Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ನಮ್ಮ ಪರಿಸರ ನೈರ್ಮಲ್ಯ ನಮ್ಮದೇ ಹೊಣೆ
    News

    ನಮ್ಮ ಪರಿಸರ ನೈರ್ಮಲ್ಯ ನಮ್ಮದೇ ಹೊಣೆ

    adminBy adminJanuary 5, 2026

    ವಿಶ್ವಕರ್ಮ ಸಹಕಾರ ಬ್ಯಾಂಕ್‌ ಮೆಲ್ಕಾರ್‌ ಶಾಖೆ ವತಿಯಿಂದ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಚೆನ್ನಪ್ಪ ಆರ್. ಕೋಟ್ಯಾನ್ ಹೇಳಿಕೆ

    ಬಂಟ್ವಾಳ: ಪರಿಸರ ನೈರ್ಮಲ್ಯದ ಹೊಣೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಬೇಕು. ಎಲ್ಲರ ಜವಾಬ್ದಾರಿಯುತ ಭಾಗೀದಾರಿಕೆಯಿಂದ ಇದು ಸಾಕಾರವಾಗಬೇಕು. ಈ ನಿಟ್ಟಿನಲ್ಲಿ ವಿಶ್ವಕರ್ಮ ಬ್ಯಾಂಕ್ ಹಮ್ಮಿಕೊಂಡಿರುವ ಸ್ವಚ್ಛತಾ ಶ್ರಮದಾನ ಕಾರ್ಯ ನಮ್ಮೆಲ್ಲರಿಗೆ ಪ್ರೇರಣೆ ಎಂದು ಶ್ರೀರಾಮ ಮಂದಿರದ ಅಧ್ಯಕ್ಷರಾದ ಚೆನ್ನಪ್ಪ ಆರ್.ಕೋಟ್ಯಾನ್ ಹೇಳಿದರು.
    ವಿಶ್ವಕರ್ಮ ಸಹಕಾರ ಬ್ಯಾಂಕಿನ ಮೆಲ್ಕಾರ್ ಶಾಖೆಯ ವತಿಯಿಂದ “ಸ್ವಚ್ಛತಾ ಹೀ ಸೇವಾ” ಧ್ಯೇಯದೊಂದಿಗೆ ನಡೆದ ಹದಿನೈದನೇ ಸ್ವಚ್ಛ ಭಾರತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    https://chat.whatsapp.com/FCEnlTkAKCC0MGPhXtX4i4

    ಯುವ ಸಂಗಮ ಮೆಲ್ಕಾರ್ ಇದರ ಗೌರವಾಧ್ಯಕ್ಷರಾದ ಎಂ.ಎನ್. ಕುಮಾರ್ ಮಾತನಾಡಿ, ವಿಶ್ವಕರ್ಮ ಬ್ಯಾಂಕ್ ಒಂದು ಆರ್ಥಿಕ ಸಂಸ್ಥೆಯಾಗಿ ಸಾಮಾಜಿಕ ಕಾರ್ಯವನ್ನು ನಿರಂತರ ಸಂಘಟಿಸುತ್ತಿರುವುದು ಶ್ಲಾಘನೀಯ ಹಾಗೂ ಇವರೊಂದಿಗೆ ಹೆಚ್ಚಿನ ಸಂಘ ಸಂಸ್ಥೆಗಳು ಕೈಜೋಡಿಸಿ ಸ್ವಚ್ಛತೆಯ ಅರಿವು ಹಾಗೂ ಜಾಗೃತಿಯನ್ನು ಮೂಡಿಸುವತ್ತ ಕಾರ್ಯಪ್ರವೃತ್ತರಾಗಬೇಕೆಂದು ಎಂದು ಹೇಳಿದರು.
    ಬಿಲ್ಲವ ಸಮಾಜ ಸೇವಾ ಸಂಘ ಕಲ್ಲಡ್ಕ ಇದರ ಅಧ್ಯಕ್ಷ ಶೇಖರ್ ಸಾಲಿಯಾನ್‌ ಹಾಗೂ ಎಂ.ಎನ್‌ ಕುಮಾರ್‌ ಸ್ವಚ್ಛತಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಶ್ರಮದಾನಕ್ಕೆ ಚಾಲನೆ ನೀಡಿದರು.


    ಕಲ್ಲಡ್ಕ ಪರಿಸರದ ಮೇಲಿನಪೇಟೆ, ಕೆಳಗಿನಪೇಟೆ, ಶ್ರೀರಾಮ ವಿದ್ಯಾಕೇಂದ್ರ ರಸ್ತೆಯ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಚತಾ ಶ್ರಮದಾನ ನಡೆಯಿತು. ವಿಶ್ವಕರ್ಮ ಬ್ಯಾಂಕಿನ ನಿರ್ದೇಶಕರಾದ ಬಿಜು ಜಯ ಆಚಾರ್ಯ, ಜಯಪ್ರಕಾಶ್ ಭಂಡಾರಿಬೆಟ್ಟು, ಭರತ್ ನಿಡ್ಪಳ್ಳಿ, ಗೋಲ್ತಮಜಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮ, ಶ್ರೀರಾಮ ಮಂದಿರ ಕಲ್ಲಡ್ಕ ಇದರ ಸದಸ್ಯರು, ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಇದರ ವಿದ್ಯಾರ್ಥಿಗಳು, ಶ್ರೀ ಶಾರದಾ ಸೇವಾ ಪ್ರತಿಷ್ಠಾನ ಕಲ್ಲಡ್ಕ ಇದರ ಅಧ್ಯಕ್ಷ ಯತಿನ್ ಕುಮಾರ್ ಹಾಗೂ ಸದಸ್ಯರು, ಬಿಲ್ಲವ ಸಮಾಜ ಸೇವ ಸಂಘ ಕಲ್ಲಡ್ಕ ಇದರ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣಾ ತಂಡ ಗೋಲ್ತಮಜಲು ವಲಯ ಇದರ ಅಧ್ಯಕ್ಷ ಮಾಧವ ಸಾಲಿಯಾನ್ ಹಾಗೂ ಸದಸ್ಯರು, ಯುವ ಸಂಗಮ ಮೆಲ್ಕಾರ್ ಇದರ ಸದಸ್ಯರು, ನಾಗಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ ಇದರ ಅಧ್ಯಕ್ಷ ನಾಗರಾಜ್ ಮತ್ತು ಸದಸ್ಯರು, ಶ್ರೀರಾಮ ಫ್ರೆಂಡ್ಸ್ ಕಲ್ಲಡ್ಕ ಇದರ ಸದಸ್ಯರು, ಕುರ್ಮನ್ ಫ್ರೆಂಡ್ಸ್ ಇದರ ಸದಸ್ಯರು, ವಿಶ್ವಕರ್ಮ ಸಹಕಾರ ಬ್ಯಾಂಕಿನ ಮೆಲ್ಕಾರ್ ಶಾಖಾ ವ್ಯವಸ್ಥಾಪಕರಾದ ಉಷಾ ಕೆ ಹಾಗೂ ಸಿಬ್ಬಂದಿಗಳು ಸೇರಿದಂತೆ ಬೇರೆ ಬೇರೆ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಪದಾಧಿಕಾರಿಗಳು, ಬ್ಯಾಂಕಿನ ಸದಸ್ಯರು , ಗ್ರಾಹಕರು ಸ್ವಯಂಸೇವಕರಾಗಿ ಭಾಗವಹಿಸಿ ಕಾರ್ಯಕ್ರಮದಲ್ಲಿ ಸಹಕರಿಸಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Kalladka Shree Rama Mandira M N Kumar Melkar Vishwakarma Sahakara Bank Limited Yuva Sangama Melkar
    Previous Articleಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರಕ್ಕೆ ಕುಡಿಯುವ ನೀರು ಶುದ್ದೀಕರಣ ಯಂತ್ರ ಕೊಡುಗೆ
    Next Article ಕಸ ಹಾಕುವ ಮನಸ್ಥಿತಿ ತೊರೆಯಲು ಕಸ ಹೆಕ್ಕುವ ಆಂದೋಲನ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.