ಗುಜರಾತ್‌ನಲ್ಲಿ ರಾಜ್ಯದಲ್ಲೇ ಪ್ರಥಮ ಮಾರ್ಕೆಟ್ ಕಾರ್ಯಾರಂಭ
ಅಹ್ಮದಾಬಾದ್: ಗುಜರಾತ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ -ಗುಜ್ಕೋಮಸೋಲ್ ನೇತೃತ್ವದಲ್ಲಿ ಗುಜರಾತ್‌ನ ಪ್ರಥಮ ಕೋಆಪರೇಟಿವ್ ಸೂಪರ್ ಮಾರ್ಕೆಟ್ ಗುಜ್ಕೋ ಮಾಲ್ ಅಹ್ಮದಾಬಾದ್‌ನಲ್ಲಿ ಸೋಮವಾರ ಕಾರ್ಯಾರಂಭ ಮಾಡಿದೆ. ಭಾರತದ ಕೋಆಪರೇಟಿವ್ ವಲಯದ ಪ್ರಮುಖರಲ್ಲೊಬ್ಬರಾದ ಫೆಡರೇಷನ್‌ನ ಅಧ್ಯಕ್ಷ ದಿಲೀಪ್ ಸಾಂಘನಿ ನೇತೃತ್ವದಲ್ಲಿ ಇದು ಕಾರ್ಯಾಚರಿಸಲಿದೆ.
https://chat.whatsapp.com/Ge11n7QCiMj5QyPvCc0H19
ಉದ್ಘಾಟನಾ ಸಮಾರಂಭದಲ್ಲಿ ಗುಜರಾತ್ ರಾಜ್ಯ ಕೋಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಅಜಯ್ ಪಟೇಲ್ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು. ದೇಶದ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಹಮ್ಮಿಕೊಂಡಿದ್ದ ವಿಕಾಸ್ ಸಪ್ತಾಹಕ್ಕೆ 23 ವರ್ಷಗಳು ಸಂದ ಕಾಲದಲ್ಲೇ ಈ ಮಾಲ್ ಉದ್ಘಾಟನೆಯಾಗಿರುವುದು ವಿಶೇಷ. ರಾಜ್ಯದ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಹಾಗೂ ಸಾವಯವ ಉತ್ಪನ್ನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳಿಗೆ ಈ ಸೂಪರ್‌ಮಾರ್ಕೆಟ್ ಸಹಕಾರಿಯಾಗಲಿದೆ.
ಗುಜ್ಕೋ ಮಾಲ್ ಸೂಪರ್ ಮಾರ್ಕೆಟ್ ನೇರವಾಗಿ ರೈತರ ಜೊತೆ ವ್ಯವಹಾರ ಮಾಡಲಿದ್ದು ಅವರಿಗೆ ಹೆಚ್ಚಿನ ನೆರವು ಒದಗಿಸುವ ಉದ್ದೇಶ ಹೊಂದಿದೆ. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ದಿಲೀಪ್ ಸಾಂಘನಿ, ಗುಜರಾತ್ ರಾಜ್ಯಾದ್ಯಂತ 250ಕ್ಕೂ ಅಧಿಕ ಕೋಆಪರೇಟಿವ್ ಸೂಪರ್ ಮಾರ್ಕೆಟ್‌ಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಸಣ್ಣ ನಗರಗಳಿಗೂ ಇದನ್ನು ವಿಸ್ತರಿಸುವ ಗುರಿ ಇದೆ ಎಂದು ತಿಳಿಸಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com