ಮೂಲ್ಕಿ: ಮೂಲ್ಕಿ ಸೀಮೆಯ ಪ್ರತಿಷ್ಠಿತ ಅರಸು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಡಿಸೆಂಬರ್ 22ರಂದು ನಡೆಯುವ ಅರಸು ಕಂಬಳದ ದಿನ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಮೂಲ್ಕಿ ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರ ಅಧ್ಯಕ್ಷತೆಯಲ್ಲಿ ಅರಮನೆಯ ಧರ್ಮಚಾವಡಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರಶಸ್ತಿಗೆ 14 ಜನರನ್ನು ಆಯ್ಕೆ ಮಾಡಲಾಗಿದೆ. ಮೂಲ್ಕಿ ಅರಮನೆ ವೆಲ್‌ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ಮತ್ತು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಹಳೆಯಂಗಡಿ ಸಹಭಾಗಿತ್ವದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದ್ದು ಪ್ರಶಸ್ತಿಗೆ 78 ಅರ್ಜಿಗಳು ಬಂದಿದ್ದವು.
https://chat.whatsapp.com/Ge11n7QCiMj5QyPvCc0H19
ಪ್ರಶಸ್ತಿ ವಿಜೇತರ ವಿವರ:
ಸಾಧನಾ ಪುರಸ್ಕಾರ: ಶ್ರೀ ನಿಪ್ಪಾಣಿ ಪೀಠದ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ
ಮರಣೋತ್ತರ ಪ್ರಶಸ್ತಿ: 1. ಎಚ್ ನಾರಾಯಣ ಸನಿಲ್(ಸಹಕಾರಿ ಕ್ಷೇತ್ರ), 2. ಬಾಬು ಶೆಟ್ಟಿ ಮುಂಬೈ (ಕಂಬಳ ಕ್ಷೇತ್ರ)
ಸಂಘ ಸಂಸ್ಥೆಗಳ ವಿಭಾಗ: 1. ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು, 2. ಶಿವ ಸಂಜೀವಿನಿ ಸುರಗಿರಿ
ಸಾಹಿತ್ಯ ಕ್ಷೇತ್ರ: 1. ಎಚ್.ಶಕುಂತಲಾ ಭಟ್ ಹಳೆಯಂಗಡಿ, 2. ಪರಮಾನಂದ ಸಾಲಿಯಾನ್ ಸಸಿಹಿತ್ಲು
ಯಕ್ಷಗಾನ ಕ್ಷೇತ್ರ: 1. ಶ್ರೀ ವಿನಾಯಕ ಯಕ್ಷಗಾನ ಫೌಂಡೇಶನ್ ಕೆರೆಕಾಡು, 2. ಸೀತಾರಾಮ್ ಕುಮಾರ್ ಕಟೀಲು
ಕೃಷಿ- ಪರಿಸರ ಕ್ಷೇತ್ರ: ವಾಲ್ಟರ್ ಡಿಸೋಜ ಪಕ್ಷಿಕೆರೆ
ವೈದ್ಯಕೀಯ ಕ್ಷೇತ್ರ: ಡಾ. ಹಸನ್ ಮುಬಾರಕ್ ಬೊಳ್ಳೂರು
ಸಾಮಾಜಿಕ ಕ್ಷೇತ್ರ: 1. ಮಾಧವ ಶೆಟ್ಟಿಗಾರ್ ಬೆಳ್ಳಾಯರು (ಮುಕ್ತಿದಾತ), 2. ಚಂದ್ರ ಕುಮಾರ್ ಸಸಿಹಿತ್ಲು
ಶೈಕ್ಷಣಿಕ ಕ್ಷೇತ್ರ: 1. ಮೀರಾಬಾಯಿ ಕೆ. ಪಾವಂಜೆ
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com