ಮಂಗಳೂರು: ಸಫಲ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಗುರುಪುರ-ಕೈಕಂಬ ಇದರ ಅಧ್ಯಕ್ಷರಾಗಿ ಸಂಜೀವ ಅಡ್ಯಾರ್ ಪುನರಾಯ್ಕೆಯಾಗಿದ್ದಾರೆ.
https://chat.whatsapp.com/Ge11n7QCiMj5QyPvCc0H19
2025-2030ನೇ ಸಾಲಿಗೆ ನಡೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಂಜೀವ ಅಡ್ಯಾರ್, ಉಪಾಧ್ಯಕ್ಷರಾಗಿ ಪ್ರೇಮಾನಂದ ಎ. ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕರಾಗಿ ಜಯರಾಮ್ ಅಡ್ಯಾರ್, ಮಾಧವ ಸುವರ್ಣ ಎ., ಮಾಧವ ಮಾವೆ, ಭಾಸ್ಕರ್ ಸಪಲಿಗ, ಮಹಾಬಲ ಅಡ್ಯಾರ್, ಅನಿಲ್ ಕುಮಾರ್ ಅತ್ತಾವರ, ವೆಂಕಟೇಶ್ ಎಂ., ಹರಿದಾಸ್ ಯು, ಮೋನಪ್ಪ ಸಪಲಿಗ, ತಿರುಮಲೇಶ್ ಸಪಲಿಗ, ಮೋಹಿನಿ ಎಚ್., ಸತ್ಯಪ್ರಭಾ ಮತ್ತು ಅನಿತಾ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ಪ್ರಕ್ರಿಯೆಯನ್ನು ಲೆಕ್ಕಪರಿಶೋಧನಾ ಇಲಾಖೆಯ ಪ್ರಥಮದರ್ಜೆ ಗುಮಾಸ್ತ ನವೀನ್ ಕುಮಾರ್ ಎಂ.ಎಸ್ ನಿರ್ವಹಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com