ಸದಸ್ಯರಿಗೆ ಶೇ.12 ಡಿವಿಡೆಂಡ್ ಘೋಷಣೆ
ಪುತ್ತೂರು : ಪುತ್ತೂರಿನಲ್ಲಿ ಪ್ರಧಾನ ಕಚೇರಿ ಹೊಂದಿ ರಾಜ್ಯಾದ್ಯಂತ 19 ಶಾಖೆಗಳೊಂದಿಗೆ ಕಾರ್ಯಾಚರಿಸುತ್ತಿರುವ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 23ನೇ ವಾರ್ಷಿಕ ಮಹಾಸಭೆ ಸಹಕಾರಿಯ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಅಧ್ಯಕ್ಷತೆಯಲ್ಲಿ ಭಾನುವಾರ ತೆಂಕಿಲದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.
ಸಹಕಾರಿಯ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಮಾತನಾಡಿ, ಸಹಕಾರಿಯೂ ಗಣನೀಯ ಪ್ರಗತಿ ಸಾಧಿಸಲು ಕಾರಣರಾದ ಎಲ್ಲರಿಗೆ ಅಭಿನಂದನೆ ಸಲ್ಲಿಸಿದರು. ಕಳೆದ ಆರ್ಥಿಕ ವರ್ಷದಲ್ಲಿ ಸಹಕಾರಿಯ ವ್ಯವಹಾರದಲ್ಲಿ ಗಣನೀಯ ಪ್ರಗತಿಯಾಗಿದ್ದು ಇದಕ್ಕೆ ಕಾರಣರಾದ ಸದಸ್ಯರನ್ನು ಅಭಿನಂದಿಸಿದರು. ಸರಸ್ವತಿ ಸಹಕಾರಿಯು ರಾಜ್ಯಾದ್ಯಂತ 19 ಶಾಖೆಗಳ ಮೂಲಕ ಸದಸ್ಯರಿಗೆ ಸೇವೆಯನ್ನು ನೀಡುತ್ತಿದೆ. ರಾಜ್ಯ ಸರಕಾರವು ಸಹಕಾರಿಕಾಯ್ದೆಯ ತಿದ್ದುಪಡಿ ಮಾಡಿದ್ದು, ಇವುಗಳ ಸಾಧಕ ಬಾಧಕಗಳ ಬಗ್ಗೆ ಅಧ್ಯಯನ ನಡೆಸಬೇಕಿದೆ ಎಂದರು. 2023 -24ರ ಆರ್ಥಿಕ ವರ್ಷಾಂತ್ಯಕ್ಕೆ ಸಹಕಾರಿಯಲ್ಲಿ 45,077 ಸದಸ್ಯರಿದ್ದು, ರೂ 9.75 ಕೋಟಿ ಪಾಲು ಬಂಡವಾಳವಿದೆ. ಸಹಕಾರಿಯು ರೂ. 24.05 ಕೋಟಿ ವಿವಿಧ ನಿಧಿಗಳನ್ನು ಹೊಂದಿ ಸದೃಢವಾಗಿದೆ. ಸದಸ್ಯರಿಂದ ರೂ. 316.29 ಕೋಟಿ ಠೇವಣಾತಿ ಸಂಗ್ರಹಿಸಿ ರೂ.286.59 ಕೋಟಿ ಸಾಲ ವಿತರಿಸಲಾಗಿದೆ. ಒಟ್ಟು ವ್ಯವಹಾರ ರೂ.602.88 ಆಗಿದ್ದು ವರದಿ ವರ್ಷದಲ್ಲಿ ರೂ.118.35 ಕೋಟಿ ಜಾಸ್ತಿಯಾಗಿದೆ. ರೂ. 5.19 ಕೋಟಿ ನಿವ್ವಳ ಲಾಭ ದಾಖಲಿಸಿದ್ದು ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡುವುದಾಗಿ ಘೋಷಿಸಲಾಯಿತು.
https://translate.google.com/website?sl=en&tl=kn&hl=kn&client=srp&u=https://chat.whatsapp.com/KMsVn4jxIFJ7RG1gTWHCLK
ಸಹಕಾರಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ವಸಂತ ನಾಯಕ್ ಎ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಸಹಕಾರಿಯ ಸದಸ್ಯರು, ಸಲಹೆ ಸೂಚನೆಗಳನ್ನು ನೀಡಿದರು.
ವೇದಿಕೆಯಲ್ಲಿ ಸಹಕಾರಿಯ ಉಪಾಧ್ಯಕ್ಷ ಉಮೇಶ್ ಪ್ರಭು, ನಿರ್ದೇಶಕರಾದ ದೇವಿಪ್ರಸಾದ್ ಕೆ., ಜಯರಾಮ ಪಿ., ಕೆ.ಹರೀಶ್ ಬೋರ್ಕರ್, ಹೇಮಂತ ಕುಮಾರ್ ಕೆ.ಆರ್, ಪ್ರಕಾಶ್ಚಂದ್ರ ಪಿ., ರಮೇಶ್ಚಂದ್ರ ಎಂ., ರಾಜಗೋಪಾಲ ಬಿ., ದೇವಕಿ ಕೆ., ಸರಸ್ವತಿ ಎನ್., ವೃತ್ತಿಪರ ನಿರ್ದೇಶಕರಾದ ಬಿ.ವಸಂತ ಶಂಕರ್, ವೇದವ್ಯಾಸ ಕೆ., ಕಾರ್ಯಾನುಗುಣ ನಿರ್ದೇಶಕರಾದ ಶ್ರೀಕಾಂತ ರಾವ್ ವಿ.ಡಿ, ರವೀಶ ಪಿ ಹಾಗೂ ವರದಿ ವರ್ಷದ ಸನದು ಲೆಕ್ಕ ಪರಿಶೋಧಕರಾದ ಸಿ.ಎ ಸುಜಯ ಡಿ ಉಪಸ್ಥಿತರಿದ್ದರು. ಸಹಕಾರಿಯ ಹಿರಿಯ ಅಧಿಕಾರಿ ರಂಜಿತಾ ಎ.ವಿ ಪ್ರಾರ್ಥಿಸಿದರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಸಂತ ನಾಯಕ್ ಎ ಸ್ವಾಗತಿಸಿ, ವಿಭಾಗೀಯ ವ್ಯವಸ್ಥಾಪಕ ಪ್ರೇಮಚಂದ್ರ ನಾಯಕ್ ವಂದಿಸಿದರು. ಹಿರಿಯ ವ್ಯವಸ್ಥಾಪಕ ದೇವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ :
ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದಲ್ಲಿ ಸಂಶೋದಿಸಲ್ಪಟ್ಟು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಇತ್ತೀಚೆಗೆ ಲೋಕಾರ್ಪಣೆಗೊಂಡ ನೇತ್ರಗಂಗಾ ಗೇರುತಳಿಯ ಸಂಶೋಧನಾ ತಂಡದ ನೇತೃತ್ವ ವಹಿಸಿದ ಸಹಕಾರಿಯ ಸದಸ್ಯರಾದ ಡಾ.ಗಂಗಾಧರ ನಾಯಕ್ ಹಾಗೂ ಸಹಕಾರಿಯ ವರದಿ ವರ್ಷದ ಸನದು ಲೆಕ್ಕ ಪರಿಶೋಧಕರಾದ ಸಿ.ಎ ಸುಜಯ ಡಿ ಆಳ್ವ ಅವರನ್ನು ಸನ್ಮಾನಿಸಲಾಯಿತು. ಮಹಾಸಭೆಯ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಹಕಾರಿಯ ಸಿಬ್ಬಂದಿಗಳಿಂದ “ಸ್ವರ ಮಾಧುರ್ಯ” ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com