Top News

    ಬ್ಯಾಂಕಿನ ಸ್ವರ್ಣ ಸಂಭ್ರಮದ ಯೋಜನೆಗಳು ಸಮಾಜಮುಖಿ

    May 11, 2025

    ನವೋದಯ ಗುಂಪುಗಳ ರಜತ ಸಂಭ್ರಮ ಐತಿಹಾಸಿಕ ಕಾರ್ಯಕ್ರಮ

    May 10, 2025

    ಸೈನಿಕರ ಕಲ್ಯಾಣ ನಿಧಿಗೆ ಡಾ.ಎಂ.ಎನ್.ರಾಜೇಂದ್ರ ಕುಮಾರ್ 3 ಕೋಟಿ ರೂ. ದೇಣಿಗೆ

    May 10, 2025
    Facebook Twitter Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಸೌಹಾರ್ದ ಸಹಕಾರಿಗಳಲ್ಲಿ ಗುಣಮಟ್ಟದ ಸೇವೆಗೆ ಸಿಬ್ಬಂದಿಗಳ ಶ್ರಮ ಮುಖ್ಯ
    News

    ಸೌಹಾರ್ದ ಸಹಕಾರಿಗಳಲ್ಲಿ ಗುಣಮಟ್ಟದ ಸೇವೆಗೆ ಸಿಬ್ಬಂದಿಗಳ ಶ್ರಮ ಮುಖ್ಯ

    adminBy adminJanuary 4, 2025

    ಸೌಹಾರ್ದ ಕಾಯ್ದೆಯ ರಜತ ಮಹೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ವಿ.ಕಿಶನ್‌ ರಾವ್ ಕುಲಕರ್ಣಿ ಅಭಿಪ್ರಾಯ

    ರಾಯಚೂರು: ರಾಯಚೂರು ತಾಲೂಕು ಸೌಹಾರ್ದ ಸಹಕಾರಿಗಳ ಕಾರ್ಯನಿರತ ನೌಕರರ ಸಂಘದ ವತಿಯಿಂದ ಸೌಹಾರ್ದ ಕಾಯ್ದೆಯ ರಜತ ಮಹೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ಸ್ಟೇಶನ್ ರಸ್ತೆಯಲ್ಲಿರುವ ಕೊಠಾರಿ ಫಂಕ್ಷನ್ ಹಾಲ್‌ನಲ್ಲಿ ಆಚರಿಸಲಾಯಿತು.https://chat.whatsapp.com/Ge11n7QCiMj5QyPvCc0H19
    ಸೌಹಾರ್ದ ಕಾಯ್ದೆ ಜಾರಿಗೆ ಬಂದು 25 ವರ್ಷ ಪೂರೈಸಿದ ನಿಮಿತ್ತ ರಜತ ಮಹೋತ್ಸವ ಕಾರ್ಯಕ್ರಮವನ್ನು ರಾಯಚೂರು ತಾಲೂಕು ಸೌಹಾರ್ದ ಸಹಕಾರಿಗಳ ಕಾರ್ಯನಿರತ ನೌಕರರ ಸಂಘದ ವತಿಯಿಂದ ಆಚರಿಸಲಾಯಿತು. ವಿಶ್ವರಾಜ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಿ.ಕಿಶನ್‌ ರಾವ್ ಕುಲಕರ್ಣಿ, ಯುವಶಕ್ತಿ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಂ.ಇಲಿಯಾಸ್ ಪಾಶಾ ಮತ್ತು ನೌಕರರ ಸಂಘದ ಅಧ್ಯಕ್ಷ ರವಿಕುಮಾರ ಸಹಕಾರಿಯ ಧ್ವಜಾರೋಹಣ ನೆರವೇರಿಸಿದರು.
    ವಿ.ಕಿಶನ್‌ ರಾವ್ ಕುಲಕರ್ಣಿ ಮಾತನಾಡಿ, ಸೌಹಾರ್ದ ಸಹಕಾರಿಗಳನ್ನು ಗುಣಮಟ್ಟದಲ್ಲಿ ಬೆಳೆಸಬೇಕಾದರೆ ಸಿಬ್ಬಂದಿಗಳ ಶ್ರಮ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದು ತಿಳಿಸಿದರು. ರಾಯಚೂರು ಜಿಲ್ಲಾ ಸೌಹಾರ್ದ ಒಕ್ಕೂಟದ ನಿರ್ದೇಶಕ ಮತ್ತು ಅಕ್ಷಯ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಕುಂಟ್ನಾಳ ವೆಂಕಟೇಶ ಮಾತನಾಡಿ ಸಂಸ್ಥೆಯ ಅಳಿವು ಉಳಿವು ಸಿಬ್ಬಂದಿಗಳ ಕೈಯಲ್ಲಿರುತ್ತದೆ ಎಂದು ಹೇಳಿದರು.


    ವೀರಶೈವ ವಿಕಾಸ ಕ್ರೆಡಿಟ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಪ್ರಭುದೇವರು ಎಚ್.ಎಂ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ವೈಯಕ್ತಿಕ ಹಿತಾಸಕ್ತಿಗಿಂತ ಸೌಹಾರ್ದ ಕಾಯ್ದೆಯ ಆಶಯ ಮತ್ತು ಮೂಲ ಉದ್ದೇಶಕ್ಕೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸುವ ಜವಾಬ್ದಾರಿಯು ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸುವುದು ಅತ್ಯಂತ ಪ್ರಮುಖವಾಗಿರುತ್ತವೆ ಎಂದು ತಿಳಿಸಿದರು.
    ಮುಖ್ಯ ಅತಿಥಿಗಳಾಗಿ ವಿವಿಧ ಸೌಹಾರ್ದ ಸಹಕಾರಿಗಳ ಅಧ್ಯಕ್ಷರುಗಳಾದ ನಾಗಪ್ಪ ಹೊರಪ್ಪಾಟಿ, ಕೆ.ವೇಣುಗೋಪಾಲ್, ಮಲ್ದಾರರಾವ್ ಕುಲಕರ್ಣಿ, ಅಮರೇಶ ನಿಲೋಗಲ್, ಸತ್ಯನಾರಾಯಣ ಗಾಣಧಾಳ, ಹನುಮಂತಗೌಡ ಹರವಿ, ವಿಶ್ವನಾಥ ಹಿರೇಮಠ, ಕುಂಟ್ನಾಳ ವೆಂಕಟೇಶ, ಎಂ.ಇಲಿಯಾಸ್ ಪಾಶಾ, ಶಿವಪ್ಪ ನಾಯಕ್, ಪ್ರಭುದೇವರು ಎಚ್.ಎಂ. ವಿ.ಕಿಶನ್‌ರಾವ್ ಕುಲಕರ್ಣಿ ಭಾಗವಹಿಸಿದ್ದರು.


    ರವಿಕುಮಾರ ಆಶಾಪೂರ ಅಧ್ಯಕ್ಷತೆ ವಹಿಸಿದ್ದರು. ಬಸವಲಿಂಗ ಸೌಹಾರ್ದದ ಮುಖ್ಯ ಕಾರ್ಯನಿರ್ವಾಹಕಿ ಶಿವಲೀಲಾ ರೆಡ್ಡಿ ಪ್ರಾರ್ಥನೆ ಹಾಡಿದರು. ಪಂಚಮುಖಿ ಸೌಹಾರ್ದದ ಮುಖ್ಯ ಕಾರ್ಯನಿರ್ವಾಹಕರಾದ ನಾಗರಾಜ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ಶಿವಪಾರ್ವತಿ ಗಣೇಶ ಸೌಹಾರ್ದದ ಮುಖ್ಯ ಕಾರ್ಯನಿರ್ವಾಹಕ ಪ್ರಭಾಕರ ರೆಡ್ಡಿ ವಂದಿಸಿದರು.
    ರಾಯಚೂರು ನಗರದ ಎಲ್ಲಾ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು, ಮಂಡಳಿ ನಿರ್ದೇಶಕರು, ಸಿಬ್ಬಂದಿ ವರ್ಗದವರು, ಪಿಗ್ಮಿ ಸಂಗ್ರಹಗಾರರು, ನೌಕರರ ಸಂಘದ ಉಪಾಧ್ಯಕ್ಷೆ ಅಮೃತ ಹನುಮಂತಗೌಡ, ಕಾನೂನು ಸಲಹೆಗಾರರಾದ ಜಿತೇಂದ್ರ ಹರದಾರ, ಪ್ರಧಾನ ಕಾರ್ಯದರ್ಶಿ ವೆಲ್ಲಪು ಗಾಲಯ್ಯ, ಖಜಾಂಚಿ ಗಿರಿಯಪ್ಪ ಹವಲ್ದಾರ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಅಶೋಕ ನಾಯಕ್, ಸುಷ್ಮಿತಾ, ರಾಜೇಶ ಸಿ.ಹೆಚ್, ಪ್ರಮೋದ ಕುಮಾರ, ಶ್ರೀಮತಿ ರಾಧಿಕಾ ಮತ್ತು ದೇವಪ್ಪ ಮೊದಲಾದವರು ಹಾಜರಿದ್ದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

     

    Akshaya Vividhoddesha Souharda Sahakari Kishan Rao Kulakarni Kotari Function Hall Raichuru Kuntnala Venkatesh M Iliyaas Paasha
    Previous Articleರಾಯಚೂರು ಜಿಲ್ಲಾ ಸೌಹಾರ್ದ ಸಹಕಾರಿಗಳ ಸಿಇಒಗಳ ವಾರ್ಷಿಕ ಸಭೆ
    Next Article ಹೊನ್ನಾವರ ಅರ್ಬನ್ ಬ್ಯಾಂಕ್ ಅಧ್ಯಕ್ಷರಾಗಿ ರಾಘವ ವಿಷ್ಣು ಬಾಳೇರಿ ಪುನರಾಯ್ಕೆ

    Related Posts

    News

    ಬ್ಯಾಂಕಿನ ಸ್ವರ್ಣ ಸಂಭ್ರಮದ ಯೋಜನೆಗಳು ಸಮಾಜಮುಖಿ

    May 11, 2025
    News

    ನವೋದಯ ಗುಂಪುಗಳ ರಜತ ಸಂಭ್ರಮ ಐತಿಹಾಸಿಕ ಕಾರ್ಯಕ್ರಮ

    May 10, 2025
    News

    ಸೈನಿಕರ ಕಲ್ಯಾಣ ನಿಧಿಗೆ ಡಾ.ಎಂ.ಎನ್.ರಾಜೇಂದ್ರ ಕುಮಾರ್ 3 ಕೋಟಿ ರೂ. ದೇಣಿಗೆ

    May 10, 2025
    Add A Comment

    Leave A Reply Cancel Reply

    Video Player
    https://www.youtube.com/watch?v=_NK5IdvdV7E
    00:00
    00:00
    05:55
    Use Up/Down Arrow keys to increase or decrease volume.
    Video Player
    https://www.youtube.com/watch?v=DKXuwVhZPGA
    00:00
    00:00
    08:14
    Use Up/Down Arrow keys to increase or decrease volume.

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Video Player
    https://www.youtube.com/watch?v=4MXVgp0wfP4
    00:00
    00:00
    11:22
    Use Up/Down Arrow keys to increase or decrease volume.
    Video Player
    https://www.youtube.com/watch?v=CWhi20oYsrc
    00:00
    00:00
    21:22
    Use Up/Down Arrow keys to increase or decrease volume.
    Video Player
    https://www.youtube.com/watch?v=mqot4bOMPpI
    00:00
    00:00
    18:33
    Use Up/Down Arrow keys to increase or decrease volume.
    Top Post

    ಬ್ಯಾಂಕಿನ ಸ್ವರ್ಣ ಸಂಭ್ರಮದ ಯೋಜನೆಗಳು ಸಮಾಜಮುಖಿ

    May 11, 2025

    ನವೋದಯ ಗುಂಪುಗಳ ರಜತ ಸಂಭ್ರಮ ಐತಿಹಾಸಿಕ ಕಾರ್ಯಕ್ರಮ

    May 10, 2025

    ಸೈನಿಕರ ಕಲ್ಯಾಣ ನಿಧಿಗೆ ಡಾ.ಎಂ.ಎನ್.ರಾಜೇಂದ್ರ ಕುಮಾರ್ 3 ಕೋಟಿ ರೂ. ದೇಣಿಗೆ

    May 10, 2025
    Facebook Twitter YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.