Author: admin
ಸಹಕಾರ ಕ್ಷೇತ್ರಕ್ಕೆ ವಿಶೇಷ ಮಾನ್ಯತೆಯನ್ನು ನೀಡಿ ‘ಸಹಕಾರದಿಂದ ಸಮೃದ್ಧಿ’ ಎಂಬ ಘೋಷ ವಾಕ್ಯದೊಂದಿಗೆ ಪ್ರತ್ಯೇಕ ನೂತನ ಸಹಕಾರ ಸಚಿವಾಲಯವನ್ನು ರಚಿಸಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಒಂದು ಐತಿಹಾಸಿಕ ನಿರ್ಧಾರವೆಂದು ಬಣ್ಣಿಸಿ ಹರ್ಷ ವ್ಯಕ್ತಪಡಿಸಿ ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಕೇಂದ್ರದ ಅಧ್ಯಕ್ಷರಾದ ಶ್ರೀ ಹರೀಶ್ ಆಚಾರ್ಯ ಅವರು ಸ್ವಾಗತಿಸಿದ್ದಾರೆ. ಇದುವರೆಗೆ ಕೇಂದ್ರ ಸರಕಾರದ ಕೃಷಿ ಸಚಿವಾಲಯದ ಅಧೀನದಲ್ಲಿದ್ದ ಸಹಕಾರ ಇಲಾಖೆಯನ್ನು ಕೇಂದ್ರ ಸರಕಾರವು ಪ್ರತ್ಯೇಕಿಸಿ ಹೊಸ ಸಹಕಾರ ಸಚಿವಾಲಯ ರಚಿಸಿ ಮಾನ್ಯತೆಯನ್ನು ನೀಡಿರುವುದರಿಂದ ಸಹಕಾರ ಕ್ಷೇತ್ರಕ್ಕೆ ದೇಶಾದ್ಯಂತ ವಿಶೇಷವಾದ ಪರಿಗಣನೆ ಸಿಕ್ಕಿದಂತಾಗಿದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಪ್ರತ್ಯೇಕ ಸಚಿವಾಲಯವನ್ನು ತೆರೆಯಲು ನಿರಂತರ ಪ್ರಯತ್ನವನ್ನು ಮಾಡಿದ ಭಾರತೀಯ ರಿಸರ್ವ್ ಬ್ಯಾಂಕ್‌ನ ನಿರ್ದೇಶಕರು, ಸಹಕಾರ ಭಾರತಿಯ ಸಂರಕ್ಷಕರೂ ಆದ ಶ್ರೀ ಸತೀಶ್ ಕಾಶೀನಾಥ್ ಮರಾಠೆಯವರನ್ನು ಅವರು ಈ ಸಂದರ್ಭದಲ್ಲಿ ವಿಶೇಷವಾಗಿ ಅಭಿನಂದಿಸಿದ್ದಾರೆ. ಸಹಕಾರ ವಿಷಯವು ಇಂದು ರಾಜ್ಯದ ವಿಷಯವಾಗಿದೆ. ರಾಜ್ಯ ಸರಕಾರದ ಸಹಕಾರ ನೀತಿಯು ಬೇರೆ ಬೇರೆ ರಾಜ್ಯಗಳಲ್ಲಿ ವಿಭಿನ್ನವಾಗಿದೆ. ಇದರಿಂದ…
ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಮಾರ್ಗದರ್ಶನದಲ್ಲಿ ಸಹಕಾರಿಗಳಿಗಾಗಿ ಎರಡನೇ ಲಸಿಕಾ ಶಿಬಿರವು ಯಶಸ್ವಿಯಾಗಿ ನೆರವೇರಿತು
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ರೀತಿಯ ಸಹಕಾರ ಸಂಘಗಳ ಮತ್ತು ಸೌಹಾರ್ದ ಸಹಕಾರಿಗಳ ಸಿಬ್ಬಂದಿಗಳು ಮತ್ತು ಆಡಳಿತಾಧಿಕಾರಿಳಿಗೆ ಉಚಿತ ಕೋವಿಡ್ ಲಸಿಕಾ ಶಿಬಿರವು ನಗರದ ಎಮ್.ಸಿ.ಸಿ. ಬ್ಯಾಂಕ್‌ನ ಸಹಯೋಗದೊಂದಿಗೆ ಜರಗಿತು. ನಗರದ ಪತ್ತಿನ ಸಹಕಾರ ಸಂಘಗಳು, ಸೌಹಾರ್ದ ಸಹಕಾರಿಗಳು, ವಿವಿದೋದ್ದೇಶ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕುಗಳು ಸೇರಿದಂತೆ ನಗರದ ಎಲ್ಲಾ ರೀತಿಯ ಸಹಕಾರ ಸಂಘಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಒಟ್ಟು ದಾಖಲೆಯ 473 ಜನ ಈ ಉಚಿತ ಶಿಬಿರದ ಪ್ರಯೋಜನವನ್ನು ಪಡೆದರು. ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದ ಸಹಕಾರ ಸಂಘಗಳ ಜಿಲ್ಲಾ ಉಪ ನಿಬಂಧಕರಾದ ಶ್ರೀ ಪ್ರವೀಣ್ ಬಿ. ನಾಯಕ್ ಅವರು ಮಾತನಾಡಿ ಲಸಿಕೆ ಪಡೆಯುವುದರ ಅಗತ್ಯತೆ ಬಗ್ಗೆ ಪ್ರಸ್ತುತ ಪಡಿಸಿದರು. ವೈದ್ಯಾಧಿಕಾರಿಗಳಾದ ಡಾ. ಸುಷ್ಮಾ ಜಾಸ್ಮಿನ್ ಅವರು ಆದ್ಯತಾವಲಯದ ಸಿಬ್ಬಂದಿಗಳು ಸ್ವತಃ ಲಸಿಕೆಯನ್ನು ಪಡೆಯುವುದು ಮಾತ್ರವಲ್ಲ ಮುಂದಿನ ದಿನಗಳಲ್ಲಿ ಎಲ್ಲಾ ಜನಸಮುದಾಯದಗಳಿಗೂ ಲಸಿಕೆಯ ಮಹತ್ವದ ಬಗ್ಗೆ ಅರಿವು ಮೂಡಿಸಬೇಕೆಂದು ಮನವಿ ಮಾಡಿಕೊಂಡರು. ರಾಜ್ಯ ಪಟ್ಟಣ ಸಹಕಾರ ಬ್ಯಾಂಕ್‌ಗಳ…
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪಟ್ಟಣ ಸಹಕಾರ ಬ್ಯಾಂಕ್‌ಗಳ ಸಿಬ್ಬಂದಿಗಳು ಮತ್ತು ಆಡಳಿತಾಧಿಕಾರಿಳಿಗೆ ಉಚಿತ ಕೋವಿಡ್ ಲಸಿಕಾ ಶಿಬಿರವು ನಗರದ ಎಮ್.ಸಿ.ಸಿ. ಬ್ಯಾಂಕ್‌ನ ಸಹಯೋಗದೊಂದಿಗೆ ಜರಗಿತು. ಪಟ್ಟಣ ಸಹಕಾರ ಬ್ಯಾಂಕ್‌ಗಲೋಂದಿಗೆ ನಗರದ ಹಲವಾರು ಸಹಕಾರ ಸಂಘಗಳು, ಸೌಹಾರ್ದ ಸಹಕಾರಿಗಳು ಹಾಗೂ ಕೆಲವೊಂದು ರಾಷ್ಟ್ರೀಕೃತ ಬ್ಯಾಂಕುಗಳ ಸಿಬ್ಬಂದಿಗಳು ಕೂಡಾ ಈ ಶಿಬಿರದ ಪ್ರಯೋಜನವನ್ನು ಪಡೆದರು. ಒಟ್ಟು ದಾಖಲೆಯ 401 ಜನ ಈ ಉಚಿತ ಶಿಬಿರದ ಪ್ರಯೋಜನವನ್ನು ಪಡೆದರು. ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದ ಮಂಗಳೂರು ಮಹಾನಗರದ ಮಹಾಪೌರರಾದ ಶ್ರೀ ಪ್ರೇಮಾನಂದ ಶೆಟ್ಟಿಯವರು ಲಸಿಕೆ ಪಡೆಯುವುದರ ಅಗತ್ಯತೆ ಬಗ್ಗೆ ಸ್ಪಷ್ಟ ಪಡಿಸಿದರು. ರಾಜ್ಯ ಪಟ್ಟಣ ಸಹಕಾರ ಬ್ಯಾಂಕ್‌ಗಳ ಮಹಾಮಂಡಳದ ನಿರ್ದೇಶಕರಾದ ಶ್ರೀ ಹರೀಶ್ ಆಚಾರ್ಯ, ಎಮ್.ಸಿ.ಸಿ. ಬ್ಯಾಂಕ್‌ನ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೋ, ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳದ ನಿರ್ದೇಶಕರಾದ ಶ್ರೀ ಚಿತ್ತರಂಜನ್ ಬೋಳಾರ್, ಜಿಲ್ಲಾ ಲೀಡ್ ಬ್ಯಾಂಕ್ ಮೇನೆಜರ್ ಶ್ರೀ ಪ್ರವೀಣ್ ಕುಮಾರ್, ಎಮ್.ಸಿ.ಸಿ ಬ್ಯಾಂಕ್‌ನ ಉಪ ಮಹಾಪ್ರಬಂಧಕ ಶ್ರೀ ರಾಜ್ ಮತ್ತು…
https://www.youtube.com/watch?v=D7bXO1G03N4
ಕಾರ್ಯದರ್ಶಿ ಶ್ರೀ ಜತಿನ್ ಜಿಜೋ ಅವರಿಂದ ‘ಸ್ಪಂದನʼ ಸಂಸ್ಥೆಯ ಪರಿಚಯ | About ‘Spandana’ | Secretary JITHIN JEIJO
https://www.youtube.com/watch?v=DKXuwVhZPGA
ಶ್ರೀ ರವಿರಾಜ್ ಹೆಗ್ಡೆ | ಅಧ್ಯಕ್ಷರು – ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ | ಸ್ಪಂದನ |
https://www.youtube.com/watch?v=cjmsdujKvKk&t=163s
https://www.youtube.com/watch?v=XxWfmekJxwY&t=1s
ʻಸಹಕಾರʼ ಮತ್ತು ʻಜೀವನʼ – ವೈ.ವಿ ಗುಂಡುರಾವ್ರೊಂದಿಗಿನ ಸಂದರ್ಶನ | Interview with Shri. Y.V GUNDU RAO | PART – 2 |
https://www.youtube.com/watch?v=8fbiUoqhjsI
ʻಸಹಕಾರʼ ಮತ್ತು ʻಜೀವನʼ | ವೈ.ವಿ ಗುಂಡುರಾವ್ರೊಂದಿಗಿನ ಸಂದರ್ಶನ | PART – 1 | | Interview with Shri. Y.V GUNDU RAO
https://www.youtube.com/watch?v=4MXVgp0wfP4
