ಸುಳ್ಯ: ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 112ನೇ ವಾರ್ಷಿಕ ಮಹಾಸಭೆಯು ಶನಿವಾರ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
https://chat.whatsapp.com/EbVKVnWB6rlHT1mWtsgbch
ಸಂಘವು 532.59 ಕೋಟಿ ರೂ. ವ್ಯವಹಾರ ನಡೆಸಿದ್ದು 2.10 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು ದಾಖಲಾಗಿದೆ.
ಸಂಘವು 2024-25ನೇ ಸಾಲಿನಲ್ಲಿ 5,036 ಸದಸ್ಯರನ್ನು ಹೊಂದಿದೆ. 8.99 ಕೋಟಿ ರೂ. ಪಾಲು ಬಂಡವಾಳ ಸಂಗ್ರಹಿಸಿ, 53.44 ಕೋಟಿ ರೂ. ಠೇವಣಿ ಹೊಂದಿರದೆ. 41.76 ಕೋಟಿ ರೂ. ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಸಾಲ ಪಡೆದು ರೂ.81.55 ಕೋಟಿ ಸಾಲವನ್ನು ವಿವಿಧ ಉದ್ದೇಶಗಳಿಗೆ ವಿತರಿಸಿದ್ದು, ವಿತರಿಸಿದ ಸಾಲಗಳ ಪೈಕಿ ಶೇ.98.05 ವಸೂಲಾಗಿದೆ. ರೂ.532.59 ಕೋಟಿ ಒಟ್ಟು ವಾರ್ಷಿಕ ವ್ಯವಹಾರ ಮಾಡಲಾಗಿದೆ. ವರದಿ ಸಾಲಿನಲ್ಲಿ ಒಟ್ಟು ರೂ.2,10,67,367 ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಶೇ.10.50 ಡಿವಿಡೆಂಡ್ ವಿತರಿಸಲು ಶಿಫಾರಸ್ಸು ಮಾಡಿದೆ. ಮರಣ ಸಾಂತ್ವನ ನಿಧಿ 7000ಕ್ಕೆ ಏರಿಕೆ ಮಾಡಲಾಗಿದೆ.ಇ ಸ್ಟ್ಯಾಂಪ್ ಸಾಮಾನ್ಯ ಸೇವಾ ಕೇಂದ್ರದಲ್ಲಿ ಮತ್ತೆ ಆರಂಭಿಸಲಾಗುವುದು. ಸಂಘದ ಕಾರ್ಯಕ್ಷೇತ್ರದಲ್ಲಿ ಬಡ ಕುಟುಂಬದ ದತ್ತು ಸ್ವೀಕಾರ, ಗ್ರಾಮಗಳ ರಸ್ತೆಗಳ ಪುನಶ್ಚೇತನಕ್ಕೆ ಸಹಕಾರ, ಸಹಕಾರ ಮಾರ್ಟ್ , ಜಾಮೀನು ಸಾಲ ರೂ.50000ಕ್ಕೆ ಏರಿಸುವುದು ಮೊದಲಾದ ವಿಷಯಗಳ ಬಗ್ಗೆ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಮಾಹಿತಿ ನೀಡಿದರು.

ಪಿಯುಸಿ-ಎಸ್ ಎಸ್ ಎಲ್ ಸಿ ಸಾಧಕರಿಗೆ ಪ್ರೋತ್ಸಾಹ ಧನ: ಸಂಘದ ವಿದ್ಯಾನಿಧಿ ಯೋಜನೆಯಲ್ಲಿ ಪಂಜ ಸರಕಾರಿ ಪ್ರೌಢಶಾಲೆ, ಪಂಜ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆ ಹಾಗೂ ದ್ವಿತೀಯ ಪಿ.ಯು.ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ತಲಾ ಇಬ್ಬರನ್ನು ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
ಬಳ್ಪ ಕಾರ್ಜ ಶಿವರಾಮ ಗೌಡರ ಪುತ್ರಿ ಪಂಜ ಮೊರಾರ್ಜಿ ದೇಸಾಯಿ ಪ್ರೌಢಶಾಲಾ ವಿದ್ಯಾರ್ಥಿನಿ ಯೋಗಿತಾ ಕೆ. ಎಸ್ ಕೇನ್ಯ, ಕಲ್ಮಲೆ ಗುಡ್ಡೆ ಗಿರಿಯಪ್ಪರ ಪುತ್ರಿ ಪಂಜ ಮೊರಾರ್ಜಿ ದೇಸಾಯಿ ಪ್ರೌಢಶಾಲಾ ವಿದ್ಯಾರ್ಥಿನಿ ಗುಣಶ್ರೀ, ಕೂತ್ಕುಂಜ ಚಿದ್ಗಲ್ ಸತ್ಯನಾರಾಯಣರ ಪುತ್ರಿ ಪಂಜ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಪ್ರಜ್ಞಾ ಸಿ, ಐವತ್ತೊಕ್ಲು ಗ್ರಾಮದ ಪೊಳೆಂಜ ಅಣ್ಣಪ್ಪರ ಪುತ್ರಿ ಪಂಜ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಜಯಶ್ರೀ ಪಿ, ಐವತ್ತೊಕ್ಲು ಗ್ರಾಮದ ನೇರಳ ಹರಿಶ್ಚಂದ್ರರ ಪುತ್ರಿ ಪಂಜ ಸರಕಾರಿ ಪ.ಪೂ. ಕಾಲೇಜು ವಿದ್ಯಾರ್ಥಿನಿ ಶರಣ್ಯ ಕುಮಾರಿ ಎನ್, ಪಂಜದ ನೆಲ್ಲಿಕಟ್ಟೆ ಮೊಹಮ್ಮದ್ ಹನೀಫರ ಪುತ್ರಿ ಪಂಜ ಪ.ಪೂ. ಕಾಲೇಜು ವಿದ್ಯಾರ್ಥಿನಿ ಆಯಿಶತ್ ಹಫೀಝ, ಕೂತ್ಕುಂಜ ಗ್ರಾಮದ ಪುತ್ಯ ಸಾಂತಪ್ಪ ಗೌಡರ ಪುತ್ರಿ ಪಂಜ ಪ.ಪೂ. ಕಾಲೇಜು ವಿದ್ಯಾರ್ಥಿನಿ ಪ್ರಜ್ಞಾ ಪಿ, ಕೂತ್ಕುಂಜ ಕಲ್ಕ ನಾರಾಯಣ ಕೆ ಯವರ ಪುತ್ರಿ ಪಂಜ ಪ.ಪೂ. ಕಾಲೇಜು ವಿದ್ಯಾರ್ಥಿನಿ ಶ್ರಾವ್ಯ ಎನ್.ಕೆ ಪ್ರೋತ್ಸಾಹಧನ ಗೌರವ ಸ್ವೀಕರಿಸಿದರು.
ಅಧಿಕ ವ್ಯವಹಾರ ಮಾಡಿದ ಸದಸ್ಯರಿಗೆ ಗೌರವಾರ್ಪಣೆ:
2024- 25ನೇ ಸಾಲಿನಲ್ಲಿ ಅತ್ಯಧಿಕ ವ್ಯವಹಾರ ಮಾಡಿರುವ ಸದಸ್ಯರನ್ನು ಗೌರವಿಸಲಾಯಿತು. ಸಂಘದ ಮೂಲಕ ಅತ್ಯಧಿಕ ಅಡಿಕೆ ಮಾರಾಟ ಮಾಡಿದ ಗಂಗಾಧರ ಶಾಸ್ತ್ರಿ ಸಿ.ಪುತ್ಯ, ವೆಂಕಟ್ರಮಣ ಕೆ.ಗುಂಡಡ್ಕ, ಅತ್ಯಧಿಕ ಕರಿಮೆಣಸು ಮಾರಾಟ ಮಾಡಿದ ಶಿವರಾಮಯ್ಯ ಹೆಚ್ ಕರ್ಮಾಜೆ, ಪ್ರಕಾಶ್ ಭಟ್ ಎಡಪತ್ಯ, ಅತ್ಯಧಿಕ ಕೊಕ್ಕೋ ಮಾರಾಟ ಮಾಡಿದ ನಾಗೇಶ್ ಕಿನ್ನಿಕುಮೇರಿ, ಗಿರಿಧರ ಬಿಡಾರಕಟ್ಟೆ, ಅತ್ಯಧಿಕ ರಬ್ಬರ್ ಮಾರಾಟ ಮಾಡಿದ ಕೇಶವ ಗೌಡ ಕುದ್ವ, ಶರತ್ ಪುರಿಯ, ಅತ್ಯಧಿಕ ಗೊಬ್ಬರ ಖರೀದಿ ಚಂದ್ರಶೇಖರ ಶಾಸ್ತ್ರಿ, ಕುಸುಮಾಧರ ಪುರಿಯ, ಅತ್ಯಧಿಕ ಪೈಪು ಮತ್ತು ಬಿಡಿ ಭಾಗ ಖರೀದಿ ದಿನೇಶ್ ಎಣ್ಣೆಮಜಲು, ವಾರಿಜ ನರಿಯಂಗ,ಅತ್ಯಧಿಕ ಗೃಹ ಬಳಕೆ ಸಾಮಗ್ರಿ ಖರೀದಿ ನಾಗರಾಜ ಮಲ್ಕಜೆ, ಸುರೇಂದ್ರ ಎಣ್ಣೆಮಜಲು, ಅತ್ಯುತ್ತಮ ಗ್ರಾಹಕರು ಶಿವರಾಮಯ್ಯ ಎಚ್ ಕರ್ಮಾಜೆ, ರುಕ್ಮಿಣಿ ಬಿ. ಸಿ ಕೃಷ್ಣನಗರ ಗೌರವ ಸ್ವೀಕರಿಸಿದರು.

ಕ್ರೀಡಾ ಕ್ಷೇತ್ರದ ವಿಶೇಷ ಸಾಧನೆಯ ಗುರುತಿಸಿ ಕ್ರೀಡಾಪಟು ಕು.ಜಸ್ಮಿತಾ ಕೊಡೆಂಕಿರಿ -ಬಲ್ಪ ಅವರನ್ನು ಸನ್ಮಾನಿಸಲಾಯಿತು. ಸಂಘದಲ್ಲಿ ಸಿಬ್ಬಂದಿಯಾಗಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹೊನ್ನಪ್ಪ ಗೌಡ ದಂಪತಿಗಳನ್ನು ಸನ್ಮಾನಿಸಲಾಯಿತು.
ಅತ್ಯುತ್ತಮ ನವೋದಯ ಸ್ವ-ಸಹಾಯ ಗುಂಪುಗಳಾಗಿ ಶ್ರೀ ಚಾಮುಂಡೇಶ್ವರಿ ನವೋದಯ ಸ್ವ-ಸಹಾಯ ಸಂಘ ಕೆರೆಮೂಲೆ-ಐವತ್ತೊಕ್ಲು, ಮಯೂರ ನವೋದಯ ಸ್ವ-ಸಹಾಯ ಸಂಘ ಬಳ್ಪ, ಮಹಾಲಕ್ಷ್ಮಿ ಮಹಿಳಾ ನವೋದಯ ಸ್ವ-ಸಹಾಯ ಸಂಘ ಕೇನ್ಯ, ಪ್ರಕೃತಿ ಮಹಿಳಾ ನವೋದಯ ಸ್ವ-ಸಹಾಯ ಸಂಘ ಕೂತ್ಕುಂಜ ಇವರು ಗೌರವ ಸ್ವೀಕರಿಸಿದರು.
ಸಾಲವನ್ನು ವಾಯಿದೆಗೆ ಸರಿಯಾಗಿ ಮರುಪಾವತಿಸಿದ ಎಲ್ಲಾ ಸದಸ್ಯರ ಪೈಕಿ ಸ್ಥಳದಲ್ಲಿ ಅದೃಷ್ಟ ಚೀಟಿ ತೆಗೆದು ಐವರನ್ನು ಗೌರವಿಸಲಾಯಿತು. ಕ್ಲಪ್ತ ಸಮಯದಲ್ಲಿ
ಸಾಲ ಮರು ಪಾವತಿ ಮಾಡಿದ ಐದು ಸದಸ್ಯರನ್ನು ಚೀಟಿ ತೆಗೆದು ಗುರುತಿಸಲಾಯಿತು. ಗಿರಿಜಾ ಕಣ್ಕಲ್, ಪೂರ್ಣಿಮಾ ರೈ ಕೇನ್ಯ, ಪದ್ಮಾವತಿ ಬೇರ್ಯ, ಮೀನಾಕ್ಷಿ ಬಳ್ಪ ವಿಜೇತರು.
ಮಹಾಸಭೆಯಲ್ಲಿ ಹಾಜರಿದ್ದ ಅದೃಷ್ಟ ಶಾಲಿ ಸದಸ್ಯರನ್ನು ಲಕ್ಕಿ ಚೀಟಿ ತೆಗೆದು ಆಯ್ಕೆ ಮಾಡಿ ಸಂಘದ ಪೂರ್ವಾಧ್ಯಕ್ಷ ಆನಂದ ಗೌಡ ಕಂಬಳರವರ ಪ್ರಾಯೋಜಕತ್ವದಲ್ಲಿ ಸೀರೆ ನೀಡಲಾಯಿತು. ಎಲ್ಯಣ್ಣ ಗೌಡ ಕಟ್ಟ, ರುಕ್ಮಿಣಿ ಪಾಂಡಿಗದ್ದೆ, ಸುನೀಲ್ ತೋಟ, ಮೀನಾಕ್ಷಿ, ವನಜಾ ನಾಗತೀರ್ಥ, ಗೋಪಾಲ ಗೌಡ ಅಳ್ಪೆ, ಕಾರ್ಯಪ್ಪ ಗೌಡ ಚಿದ್ಗಲ್ಲು, ಗಿರಿಜಾ ಕೇನ್ಯ, ದಾಮೋದರ ನಾಯ್ಕ ಪುಂಡುಕಾಯರ, ಭವಾನಿ ನಾಗತೀರ್ಥ ಬಹುಮಾನ ಪಡೆದರು.
ಇದೇ ವೇಳೆ ಸಂಘದ ವತಿಯಿಂದ ಮರಣ ಸಾಂತ್ವನ ಧನ ಸಹಾಯ ಮತ್ತು ಅನಾರೋಗ್ಯದವರಿಗೆ ಚಿಕಿತ್ಸೆಗೆ ಧನ ಸಹಾಯ ನೀಡಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸದಾನಂದ ಕಾರ್ಜ ,ನಿರ್ದೇಶಕರಾದ ಸುಬ್ರಹ್ಮಣ್ಯ ಕುಳ, ಲಿಗೋಧರ ಆಚಾರ್ಯ,ವಾಚಣ್ಣ ಕೆರೆಮೂಲೆ, ಚಿನ್ನಪ್ಪ ಗೌಡ ಚೊಟ್ಟೆಮಜಲು,ಅರುಣ್ ರೈ ಗೆಜ್ಜೆ , ವಾಸುದೇವ ಕೆರೆಕ್ಕೋಡಿ, ತಿಮ್ಮಪ್ಪ ಕೂತ್ಕುಂಜ, ವನಿತಾ ಅತ್ಯಡ್ಕ, ಬೇಬಿ ಕಟ್ಟ, ಮುದರ ಐವತ್ತೊಕ್ಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ಉಪಸ್ಥಿತರಿದ್ದರು.
ಮಹಾಸಭೆಯಲ್ಲಿ ಸದಸ್ಯರ ಹಾಜರಾತಿಯಾಗಿದ್ದು ದಾಖಲೆಯಾಗಿದೆ.
ಕಾರ್ಯಕ್ರಮದಲ್ಲಿ ಮಹಾಲಿಂಗ ಸಂಪ ಪ್ರಾರ್ಥಿಸಿದರು. ಹಿರಿಯ ಸದಸ್ಯ ವೆಂಕಟ್ರಮಣ ಗೌಡ ಬಿಡಾರಕಟ್ಟೆ ದೀಪ ಬೆಳಗಿಸಿದರು. ಚಂದ್ರಶೇಖರ ಶಾಸ್ತ್ರಿ ಸ್ವಾಗತಿಸಿದರು. ನೇಮಿರಾಜ ಪಲ್ಲೋಡಿ ವರದಿ ವಾಚಿಸಿದರು.ಸತ್ಯದೀಪ್ ಯಂ ಆರ್ ನಿರೂಪಿಸಿದರು. ಸುದೀಪ್ ರೈ ಸನ್ಮಾನ ಪತ್ರ ವಾಚಿಸಿದರು. ಸುಬ್ರಹ್ಮಣ್ಯ ಕುಳ ವಂದಿಸಿದರು.

