Close Menu
    Top News

    ಕಾರ್ಯದಕ್ಷತೆ, ಸೇವಾ ಮನೋಭಾವ, ವಿಶ್ವಾಸಾರ್ಹತೆ ಮೂಲಕ ಸಹಕಾರಿ ಸಂಘದ ಬೆಳವಣಿಗೆ

    July 1, 2026

    ವಿಶೇಷ ಸಹಕಾರ ಸಪ್ತಾಹ: ಗಿಡ ನೆಟ್ಟ ಮೈಸೂರು ಲಕ್ಷ್ಮೀಪುರಂನ ವಿದ್ಯಾರ್ಥಿಗಳು

    July 1, 2026

    ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಐದನೇ ಶಾಖೆ ಉಪ್ಪಿನಂಗಡಿಯಲ್ಲಿ ಜುಲೈ 4ರಂದು ಲೋಕಾರ್ಪಣೆ

    June 30, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಕಾರ್ಯದಕ್ಷತೆ, ಸೇವಾ ಮನೋಭಾವ, ವಿಶ್ವಾಸಾರ್ಹತೆ ಮೂಲಕ ಸಹಕಾರಿ ಸಂಘದ ಬೆಳವಣಿಗೆ
    News

    ಕಾರ್ಯದಕ್ಷತೆ, ಸೇವಾ ಮನೋಭಾವ, ವಿಶ್ವಾಸಾರ್ಹತೆ ಮೂಲಕ ಸಹಕಾರಿ ಸಂಘದ ಬೆಳವಣಿಗೆ

    adminBy adminJuly 1, 2026

    ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ತರಬೇತಿ ಕಾರ್ಯಾಗಾರದಲ್ಲಿ ಬೆಳಪು ಡಾ.ದೇವಿಪ್ರಸಾದ್ ಶೆಟ್ಟಿ ಅಭಿಪ್ರಾಯ

    ಮೂಲ್ಕಿ: ಕೇಂದ್ರ ಸಹಕಾರ ಸಚಿವಾಲಯಕ್ಕೆ ಐದು ವರ್ಷ ಪೂರ್ಣಗೊಂಡ ಪ್ರಯುಕ್ತ ಆಯೋಜಿಸಲಾಗುತ್ತಿರುವ ವಿಶೇಷ ಸಹಕಾರ ಸಪ್ತಾಹದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಇಲಾಖೆಯ ನೇತೃತ್ವದಲ್ಲಿ ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಅಶ್ರಯದಲ್ಲಿ ಮೂಲ್ಕಿ ತಾಲೂಕು ಮಟ್ಟದ ಸಹಕಾರ ಸಂಘಗಳ ನಿರ್ದೇಶಕರು ಮತ್ತು ಸಿಬ್ಬಂದಿಗಳಿಗೆ ಬುಧವಾರ ಸಹಕಾರ ಸಂಘಗಳ ನಿರ್ವಹಣೆಯಲ್ಲಿ ನಮ್ಮ ಪಾತ್ರ ಎಂಬ ವಿಷಯದ ಬಗ್ಗೆ ತರಬೇತಿ ಕಾರ್ಯಾಗಾರ ಹಳೆಯಂಗಡಿಯ ಹರಿಓಂ ಸಭಾಂಗಣದಲ್ಲಿ ನಡೆಯಿತು.

    https://chat.whatsapp.com/FCEnlTkAKCC0MGPhXtX4i4
    ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಾಗೂ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಡಾ.ಐಕಳಬಾವ ದೇವಿಪ್ರಸಾದ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರು ಅವರಿಂದ ಆರಂಭಗೊಂಡ ಸಹಕಾರಿ ಚಳವಳಿ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮೊಳಹಳ್ಳಿ ಶಿವರಾಯರು ಮತ್ತು ಕಾರ್ನಾಡ್ ಶಿವರಾಯರು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಬಹಳಷ್ಟು ಕೊಡುಗೆ ನೀಡಿದ್ದರಿಂದ ಸಹಕಾರಿ ಕ್ಷೇತ್ರ ಬಹಳಷ್ಟು ಮಟ್ಟಿಗೆ ಬೆಳೆದು ಬಂದಿದೆ. ಕಾರ್ಯದಕ್ಷತೆ, ಸೇವಾ ಮನೋಭಾವ, ವಿಶ್ವಾಸಾರ್ಹತೆ ಮೂಲಕ ಸಹಕಾರಿ ಸಂಘದ ಬೆಳವಣಿಗೆ ಸಾಧ್ಯ. ಸಹಕಾರಿ ಕ್ಷೇತ್ರವು ಅದ್ಭುತ ಶಕ್ತಿಯಾಗಿದ್ದು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಕ್ತವಾಗಿ ಪಾಲ್ಗೊಳ್ಳಲು ಅವಕಾಶವಿದೆ ಎಂದರು. 
    ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪ್ರತಿಸ್ಪರ್ಧಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಸಹಕಾರಿ ಬ್ಯಾಂಕ್ ಜನರ ವಿಶ್ವಾಸಾರ್ಹತೆ ಗಳಿಸಿದ್ದು, ಅದರ ಅಭಿವೃದ್ಧಿಯ ಹರಿಕಾರ ಡಾ. ಎಂ. ಎನ್‌ ರಾಜೇಂದ್ರ ಕುಮಾರ್ ಅವರ ಪ್ರೇರಣೆಯಿಂದ ಸಂಸ್ಥೆ ಬಹಳಷ್ಟು ಎತ್ತರಕ್ಕೆ ಬೆಳೆದಿದೆ. ಇದು ಉಳಿದ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಲಿ ಎಂದು ಹಾರೈಸಿದರು.
    ಮುಖ್ಯ ಅತಿಥಿ, ಪಡುಬಿದ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಮಾತನಾಡಿ ಸಹಕಾರಿ ಸಂಘಗಳಲ್ಲಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಎರಡು ಚಕ್ರಗಳು ಇದ್ದಂತೆ. ಗ್ರಾಹಕರ ಜೊತೆ ಅನ್ಯೋನ್ಯತೆ ಇದ್ದರೆ ಸಂಘದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
    ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್ ಅಧ್ಯಕ್ಷತೆ ವಹಿಸಿದ್ದರು. ಸ್ವಸಹಾಯ ಸಂಘದ ಪ್ರೇರಕಿ ನೀತು ನಿರಂಜಲ ಪ್ರಾರ್ಥಿಸಿದರು. ಸೊಸೈಟಿ ಅಧ್ಯಕ್ಷ ಎಚ್.ವಸಂತ್ ಬೆರ್ನಾಡ್ ಸ್ವಾಗತಿಸಿದರು, ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ಸುದರ್ಶನ್ ಧನ್ಯವಾದ ಅರ್ಪಿಸಿದರು. ಲೆಕ್ಕಿಗ ಲೋಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರ ಹಾಗೂ ಕರ್ನಾಟಕ ಸಹಕಾರ ಸಂಘಗಳ ತರಬೇತಿದಾರ, ವಕೀಲ ಶ್ರೀಧರ್ ಪಿ.ಎಸ್ ಸಹಕಾರ ಸಂಘಗಳ ನಿರ್ವಹಣೆಯಲ್ಲಿ ನಮ್ಮ ಪಾತ್ರದ ಬಗ್ಗೆ ತರಬೇತಿ ಕಾರ್ಯಾಗಾರ ನಡೆಸಿಕೊಟ್ಟರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Belapu Deviprasad Shetty H.Vasanth Bernad Jawaharlal Nehru Karnad Sadashiva Rao Molahalli Shivarao Priyadarshini Co Operative Society Haleyangadi Special Co Operative Week
    Previous Articleವಿಶೇಷ ಸಹಕಾರ ಸಪ್ತಾಹ: ಗಿಡ ನೆಟ್ಟ ಮೈಸೂರು ಲಕ್ಷ್ಮೀಪುರಂನ ವಿದ್ಯಾರ್ಥಿಗಳು

    Related Posts

    ವಿಶೇಷ ಸಹಕಾರ ಸಪ್ತಾಹ: ಗಿಡ ನೆಟ್ಟ ಮೈಸೂರು ಲಕ್ಷ್ಮೀಪುರಂನ ವಿದ್ಯಾರ್ಥಿಗಳು

    July 1, 2026

    ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಐದನೇ ಶಾಖೆ ಉಪ್ಪಿನಂಗಡಿಯಲ್ಲಿ ಜುಲೈ 4ರಂದು ಲೋಕಾರ್ಪಣೆ

    June 30, 2026

    ಕಥೊಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಬ್ರಹ್ಮಾವರದ ಸಿಬ್ಬಂದಿ ತರಬೇತಿ ಕಾರ್ಯಾಗಾರ

    June 30, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಕಾರ್ಯದಕ್ಷತೆ, ಸೇವಾ ಮನೋಭಾವ, ವಿಶ್ವಾಸಾರ್ಹತೆ ಮೂಲಕ ಸಹಕಾರಿ ಸಂಘದ ಬೆಳವಣಿಗೆ

    July 1, 2026

    ವಿಶೇಷ ಸಹಕಾರ ಸಪ್ತಾಹ: ಗಿಡ ನೆಟ್ಟ ಮೈಸೂರು ಲಕ್ಷ್ಮೀಪುರಂನ ವಿದ್ಯಾರ್ಥಿಗಳು

    July 1, 2026

    ವಿಟ್ಲ ಗ್ರಾಮೀಣ ಸಹಕಾರಿ ಸಂಘದ ಐದನೇ ಶಾಖೆ ಉಪ್ಪಿನಂಗಡಿಯಲ್ಲಿ ಜುಲೈ 4ರಂದು ಲೋಕಾರ್ಪಣೆ

    June 30, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.