ಮಂಗಳೂರು: ಶ್ರೀ ಗುರುಶಕ್ತಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಕೋಡಿಕಲ್ ಶಾಖೆ ಒಂದು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಶ್ರೀ ಗುರುಶಕ್ತಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ, ಶ್ರೀ ನಾರಾಯಣಗುರು ಧರ್ಮಪರಿಪಾಲನಾ ಮಂದಿರ ಕೋಡಿಕಲ್ ಮತ್ತು ಗಿರಿಜಾ ಸರ್ಜಿಕಲ್ಸ್ ಜಂಟಿ ಆಶ್ರಯದಲ್ಲಿ ನವಂಬರ್ 16ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
https://chat.whatsapp.com/Ge11n7QCiMj5QyPvCc0H19
ಕೋಡಿಕಲ್ ಎಸ್.ಎನ್.ಡಿ.ಪಿ ಮಂದಿರದ ಆವರಣದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 1ರ ತನಕ ಶಿಬಿರ ನಡೆಯಲಿದೆ. ಶಿಬಿರದಲ್ಲಿ ರಕ್ತದ ಸಕ್ಕರೆ ಅಂಶ, ನಾಡಿಬಡಿತ, ರಕ್ತದೊತ್ತಡ, ರಕ್ತದಲ್ಲಿನ ಆಮ್ಲಜನಕ ತಪಾಸಣೆ ಮಾಡಲಾಗುವುದು. ಕೋಡಿಕಲ್ ಪರಿಸರದ ನಾಗರಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com