ರ – ಈ ಬಾರಿಯ ಧ್ಯೇಯ
ಮಂಗಳೂರು: ದೇಶಾದ್ಯಂತ ಸಹಕಾರಿಗಳು 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಆಚರಣೆಯಲ್ಲಿ ತೊಡಗಿದ್ದು ನವಂಬರ್ 14ರಿಂದ 20ರ ತನಕ ಕಾಶ್ಮೀರದಿಂದ ಕನ್ಯಾಕುಮಾರಿ ತನಕದ ಸಹಕಾರಿಗಳು ಈ ಆಚರಣೆಯಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಸಹಕಾರಿ ಚಳವಳಿಯ ಬಲವರ್ಧೆನೆಗೆ ಸಹಕಾರ ಸಪ್ತಾಹದ ಆಚರಣೆ ಬಹು ಪ್ರಾಮುಖ್ಯವಾದುದು.
https://chat.whatsapp.com/Ge11n7QCiMj5QyPvCc0H19
ದೇಶದ ಸಹಕಾರಿಗಳ ಪ್ರಮುಖ ಸಂಸ್ಥೆ ಎನ್‌ಸಿಯುಐ(ಭಾರತದ ರಾಷ್ಟ್ರೀಯ ಸಹಕಾರಿ ಒಕ್ಕೂಟ) ಇಂದಿನಿಂದ (ನವಂಬರ್ 14ರಿಂದ) 20ರ ತನಕ ಈ ಆಚರಣೆಯಲ್ಲಿ ತೊಡಗಿದ್ದು ವಿವಿಧ ದಿನಗಳಲ್ಲಿ ವಿವಿಧ ಧ್ಯೇಯಗಳನ್ನಿಟ್ಟುಕೊಂಡು ಆಚರಿಸಲಿದೆ. ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರಿಗಳ ಪಾತ್ರ – ಇದು ಈ ಬಾರಿಯ ಪ್ರಮುಖ ಧ್ಯೇಯವಾಗಿದ್ದು ಏಳು ದಿನ ಏಳು ಧ್ಯೇಯಗಳ ಮೂಲಕ ವಿವಿಧೆಡೆ ಕಾರ್ಯಕ್ರಮ ನಡೆಯಲಿದೆ. ಎನ್‌ಸಿಯುಐ ಅಧ್ಯಕ್ಷ ದಿಲೀಪ್ ಸಂಘಾನಿ ನವದೆಹಲಿಯ ಎನ್‌ಸಿಯುಐ ಪ್ರಧಾನ ಕಚೇರಿಯಲ್ಲಿ ಸಹಕಾರ ಸಪ್ತಾಹಕ್ಕೆ ಚಾಲನೆ ನೀಡಲಿದ್ದು ವಿವಿಧ ಕ್ಷೇತ್ರಗಳ ಪ್ರಮುಖರು ಇದರಲ್ಲಿ ಭಾಗವಹಿಸಲಿದ್ದಾರೆ.
ಸಹಕಾರ ಸಪ್ತಾಹದ ಏಳು ದಿನಗಳ ಏಳು ಧ್ಯೇಯವಾಕ್ಯಗಳು
14-11-2024: ಸಹಕಾರ ಸಚಿವಾಲಯದ ಹೊಸ ಉಪಕ್ರಮಗಳ ಮೂಲಕ ಸಹಕಾರ ಚಳುವಳಿಯನ್ನು ಬಲಪಡಿಸುವುದು
15-11-2024: ಸಹಕಾರಿ ಸಂಸ್ಥೆಗಳಲ್ಲಿ ನಾವೀನ್ಯತೆ, ತಂತ್ರಜ್ಞಾನ ಮತ್ತು ಉತ್ತಮ ಆಡಳಿತ
16-11-2024: ಉದ್ಯಮಶೀಲತೆ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಸಹಕಾರಿಗಳ ಪಾತ್ರ
17-11-2024: ಸಹಕಾರಿ ಉದ್ಯಮಗಳ ಪರಿವರ್ತನೆ
18-11-2024: ಸಹಕಾರ ಸಂಘಗಳ ನಡುವೆ ಸಹಕಾರವನ್ನು ಬಲಪಡಿಸುವುದು
19-11-2024: ಮಹಿಳೆಯರು, ಯುವಕರು ಮತ್ತು ದುರ್ಬಲ ವರ್ಗಗಳಿಗೆ ಸಹಕಾರಿ
20-11-2024: ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸುವಲ್ಲಿ ಸಹಕಾರಿಗಳ ಪಾತ್ರ ಮತ್ತು ಉತ್ತಮ ಜಗತ್ತಿಗೆ ಮುನ್ನಡೆಯುವ ಮಾರ್ಗ
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com