ಮಂಗಳೂರು: ವಿಶ್ವಕರ್ಮ ಸಹಕಾರ ಬ್ಯಾಂಕ್ ತನ್ನ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಸ್ವಚ್ಛ ಭಾರತ್ ಅಭಿಯಾನದ ಹತ್ತನೇ ಕಾರ್ಯಕ್ರಮ ನವೆಂಬರ್ 30ರಂದು ಭಾನುವಾರ ಮೆಲ್ಕಾರ್‌ನಲ್ಲಿ ಬೆಳಗ್ಗೆ 7.30ರಿಂದ 9ರ ತನಕ ನಡೆಯಲಿದೆ.
https://chat.whatsapp.com/JVAtKKe2M19AFO3W5629ZS?mode=ems_copy_t
ಸ್ವಚ್ಛತಾ ಹೀ ಸೇವಾ ಎಂಬ ಧ್ಯೇಯದಡಿ ವಿಶ್ವಕರ್ಮ ಸಹಕಾರ ಬ್ಯಾಂಕ್ ತಮ್ಮ ಐದೂ ಶಾಖೆಗಳ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸುತ್ತಿದೆ. ಭಾನುವಾರ ಮೆಲ್ಕಾರ್ ಶಾಖೆಯ ನೇತೃತ್ವದಲ್ಲಿ ಶ್ರೀ ಸತ್ಯದೇವತೆ ಕಲ್ಲುರ್ಟಿ ದೈವಸ್ಥಾನ, ಶ್ರೀ ವೀರ ವಿಠ್ಠಲ ದೇವಸ್ಥಾನ ಪಾಣೆಮಂಗಳೂರು ಪರಿಸರದಲ್ಲಿ ಸ್ವಚ್ಛತಾ ಶ್ರಮದಾದನ ಜರುಗಲಿದ್ದು, ಈ ಸಾಮಾಜಿಕ ಕಾರ್ಯದಲ್ಲಿ ಭಾಗವಹಿಸಿ ಸ್ವಚ್ಛಂದ ಪರಿಸರದ ರಾಯಭಾರಿಗಳಾಗಬೇಕೆಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

