ಮಂಗಳೂರು: ಇಲ್ಲಿನ ಮಂಗಳೂರು ಸೌಹಾರ್ದ ಸಹಕಾರಿ ಸಂಘ ಮತ್ತು ಪ್ರಸಾದ್ ನೇತ್ರಾಲಯ ಜಂಟಿ ಆಶ್ರಯದಲ್ಲಿ ಜರುಗಿದ ಕಣ್ಣಿನ ಉಚಿತ ತಪಾಸಣೆಯ ಪ್ರಯುಕ್ತ ಬುಧವಾರ ಮಂಗಳೂರು ಸ್ಕೋರ್ ಸಭಾಂಗಣದಲ್ಲಿ “ಉಚಿತ ಕನ್ನಡಕ ವಿತರಣೆ” ಕಾರ್ಯಕ್ರಮ ಜರಗಿತು.
https://chat.whatsapp.com/EbVKVnWB6rlHT1mWtsgbch
ಮಂಗಳೂರು ಸೌಹಾರ್ದ ಸಹಕಾರಿಯ ಅಧ್ಯಕ್ಷ, ಮಾಜಿ ಕಾರ್ಪೊರೇಟರ್ ಕೆ.ಭಾಸ್ಕರ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಪ್ರಸಾದ್ ನೇತ್ರಾಲಯದ ನಿರ್ದೇಶಕ ನಾಡೋಜ ಕೃಷ್ಣಪ್ರಸಾದ್ ಕೂಡ್ಲು ಮತ್ತು ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್, ಮಂಗಳೂರು ಸೌಹಾರ್ದ ಸಹಕಾರಿಯ ನಿರ್ದೇಶಕರಾದ ರವೀಂದ್ರ ಬೇಕಲ್, ಪೂರ್ಣಿಮಾ ಬಿ.ರಾವ್, ಸುಂದರ ಸಾಲ್ಯಾನ್, ಕೆ.ರವೀಂದ್ರ ರಾವ್ ಮುಖ್ಯ ಅತಿಥಿಗಳಾಗಿದ್ದರು. ನಾಡೋಜ ಕೃಷ್ಣಪ್ರಸಾದ್ ಕೂಡ್ಲು” ಅವರನ್ನು ಅಭಿನಂದಿಸಲಾಯಿತು. 200 ಕನ್ನಡಕಗಳನ್ನು ವಿತರಿಸಲಾಯಿತು. ಚಂದ್ರಿಕಾ ಡಿ.ರಾವ್, ಇಮ್ರಾನ್ ಎ.ಆರ್, ಮೀನಾ ಟೆಲ್ಲಿಸ್ ಹಾಜರಿದ್ದರು. ಆನಂದ ಸೋನ್ಸ್ , ವಿದ್ಯಾ ಬಾಬುಗುಡ್ಡ, ರೋನಾಲ್ಡ್ ಸಹಕರಿಸಿದರು. ಸದಾಶಿವ ಅಮೀನ್, ಸೈಯದ್ ಅಮೀನ್ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com