Close Menu
    Top News

    ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳ ಎನ್‌ಪಿಎ 21,769 ಕೋಟಿ ರೂ.ಗೆ ಇಳಿಕೆ

    July 23, 2026

    ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಎನ್‌ಸಿಡಿಸಿ 5.74 ಕೋಟಿ ರೂ. ವಿತರಣೆ

    July 23, 2026

    ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಕಾರ್ಗಿಲ್ ವಿಜಯೋತ್ಸವ

    July 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಆತ್ಮಶಕ್ತಿ ಸಹಕಾರಿ ಸಂಘದಿಂದ ಮೇ 10ರಂದು ಪಕ್ಷಿಕೆರೆಯಲ್ಲಿ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ, ದಂತ ಚಿಕಿತ್ಸಾ ಶಿಬಿರ
    News

    ಆತ್ಮಶಕ್ತಿ ಸಹಕಾರಿ ಸಂಘದಿಂದ ಮೇ 10ರಂದು ಪಕ್ಷಿಕೆರೆಯಲ್ಲಿ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ, ದಂತ ಚಿಕಿತ್ಸಾ ಶಿಬಿರ

    adminBy adminMay 7, 2026

    ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪಕ್ಷಿಕೆರೆ ಶಾಖೆಯ ದ್ವಿತೀಯ ವಾರ್ಷಿಕೋತ್ಸವ ಪ್ರಯುಕ್ತ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ಚಿಕಿತ್ಸಾ ಶಿಬಿರವನ್ನು ಮೇ 10ರಂದು ಭಾನುವಾರ ಪೂರ್ವಾಹ್ನ 9.30ರಿಂದ ಅಪರಾಹ್ನ 12.30ರವರೆಗೆ ಪಕ್ಷಿಕೆರೆಯ ಕೋರ್ದಬ್ಬು ದೈವಸ್ಥಾನ ಬಳಿಯ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ.

    https://chat.whatsapp.com/FCEnlTkAKCC0MGPhXtX4i4
    ಈ ಶಿಬಿರದಲ್ಲಿ ಮಣಿಪಾಲ ಕಾಲೇಜ್ ಆಫ್‌ ಡೆಂಟಲ್ ಸೈನ್ಸನ್‌ ಮಂಗಳೂರು ಇದರ ನುರಿತ ವೈದ್ಯರ ತಂಡದವರಿಂದ ದಂತ ತಪಾಸಣೆ ಮತ್ತು ಸಲಹೆ, ಹಲ್ಲುಗಳ ಶುಚಿ, ಹುಳುಕು ಹಲ್ಲುಗಳನ್ನು ಭರ್ತಿ ಮಾಡುವುದು ಹಾಗೂ ಕೆಎಂಸಿ ಆಸ್ಪತ್ರೆ ಅತ್ತಾವರ ಇದರ ನುರಿತ ವೈದ್ಯರ ತಂಡದವರಿಂದ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ, ಮಧುಮೇಹ ತಪಾಸಣೆ, ಬಿ.ಪಿ ತಪಾಸಣೆ, ಸಾಮಾನ್ಯ ವೈದ್ಯಕೀಯ ಸಮಾಲೋಚನೆ, ಕಿವಿ, ಮೂಗು ಮತ್ತು ಗಂಟಲು ತಪಾಸಣೆ, ಹೆಚ್ಚಿನ ಚಿಕಿತ್ಸೆಗೆ ಹಸಿರು ಕಾರ್ಡು ನೀಡುವುದು ಹಾಗೂ ಇತರ ವೈದ್ಯಕೀಯ ಸೇವೆಗಳು ಲಭ್ಯವಿರುತ್ತದೆ. ಅಗತ್ಯವುಳ್ಳವರಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಗುವುದು.
    ಈ ವೈದ್ಯಕೀಯ ಶಿಬಿರವನ್ನು ಎನ್. ಜಿ. ವರ್ಲ್ಡ್‌ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಎಸ್.ಕೋಡಿ ತೋಕೂರು, ವಿನಾಯಕ ಮಿತ್ರಮಂಡಳಿ ಹಾಗೂ ವಿನಾಯಕ ಮಹಿಳಾ ಮಂಡಳಿ ಪಕ್ಷಿಕೆರೆ, ಶ್ರೀ ಹರಿಪಾದ ಜಾರಂದಾಯ ಯುವಕ ಮಂಡಲ ಹಾಗೂ ಮಹಿಳಾ ಮಂಡಳಿ ಪಂಜ, ಕೊಯಿಕುಡೆ ಹಾಗೂ ಶ್ರೀ ಕೋರ‍್ದಬ್ಬು ದೈವಸ್ಥಾನ ಸೇವಾ ಸಮಿತಿ ಪಕ್ಷಿಕೆರೆ ಇವರುಗಳ ಸಹಕಾರದೊಂದಿಗೆ ಆಯೋಜಿಸಲಾಗಿದೆ. ಸಂಘದ ಸದಸ್ಯರು ಮತ್ತು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Atmashakthi Vividhoddesha Sahakari Sangha Brahmashree Narayana Guru Seva Sangha S.Kodi Tokuru Chittaranjan Bolar N.G World Charitable Trust Mangalore
    Previous Articleಶ್ರೀ ಲಕ್ಷ್ಮೀನಾರಾಯಣ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ : 1.17 ಕೋಟಿ ರೂ. ಲಾಭ
    Next Article ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ ಕೆ.ಬಿ.ಜಯಪಾಲ ಶೆಟ್ಟಿ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ

    Related Posts

    ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳ ಎನ್‌ಪಿಎ 21,769 ಕೋಟಿ ರೂ.ಗೆ ಇಳಿಕೆ

    July 23, 2026

    ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಎನ್‌ಸಿಡಿಸಿ 5.74 ಕೋಟಿ ರೂ. ವಿತರಣೆ

    July 23, 2026

    ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಕಾರ್ಗಿಲ್ ವಿಜಯೋತ್ಸವ

    July 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳ ಎನ್‌ಪಿಎ 21,769 ಕೋಟಿ ರೂ.ಗೆ ಇಳಿಕೆ

    July 23, 2026

    ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಎನ್‌ಸಿಡಿಸಿ 5.74 ಕೋಟಿ ರೂ. ವಿತರಣೆ

    July 23, 2026

    ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಕಾರ್ಗಿಲ್ ವಿಜಯೋತ್ಸವ

    July 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.