Author: admin
ಮಂಗಳೂರು: ಇಲ್ಲಿನ ಯೆಯ್ಯಾಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಣವ ಸೌಹಾರ್ದ ಸಹಕಾರಿ ಸಂಘದ ೧೧ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಗ್ರಾಹಕರ ಸಭೆಯು ಜನವರಿ 18ರಂದು ತೋಟಬೆಂಗ್ರೆಯ ಸ್ಯಾಂಡ್ಸ್‌ಪಿಟ್‌ನಲ್ಲಿ ನಡೆಯಲಿದೆ. https://chat.whatsapp.com/FCEnlTkAKCC0MGPhXtX4i4 ಜನವರಿ 18ರ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯ ತನಕ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ನುರಿತ ವೈದ್ಯರ ತಂಡದಿಂದ ಬೆಂಗ್ರೆಯ ಪಡುಹೊಯ್ಗೆ ಮೊಗವೀರ ಗ್ರಾಮ ಸಭಾ ಸಭಾಂಗಣದಲ್ಲಿ ಉಚಿತ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಬಿರ ನಡೆಯಲಿದೆ. ಸಂಜೆ 5 ಗಂಟೆಗೆ ಶ್ರೀ ಶೇಷಶಯನ ಬಯಲು ರಂಗಮಂದಿರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಣವ ಸಂಸ್ಥೆಯ ರಾಜ್ಯ ಪ್ರಶಸ್ತಿ ವಿಜೇತ ಇಬ್ಬರು ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಸಹಕಾರಿ ಕ್ಷೇತ್ರದಲ್ಲಿ ರಾಜ್ಯಮಟ್ಟದ ಸಹಕಾರ ರತ್ನ ಪುರಸ್ಕಾರ ಪಡೆದ ಚೇತನ್ ಬೆಂಗ್ರೆ ಹಾಗೂ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ಪಡೆದ ದೈವನರ್ತಕ ಉಮೇಶ್ ಪಂಬದ ಅವರನ್ನು ಸನ್ಮಾನಿಸಲಾಗುವುದು. ಸಂಜೆ 6 ಗಂಟೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಅರೆಹೊಳೆ ಪ್ರತಿಷ್ಠಾನದವರಿಂದ…
ಬಳ್ಳಾರಿ: ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರ ಸಂಘದ ನಾಲ್ಕನೇ ಶಾಖೆಯು ಹೊಸಪೇಟೆಯಲ್ಲಿ ಫೆಬ್ರವರಿ 8ರಂದು ಲೋಕಾರ್ಪಣೆಗೊಳ್ಳಲಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದ ಹಿಂಭಾಗದ ಜಗದ್ಗುರು ಸಂಗನ ಬಸವ ಸ್ವಾಮಿಗಳ ಮಾರ್ಗ, ಚಿರಂಜೀವಿ ಆಸ್ಪತ್ರೆಯ ಎದುರುಗಡೆಯ ವೀರಶೈವ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಫೆಬ್ರವರಿ ೮ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.https://chat.whatsapp.com/FCEnlTkAKCC0MGPhXtX4i4 ೨೦೧೭ರಲ್ಲಿ ಪ್ರಾರಂಭವಾದ ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರ ಸಂಘವು ದಶಮಾನೋತ್ಸವ ಹೊಸ್ತಿಲಲ್ಲಿದೆ. 2200 ಸದಸ್ಯರಿಂದ 42 ಲಕ್ಷ ರೂ. ಷೇರು ಹಣದೊಂದಿಗೆ ಬಳ್ಳಾರಿಯಲ್ಲಿ ಪ್ರಾರಂಭವಾದ ಈ ಸಹಕಾರಿ ಸಂಘವು ವೃತ್ತಿಪರವಾಗಿ ಮುನ್ನಡೆದು ಸಿರಗುಪ್ಪ, ಕಂಪ್ಲಿ ಮತ್ತು ಹೂವಿನ ಹಡಗಲಿಯಲ್ಲಿ ಶಾಖೆಗಳನ್ನು ಹೊಂದಿ ವ್ಯವಹಾರವನ್ನು ವೃದ್ಧಿಸಿಕೊಂಡಿದೆ. ಪ್ರತಿವರ್ಷ ಶೇ.14ರಿಂದ 15ರವರೆಗೆ ಲಾಭಾಂಶ ನೀಡುತ್ತಿದ್ದು, ಹೊಸಪೇಟೆಯಲ್ಲಿ ನೂತನ ಶಾಖೆಗೆ ಅಡಿಪಾಯ ಹಾಕಿದೆ. ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರ ಸಂಘವು ಅನೇಕ ಜನಪರ ಹಾಗೂ ಸಮಾಜಮುಖಿ ಕೆಲಸಗಳನ್ನು ಮಾಡುತ್ತ…
ಬೆಂಗಳೂರು: ಕರ್ನಾಟಕ ರಾಜ್ಯ ಪಟ್ಟಣ ಸಹಕಾರಿ ಬ್ಯಾಂಕ್‌ಗಳ ಒಕ್ಕೂಟದ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಎಚ್.ಕೆ.ಪಾಟೀಲ್ ಅವರನ್ನು ಅವಿರೋಧವಾಗಿ ಮರು ಆಯ್ಕೆ ಮಾಡಲಾಗಿದೆ. https://chat.whatsapp.com/FCEnlTkAKCC0MGPhXtX4i4 ಬಿ.ಎಸ್. ಪರಮಶಿವಯ್ಯ ಅವರನ್ನು ಮತ್ತೊಂದು ಅವಧಿಗೆ ಉಪಾಧ್ಯಕ್ಷರನ್ನಾಗಿಯೂ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸೋಮವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ಚುನಾವಣೆ ನಡೆಯಿತು. ಅನುಭವಿ ಸಹಕಾರಿ ನಾಯಕ ಮತ್ತು ಎನ್‌ಎಎಫ್‌ಸಿಯುಬಿ ಅಧ್ಯಕ್ಷ ಆಗಿರುವ ಎಚ್.ಕೆ.ಪಾಟೀಲ್, ಉತ್ತಮ ಆಡಳಿತ, ಆರ್ಥಿಕ ಶಿಸ್ತು ಮತ್ತು ನಿಯಂತ್ರಕ ಅನುಸರಣೆಯನ್ನು ಉತ್ತೇಜಿಸುವ ಮೂಲಕ ಕರ್ನಾಟಕದಲ್ಲಿ ಪಟ್ಟಣ ಸಹಕಾರಿ ಬ್ಯಾಂಕಿಂಗ್ ಜಾಲವನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ನಾಯಕತ್ವದಲ್ಲಿ, ನಗರ ಸಹಕಾರಿ ಬ್ಯಾಂಕ್‌ಗಳು ಎದುರಿಸುತ್ತಿರುವ ಪ್ರಮುಖ ಸವಾಲುಗಳನ್ನು ಪರಿಹರಿಸಲು ಮತ್ತು ರಾಜ್ಯಾದ್ಯಂತ ಅವುಗಳ ಸುಸ್ಥಿರ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಬೆಂಬಲಿಸಲು ಒಕ್ಕೂಟವು ನಿಯಂತ್ರಕರು ಮತ್ತು ರಾಜ್ಯ ಸರ್ಕಾರದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com
ಮಂಗಳೂರು: ಸಹಕಾರ ಭಾರತಿ ಮಂಗಳೂರು ಮಹಾನಗರ ಜಿಲ್ಲೆಯ ವತಿಯಿಂದ ಸಹಕಾರ ಭಾರತಿ ಸ್ಥಾಪನಾ ದಿನದ ಅಂಗವಾಗಿ ಸೋಮವಾರ ಲಕ್ಷ್ಮಣ ರಾವ್ ಇನಾಮ್ದಾರ್ ಹಾಗೂ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. https://chat.whatsapp.com/FCEnlTkAKCC0MGPhXtX4i4 ಸಹಕಾರ ಭಾರತಿಯ ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಿತು. ಸಹಕಾರ ಭಾರತಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಹಾಗೂ ಗ್ರಾಹಕ ಪ್ರಕೋಷ್ಠ ಸಂಚಾಲಕಿ ಭಾರತಿ ಜಿ.ಭಟ್ ಮಾತನಾಡಿ, ಸಹಕಾರ ಭಾರತಿ ಬೆಳೆದು ಬಂದ ರೀತಿ, ಸ್ಥಾಪಕರ ಆಶಯ ಉದ್ದೇಶಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಈಗಿನ ವ್ಯವಸ್ಥೆಯಲ್ಲಿ ಸಹಕಾರ ಭಾರತಿ ಪ್ರಸ್ತುತತೆ ಮತ್ತು ಹೆಚ್ಚಿದ ಪ್ರಾಮುಖ್ಯತೆ ಕುರಿತು ತಿಳಿ ಹೇಳಿದರು. ಸಹಕಾರ ಭಾರತಿ ಜಿಲ್ಲಾಧ್ಯಕ್ಷರಾದ ಸುಧಾಕರ ರೈ, ಮಂಗಳೂರು ಮಹಾನಗರ ಜಿಲ್ಲೆಯ ಅಧ್ಯಕ್ಷರಾದ ಜಿ.ಆರ್ ಪ್ರಸಾದ್, ರಾಜ್ಯ ಸಹ ಕಾರ್ಯದರ್ಶಿ ಗಣೇಶ್ ಶೆಣೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್, ಮಹಾನಗರ ಪ್ರಧಾನ ಕಾರ್ಯದರ್ಶಿ ಚರಣ್ ರಾಜ್, ಪ್ರಮುಖರಾದ ಮದಲಾಕ್ಷಿ ರೈ, ಸುಜಯ ಹೇಮಚಂದ್ರ, ದಯಾನಂದ ಅಡ್ಯಾರ್, ವಲ್ಸರಾಜ್ ಮೊದಲಾದವರು ಪಾಲ್ಗೊಂಡಿದ್ದರು.…
ಉಡುಪಿ: ವಿಶ್ವಕರ್ಮ ಸಹಕಾರ ಬ್ಯಾಂಕ್ ಇದರ ಸುವರ್ಣ ವರ್ಷಾಚರಣೆಯ ಅಂಗವಾಗಿ ಬ್ಯಾಂಕಿನ ಉಡುಪಿ ಶಾಖೆಯ ನೇತೃತ್ವದಲ್ಲಿ ಉಡುಪಿ ದೊಡ್ಡಣ್ಣಗುಡ್ಡೆ ಪರಿಸರದಲ್ಲಿ ಭಾನುವಾರ “ಸ್ವಚ್ಛತಾ ಹೀ ಸೇವಾ” ಘೋಷಣೆಯಡಿ ಬ್ಯಾಂಕಿನ ಸ್ವಚ್ಛ ಭಾರತ್ 17ನೇ ಶ್ರಮದಾನ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಲಾಯಿತು. https://chat.whatsapp.com/FCEnlTkAKCC0MGPhXtX4i4 ಕಾರ್ಯಕ್ರಮಕ್ಕೆ ವಿಷ್ಣುಮೂರ್ತಿ ಫ್ರೆಂಡ್ಸ್ ದೊಡ್ಡಣ್ಣಗುಡ್ಡೆ ಇದರ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ಜೆಸಿಐ ದೊಡ್ಡಣ್ಣಗುಡ್ಡೆ ಪ್ರಕೃತಿ ಇದರ ಸಂಸ್ಥಾಪಕ ಎಂ.ಎನ್ ನಾಯಕ್ ಮತ್ತು ವಿಶ್ವಕರ್ಮ ಸಮಾಜ ಸೇವೆ ಸಂಘ, ಸಗ್ರಿ-ಚಕ್ರತೀರ್ಥ ಇದರ ಅಧ್ಯಕ್ಷರಾದ ಶ್ರೀಪತಿ ಆಚಾರ್ಯ ಮತ್ತು ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಸ್. ಆರ್. ಹರೀಶ್ ಆಚಾರ್ ಜೊತೆಗೂಡಿ ಚಾಲನೆ ನೀಡಿದರು. ವಿಷ್ಣುಮೂರ್ತಿ ಫ್ರೆಂಡ್ಸ್ ದೊಡ್ಡಣ್ಣಗುಡ್ಡೆ ಇದರ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಮಾತನಾಡಿ ಸ್ವಚ್ಛ ಪರಿಸರವು ಉತ್ತಮ ಆರೋಗ್ಯ ಮತ್ತು ಸುಸ್ಥಿರ ಸಮಾಜದ ಆಧಾರವಾಗಿದ್ದು, ಸ್ವಚ್ಛತೆಯನ್ನು ಪ್ರತಿಯೊಬ್ಬರೂ ಜೀವನದ ಭಾಗವಾಗಿಸಿಕೊಳ್ಳಬೇಕು. ಈ ವಿಷಯದಲ್ಲಿ ಜಾಗೃತಿ ಮೂಡಿಸಿ ಎಚ್ಚರಿಸುವ ಮಾನವೀಯ ಹಾಗೂ ಸಾಮಾಜಿಕ ಕಾರ್ಯವನ್ನು ವಿಶ್ವಕರ್ಮ ಸಹಕಾರ ಬ್ಯಾಂಕ್ ಮಾಡುತ್ತಿರುವುದು…
✍️ ಸಾಣೂರು ನರಸಿಂಹ ಕಾಮತ್ ಪ್ರಾಚೀನ ಭಾರತದಲ್ಲಿ ವೇದಗಳ ಕಾಲದಿಂದಲೂ ಸಹಕಾರ ತತ್ವವು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿತ್ತು. ಋಗ್ವೇದವು //ಸಂಘ ಛಧ್ವಂ ಸಂವದಧ್ವಂ ಸಂವೋ ಮನಾಂಸಿ ಜಾನತಾಂ// ನಾವೆಲ್ಲರೂ ಒಟ್ಟಿಗೆ ಹೆಜ್ಜೆ ಹಾಕೋಣ. ಒಳ್ಳೆಯ ಮಾತುಗಳೊಂದಿಗೆ ಅರಿತು ಕಲಿತು ಬಾಳೋಣ ಎಂಬುದಾಗಿ ಹೇಳಿದೆ. https://chat.whatsapp.com/FCEnlTkAKCC0MGPhXtX4i4 ನಮ್ಮ ದೇಶದ ಸಹಕಾರಿ ಚಳವಳಿಗೆ 121 ವರ್ಷಗಳ ಸುಧೀರ್ಘ ಇತಿಹಾಸವಿದ್ದು ಸಹಕಾರ ರಂಗವು ಸಮಾಜದ ಎಲ್ಲಾ ಸ್ತರಗಳಲ್ಲಿಯೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. “ಆಡು ಮುಟ್ಟದ ಸೊಪ್ಪಿಲ್ಲ; ಸಹಕಾರಿ ಕ್ಷೇತ್ರ ಮುಟ್ಟದ ಜಾಗವಿಲ್ಲ ” ಎಂಬಂತೆ ಹುಟ್ಟಿನಿಂದ ಚಟ್ಟದವರೆಗೆ ಮನುಷ್ಯನ ಜೀವನದ ಎಲ್ಲಾ ಹಂತಗಳಲ್ಲೂ ಎಲ್ಲಾ ಅವಶ್ಯಕತೆಗಳನ್ನು ಸಹಕಾರ ಕ್ಷೇತ್ರ ತನ್ನದೇ ಆದ ರೀತಿಯಲ್ಲಿ ಪೂರೈಸುತ್ತಿದೆ. ಸಹಕಾರಿ ದತ್ತಾಂಶದ ಪ್ರಕಾರ ಪ್ರಸ್ತುತ ನಮ್ಮ ದೇಶದಲ್ಲಿ 55 ವಿಧದ 8.4 ಲಕ್ಷ ಸಹಕಾರಿ ಸಂಘಗಳು ಸ್ಥಾಪನೆಯಾಗಿದ್ದು ದೇಶದ ಸುಮಾರು 30 ಕೋಟಿ ಜನ ಸಹಕಾರಿ ಸಂಘದ ಸದಸ್ಯರಾಗಿದ್ದಾರೆ. ವಿಶೇಷವಾಗಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಬ್ಯಾಂಕಿಂಗ್, ಶಿಕ್ಷಣ,…
ಉಡುಪಿ: ಉಡುಪಿ ಗೋಲ್ಡ್ ಸ್ಮಿತ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯು ಶುಕ್ರವಾರ ಉಡುಪಿ ಚಿತ್ತರಂಜನ್ ವೃತ್ತದ ಉಪೇಂದ್ರ ಕಟ್ಟಡದ ಒಂದನೇ ಮಹಡಿಯಲ್ಲಿ ಶುಭಾರಂಭಗೊಂಡಿತು. https://chat.whatsapp.com/FCEnlTkAKCC0MGPhXtX4i4 ನೂತನ ಸೊಸೈಟಿಯನ್ನು ಆನೆಗುಂದಿ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರು ಉದ್ಘಾಟಿಸಿ ಆಶೀರ್ವಚನ ನೀಡಿ, ಉಡುಪಿ ಗೋಲ್ಡ್ ಸ್ಮಿತ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯು ತಮ್ಮ ಮುಂದಿನ ಯೋಜನೆಗಳನ್ನು ಅನುಷ್ಠಾನಗೊಳಿಸಿ ಸಮಾಜಕ್ಕೆ ಆರ್ಥಿಕ ಶಕ್ತಿಯನ್ನು ನೀಡುವಲ್ಲಿ ಗುರಿಯನ್ನು ತಲುಪಲಿ ಎಂದರು. ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ ಮಾತನಾಡಿ, ಸಮಾಜದ ಏಳಿಗೆಗಾಗಿ ಆರ್ಥಿಕ ವ್ಯವಸ್ಥೆಗೆ ಉತ್ತಮ ಕೊಡುಗೆಯನ್ನು ಉಡುಪಿ ಗೋಲ್ಡ್ ಸ್ಮಿತ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನೀಡಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಸ್. ಆರ್. ಹರೀಶ್ ಆಚಾರ್ಯ ಅವರು, ಸಹಕಾರ ಸಂಸ್ಥೆಗಳ ಸಮಾಜದ ಬೆಳವಣಿಗೆಗೆ ಪೂರಕ ಹಾಗೂ ಪರಿಣಾಮಕಾರಿ ಸಾಧನಗಳು. ಹೊಸ ರೀತಿಯ ಸಂಸ್ಥೆಗಳಿಂದ ಸಮಾಜವು ಬೆಳವಣಿಗೆ ವೇಗ ಸಿಗುತ್ತದೆ. ಈ ನಿಟ್ಟಿನಲ್ಲಿ ಉಡುಪಿ ಗೋಲ್ಡ್ ಸ್ಮಿತ್ಸ್ ಕೋಆಪರೇಟಿವ್ ಸಂಸ್ಥೆಯು…
ಶತಮಾನೋತ್ಸವ ಸಮಾರಂಭ, ಉದ್ದೇಶಿತ ಶತ ಸಂಭ್ರಮ ಕಟ್ಟಡದ ಶಂಕುಸ್ಥಾಪನೆ ಮಡಿಕೇರಿ: ಇಲ್ಲಿನ ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಶತ ಸಂಭ್ರಮ ಸಮಾರಂಭ ಜ.11ರಂದು ನಡೆಯಲಿದ್ದು, ಆ ಪ್ರಯುಕ್ತ ಬೆಳಗ್ಗೆ 9.30ಕ್ಕೆ ಶತ ಸಂಭ್ರಮ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮ ಮಡಿಕೇರಿಯ ಗುರು ಸದನಲ್ಲಿ ನಡೆಯಲಿದೆ. https://chat.whatsapp.com/FCEnlTkAKCC0MGPhXtX4i4 ಬೆಳಗ್ಗೆ 10.30ರಿಂದ ಮಡಿಕೇರಿಯ ಗೌಡ ಸಮಾಜ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಾದ ಮಧು ಬಂಗಾರಪ್ಪ ಶತ ಸಂಭ್ರಮದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆಯ ಶಾಸಕ ಎ.ಎಸ್ ಪೊನ್ನಣ್ಣ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ದೇಶಿತ ಶತ ಸಂಭ್ರಮ ಕಟ್ಟಡದ ನೀಲಿನಕ್ಷೆ ಅನಾವರಣ ಮಾಡಲಿದ್ದಾರೆ. ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಸ್ಮರಣ ಸಂಚಿಕೆ, ಕ್ಯಾಲೆಂಡರ್ ಮತ್ತು ಉಡುಗೊರೆ ಅನಾವರಣ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷರಾದ ಜಿ.ನಂಜನ…
ಬಂಟ್ವಾಳ: ಇಲ್ಲಿನ ಬಿ.ಸಿ. ರೋಡ್ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಶರ್ವಾಣಿ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ನಿ. ವತಿಯಿಂದ ಸಹಕಾರಿಯ ಪಿಗ್ಮಿ ಗ್ರಾಹಕರಿಗೋಸ್ಕರ ಉಚಿತ ಚಿನ್ನ ಮತ್ತು ಬೆಳ್ಳಿಯ ನಾಣ್ಯ ಗೆಲ್ಲುವ ಅವಕಾಶ ಮಾಡಿಕೊಡಲಾಗಿದೆ. ಇದರಲ್ಲಿ ಪ್ರಥಮವಾಗಿ ಬಿ.ಸಿ.ರೋಡ್ ನ ಹೋಟೆಲ್ ಉದ್ಯಮಿಗಳಾದ ನಾಗ ಕ್ಯಾಂಟೀನ್ ಮಾಲಕರಾದ ಗುರುದತ್ ಹೆಗಡೆ ಇವರು ಬೆಳ್ಳಿಯ ನಾಣ್ಯ ಅದೃಷ್ಟ ಗೆದ್ದುಕೊಂಡಿದ್ದಾರೆ. https://chat.whatsapp.com/FCEnlTkAKCC0MGPhXtX4i4 ಇವರಿಗೆ ಶರ್ವಾಣಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯ ವೆಂಕಟೇಶ್ ಭಟ್ ಇವರು ಬೆಳ್ಳಿಯ ನಾಣ್ಯವನ್ನು ನೀಡಿದರು. ಜೊತೆಯಲ್ಲಿ ಸಹಕಾರಿಯ ಪಿಗ್ಮಿ ಸಂಗ್ರಹಕರಾದ ರೇಖಾ ಪ್ರಭು ಇದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com
ಬೆಂಗಳೂರು: ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.೦ ತಂತ್ರಾಂಶದಲ್ಲೇ ಡಿಜಿಟಲ್ ಇ ಸ್ಟಾಂಪ್ ಸೇವೆ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕೆ ಪ್ರತಿ ಉಪ ನೋಂದಣಿ ಕಚೇರಿಯಲ್ಲೂ ಡಿಜಿಟಲ್ ಇ-ಸ್ಟಾಂಪ್ ತರಬೇತಿ ನೀಡಲು ಮಾರ್ಗಸೂಚಿ ಹೊರಡಿಸಿದೆ. https://chat.whatsapp.com/FCEnlTkAKCC0MGPhXtX4i4 ಕಾನೂನು ದಾಖಲೆಗಳಿಗೆ ಅಗತ್ಯವಾಗಿದ್ದ ಛಾಪಾ ಕಾಗದ ಮಾಯವಾಗಿ ಇ -ಸ್ಟಾಂಪ್ ಜಾರಿಗೆ ತರಲಾಗಿತ್ತು. ಇದೀಗ ಇ-ಸ್ಟಾಂಪ್‌ಗೂ ಬದಲಿ ವ್ಯವಸ್ಥೆ ಮಾಡಲಾಗಿದ್ದು, ಡಿಜಿಟಲ್ ಇ-ಸ್ಟಾಂಪ್ ಪರಿಚಯಿಸಲಾಗುತ್ತಿದೆ. ಇದಕ್ಕಾಗಿ ಕರ್ನಾಟಕ ಮುದ್ರಾಂಕ (ಡಿಜಿಟಲ್ ಇ-ಸ್ಟಾಂಪ್) ನಿಯಮಗಳು 2025 ಅನ್ನು ರಚಿಸಲಾಗಿದೆ. ಇದರ ಪ್ರಕಾರ ಜನ ಮನೆಯಿಂದಲೇ ಆನ್‌ಲೈನ್ ಮೂಲಕ ಇ-ಸ್ಟಾಂಪ್ ಪಡೆಯಬಹುದು. ಈ ವಿಷಯಕ್ಕೆ ಸಂಬಂಧಿಸಿ, ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರ ಕಚೇರಿಯಿಂದ ರಾಜ್ಯಾದ್ಯಂತ ಡಿಜಿಟಲ್ ಇ-ಸ್ಟಾಂಪ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ಸೌಹಾರ್ದ ಸಹಕಾರಿಗಳ ಸಿಬ್ಬಂದಿಗಳಿಗೆ ಪ್ರತಿ ಉಪ ನೋಂದಣಿ ಕಚೇರಿಯಲ್ಲಿ ಡಿಜಿಟಲ್…
