Author: admin
ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಪಡುಬಿದ್ರಿ ಶಾಖೆಯ ದ್ವಿತೀಯ ವಾರ್ಷಿಕೋತ್ಸವ ಅಂಗವಾಗಿ ರೋಟರಿ ಕ್ಲಬ್ ಪಡುಬಿದ್ರಿ ಹಾಗೂ ಯುವವಾಹಿನಿ ಪಡುಬಿದ್ರಿ ಘಟಕಗಳ ಜಂಟಿ ಸಹಯೋಗದಲ್ಲಿ ಜೂನ್ 23ರಂದು ಭಾನುವಾರ ಬೆಳಿಗ್ಗೆ 9.3೦ರಿಂದ ಮಧ್ಯಾಹ್ನ 12.3೦ರವರೆಗೆ ಪಡುಬಿದ್ರಿಯ ಕರ್ನಾಟಕ ಪಬ್ಲಿಕ್ ಶಾಲೆ (ಬೋರ್ಡ್ ಶಾಲೆ)ಯಲ್ಲಿ ನಡೆಯಲಿದೆ. ವೈದ್ಯಕೀಯ ಶಿಬಿರದಲ್ಲಿ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ, ಯೇನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ದೇರಳಕಟ್ಟೆ ಹಾಗೂ ಸಮುದಾಯ ದಂತ ವಿಭಾಗ, ಯೇನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇವರ ನುರಿತ ವೈದ್ಯರ ತಂಡದಿಂದ ಉಚಿತ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ, ಹುಳುಕು ಹಲ್ಲುಗಳ ಭರ್ತಿ, ಶುಚಿಗೊಳಿಸುವುದು, ಕೀಳುವುದು, ಬಿ.ಪಿ. ಮತ್ತು ಮಧುಮೇಹ ತಪಾಸಣೆ, ಸಾಮಾನ್ಯ ರೋಗ ತಪಾಸಣೆ, ಉಚಿತ ಔಷಧಿ ವಿತರಣೆ, ರಕ್ತ ಗುಂಪಿನ ವರ್ಗೀಕರಣ, ಇತರ ವೈದ್ಯಕೀಯ ಸೇವೆಗಳು ಹಾಗೂ ಹೆಚ್ಚಿನ ಚಿಕಿತ್ಸೆಗೆ ಸೂಕ್ತ ಸಲಹೆ ನೀಡಲಾಗುವುದು. ಅಗತ್ಯವುಳ್ಳ ಕಣ್ಣಿನ ರೋಗಿಗಳಿಗೆ ಸಂಘದ ವತಿಯಿಂದ ಕನ್ನಡಕ ಉಚಿತವಾಗಿ…
ಬೆಳ್ತಂಗಡಿ: ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ವಾಣಿಜ್ಯ ಕಟ್ಟಡ “ಉನ್ನತಿ’ ಇದರ ಉದ್ಘಾಟನಾ ಸಮಾರಂಭ ಜೂನ್ ೨೧ರಂದು(ನಾಳೆ) ಬೆಳಗ್ಗೆ ೧೦.೩೦ಕ್ಕೆ ಕಲ್ಲೇರಿಯ ಸಂಘದ ವಠಾರದಲ್ಲಿ ನಡೆಯಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಲಿದ್ದಾರೆ. ರೈತ ಸಭಾಭವನವನ್ನು ರಾಜ್ಯ ಸಹಕಾರ ಮಹಾಮಂಡಳ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರೀತಮ್ ಡಿ. ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ.ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಕೆ.ಹರೀಶ್ ಕುಮಾರ್, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಮಂಗಳೂರು ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್.ಎನ್., ಪುತ್ತೂರು ಸಹಕಾರ ಸಂಘಗಳ ಸಹಾಯಕ ಉಪನಿಬಂಧಕಿ ತ್ರಿವೇಣಿ ರಾವ್, ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ವಿ.ಪ್ರತಿಮಾ, ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲಾ,…
ಆರ್.ಕೆ ಷಣ್ಮುಖಂ ಚೆಟ್ಟಿಯಿಂದ ನಿರ್ಮಲಾ ಸೀತಾರಾಮನ್ ತನಕ ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಮೂರನೇ ಅವಧಿಗೆ ಆಡಳಿತಕ್ಕೇರಿದೆ. ಮಳೆಗಾಲದ ಅಧಿವೇಶನದಲ್ಲಿ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತೊಮ್ಮೆ ಬಜೆಟ್ ಮಂಡನೆಗೆ ರೆಡಿಯಾಗಿದ್ದಾರೆ. ಕೇಂದ್ರದಲ್ಲಿ ಹೊಸ ಸಹಕಾರ ಸಚಿವಾಲಯ ಆರಂಭವಾದ ಬಳಿಕ ಸಹಕಾರಿ ವಲಯಕ್ಕೂ ಒಂದಷ್ಟು ಕೊಡುಗೆಗಳು ದೊರೆಯುವ ನಿರೀಕ್ಷೆಗಳು ಗರಿಗೆದರಿವೆ. ಈ ಮಧ್ಯೆ ಕೇಂದ್ರ ಬಜೆಟ್ ಆರಂಭವಾದಂದಿನಿಂದ ಈ ತನಕದ ಬಜೆಟ್‌ಗಳ ವಿಶೇಷಗಳ ಬಗ್ಗೆ ಒಂದು ಮೆಲುಕು ಇಲ್ಲಿದೆ. ಭಾರತದಲ್ಲಿ ಬಜೆಟ್ ಅನ್ನು ರಾಷ್ಟ್ರಪತಿಗಳು ನಿಗದಿಪಡಿಸಿದ ದಿನದಂದು ಲೋಕಸಭೆಯಲ್ಲಿ ಹಣಕಾಸು ಸಚಿವರು ಮಂಡಿಸುತ್ತಾರೆ. ಸಾಮಾನ್ಯವಾಗಿ ಕೇಂದ್ರದ ಹಣಕಾಸು ಸಚಿವರು ಫೆಬ್ರವರಿಯ ಕೊನೆಯ ಕೆಲಸದ ದಿನದಂದು ಸಂಸತ್ತಿನಲ್ಲಿ ಮಂಡಿಸುವುದು ನಡೆದುಕೊಂಡು ಬಮದ ಕ್ರಮವಾಗಿತ್ತು. ಆದರೆ ನರೇಂದ್ರ ಮೋದಿ ಸರ್ಕಾರ ಇದನ್ನು ಬದಲಿಸಿ ಫೆಬ್ರವರಿ ಒಂದರದೇ ಬಜೆಟ್ ಮಂಡಿಸುವ ಸಂಪ್ರದಾಯ ತಂದಿದೆ. ಹಣಕಾಸು ಸಚಿವಾಲಯ, ಯೋಜನಾ ಆಯೋಗ, ಆಡಳಿತಾತ್ಮಕ ಸಚಿವಾಲಯಗಳು ಮತ್ತು ಕಂಟ್ರೋಲರ್ ಮತ್ತು ಆಡಿಟರ್ ಜನರಲ್…
ವಿನಯ ಕುಮಾರ್ ಸೂರಿಂಜೆ ಸಲಹೆ ಮಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ದ. ಕ. ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಸಂಯುಕ್ತ ಆಶ್ರಯದಲ್ಲಿ ದ.ಕ. ಜಿಲ್ಲೆಯ ಮಂಗಳೂರು ಉಪವಿಭಾಗದ ವಿವಿಧ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಚುನಾವಣಾ ಪೂರ್ವ ತಯಾರಿ ತರಬೇತಿ ಶಿಬಿರ ಇತ್ತೀಚೆಗೆ ದ. ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಭಾಂಗದಲ್ಲಿ ನಡೆಯಿತು. ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ ಕಾರ್ಯಕ್ರಮ ಉದ್ಘಾಟಿಸಿ, ಸಹಕಾರ ಸಂಘಗಳಲ್ಲಿ ಚುನಾವಣೆ ಕ್ರಮಬದ್ಧವಾಗಿ ನಡೆಸಲು ಕಾಯ್ದೆ ಮತ್ತು ನಿಯಮಗಳ ಅನುಸಾರ ಮುಖ್ಯ ಕಾರ್ಯನಿರ್ವಾಹಕರು ಕಾರ್ಯನಿರ್ವಹಿಸಲು ತರಬೇತಿ ಏರ್ಪಡಿಸಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ದ.ಕ. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಮಾತನಾಡಿ, ಹೊಸ ಆಡಳಿತ ಮಂಡಳಿ ರಚಿಸಬೇಕಾಗಿದ್ದು ಈ ನಿಟ್ಟಿನಲ್ಲಿ ಕಾಯ್ದೆ ಮತ್ತು ನಿಯಮಾನುಸಾರವಾಗಿ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವಲ್ಲಿ ಮುಖ್ಯ ಕಾರ್ಯನಿರ್ವಾಹಕರ ಪಾತ್ರ ಮುಖ್ಯವಾಗಿದೆ ಎಂದರು.ಸಹಕಾರ…
ಆರೋಗ್ಯ ಶಿಬಿರ ಉದ್ಘಾಟಿಸಿ ಬ್ರಹ್ಮಕುಮಾರಿ ಜಯಶ್ರೀ ಶ್ಲಾಘನೆ ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘವು ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತ ಒಳ್ಳಯೆ ಕೆಲಸಗಳನ್ನು ಮಾಡುತ್ತ ಬರುತ್ತಿದೆ. ಆರೋಗ್ಯ ಸಮಸ್ಯೆಗಳು ಕಾಡುತ್ತಿರುವ ಸಂದರ್ಭದಲ್ಲಿ ಇಂಥ ಶಿಬಿರಗಳನ್ನು ಆಯೋಜಿಸುವ ಮೂಲಕ ಸ್ವಸ್ಥ, ಆರೋಗ್ಯಪೂರ್ಣ ಸಮಾಜಕ್ಕೆ ಮಹತ್ತರ ಕೊಡುಗೆ ನೀಡುತ್ತಿದೆ ಎಂದು ಬ್ರಹ್ಮಕುಮಾರಿ ಜಯಶ್ರೀ ಹೇಳಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕೊಟ್ಟಾರ ಶಾಖೆಯ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಯುವವಾಹಿನಿ ಮಂಗಳೂರು ಘಟಕ, ಯುವವಾಹಿನಿ ಮಹಿಳಾ ಘಟಕ, ಪ್ರಗತಿ ಮಹಿಳಾ ಮಂಡಲ ಉರ್ವಸ್ಟೋರ್ ಹಾಗೂ ಬ್ರಹ್ಮಕುಮಾರೀಸ್ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ಉರ್ವಸ್ಟೋರ್‌ನ ಪ್ರಗತಿ ಮಹಿಳಾ ಮಂಡಲದಲ್ಲಿ ಭಾನುವಾರ ಉಚಿತ ನೇತ್ರ ತಪಾಸಣೆ ಮತ್ತು ಸಾಮಾನ್ಯ ವೈದ್ಯಕೀಯ ಶಿಬಿರ ಉದ್ಘಾಟಿಸಿ ಮಾತನಾಡಿದರು.ನಿಧಿಲ್ಯಾಂಡ್ ಇನ್‌ಫ್ರಾಸ್ಟçಕ್ಚರ್ ಡೆವಲಪರ್ಸ್ ಇಂಡಿಯಾ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಪ್ರಶಾಂತ್ ಕುಮಾರ್ ಸನಿಲ್ ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ಮುಂದಾಳತ್ವದಲ್ಲಿ ಆಯೋಜಿಸುತ್ತಿರುವ ಇಂಥ ಸಮಾಜಮುಖಿ ಕಾರ್ಯಕ್ರಮಗಳು…
ಮಂಗಳೂರು: ಸಹಕಾರ ಸಂಘಗಳು ಉತ್ತಮ ಸೇವೆ ನೀಡುವಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸರಿಸಮನಾಗಿ ಕೆಲಸ ಮಾಡುತ್ತವೆ. ಸಹಕಾರಿ ಸಂಘಗಳು ರೈತರ ಹಣವನ್ನು ರೈತರಿಗೆ ನೀಡುವ ಕಾರ್ಯ ಮಾಡುತ್ತವೆ. ಹೊಸಮಠ ಕೃಷಿ ಪತ್ತಿನ ಸಹಕಾರಿ ಸಂಘ ರೈತರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು. ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ “ಸಮೃದ್ಧಿ ಸಹಕಾರ ಸೌಧ”ವನ್ನು ಭಾನುವಾರ ಲೋಕಾರ್ಪಣೆ ಮಾಡಿ ಮಾತನಾಡಿದರು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ವಿಲೀನ ಆಗುವ ದಿನಗಳಲ್ಲಿ ಜನ ಸಹಕಾರಿ ಸಂಘಗಳ ಕಡೆ ಮುಖ ಮಾಡುತ್ತಿದ್ದಾರೆ. ಕೃಷಿ ಪತ್ತಿನ ಸಹಕಾರಿ ಸಂಘಗಳು ಸರಕಾರದ ಸಾಲ ಸೌಲಭ್ಯಗಳನ್ನು ಸಮರ್ಪಕವಾಗಿ ಕೃಷಿಕರಿಗೆ ವಿತರಿಸುತ್ತಿವೆ. ಸಾಲಮನ್ನಾ, ಬೆಳೆ ವಿಮೆಯಂಥ ಸೌಲಭ್ಯಗಳು ರೈತರಿಗೆ ನೇರವಾಗಿ ಸಿಗುತ್ತವೆ ಎಂದು ಬಣ್ಣಿಸಿದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಗೋದಾಮು ಉದ್ಘಾಟಿಸಿ ಮಾತನಾಡಿ ಸಹಕಾರಿ ಸಂಘಗಳು ಇಂದು…
ಸಹಕಾರಿ ಸಂಘಗಳಿಂದ ಜನರಿಗೆ ಉತ್ತಮ ಸೇವೆಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಬಣ್ಣನೆ.
ಕುಂದಾಪುರ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ದೇಶದಲ್ಲಿ ಅತಿಹೆಚ್ಚು ರಾಷ್ಟ್ರೀಕೃತ ಬ್ಯಾಂಕ್‌ಗಳ ಸೃಷ್ಟಿಗೆ ಕಾರಣವಾಗಿದ್ದರೂ ಇಂದು ಅವುಗಳು ಒಂದರಲ್ಲೊಂದು ವಿಲೀನಗೊಳ್ಳುವ ಪ್ರಮೇಯ ಎದುರಾಗಿದೆ. ಇಂಥ ಸಂದರ್ಭದಲ್ಲಿ ಉಭಯ ಜಿಲ್ಲೆಗಳಲ್ಲಿ ಸಹಕಾರಿ ಬ್ಯಾಂಕ್‌ಗಳು ಜನರಿಗೆ ಉತ್ತಮ ಸೇವೆ ಒದಗಿಸುತ್ತ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರ ಸಂಘದ ನವೀಕೃತ ಸುವರ್ಣ ಸೌಧ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದ ಬೆಳವಣಿಗೆಯ ಜೊತೆಗೆ ಮಹಿಳಾ ಸಬಲೀಕರಣವೂ ಆಗಿದೆ. ನವೋದಯ ಗುಂಪುಗಳ ಮೂಲಕ ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದಾರೆ. ರಾಜ್ಯದಲ್ಲಿ ಏಳು ಜಿಲ್ಲೆಗಳಲ್ಲಿ ನವೋದಯ ಸ್ವಸಹಾಯ ಗುಂಪುಗಳು ಇಂದು ಪ್ರಬಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ ಡಾ.ರಾಜೇಂದ್ರ ಕುಮಾರ್, ಅಮಾಸೆಬೈಲು ವ್ಯವಸಾಯ ಸೇವಾ ಸಹಕಾರಿ ಸಂಘದ ನವೀಕೃತ ಕಟ್ಟಡಕ್ಕೆ ೧೦ ಲಕ್ಷ ರೂ. ದೇಣಿಗ ನೀಡುವುದಾಗಿ ಘೋಷಿಸಿದರು.ಸಂಸದ ಕೋಟ…
ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕೊಟ್ಟಾರ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಜೂನ್ ೧೬ರಂದು ಯುವವಾಹಿನಿ ಮಂಗಳೂರು ಘಟಕ, ಯುವವಾಹಿನಿ ಮಹಿಳಾ ಘಟಕ, ಪ್ರಗತಿ ಮಹಿಳಾ ಉರ್ವಸ್ಟೋರ್ ಹಾಗೂ ಬ್ರಹ್ಮಕುಮಾರೀಸ್ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನ ಸಮೀಪದ ಪ್ರಗತಿ ಮಹಿಳಾ ಮಂಡಲ ಕಟ್ಟಡದಲ್ಲಿ ಕೆಎಂಸಿ ಆಸ್ಪತ್ರೆ ಅತ್ತಾವರ ಇದರ ನುರಿತ ತಜ್ಞ ವೈದ್ಯರಿಂದ ಬೆಳಗ್ಗೆ ೯.೩೦ರಿಂದ ಮಧ್ಯಾಹ್ನ ೧೨.೩೦ರ ತನಕ ನೇತ್ರ ಉಚಿತ ತಪಾಸಣೆ ಮತ್ತು ಸಾಮಾನ್ಯ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕನ್ನಡಕ ಉಚಿತ ವಿತರಣೆ ಹಾಗೂ ಕಣ್ಣಿನ ಪೊರೆಯ ಶಸ್ತçಚಿಕಿತ್ಸೆ ಮಾಡಲಾಗುವುದು. ಬಿ.ಪಿ., ಮಧುಮೇಹ, ಸಾಮಾನ್ಯ ರೋಗ ತಪಾಸಣೆ ಮತ್ತು ಔಷಧ ವಿತರಣೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ: ೦೮೨೪-೨೦೦೩೨೦೦ ಇದಕ್ಕೆ ಸಂಪರ್ಕಿಸಬಹುದು. ಸಹಕಾರಿ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಿ: sahakaraspandana@gmail.com ಮಾಹಿತಿಗೆ: 9901319694.
ಸಿಬ್ಬಂದಿಗೆ ಉತ್ತಮ ಮನೋಭಾವ, ಕೆಲಸದ ಮೇಲೆ ತೃಪ್ತಿ: ಎಂಸಿಸಿ ಬ್ಯಾಂಕಿನ ವಾರ್ಷಿಕ ಪ್ರಗತಿ ಪರಿಶೀಲನೆ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಾನ್ ವಾಸ್ ಅಭಿಪ್ರಾಯ
ಮಂಗಳೂರು: ಮಂಗಳೂರು ಕೆಥೋಲಿಕ್ ಕೋ ಆಪರೇಟಿವ್ (ಎಂ.ಸಿ.ಸಿ.) ಬ್ಯಾಂಕಿನ ವಾರ್ಷಿಕ ಪ್ರಗತಿ ಪರಿಶೀಲನೆ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಇತ್ತೀಚೆಗೆ ಬ್ಯಾಂಕಿನ ಪಿ.ಎಫ್.ಎಕ್ಸ್. ಸಲ್ಡಾನ್ಹಾ ಮೆಮೊರಿಯಲ್ ಸಭಾಂಗಣದಲ್ಲಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆಯಲ್ಲಿ ನಡೆಯಿತು. ಮಂಗಳೂರು ಧರ್ಮಪ್ರಾಂತ ಮಾಜಿ ಪ್ರೊ ಕುರೇಟರ್ ಜಾನ್ ವಾಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬ್ಯಾಂಕಿನ ಸಿಬ್ಬಂದಿ ಬ್ಯಾಂಕಿನಲ್ಲಿ ಕೆಲಸ ಮಾಡಲು ಉತ್ತಮ ಮನೋಭಾವ ಹೊಂದಿರಬೇಕು ಹಾಗೂ ಕೆಲಸದ ಮೇಲೆ ಅವರಿಗೆ ತೃಪ್ತಿ ಇರಬೇಕು. ಬ್ಯಾಂಕಿನ ಪ್ರಗತಿ ಹೆಚ್ಚಿಸಲು ನಿಗದಿತ ಗುರಿ ಸಾಧಿಸುವುದು ಅತಿ ಆಗತ್ಯ ಎಂದು ಬಣ್ಣಿಸಿದರು. ಆಕಾಶದತ್ತ ಗುರಿಯಿಡಿ, ನೀವು ಮರದ ತುದಿಯನ್ನು ತಲುಪುತ್ತೀರಿ ಎಂಬ ಮಾತು ನೆನಪಿಸಿಕೊಂಡ ಅವರು, ಕಳೆದ ದಶಕದಲ್ಲಿ ಎಂ.ಸಿ.ಸಿ ಬ್ಯಾಂಕಿನ ಸಾಧಿಸಿದ ಅಗಾಧ ಪ್ರಗತಿಗಾಗಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗವನ್ನು ಅಭಿನಂದಿಸಿದರು. ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಸಮರ್ಪಿತ ಸೇವೆಗಾಗಿ ಬ್ಯಾಂಕಿನ ಸಿಬ್ಬಂದಿಯನ್ನು ಶ್ಲಾಘಿಸಿ, ಅಬಿನಂದಿಸಿದರು. ಬಳಿಕ ಮಾತನಾಡಿದ ಅವರು,…
ನಿರಂತರ ಉನ್ನತ ಸಾಧನೆಯ ಹಾದಿಯಲ್ಲಿ ಸಾಗಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ೨೦೨೩-೨೪ನೇ ಸಾಲಿನಲ್ಲಿ ೨೦೦೦ ಕೋಟಿ ರೂ.ಗೂ ಮೀರಿ ವಾರ್ಷಿಕ ವಹಿವಾಟು ನಡೆಸಿದೆ. ವರದಿ ಸಾಲಿನಲ್ಲಿ ೨೨೫ ಕೋಟಿ ರೂ.ಗೂ ಅಧಿಕ ಠೇವಣಿ, ೧೭೮ ಕೋಟಿ ರೂ.ಗೂ ಮಿಕ್ಕಿ ಸಾಲ, ೧.೪೮ ಕೋಟಿ ರೂ. ಪಾಲು ಬಂಡವಾಳದೊAದಿಗೆ ಸಂಘವು ೩.೩ ಕೋಟಿ ರೂ. ಗೂ ಮಿಕ್ಕಿ ಲಾಭ ಗಳಿಸಿದೆ. ಸಂಘದ ದಶಮಾನೋತ್ಸವದ ಸಂದರ್ಭದಲ್ಲಿ ೧೪,೦೦೦ ಚದರಡಿಯ ಸ್ವಂತ ಕಟ್ಟಡ ಹೊಂದಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ರೀತಿ ಸಾಧನೆ ಮಾಡಿದ ಏಕಮಾತ್ರ ವಿವಿಧೋದ್ದೇಶ ಸಹಕಾರಿ ಸಂಘ ಎನಿಸಿದೆ. ಅಲ್ಪಾವಧಿಯಲ್ಲೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೩೦ ಶಾಖೆಗಳು ಆರಂಭವಾಗಿ ನುರಿತ ಸಿಬ್ಬಂದಿ ವರ್ಗದ ಅತ್ಯುತ್ತಮ ಗುಣಮಟ್ಟದ ಸೇವೆಗಾಗಿ ರಾಜ್ಯ ಹಾಗೂ ರಾಷ್ಟçಮಟ್ಟದ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಆತ್ಮಶಕ್ತಿ ಸಹಕಾರಿ ಸಂಘವು ಮಹಿಳಾ ಸಬಲೀಕರಣ ಧ್ಯೇಯದೊಂದಿಗೆ ಶೇ. ೯೫ ಮಹಿಳಾ ಸಿಬ್ಬಂದಿಗಳಿಂದಲೇ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದೆ. ಸಂಘವು ಮುಂದಿನ ದಿನಗಳಲ್ಲಿ…
