Author: admin

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ( ನಿ.) ಬೆಂಗಳೂರು ಇದರ ೧೯ ನೇ ವಾರ್ಷಿಕ ಸಾಮಾನ್ಯ ಸಭೆಯು ಕೆ.ಇ.ಬಿ ಇಂಜಿನಿಯರ್ಸ್,ಸರ್.ಎo ವಿಶ್ವೇಶ್ವರಯ್ಯ ಸಭಾಂಗಣ, ಸಿಲ್ವರ್ ಜುಬಿಲಿ ಬಿಲ್ಡಿಂಗ್, ಬೆಂಗಳೂರಿನಲ್ಲಿ ಮಹಾಮಂಡಳದ ಅಧ್ಯಕ್ಷರಾದ ಶ್ರೀಮತಿ ಕೆ. ಲಲಿತ ಜಿ. ಟಿ. ದೇವೇಗೌಡ ಇವರ ಅಧ್ಯಕ್ಷತೆಯಲ್ಲಿ ಜರುಗಿತು.ಈ ಸಾಮಾನ್ಯ ಸಭೆಯಲ್ಲಿ ರಾಜ್ಯದಲ್ಲಿ ಹೆಚ್ಚು ಮುದ್ರಾಂಕ ಶುಲ್ಕ ಪಡೆದು ಹಾಗೂ ಇ-ಸ್ಟಾಂಪಿoಗ್ ಪ್ರತಿಗಳನ್ನು ಮುದ್ರಿಸಿ ಮಾರಾಟ ಮಾಡಿರುವ ಸಹಕಾರ ಸಂಘಗಳಿಗೆ ಸನ್ಮಾನ ಸಮಾರಂಭವು ಜರುಗಿತು.ಈ ಸಂದರ್ಭದಲ್ಲಿ ೨೦೨೨-೨೩ ನೇ ಸಾಲಿನಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಅತೀ ಹೆಚ್ಚು ಮೊತ್ತದ ಇ ಸ್ಟಾಂಪಿoಗ್ ಮುದ್ರಿಸಿರುವ ಸಂಘ ಎಂಬ “ಪ್ರಶಂಸಾ ಫಲಕವ” ನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಹಾಗೂ ಮಹಾಮಂಡಳದ ನಿರ್ದೇಶಕರಾದ ಸಹಕಾರ ರತ್ನ ಶ್ರೀಯುತ ಚಿತ್ತರಂಜನ್ ಬೋಳಾರ್ ರವರಿಗೆ ಮಹಾಮಂಡಳದ ಅಧಕ್ಷ್ಯರಾದ ಶ್ರೀಮತಿ ಕೆ. ಲಲಿತ ಜಿ. ಟಿ. ದೇವೇಗೌಡ ಇವರು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಸನ್ಮಾನ…

Read More

ಮಂಗಳೂರು:- ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸೌಹಾರ್ದ ಸಹಕಾರಿ ಸಂಘ ನಿ. ಯೆಯ್ಯಾಡಿ ಪದವು ಮಂಗಳೂರು ಇದರ ೨೦೨೨-೨೩ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ದಿನಾಂಕ ೨೩-೦೯-೨೦೨೩ ರ ಶನಿವಾರದಂದು ಪ್ರಧಾನ ಶಾಖೆ ಯೆಯ್ಯಾಡಿ ಪದವು ವಿಮಾನ ನಿಲ್ದಾಣ ರಸ್ತೆ ಇಲ್ಲಿ ಸಹಕಾರಿಯ ಅಧ್ಯಕ್ಷರಾದ ಶ್ರೀ ಉರ್ಬಾನ್ ಪಿಂಟೋ ರವರ ಅಧ್ಯಕ್ಷತೆಯಲ್ಲಿ ಜರುಗಿತು.ಸಹಕಾರಿಯು ೨೦೨೨-೨೩ ನೇ ಸಾಲಿನಲ್ಲಿ ರೂ ೩೮.೩೪ ಕೋಟಿ ವ್ಯವಹಾರ ದಾಖಲಿಸಿ ವರ್ಷಾಂತ್ಯಕ್ಕೆ ರೂ. ೫.೪೭ ಲಕ್ಷಗಳ ನಿವ್ವಳ ಲಾಭ ಗಳಿಸಿ ತನ್ನ ಸದಸ್ಯರಿಗೆ ಶೇ ೭% ಲಾಭಾಂಶವನ್ನು ಘೋಷಿಸಲಾಯಿತು.ಉಪಾಧ್ಯಕ್ಷರಾದ ಶ್ರೀ ಸದಾಶಿವ ಬಂಗೇರ ಇವರು ಸ್ವಾಗತ ಕೋರಿ, ಶಾಖಾ ವ್ಯವಸ್ಥಾಪಕಿ ಶ್ರೀಮತಿ ಪ್ರಿಯಾ ಇವರು ವರದಿ ಮಂಡಿಸಿದರು, ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ರಾಜೇಶ್ ಎಂ ಬಿ ಮುಂದಿನ ಸಾಲಿನ ಆಯವ್ಯಯ ಮತ್ತು ವರದಿ ಸಾಲಿನ ಲಾಭ ವಿಂಗಡಣೆ ಮಂಡಿಸಿದರು. ಶಾಖಾ ವ್ಯವಸ್ಥಾಪಕಿ ಶ್ರೀಮತಿ ಮಾಯಾ ಲೆಕ್ಕ ಪರಿಶೋಧನಾ ವರದಿ ಮಂಡಿಸಿ ನಿರ್ದೇಶಕರಾದ ಶ್ರೀ ಎಡ್ವರ್ಡ್ ಸಿಕ್ವೇರಾ…

Read More

ಮಡಂತ್ಯಾರು : ಸ್ಪಂದನ ಕೋ ಆಪರೇಟಿವ್‌ ಸೊಸೈಟಿ ಲಿ . ಇದರ ಮಡಂತ್ಯಾರು ಶಾಖೆಯು ದಿನಾಂಕ 24 ಅಗಸ್ಟ್‌ 2023 ರಂದು ಉದ್ಘಾಟನೆಗೊಂಡಿತು. ಮಹಿಷಮರ್ದಿನಿ ದೇವಸ್ಥಾನ ಪಾರೆಂಕಿ ಇದರ ಆಡಳಿತ ಮುಖ್ಯಸ್ಥರಾದ ಶ್ರೀ ಎಂ. ವಿಠಲ ಶೆಟ್ಟಿ ಇವರು ಶಾಖೆಯನ್ನು ಉದ್ಘಾಟಿಸಿದರು. ಸೊಸೈಟಿಯ ಅಧ್ಯಕ್ಷರಾದ ಶ್ರೀನಿವಾಸ ಪಿ.ಶೇಟ್ ರವರು ಅತಿಥಿಗಳನ್ನು ಸ್ವಾಗತಿಸಿದರು. ವಿಶ್ವಕರ್ಮ ಸಹಕಾರ ಬ್ಯಾಂಕ್ ನ ಅಧ್ಯಕ್ಷರಾದ ಡಾ.ಎಸ್‌ ಆರ್‌ ಹರೀಶ್‌ ಆಚಾರ್ಯರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದರು . ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಹರೀಶ್‌ ಪೂಂಜಾ, ಮಡಂತ್ಯಾರು ಸೇಕ್ರೆಡ್‌ ಹಾರ್ಟ್‌ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ. ಅಲೆಕ್ಸ್‌ ಐವನ್‌ ಸಿಕ್ವೆರಾ, ಮಡಂತ್ಯಾರು ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷರಾದ ಶ್ರೀ ಗೋಪಾಲಕ್ರಷ್ಣ ಕುಕ್ಕಳ ಹಾಗೂ ಮತ್ತಿತರ ಗಣ್ಯರು, ಸಂಘದ ನಿರ್ದೇಶಕರು, ಹಾಗೂ ಸ್ವ ಸಹಾಯ ಗುಂಪುಗಳ ಪ್ರಬಂಧಕರು ಉಪಸ್ಥಿತರಿದ್ದರು. ಸೊಸೈಟಿಯ ನಿರ್ದೇಶಕರಾದ ಶ್ರೀ ಜಯಕುಮಾರ್ ಅವರು ಧನ್ಯವಾದಗಳನ್ನು ಸಲ್ಲಿಸಿದರು.

Read More

ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್‌ ಘೋಷಣೆ ಬೆಳ್ತಂಗಡಿ, ಸೆ. 24: ಬಂಗಾಡಿ ಸಹಕಾರ ವ್ಯವಸಾಯಿಕ  ಸಂಘ ಸಹಕಾರ  ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಉತ್ತಮ ಸಹಕಾರ ಸಂಸ್ದೆಯಾಗಿ ಮೂಡಿ ಬಂದಿದೆ. ಪ್ರಸಕ್ತ ವರ್ಷದಲ್ಲಿ4.09 ಕೋಟಿ ರೂ. ಲಾಭ ಗಳಿಸಿದ್ದು ಸದಸ್ಯರಿಗೆ ಶೇ. 15 ಡಿವಿಡೆಂಡ್‌ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಹರೀಶ್‌ ಸಾಲಿಯಾನ್‌ ಮಾಹಿತಿ ನೀಡಿದರು. ಇಂದಬೆಟ್ಟಿನ ಸೈಂಟ್‌ ಫ್ರಾನ್ಸಿಸ್‌  ಕ್ಸೇವಿಯರ್‌ ಚರ್ಚ್‌ ವಠಾರದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘದಲ್ಲಿ5,418 ಸದಸ್ಯರಿದ್ದು ಪ್ರಸಕ್ತ ವರ್ಷದಲ್ಲಿ 946 ಕೋಟಿ ರೂ. ಗಿಂತ ಅಧಿಕ ವ್ಯವಹಾರ ನಡೆಸಲಾಗಿದೆ. 6.59 ಕೋಟಿ ರೂ. ಪಾಲು ಬಂಡವಾಳ, 16.43 ಕೋಟಿ ರೂ. ನಿಧಿಗಳು 112. 66 ಕೋಟಿ ರೂ. ಠೇವಣಿ ಹೊ೦ದಿದೆ. ಕಡಿರುದ್ಯಾವರದಲ್ಲಿ, ಕೇ೦ದ್ರ ಸರಕಾರದ ಯೋಜನೆಯಡಿಯಲ್ಲಿ 1.43 ಕೋಟಿ ರೂ. ಬ೦ಡವಾಳದ ಶಾಖಾ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದ್ದು, ಇದೇ ಯೋಜನೆಯಡಿ ಕನ್ಯಾಡಿ ಗ್ರಾಮದ ಪಡ್ಪು ಪ್ರದೇಶದಲ್ಲಿ ಶಾಖಾ ಕಟ್ಟಡವು ನಿರ್ಮಾಣ ಹ೦ತದಲ್ಲಿದೆ ಎ೦ದು ತಿಳಿಸಿದರು.…

Read More

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ಪುಣೆಯಲ್ಲಿ ಕೇಂದ್ರ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಚೇರಿಯ ಡಿಜಿಟಲ್ ಪೋರ್ಟಲ್ ಅನ್ನು  ಉದ್ಘಟಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ “ಸಹಕಾರದಿಂದ ಸಮೃದ್ಧಿ” ಎಂಬ ದೃಷ್ಟಿಕೋನದಲ್ಲಿ ದೃಢವಾದ ನಂಬಿಕೆಯನ್ನಿಟ್ಟು ಸಹಕಾರ ಸಚಿವಾಲಯವು ದೇಶದಲ್ಲಿ ಸಹಕಾರ ಚಳವಳಿಯನ್ನು ಬಲಪಡಿಸಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ, ಸಹಕಾರಿ ಕ್ಷೇತ್ರದಲ್ಲಿ ವ್ಯವಹಾರವನ್ನು ಸುಲಭಗೊಳಿಸಲು ಕೇಂದ್ರ ಸಹಕಾರಿ ಸಂಘಗಳ ರಿಜಿಸ್ಟ್ರಾರ್ ಕಚೇರಿಯನ್ನು ಗಣಕೀಕರಣಗೊಳಿಸಲಾಗುತ್ತಿದೆ. ಕೇಂದ್ರ ರಿಜಿಸ್ಟ್ರಾರ್ ಕಚೇರಿಯ ಗಣಕೀಕರಣದ ಮುಖ್ಯ ಉದ್ದೇಶಗಳು ಹೀಗಿವೆ: i. ಸಂಪೂರ್ಣವಾಗಿ ಕಾಗದರಹಿತ ಅರ್ಜಿ ಮತ್ತು ಪ್ರಕ್ರಿಯೆ ii. ಸಾಫ್ಟ್ ವೇರ್ ಮೂಲಕ ಬಹು-ರಾಜ್ಯ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳ ಸ್ವಯಂಚಾಲಿತ ಪಾಲನೆ iii. ಸುಗಮ ವಾಣಿಜ್ಯ ನಿರ್ವಹಣೆಯ ಹೆಚ್ಚಳ iv. ಡಿಜಿಟಲ್ ಸಂವಹನ v. ಪಾರದರ್ಶಕ ಪ್ರಕ್ರಿಯೆ vi. ಸುಧಾರಿತ ವಿಶ್ಲೇಷಣೆ ಮತ್ತು ನಿರ್ವಹಣಾ ಮಾಹಿತಿ ವ್ಯವಸ್ಥೆಗಳು (ಎಂಐಎಸ್) ಈ ಕೆಳಗಿನ ಮಾಡ್ಯೂಲ್ ಗಳನ್ನು…

Read More

ಮಂಗಳೂರು: 69ನೇ ಅಖಿಲ ಭಾರತ ಸಹಕಾರ ಸಪ್ತಾಹ – 2022 ರ ಆಚರಣೆಯ ಅಂಗವಾಗಿ ಬುಧವಾರ  ಕರ್ನಾಟಕ  ರಾಜ್ಯ ಸಹಕಾರ ಮಹಾಮಂಡಲ ನಿಯಮಿತ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಲಿಮಿಟೆಡ್, ರಾಷ್ಟ್ರೀ ಯ ಸೇವಾಯೋಜನೆ ಹಾಗೂ ಯೋಜನಾ ವೇದಿಕೆ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಸಹಭಾಗಿತ್ವದಲ್ಲಿ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ವಿಚಾರ ಸಂಕಿರಣ ಅಯೋಜಿಸಲಾಯಿತು. ಕಾರ್ಯಕ್ರಮದಲ್ಲಿ  “ಸಹಕಾರಿ ಕ್ಷೇತ್ರದ ಹುಟ್ಟು, ಬೆಳವಣಿಗೆ ಬಗ್ಗೆ ನಾವು ಅರಿವು ಮೂಡಿಸಿಕೊಳ್ಳಬೇಕು.  ಸಹಕಾರಿ ಕ್ಷೇತ್ರದ ಹುಟ್ಟಿನಿಂದ ಇಲ್ಲಿಯವರೆಗೂ ಇದರ ಪಯಣ, ಸಾಧನೆ ಅಪ್ರತಿಮವಾದುದು” ಎಂದು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ.ಅನಸೂಯ ರೈ ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಮುಖ್ಯ ಅತಿಥಿ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಲಿಮಿಟೆಡ್,  ಸಹಕಾರ ಅಧ್ಯಾಯನ ಮತ್ತು ಅಭಿವೃದ್ದಿ ಸಂಸ್ಥೆ ಮಂಗಳೂರು ಇದರ ಅಧ್ಯಕ್ಷರಾದ ಡಾ. ಎಸ್.ಆರ್‌ ಹರೀಷ್ ಆಚಾರ್ಯ  ಇವರು ಮಾತನಾಡಿ, ಜಾತಿ, ಧರ್ಮ, ರಾಜಕೀಯ ನಿಲುವುಗಳು, ಲಿಂಗ ಭಿನ್ನತೆಯನ್ನು ಮೀರಿ ಸಹಕಾರಿ ತತ್ವ…

Read More

ಕರ್ನಾಟಕ ರಾಜ್ಯ ಸರಕಾರ ಈ ಬಾರಿಯ ಸಹಕಾರ ರತ್ನ ಪ್ರಶಸ್ತಿಗೆ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಯ ಮೂವರು ಸಾಧಕರನ್ನು ಆಯ್ಕೆ ಮಾಡಿದೆ. ಹಿರಿಯ ಸಹಕಾರಿ ಸವಣೂರು ಸೀತಾರಾಮ ರೈ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾಗಿ ಇತ್ತೀಚಿನವರೆಗೆ ಅನುಪಮ ಸೇವೆ ಸಲ್ಲಿಸಿದ ಕೆ.ರವಿರಾಜ ಹೆಗ್ಡೆ ಮತ್ತು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಇವರನ್ನು ಗುರುತಿಸಿ ಆಯ್ಕೆ ಮಾಡಿದೆ. ನಿಜವಾಗಿಯೂ ಸಹಕಾರ ಸಹಕಾರ ಕ್ಷೇತ್ರದ ವಿವಿಧ ವಲಯಗಳಲ್ಲಿ ಅನುಪಮ ಸೇವೆ ಸಲ್ಲಿಸಿ ದೃಢವಾಗಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿರುವ ಈ ಮೂವರು ಸಹಕಾರ ಕ್ಷೇತ್ರದ ಅನರ್ಘ್ಯ ರತ್ನಗಳೆಂದು ಗೌರವಿಸಬಹುದು. ಸವಣೂರು ಸೀತಾರಾಮ ರೈಗಳು ಜಿಲ್ಲೆಯ ಹಿರಿಯ ಸಹಕಾರಿಗಳಾಗಿ, ಪ್ರಗತಿಪರ ಕೃಷಿಕರಾಗಿ, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕರಾಗಿ ಸಮಾಜದಲ್ಲಿ ಅನನ್ಯ ಸೇವೆ ಸಲ್ಲಿಸಿ ಗೌರವಾದರಗಳಿಗೆ ಪಾತ್ರರಾದವರು. ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಮುನ್ನಡೆಸಿಕೊಂಡು…

Read More

ಈ ಬಾರಿಯ ಬಜೆಟ್‌ನಲ್ಲಿ ಸಹಕಾರ ಕ್ಷೇತ್ರದ ಬಲವರ್ಧನೆಗೆ ಕೆಲವು ಅಂಶಗಳನ್ನು ಪ್ರಕಟಿಸಿರುವುದು ಸ್ವಾಗತಾರ್ಹ. 10 ಕೋಟಿ ರೂ. ಒಳಗಿನ ಆದಾಯ ಹೊಂದಿರುವ ಸಹಕಾರ ಸಂಘಗಳ ಮೇಲಿನ ಸರ್‌ಚಾರ್ಜ್ ಅನ್ನು ಶೇ.12ರಿಂದ ಶೇ.7ಕ್ಕೆ ಇಳಿಸಿರುವುದು ಸಹಕಾರ ಕ್ಷೇತ್ರದ ಬಲವರ್ಧನೆಗೆ ಪೂರಕವಾಗಲಿದೆ. ಈ ತನಕ ಸಹಕಾರ ಸಂಘಗಳು ಪಾವತಿಸುತ್ತಿದ್ದ ಪರ್ಯಾಯ ಕನಿಷ್ಠ ತೆರಿಗೆ ಮಿತಿಯನ್ನು ಶೇ.18.5ರಿಂದ ಶೇ.15ಕ್ಕೆ ಇಳಿಸಲಾಗಿದೆ. ಕಳೆದ ವರ್ಷ ಹೊಸದಾಗಿ ಆರಂಭವಾಗಿರುವ ಸಹಕಾರ ಸಚಿವಾಲಯಕ್ಕೆ 900 ಕೋಟಿ ರೂ. ನೀಡಿರುವುದು ಈ ಕ್ಷೇತ್ರಕ್ಕೆ ಸಹಕಾರಿಯಾಗಲಿದೆ. ಒಟ್ಟಾರೆಯಾಗಿ ಸಹಕಾರ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದಿಂದ ಕೂಡಿದ ಸಕಾರಾತ್ಮಕ ಬಜೆಟ್. ಡಾ. ಎಸ್ ಆರ್ ಹರೀಶ್ ಆಚಾರ್ಯ ಅಧ್ಯಕ್ಷರು, ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ, ಮಂಗಳೂರು

Read More

ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದ ಗಾಂಧೀಜಿ ಅಧ್ಯಯನ ಕೇಂದ್ರದಡಿ ಸಂಶೋಧನಾ ಮಹಾಪ್ರಬಂಧವನ್ನು ಮಂಡಿಸಿ ಪಿ.ಎಚ್.ಡಿ ಪದವಿ ಪಡೆದ ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಡಾ. ಎಸ್‌ ಆರ್‌ ಹರೀಶ್‌ ಆಚಾರ್ಯರನ್ನು ಸಂಸ್ಥೆಯ ಆಡಳಿತ ಮಂಡಳಿಯ ವತಿಯಿಂದ ಅಭಿನಂದಿಸಲಾಯಿತು.

Read More

ನವೆಂಬರ್ 20, ಶನಿವಾರ ಮೂಡುಬಿದ್ರೆಯ ಶ್ರೀ ಧವಲಾ ಮಹಾವಿದ್ಯಾಲಯ ಮತ್ತು ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಸಹಕಾರ ತತ್ವದಡಿ “ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗಾಗಿ” ಎಂಬ ಧ್ಯೇಯದೊಂದಿಗೆ ಆರಂಭಿಸುತ್ತಿರುವ ಯುವ ಸ್ಪಂದನ ಸೌಹಾರ್ದ ಕೋಅಪರೆಟಿವ್ ಸೊಸೈಟಿ ಲಿ. ನ ಜಾಲತಾಣ ಲೋಕಾರ್ಪಣಾ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಶ್ರೀ ಎಸ್ ಆರ್ ಹರೀಶ್ ಆಚಾರ್ಯ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಇಂದು ಸಹಕಾರ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತ ರವಾದದ್ದು , ದೇಶದಲ್ಲಿಯೇ ಮೊದಲ ಬಾರಿಗೆ ವಿದ್ಯಾರ್ಥಿಗಳು ಯುವ ಸ್ಪಂದನದಂತಹ ಸಹಕಾರಿ ಸಂಘದ ಮೂಲಕ ತಮ್ಮ ಅಗತ್ಯತೆಯನ್ನು ತಾವೇ ಈಡೇರಿಸಲು ಹೊರಟಿರುವುದು ನಿಜಕ್ಕೂ ಅಭಿನಂದನೀಯ ಎಂದು ಹೇಳಿದರು. ಶ್ರೀ ಧವಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಸುದರ್ಶನ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಯುವಸ್ಪಂದನ ಜಾಲತಾಣದ ಲೋಕಾರ್ಪಣೆಯನ್ನು ನೆರೆವೇರಿಸಿದರು. ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗದ ಮುಖ್ಯಸ್ಥರಾದ ಡಾ. ರೂಪಾ ಕೆ ಎಲ್ಲರನ್ನೂ ಸ್ವಾಗತಿಸಿದರು. ಯುವ ಸ್ಪಂದನ ಸೌಹಾರ್ದ ಕೋಆಪರೇಟಿವ್ ನ ಮುಖ್ಯ…

Read More