- ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅಭಿಪ್ರಾಯ
- ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಸಮೃದ್ಧಿ ಸಹಕಾರ ಸೌಧ ಉದ್ಘಾಟನೆ
ಮಂಗಳೂರು: ಸಹಕಾರ ಸಂಘಗಳು ಉತ್ತಮ ಸೇವೆ ನೀಡುವಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸರಿಸಮನಾಗಿ ಕೆಲಸ ಮಾಡುತ್ತವೆ. ಸಹಕಾರಿ ಸಂಘಗಳು ರೈತರ ಹಣವನ್ನು ರೈತರಿಗೆ ನೀಡುವ ಕಾರ್ಯ ಮಾಡುತ್ತವೆ. ಹೊಸಮಠ ಕೃಷಿ ಪತ್ತಿನ ಸಹಕಾರಿ ಸಂಘ ರೈತರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು.
ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ “ಸಮೃದ್ಧಿ ಸಹಕಾರ ಸೌಧ”ವನ್ನು ಭಾನುವಾರ ಲೋಕಾರ್ಪಣೆ ಮಾಡಿ ಮಾತನಾಡಿದರು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ವಿಲೀನ ಆಗುವ ದಿನಗಳಲ್ಲಿ ಜನ ಸಹಕಾರಿ ಸಂಘಗಳ ಕಡೆ ಮುಖ ಮಾಡುತ್ತಿದ್ದಾರೆ. ಕೃಷಿ ಪತ್ತಿನ ಸಹಕಾರಿ ಸಂಘಗಳು ಸರಕಾರದ ಸಾಲ ಸೌಲಭ್ಯಗಳನ್ನು ಸಮರ್ಪಕವಾಗಿ ಕೃಷಿಕರಿಗೆ ವಿತರಿಸುತ್ತಿವೆ. ಸಾಲಮನ್ನಾ, ಬೆಳೆ ವಿಮೆಯಂಥ ಸೌಲಭ್ಯಗಳು ರೈತರಿಗೆ ನೇರವಾಗಿ ಸಿಗುತ್ತವೆ ಎಂದು ಬಣ್ಣಿಸಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಗೋದಾಮು ಉದ್ಘಾಟಿಸಿ ಮಾತನಾಡಿ ಸಹಕಾರಿ ಸಂಘಗಳು ಇಂದು ಗ್ರಾಮೀಣ ಭಾಗದ ರೈತರ, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಪೂರಕವಾಗಿ ಕೆಲಸ ಮಾಡುತ್ತಿವೆ. ಬಡವರ ಜೀವನ ಮಟ್ಟ ಸುಧಾರಿಸುವ ಕೆಲಸವೂ ಸಹಕಾರಿ ಸಂಘಗಳಿಂದ ಆಗುತ್ತವೆ ಎಂದರು. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ ಭದ್ರತಾ ಉದ್ಘಾಟಿಸಿ ಮಾತನಾಡಿ, ವ್ಯವಹಾರದ ದೃಷ್ಟಿಯಿಂದ ರೈತರಿಗೆ ಸುಲಭ ಸಂಪರ್ಕದ ಹಣಕಾಸು ಸಂಸ್ಥೆಗಳಾಗಿರುವ ಸಹಕಾರಿ ಸಂಘಗಳು ಹೈನುಗಾರಿಕೆ ಸೇರಿದಂತೆ ವಿವಿಧ ವ್ಯವಹಾರಗಳನ್ನು ನಡೆಸಲು ಸಾಲ ನೀಡಿ ಸ್ವಾವಲಂಬಿ ಬದುಕಿಗೆ ಪ್ರೇರಣೆ ನೀಡುತ್ತಿವೆ ಎಂದರು.
ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಎಸ್.ಎನ್,ಮನ್ಮಥ, ಎಸ್.ಬಿ.ಜಯರಾಮ ರೈ, ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮನಾ ಮುಖ್ಯ ಅತಿಥಿಗಳಾಗಿದ್ದರು. ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ದೇವಾಡಿಗ ಸನಿಲ, ನಿರ್ದೆಶಕರಾದ ಶಶಾಂಕ್ ಗೋಖಲೆ, ಶಿವಪ್ರಸಾದ್ ಪುತ್ತಿಲ, ಪದ್ಮಯ್ಯ ಪೂಜಾರಿ, ಜಗನ್ನಾಥ ಜಿ., ಬಿ.ನೀಲಯ್ಯ ಮಲೆಕುಡಿಯ, ಸೀತಾರಾಮ ಗೌಡ ಡಿ.ಪಿ., ಕುಶಕುಮಾರ್, ಕುಕ್ಕ ಎನ್., ಸೀತಮ್ಮ, ಸವಿತಾ ಸಿ.ಜಿ., ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಲಯ ಮೇಲ್ವಿಚಾರಕ ಪ್ರದೀಪ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಜಯಚಂದ್ರ ರೈ ಕುಂಟೋಡಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಸೋಮಸುಂದರ ಶೆಟ್ಟಿ ಎಂ.ಕೆ ವಂದಿಸಿದರು. ಪ್ರಸನ್ನ ಕುಮಾರ್ ಪುತ್ರಬೈಲು ಹಾಗೂ ತಂಡದವರು ರೈತಗೀತೆ ಹಾಡಿದರು. ಪತ್ರಕರ್ತ ನಾಗರಾಜ್ ಎನ್.ಕೆ ಹಾಗೂ ಸಂಘದ ಸಿಬ್ಬಂದಿ ತೋಮಸ್ ಪಿ.ಎಂ ಕಾರ್ಯಕ್ರಮ ನಿರೂಪಿಸಿದರು.
ಸಹಕಾರಿ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಿ:
Email: sahakaraspandana@gmail.com
ಮಾಹಿತಿಗೆ: 9901319694.