Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ವಸಂತ್ ಬೆರ್ನಾರ್ಡ್ ಅಧ್ಯಕ್ಷತೆಯಲ್ಲಿ ಪ್ರಿಯದರ್ಶಿನಿ ಸೊಸೈಟಿಯ ಹತ್ತನೇ ಶಾಖೆಯೂ ಉದ್ಘಾಟನೆಯಾಗಲಿ
    News

    ವಸಂತ್ ಬೆರ್ನಾರ್ಡ್ ಅಧ್ಯಕ್ಷತೆಯಲ್ಲಿ ಪ್ರಿಯದರ್ಶಿನಿ ಸೊಸೈಟಿಯ ಹತ್ತನೇ ಶಾಖೆಯೂ ಉದ್ಘಾಟನೆಯಾಗಲಿ

    adminBy adminSeptember 8, 2025

    ಮೂಡುಬಿದಿರೆಯಲ್ಲಿ ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿಯ ನಾಲ್ಕನೇ ಶಾಖೆ ಉದ್ಘಾಟಿಸಿ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌ ರಾಜೇಂದ್ರ ಕುಮಾರ್‌ ಶುಭಾಷಯ

    ಮೂಡುಬಿದಿರೆ: ಹಳೆಯಂಗಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿಯ ನೂತನ ನಾಲ್ಕನೇ ಶಾಖೆಯನ್ನು ಮೂಡುಬಿದಿರೆಯಲ್ಲಿ ಸೋಮವಾರ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್‌.ರಾಜೇಂದ್ರ ಕುಮಾ‌ರ್ ಅವರು ಜ್ಯೋತಿನಗರದ ಮಹಾಲಸ ಕಟ್ಟಡದಲ್ಲಿ ಉದ್ಘಾಟಿಸಿದರು.

    https://chat.whatsapp.com/EbVKVnWB6rlHT1mWtsgbch
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸೊಸೈಟಿ ಬ್ಯಾಂಕ್‌ಗಳ ಸ್ಥಾಪನೆ ಸುಲಭ, ಕರ್ನಾಟಕ ರಾಜ್ಯದಲ್ಲಿ ಸಹಕಾರಿ ಕ್ಷೇತ್ರ ಪ್ರಗತಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಹಕಾರಿ ಬ್ಯಾಂಕುಗಳು ಲಾಭದಾಯಕವಾಗಿ ನಡೆಯುತ್ತಿದೆ. ವಸಂತ್ ಬೆರ್ನಾರ್ಡ್ ಅಧ್ಯಕ್ಷರಾಗಿರುವ ಪ್ರಿಯದರ್ಶಿನಿ ಸೊಸೈಟಿಯ ನಾಲ್ಕನೇ ಶಾಖೆ ಇದಾಗಿದ್ದು ಅತಿವೇಗದಲ್ಲೇ ಹತ್ತನೇ ಶಾಖೆಯೂ ಉದ್ಘಾಟನೆಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.


    ಮೂಲ್ಕಿ ಅರಮನೆಯ ಅರಸರಾದ ದುಗ್ಗಣ್ಣ ಸಾವಂತರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಸಚಿವರಾದ ಕೆ.ಅಭಯಚಂದ್ರ, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ, ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಐಕಳಬಾವ ದೇವಿಪ್ರಸಾದ್‌ ಶೆಟ್ಟಿ, ಚೌಟರ ಅರಮನೆಯ ಕುಲದೀಪ್‌ ಎಂ, ಕ್ರಿಸ್ತ ಶಾಂತಿ ಚರ್ಚ್‌ ಸಭಾಪಾಲಕ ರೆ.ಸಂತೋಷ್ ಕುಮಾರ್, ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸೂರ್ಯಕುಮಾರ್, . ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್, ನ್ಯಾಯವಾದಿ ಶರತ್ ಶೆಟ್ಟಿ, ಮೂಡುಬಿದಿರೆ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ಹರ್ಷವರ್ಧನ ಪಡಿವಾಳ್‌, ಶಿರ್ತಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಪ್ರವೀಣ್ ಕುಮಾ‌ರ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಪುಚ್ಚೆಮೊಗರು ಇರುವೈಲು ಇದರ ಅಧ್ಯಕ್ಷರಾದ ಕುಮಾ‌ರ್ ಪೂಜಾರಿ, ದೇವಾಡಿಗ ಸುಧಾರಕ ಸೇವಾ ಸಂಘದ ಅಧ್ಯಕ್ಷರಾದ ಪುರಂದರ ದೇವಾಡಿಗ, ಪುರಸಭೆ ಸದಸ್ಯರಾದ ಇಕ್ಬಾಲ್‌ ಕರೀಮ್, ಲಯನ್ಸ್ ಕ್ಲಬ್ 317 ಡಿ ಇದರ ವಲಯ ಅಧ್ಯಕ್ಷರಾದ ಜೊಸ್ಸಿ ಮಿನೇಜಸ್, ಪ್ರಮುಖರಾದ ದೇವದಾಸ್‌ ಭಟ್, ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿಯ ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ, ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಶಾಖಾ ಪ್ರಬಂಧಕರಾದ ಅಭಿಷ್ಮಾ ಜೈನ್, ನಿರ್ದೇಶಕರಾದ ಗಣೇಶ್‌ ಕುಮಾ‌ರ್, ಧನಂಜಯ ಮಟ್ಟು, ಗೌತಮ್ ಜೈನ್, ತನುಜಾ ಶೆಟ್ಟಿ, ನವೀನ್ ಸಾಲಿಯಾನ್ ಪಂಜ, ಲೆಕ್ಕಿಗರಾದ ಲೋಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.
    ಎಸ್‌.ಸಿ.ಡಿ.ಸಿ.ಸಿ. ಬ್ಯಾಂಕ್‌ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್‌ ಅವರನ್ನು ಸನ್ಮಾನಿಸಲಾಯಿತು. ಸೊಸೈಟಿ ಅಧ್ಯಕ್ಷರಾದ ವಸಂತ್ ಬೆರ್ನಾರ್ಡ್ ಸ್ವಾಗತಿಸಿದರು. ಅಕ್ಷತಾ ಎಂ.ಶೆಟ್ಟಿ, ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Dr.M.N.Rajendra Kumar H.Vasanth Bernad Priyadarshini Co Operative Society Haleyangadi SCDCC Bank
    Previous Articleಕಲ್ಲಡ್ಕ ರೈತರ ಸೇವಾ ಸಹಕಾರ ಸಂಘಕ್ಕೆ 1.55 ಕೋಟಿ ರೂ. ಲಾಭ, ಸದಸ್ಯರಿಗೆ 12% ಡಿವಿಡೆಂಡ್
    Next Article ದೇವಮಾನವ ಕೀರ್ತಿಶೇಷ ಪಾಲ್ಕೆ ಬಾಬುರಾಯ ಆಚಾರ್ಯರ ತ್ಯಾಗ, ಸೇವೆ, ಸಮರ್ಪಣಾ ಭಾವಗಳ ನೆನಪು ಬದುಕಿಗೆ ದಾರಿದೀಪ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.