ಪರಮಪೂಜ್ಯ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 21ನೇ ಶಾಖೆ ನಿಂತಿಕಲ್ಲಿನಲ್ಲಿ ಕಾರ್ಯಾರಂಭ
ಪುತ್ತೂರು: ಯಾವುದೇ ಕೆಲಸವಾದರೂ ಪ್ರಾಮಾಣಿಕ ಪ್ರಯತ್ನವಿದ್ದರೆ ಸಂಸ್ಥೆಗೆ ಯಶಸ್ಸು ಸಾಧ್ಯ. ಯಾವುದೇ ಸಂಸ್ಥೆಯಾದರೂ ಅದರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಅಗತ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಮುರುಳ್ಯ -ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಧನಾ ಸಹಕಾರ ಸೌಧದಲ್ಲಿ ಶುಕ್ರವಾರ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ 21ನೇ ನೂತನ ಶಾಖೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ನಿಂತಿಕಲ್ಲಿನಲ್ಲಿ ನಮ್ಮ ಶಾಖೆ ಉದ್ಘಾಟನೆ ಆಗಿರುವುದು ಸಂತಸ ತಂದಿದೆ. ಧರ್ಮಶ್ರದ್ಧೆಯ ಕೆಲಸ ನಮ್ಮದಾಗಬೇಕು. ನಮ್ಮ ಸಂಸ್ಥೆಯ ಉದ್ದೇಶ ವಿವಿಧೋದ್ದೇಶವಾಗಿದೆ. ಲೌಕಿಕ ಬೆಳವಣಿಗೆಗೆ ಸಂಘ ಸಂಸ್ಥೆ, ಸಹಕಾರಿಯ ಅಗತ್ಯ ಬಹಳಷ್ಟಿದೆ ಎಂದು ಹೇಳಿದರು.
ಅರ್ಹತೆ ನೋಡಿ ಸಹಕಾರ ನೀಡುವ ಕೆಲಸವಾಗಬೇಕು. ಸಾಮಾನ್ಯ ಜನರಿಗೆ ಸೇವೆ ಸಿಗಬೇಕೆಂದು ಸಂಸ್ಥೆಯ ಉಗಮವಾಗಿದೆ. ಕೊಡು-ಕೊಳ್ಳುವಿಕೆಯ ಗುಣ ಇಲ್ಲಿ ಅಗತ್ಯ. ಸಂಸ್ಥೆ ಪಾರದರ್ಶಕವಾಗಿ ನಡೆದಾಗ ಹೆಚ್ಚಿನ ಯಶಸ್ಸು ಸಿಗುತ್ತದೆ. ಒಗ್ಗಟ್ಟಿನಿಂದ ಸಹಕಾರಿ ಸಂಘಗಳು ಮತ್ತಷ್ಟು ಗಟ್ಟಿಯಾಗುತ್ತದೆ. ಗ್ರಾಹಕರು ಸಹಕಾರಿಯ ಜೀವಾಳ. ಮಾನವೀಯ ಮೌಲ್ಯ ಬಹಳಷ್ಟು ಶ್ರೇಷ್ಟವಾದುದು. ಅದನ್ನು ಬೆಳೆಸುವ ಕೆಲಸವಾಗಬೇಕು ಎಂದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಜಿಲ್ಲಾ ಸಂಯೋಜಕ ವಿಜಯ ಬಿ.ಎಸ್. ಮಾತನಾಡಿ, ಹಲವಾರು ಸಮಾಜಮುಖಿ ಯೋಜನೆಯನ್ನು ತಂದ ಸಹಕಾರಿ ಇದಾಗಿದೆ. ಸಹಕಾರಿಯ ಪಾರದರ್ಶಕ ಆಡಳಿತ ವ್ಯವಸ್ಥೆ ಸಂಘ ಈ ಹಂತಕ್ಕೆ ತಲುಪಲು ಕಾರಣವಾಗಿದೆ. ಇದು ಇತರ ಸಹಕಾರಿಗಳಿಗೆ ಮಾದರಿಯಾಗಿದೆ ಎಂದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಭಾರತಿ ಜಿ. ಭಟ್, ಮಾತನಾಡಿ ಸಮರ್ಥ ನಾಯಕತ್ವ ಇದ್ದಲ್ಲಿ ಯಶಸ್ಸು ಖಂಡಿತ ಎನ್ನುವುದಕ್ಕೆ ಒಡಿಯೂರು ಸಹಕಾರಿ ನಿದರ್ಶನ. ಆರೋಗ್ಯ ನೆಮ್ಮದಿ ನಮಗೆ ಅತಿ ಅಗತ್ಯ. ಪರಸ್ಪರ ಸಹಕಾರದಿಂದ ಎಲ್ಲವೂ ಸಾಧ್ಯವಿದೆ. ಒಡಿಯೂರು ಸೊಸೈಟಿಯು ಸಾಮಾಜಿಕ ಕಳಕಳಿಯುಳ್ಳ ಸಹಕಾರಿ ಸಂಘವಾಗಿದೆ. ಮಾನವೀಯ ಮೌಲ್ಯ ತುಂಬಿದ ಸಂಸ್ಥೆ ಇದಾಗಿದೆ ಎಂದರು.
https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಎ.ಸುರೇಶ್ ರೈ ಅಧ್ಯಕ್ಷತೆ ವಹಿಸಿದ್ದರು. ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲ್, ಮುರುಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷ ವನಿತಾ ಸುವರ್ಣ ಬಾಮೂಲೆ, ಮುರುಳ್ಯ- ಎಣ್ಮೂರು ಪ್ರಾಕೃತಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕುಸುಮಾವತಿ ರೈ ಕೆ.ಜಿ. ಎಣ್ಮೂರುಗುತ್ತು, ಎಣ್ಮೂರು ಕೋಟಿ ಚೆನ್ನಯ ನಗರ ಶ್ರೀ ಸೀತಾ-ರಾಮಚಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಘುನಾಥ ರೈ ಕೆ.ಎಸ್. ಕಟ್ಟಬೀಡು, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪಿ.ಆರ್.ಒ. ಮಾತೇಶ್ ಭಂಡಾರಿ, ಶ್ರೀ ಗುರುದೇವ ಸೇವಾ ಬಳಗ ಮುರುಳ್ಯ -ಎಣ್ಮೂರು ವಲಯ ಅಧ್ಯಕ್ಷ ಮಹಾಬಲ ರೈ ಎಂ.ಕೋಡೋಳು, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲು, ಸಂಸ್ಥೆಯ ನಿರ್ದೇಶಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪೃಥ್ವಿ ಶೆಟ್ಟಿ ಪ್ರಾರ್ಥಿಸಿದರು. ಸಂಸ್ಥೆಯ ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ ಸ್ವಾಗತಿಸಿದರು. ನಿರ್ದೇಶಕ ಸೋಮಪ್ಪ ನಾಯ್ಕ ಕಡಬ ವಂದಿಸಿದರು. ಸುಧಾಕರ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com