Author: admin
ಉಳ್ಳಾಲ: ಜಯಭಾರತ ಸೌಹಾರ್ದ ಸಹಕಾರಿ ಸಂಘ ತೊಕ್ಕೊಟ್ಟು ಇದರ ವಾರ್ಷಿಕ ಸಾಮಾನ್ಯ ಸಭೆಯು ಶನಿವಾರ ನಡೆಯಿತು. 2024ರ ಏಪ್ರಿಲ್ 14ರಂದು ತೊಕ್ಕೊಟ್ಟು ಜಂಕ್ಷನ್‌ನ ಗ್ರ್ಯಾಂಡ್ ಸಿಟಿಯಲ್ಲಿ ಉದ್ಘಾಟಿಸಿ ವ್ಯವಹಾರ ಪ್ರಾರಂಭಿಸಲಾಗಿದ್ದು, 13 ಚುನಾಯಿತ ನಿರ್ದೇಶಕರಿಂದ ಮುನ್ನಡೆಯುತ್ತಿದೆ. ಅಧ್ಯಕ್ಷರಾಗಿ ವಿಕ್ರಮ್ ಬಂಗೇರ, ಉಪಾಧ್ಯಕ್ಷರಾಗಿ ಆನಂದ ಗಟ್ಟಿ ಕಾರ್ಯನಿರ್ವಹಿಸುತ್ತಿದ್ದು, ಕೆ.ನಾರಾಯಣ ಶೆಟ್ಟಿ, ನೋರ್ಬರ್ಟ್ ಡಿಸೋಜ, ಸಂದೇಶ್ ಡಿ.ಪೂಜಾರಿ, ಡಾ.ಭಾರತಿ ಆರ್., ಆದರ್ಶ ಕೆ.ಎಸ್., ವಿಜಯಲಕ್ಷ್ಮಿ, ಚಂದ್ರಿಕಾ ರೈ, ಸಂದೀಪ ಪೂಜಾರಿ, ಸುಜಿತಾ ಹಾಗೂ ಶಿವರಾಜ್ ನಿರ್ದೇಶಕರಾಗಿದ್ದಾರೆ. ಆಡಳಿತಾತ್ಮಕ ನಿರ್ದೇಶಕರಾಗಿ ಶಶಿಧರ ಶೆಟ್ಟಿ ಕಟೀಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಜಯಲಕ್ಷ್ಮೀ ಎ.ಎಸ್ ಕಾರ್ಯನಿರ್ವಹಿಸುತ್ತಿದ್ದಾರೆ. https://chat.whatsapp.com/EbVKVnWB6rlHT1mWtsgbch ಸಂಘದಲ್ಲಿ 481 ಎ ತರಗತಿ ಸದಸ್ಯರಿದ್ದು, ವರದಿ ವರ್ಷದ ಆರಂಭದಲ್ಲಿ 6,12,900 ರೂ. ಶೇರು ಬಂಡವಾಳವಿದ್ದು ಪ್ರಸಕ್ತ ವರ್ಷ 2,77,700 ರೂ. ಶೇರು ಬಂಡವಾಳ ಜಮೆಯಾಗಿದ್ದು, 4,73,600 ರೂ. ಪಾವತಿಯಾಗಿ ವರ್ಷಾಂತ್ಯಕ್ಕೆ 4,17,000 ಶೇರು ಬಂಡವಾಳವಿದೆ. 2,00,46,210 ರೂ. ವಿವಿಧ ಠೇವಣಾತಿಗಳಿವೆ. ನೀಡಲಾಗಿರುವ ಸಾಲ ಶೇ.100ರಷ್ಟು ಮರುಪಾವತಿಯಾಗಿದ್ದು, ಸಂಘದ ಆಡಳಿತ ಮಂಡಳಿ,…
ಮೂಡುಬಿದಿರೆ: ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 2024-25ನೇ ಸಾಲಿನ 11ನೇ ವರ್ಷದ ಮಹಾಸಭೆಯು ಭಾನುವಾರ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಿತು. ಸಹಕಾರಿಯ ಅಧ್ಯಕ್ಷ ರಂಜಿತ್ ಪೂಜಾರಿ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದರು. ಸಂಘವು 2.32 ಕೋಟಿ ರೂ. ಸ್ವಸಹಾಯ ಸಂಘಗಳಿಗೆ ಸಾಲ ನೀಡುತ್ತಾ ಬಂದಿದೆ. ಮಾತ್ರವಲ್ಲದೇ 2019ರಿಂದ ಸ್ವಸಹಾಯ ಸಂಘದ ಸದಸ್ಯರಿಗೆ ಹಾಗೂ ಗ್ರಾಹಕರಿಗೆ ವೈದ್ಯಕೀಯ ನೆರವು, ವಿದ್ಯಾಭ್ಯಾಸದ ನೆರವು, ಶೌಚಗೃಹದ ನೆರವು ಹಾಗೂ ಮನೆ ಕಟ್ಟುವವರಿಗೆ ಧನಸಹಾಯವನ್ನು ವಿಶೇಷ ಸೇವಾ ಮನೋಭಾವನೆಯನ್ನಿಟ್ಟುಕೊಂಡು ಬಂದ ಲಾಭಾಂಶದಲ್ಲಿ ಸಾಮಾಜಿಕ ಕೆಲಸ ಕಾರ್ಯಗಳಲ್ಲೂ ಸಹಕಾರಿ ಸಂಘ ತೊಡಗಿಸಿಕೊಂಡಿದೆ ಎಂದರು. https://chat.whatsapp.com/EbVKVnWB6rlHT1mWtsgbch ವಾರ್ಷಿಕವಾಗಿ ಸಂಸ್ಥೆಯ ಆದಾಯದಲ್ಲಿ 2.50 ಲಕ್ಷ ರೂ. ಅನ್ನು ಸ್ವಸಹಾಯ ಸಂಘಗಳನ್ನು ಸೇರಿಸಿ, ಸಮಾಜದ ಅಗತ್ಯಗಳಿಗೆ ಸ್ಪಂದಿಸಿ ಸಾಮಾಜಿಕ ಕಾರ್ಯಗಳಲ್ಲೂ ಪಂಚಶಕ್ತಿ ಸಹಕಾರಿ ಸಂಸ್ಥೆಯೂ ನೆರವಾಗುತ್ತಿದೆ. ಈ ಬಾರಿ ಪುರಸಭೆ ಮುಂಭಾಗದಲ್ಲಿ ಫಾರ್ಚೂನರ್ ಬಿಲ್ಡಿಂಗ್‌ನಲ್ಲಿ 1 ಕೋಟಿ ರೂ. ವೆಚ್ಚದ ಸ್ವಂತ ಕಟ್ಟಡವನ್ನು ಖರೀದಿಸಲಾಗಿದೆ. ಮುಂದಿನ ದಿನಗಳಲ್ಲಿ ಆ ಸ್ವಂತ ಕಟ್ಟಡಕ್ಕೆ ಸಹಕಾರಿ…
ವಿಶ್ವಕರ್ಮ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಬಿ.ಎ.ಆಚಾರ್ಯ ಅಭಿಪ್ರಾಯ ಮಂಗಳೂರು: ದೇವಮಾನವ ಕೀರ್ತಿಶೇಷ ಪಾಲ್ಕೆ ಬಾಬುರಾಯ ಆಚಾರ್ಯರ ತ್ಯಾಗ, ಸೇವೆ, ಸಮರ್ಪಣಾ ಭಾವಗಳ ನೆನಪು ಬದುಕಿಗೆ ದಾರಿದೀಪವಾಗಬೇಕು. ದೇವಮಾನರೆಂದೇ ಕರೆಯಲ್ಪಡುವ ಪಾಲ್ಕೆ ಬಾಬುರಾಯ ಆಚಾರ್ಯರು ‘ಸರಳ ಜೀವನ, ಉದಾತ್ತ ಚಿಂತನೆ’ ಇದು ಅವರ ಬದುಕಿನ ಬಹುಮುಖ್ಯ ಮೌಲ್ಯವಾಗಿತ್ತು “ಇಂದಿಗೂ ಸಾವಿರಾರು ಜನರ ಹೃದಯದಲ್ಲಿ ಪಾಲ್ಕೆ ಬಾಬುರಾಯ ಆಚಾರ್ಯರು ಜೀವಂತವಾಗಿದ್ದಾರೆ ಎಂದು ವಿಶ್ವಕರ್ಮ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಬಿ.ಎ.ಆಚಾರ್ಯ ಅಭಿಪ್ರಾಯಪಟ್ಟರು. https://chat.whatsapp.com/EbVKVnWB6rlHT1mWtsgbch ಎಸ್.ಕೆ ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಲಿ ಆಯೋಜಿಸಿದ್ದ ವಜ್ರಮಹೋತ್ಸವ ಮತ್ತು ಸಂಸ್ಥೆಯ ಸ್ಥಾಪಕರಾದ ಪಾಲ್ಕೆ ಬಾಬುರಾಯ ಆಚಾರ್ಯರ ದಿನಾಚರಣೆಯ ಅಂಗವಾಗಿ ಅವರ ಭಾವಚಿತ್ರ ಬಿಡಿಸುವ ಸ್ಪರ್ಧೆಯ ಚಿತ್ರ ಸಿಂಚನ -2025 ಸಮಾರಂಭದಲ್ಲಿ ಶುಭಾಶಂಸನೆ ನೀಡಿದರು. ಪಾಲ್ಕೆ ಬಾಬುರಾಯ ಆಚಾರ್ಯರನ್ನು ದೇವಮಾನವನಾಗಿಸಿದ ಮೌಲ್ಯ ಅದು ‘ಧರ್ಮ’. ಪಾಲ್ಕೆಯವರು ಪ್ರಾಜ್ಞರ ಸಹವಾಸ, ಸಹಕಾರದಿಂದ ಧರ್ಮವನ್ನು ಅರಿತು ಆಚರಿಸಿದವರು, ಎಲ್ಲರಿಗೂ ಲೇಸನ್ನೇ ಬಯಸುವ ವಿಶಾಲ ಹೃದಯವುಳ್ಳವರಾಗಿದ್ದರು. ಸ್ವಸಮಾಜದ ಬಂಧುಗಳಿಂದ ಮಾತ್ರವಲ್ಲದೆ ಅನ್ಯ ಸಮಾಜದವರಿಂದಲೂ…
ಮೂಡುಬಿದಿರೆಯಲ್ಲಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ನಾಲ್ಕನೇ ಶಾಖೆ ಉದ್ಘಾಟಿಸಿ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಶುಭಾಷಯ ಮೂಡುಬಿದಿರೆ: ಹಳೆಯಂಗಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ನೂತನ ನಾಲ್ಕನೇ ಶಾಖೆಯನ್ನು ಮೂಡುಬಿದಿರೆಯಲ್ಲಿ ಸೋಮವಾರ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಜ್ಯೋತಿನಗರದ ಮಹಾಲಸ ಕಟ್ಟಡದಲ್ಲಿ ಉದ್ಘಾಟಿಸಿದರು. https://chat.whatsapp.com/EbVKVnWB6rlHT1mWtsgbch ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸೊಸೈಟಿ ಬ್ಯಾಂಕ್‌ಗಳ ಸ್ಥಾಪನೆ ಸುಲಭ, ಕರ್ನಾಟಕ ರಾಜ್ಯದಲ್ಲಿ ಸಹಕಾರಿ ಕ್ಷೇತ್ರ ಪ್ರಗತಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಹಕಾರಿ ಬ್ಯಾಂಕುಗಳು ಲಾಭದಾಯಕವಾಗಿ ನಡೆಯುತ್ತಿದೆ. ವಸಂತ್ ಬೆರ್ನಾರ್ಡ್ ಅಧ್ಯಕ್ಷರಾಗಿರುವ ಪ್ರಿಯದರ್ಶಿನಿ ಸೊಸೈಟಿಯ ನಾಲ್ಕನೇ ಶಾಖೆ ಇದಾಗಿದ್ದು ಅತಿವೇಗದಲ್ಲೇ ಹತ್ತನೇ ಶಾಖೆಯೂ ಉದ್ಘಾಟನೆಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಮೂಲ್ಕಿ ಅರಮನೆಯ ಅರಸರಾದ ದುಗ್ಗಣ್ಣ ಸಾವಂತರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಸಚಿವರಾದ ಕೆ.ಅಭಯಚಂದ್ರ, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ, ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ…
ಕಲ್ಲಡ್ಕ: ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘ ನಿಯಮಿತ ಕಲ್ಲಡ್ಕ ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಕಲ್ಲಡ್ಕ ಶ್ರೀರಾಮ ಮಂದಿರದ ಮಾಧವ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಕೆ.ಪದ್ಮನಾಭ ಕೊಟ್ಟಾರಿ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು. https://chat.whatsapp.com/EbVKVnWB6rlHT1mWtsgbch ಸಂಘವು 2024-25ನೇ ಆರ್ಥಿಕ ವರ್ಷದಲ್ಲಿ ರೂ. 486 ಕೋಟಿ ವ್ಯವಹಾರ ನಡೆಸಿ ಆಡಿಟ್ ವರ್ಗೀಕರಣದಲ್ಲಿ “ಎ” ಗ್ರೇಡ್ ಹೊಂದಿ ರೂ.1,55,11,828.70 ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ 12% ಡಿವಿಡೆಂಡ್ ನೀಡುವುದೆಂದು ತೀರ್ಮಾನಿಸಲಾಗಿದೆ ಎಂದು ಕೆ.ಪದ್ಮನಾಭ ಕೊಟ್ಟಾರಿ ಪ್ರಕಟಿಸಿದರು. ಸಂಘವು 2024-2025ನೇ ಆರ್ಥಿಕ ವರ್ಷದಲ್ಲಿ 1495 ಸದಸ್ಯರಿಗೆ ಶೂನ್ಯ ಬಡ್ಡಿದರದಲ್ಲಿ ರೂ. 24.11 ಕೋಟಿ ಮಂಗಳಾ ಕಿಸಾನ್ ಕ್ರೆಡಿಟ್ ಕಾರ್ಡು ಸಾಲ ವಿತರಿಸಿದೆ. 164 ಸದಸ್ಯರಿಗೆ 3% ಬಡ್ಡಿಯಲ್ಲಿ ಕೃಷಿ ಅಭಿವೃದ್ಧಿಗಾಗಿ ರೂ. 4.97 ಕೋಟಿ ಸಾಲ, ಪಶುಗಳ ದೈನಂದಿನ ನಿರ್ವಹಣೆಗಾಗಿ ಶೂನ್ಯ ಬಡ್ಡಿದರದಲ್ಲಿ 25 ಲಕ್ಷ ಸಾಲ, 18 ಸದಸ್ಯರಿಗೆ ರೂ. 1.50 ಕೋಟಿ ಗೃಹ ನಿರ್ಮಾಣ ಸಾಲ ವಿತರಿಸಿದೆ. ಪ್ರಸ್ತುತ ಸಂಘದಲ್ಲಿ…
ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವ ಕೋಟೆಕಾರು ಸಹಕಾರಿ ಬ್ಯಾಂಕ್‌ನ ಜೊತೆ ಗಟ್ಟಿಯಾಗಿ ನಿಲ್ಲಬೇಕು: ಸುನೀಲ್ ಕುಮಾರ್ ಬಜಾಲ್
ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ಭತ್ತ ಕೃಷಿಕರಿಗೆ ಪ್ರೋತ್ಸಾಹ ಧನ ವಿತರಣೆ, ಪ್ರತಿಭಾ ಪುರಸ್ಕಾರ ಪ್ರದಾನ ಉಳ್ಳಾಲ: ನಗರೀಕರಣಕ್ಕೆ ನಮ್ಮಿಂದ ಎಂದಿಗೂ ವಿರೋಧವಿಲ್ಲ. ಆದರೆ ನಗರೀಕರಣದ ನೆಪದಲ್ಲಿ ರೈತರ ಜೀವನಾಡಿಯಾಗಿರುವ ಕೃಷಿಯನ್ನು ಸರ್ವನಾಶ ಮಾಡಿದರೆ ದೇಶದ ಅಭಿವೃದ್ಧಿ ಎಂದಿಗೂ ಸಾಧ್ಯವಿಲ್ಲ. ಕೃಷಿ ಅದರಲ್ಲೂ ಭತ್ತ ಕೃಷಿ ನಶಿಸಿ ಹೋಗುತ್ತಿರುವ ಈ ಕಾಲಘಟ್ಟದಲ್ಲಿ ರೈತರ ಸಂಕಷ್ಟಗಳಿಗೆ ಸ್ಪಂದಿಸಿ ಭತ್ತ ಕೃಷಿಗೆ ಪ್ರೋತ್ಸಾಹ ನೀಡುತ್ತಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಜತೆ ನಾವೆಲ್ಲರೂ ಗಟ್ಟಿಯಾಗಿ ನಿಲ್ಲಬೇಕಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹೇಳಿದ್ದಾರೆ. https://chat.whatsapp.com/EbVKVnWB6rlHT1mWtsgbch ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ಭಾನುವಾರ ಭತ್ತ ಕೃಷಿಕರಿಗೆ ಪ್ರೋತ್ಸಾಹ ಧನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರ್ಥಿಕ ಕ್ಷೇತ್ರಗಳ ಇತಿಮಿತಿ ಮೀರಿ ಏನೆಲ್ಲ ಒಳ್ಳೆಯ ಕೆಲಸ ಮಾಡಬಹುದೋ ಅವೆಲ್ಲವನ್ನೂ ಮಾಡಬಹುದು ಎಂಬುದಕ್ಕೆ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಮಾಡಿ…
ಸುಳ್ಯ: ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 112ನೇ ವಾರ್ಷಿಕ ಮಹಾಸಭೆಯು ಶನಿವಾರ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. https://chat.whatsapp.com/EbVKVnWB6rlHT1mWtsgbch ಸಂಘವು 532.59 ಕೋಟಿ ರೂ. ವ್ಯವಹಾರ ನಡೆಸಿದ್ದು 2.10 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು ದಾಖಲಾಗಿದೆ. ಸಂಘವು 2024-25ನೇ ಸಾಲಿನಲ್ಲಿ 5,036 ಸದಸ್ಯರನ್ನು ಹೊಂದಿದೆ. 8.99 ಕೋಟಿ ರೂ. ಪಾಲು ಬಂಡವಾಳ ಸಂಗ್ರಹಿಸಿ, 53.44 ಕೋಟಿ ರೂ. ಠೇವಣಿ ಹೊಂದಿರದೆ. 41.76 ಕೋಟಿ ರೂ. ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಸಾಲ ಪಡೆದು ರೂ.81.55 ಕೋಟಿ ಸಾಲವನ್ನು ವಿವಿಧ ಉದ್ದೇಶಗಳಿಗೆ ವಿತರಿಸಿದ್ದು, ವಿತರಿಸಿದ ಸಾಲಗಳ ಪೈಕಿ ಶೇ.98.05 ವಸೂಲಾಗಿದೆ. ರೂ.532.59 ಕೋಟಿ ಒಟ್ಟು ವಾರ್ಷಿಕ ವ್ಯವಹಾರ ಮಾಡಲಾಗಿದೆ. ವರದಿ ಸಾಲಿನಲ್ಲಿ ಒಟ್ಟು ರೂ.2,10,67,367 ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಶೇ.10.50 ಡಿವಿಡೆಂಡ್ ವಿತರಿಸಲು ಶಿಫಾರಸ್ಸು ಮಾಡಿದೆ. ಮರಣ ಸಾಂತ್ವನ ನಿಧಿ 7000ಕ್ಕೆ ಏರಿಕೆ ಮಾಡಲಾಗಿದೆ.ಇ ಸ್ಟ್ಯಾಂಪ್…
142.59 ಕೋಟಿ ವಾರ್ಷಿಕ ವ್ಯವಹಾರ, 54 ಲಕ್ಷ ರೂ. ನಿವ್ವಳ ಲಾಭ ಉಜಿರೆ: ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಭಾನುವಾರ ಸಂಘದ ಅಧ್ಯಕ್ಷ ರಂಜನ್ ಜಿ.ಗೌಡ ಅವರ ಅಧ್ಯಕ್ಷತೆಯಲ್ಲಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಬಳಿ ಇರುವ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಿತು. ವರದಿ ಸಾಲಿನಲ್ಲಿ ಸಂಘದಲ್ಲಿ 1688 ಸದಸ್ಯರಿದ್ದು, 2,21,05,718 ರೂ. ಪಾಲು ಬಂಡವಾಳ ಸಂಗ್ರಹವಾಗಿರುತ್ತದೆ. 26,77,01,956 ರೂ. ಠೇವಣಿ ಸಂಗ್ರಹವಾಗಿದೆ. https://chat.whatsapp.com/EbVKVnWB6rlHT1mWtsgbch ವರದಿ ಸಾಲಿನಲ್ಲಿ ಒಟ್ಟು 142.59 ಕೋಟಿ ವ್ಯವಹಾರ ನಡೆಸಿ ರೂ.54,35,515ರಷ್ಟು ಲಾಭ ಗಳಿಸಿದೆ. ಸದಸ್ಯರಿಗೆ 10% ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ರಂಜನ್ ಜಿ. ಗೌಡ ತಿಳಿಸಿದರು. ಸಂಘಕ್ಕೆ ನೂತನ ನಿವೇಶನ ಖರೀದಿಸಿ ಅದಕ್ಕೆ ಸಾಲ ಪಡೆದುಕೊಂಡಿದೆ. ಆ ಸಾಲದ ಉಳಿಕೆ ಮೊತ್ತಕ್ಕೆ ಸದಸ್ಯರ ಡಿವಿಡೆಂಡ್ ಮೊತ್ತ ನೀಡಬೇಕಾಗಿ ವಿನಂತಿಸಿದಾಗ ಸರ್ವ ಸದಸ್ಯರು ಇದಕ್ಕೆ ಒಪ್ಪಿಗೆ ನೀಡಿದರು. ಸಂಘದ ಉಪಾಧ್ಯಕ್ಷ ಶಿವಕಾಂತ ಗೌಡ,…
ಬೆಳ್ತಂಗಡಿ: ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮಹಾಸಭೆ ಸಂಘದ ಅಧ್ಯಕ್ಷ ಹೆಚ್ ಪದ್ಮ ಗೌಡ ಅಧ್ಯಕ್ಷತೆಯಲ್ಲಿ ಭಾನುವಾರ ವಾಣಿ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ನಡೆಯಿತು. https://chat.whatsapp.com/EbVKVnWB6rlHT1mWtsgbch ಸಂಘದ ಅಧ್ಯಕ್ಷ ಪದ್ಮ ಗೌಡ ಮಾತನಾಡಿ ಸಂಘವು ಆರು ವರ್ಷಗಳಿಂದ ಲಾಭದಾಯಕವಾಗಿ ನಡೆಯುತ್ತಿದೆ. ಸಂಘದಿಂದ ಕಡಿಮೆ ಬಡ್ಡಿ ದರದಲ್ಲಿ ವಾಹನ ಸಾಲ, ಜಾಮೀನು ಖರೀದಿ ಸಾಲ, ಗೃಹ ಸಾಲ ಇತ್ಯಾದಿ ಸಾಲಗಳನ್ನು ನೀಡುತ್ತಿದ್ದೇವೆ. ಸೋಮಂತಡ್ಕ ಹಾಗೂ ಕಲ್ಲೇರಿ ಎರಡು ಶಾಖೆಗಳು ಉತ್ತಮ ರೀತಿಯಲ್ಲಿ ನಡೆಯುತ್ತದೆ. ಸಂಘವು ಪ್ರಸಕ್ತ ಸಾಲಿನಲ್ಲಿ 80 ಕೋಟಿ ವ್ಯವಹಾರ ನಡೆಸಿ, 40 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ 10 ಶೇಕಡಾ ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು. ಸಂಘದ ಉಪಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಮಾತನಾಡಿ, ಸೋಮಂತಡ್ಕ ಹಾಗೂ ಕಲ್ಲೇರಿ ಶಾಖೆಯಲ್ಲಿ ಒಳ್ಳೆಯ ರೀತಿಯಲ್ಲಿ ವ್ಯವಹಾರ ನಡೆದು ಶಾಖೆ ಲಾಭದಲ್ಲಿ ಇದೆ. ಆರ್ಥಿಕವಾಗಿ ಮುಂದೆ ಬರಬೇಕು ಎಂಬ ದೃಷ್ಟಿಯಿಂದ ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಪ್ರಾರಂಭ ಮಾಡಿದ್ದೇವೆ.…
ಉಡುಪಿ ಕೆಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯಲ್ಲಿ ಐವನ್ ಡಿಸೋಜ ಅಭಿಮತ ಉಡುಪಿ: ಸಹಕಾರ ಸಂಘಗಳು ಹೆಚ್ಚಿನ ಪತ್ರ ವ್ಯವಹಾರವಿಲ್ಲದೇ, ಸರಳ ರೀತಿಯಲ್ಲಿ ಜನರ ಅವಶ್ಯಕತೆಗಳಿಗೆ ಅನುಗುಣವಾಗಿ ಸಾಲ ಸೌಲಭ್ಯ ಒದಗಿಸುತ್ತವೆ. ಇದರಿಂದಾಗಿ ಜನರು ಸಹಕಾರ ಸಂಘಗಳಲ್ಲಿ ವ್ಯವಹಾರ ನಡೆಸಲು ಹೆಚ್ಚಿನ ಒಲವನ್ನು ತೋರುತ್ತಿದ್ದಾರೆ. ಜನರಲ್ಲಿ ಆರ್ಥಿಕ ಉಳಿತಾಯ ಮನೋಭಾವ ಬೆಳೆಸುವಲ್ಲಿ ಸಹಕಾರ ಕ್ಷೇತ್ರದ ಕೊಡುಗೆ ಮಹತ್ತರದ್ದಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಅಭಿಪ್ರಾಯಪಟ್ಟರು. https://chat.whatsapp.com/EbVKVnWB6rlHT1mWtsgbch ಉಡುಪಿ ಶೋಕಮಾತಾ ದೇವಾಲಯ ಆವರಣದಲ್ಲಿರುವ ‘ಆವೇ ಮರಿಯಾ’ ಸಭಾಂಗಣದಲ್ಲಿ ಉಡುಪಿ ಕೆಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 28ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಸಹಕಾರ ಸಂಘಗಳು ಪ್ರಾಮಾಣಿಕವಾಗಿ ಜನಪರ ಕೆಲಸ ಮಾಡಿದಂತೆ, ಸಾಲ ಪಡೆದ ಸದಸ್ಯರು ಸಮಯಕ್ಕೆ ಸರಿಯಾಗಿ ಸಾಲಗಳನ್ನು ಮರುಪಾವತಿ ಮಾಡಿದ್ದಲ್ಲಿ ಸಂಘವು ಅಭಿವೃದ್ಧಿಯ ಉತ್ತುಂಗಕ್ಕೇರುತ್ತದೆ. ಇಂದು ಸಹಕಾರ ಸಂಘಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸಮನಾಗಿ ಸೇವೆಯನ್ನು ನೀಡಿ, ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದರು. ಉಡುಪಿ ಶೋಕಮಾತಾ ದೇವಾಲಯದ…
