ಮಂಗಳೂರು: ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ 20ನೇ ಶಾಖೆ ಕಿನ್ನಿಗೋಳಿಯಲ್ಲಿ ಆಗಸ್ಟ್ 28ರಂದು ಕಿನ್ನಿಗೋಳಿ ಬಸ್‌ಸ್ಟ್ಯಾಂಡ್ ಬಳಿಯ ದುರ್ಗಾದಯಾ ಬಿಲ್ಡಿಂಗ್‌ನಲ್ಲಿ ಬೆಳಗ್ಗೆ 10.30ಕ್ಕೆ ಉದ್ಘಾಟನೆಯಾಗಲಿದೆ.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಗೌರವ ಮಾರ್ಗದರ್ಶಕಿ, ಸಾಧ್ವಿ ಶ್ರೀ ಮಾತಾನಂದಮಯೀ ದಿವ್ಯ ಉಪಸ್ಥಿತಿ ವಹಿಸುವರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಸಹಕಾರ ರತ್ನ ಲಯನ್ ಎ.ಸುರೇಶ್ ರೈ ಅಧ್ಯಕ್ಷತೆ ವಹಿಸುವರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ, ಶಾಸಕ ಉಮಾನಾಥ ಕೋಟ್ಯಾನ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕಿ ಭಾರತಿ ಜಿ.ಭಟ್, ದುರ್ಗಾದಯ ಕಾಂಪ್ಲೆಕ್ಸ್‌ನ ಮಾಲಕ ಕೆ.ಸೀತಾರಾಮ್ ಶೆಟ್ಟಿ, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಗುತ್ತಿಗೆದಾರ, ಕಿನ್ನಿಗೋಳಿ ಬಂಟರ ಸಂಘದ ಮಾಜಿ ಅಧ್ಯಕ್ಷ ಸಂತೋಷ್ ಹೆಗ್ಡೆ, ಕಟೀಲು ಶ್ರೀ ಡೆವಲಪರ್ಸ್‌ನ ಮಾಲಕ ಗಿರೀಶ್ ಎಂ.ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶೈಲಾ ಸಿಕ್ವೇರ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಜಿಲ್ಲಾ ಸಂಯೋಜಕ ವಿಜಯ್ ಬಿ.ಎಸ್., ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಕಿರಣ್ ಯು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಒಡಿಯೂರು ಸಹಕಾರಿಯ ಸಾಧನೆಗಳು
ಮೂರು ಬಾರಿ ಅತ್ಯುತ್ತಮ ಸೌಹಾರ್ದ ಸಹಕಾರಿ ಸಂಘ ಪ್ರಶಸ್ತಿ
ಸಹಕಾರಿಯ ಅಧ್ಯಕ್ಷರಿಗೆ ಸಹಕಾರ ರತ್ನ ಪುರಸ್ಕಾರ
ಆರಂಭವಾದ ಕೇವಲ 13 ವರ್ಷಗಳಲ್ಲಿ500 ಕೋಟಿ ರೂ. ಮಿಕ್ಕಿದ ವ್ಯವಹಾರ
13 ವರ್ಷಗಳಿಂದಲೂ ನಿರಂತರ ಎ ಶ್ರೇಣಿ ಪಡೆದುಕೊಂಡು ಸದಸ್ಯರಿಗೆ 15 ಶೇ.ಡಿವಿಡೆಂಡ್ ನೀಡಿಕೆ
ಮಂಗಳೂರಿನ ಪಂಪ್‌ವೆಲ್‌ನಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತವಾದ ೭೦೦೦ ಚದರ ಮೀಟರ್ ವಿಸ್ತೀರ್ಣದ ಭವ್ಯವಾದ ಸ್ವಂತ ಆಡಳಿತ ಕಛೇರಿ ಮತ್ತು ಪಂಪ್‌ವೆಲ್ ಶಾಖೆ ಮತ್ತು ಯೋಜನಾ ಕಛೇರಿಗಳು ಸಹಕಾರಿಯ ಸಾಧನೆಗೊಂದು ಕೈಗನ್ನಡಿ
ಒಡಿಯೂರು ಸಹಕಾರಿಯ ಕಾವೂರು, ಸುರತ್ಕಲ್, ವಿಟ್ಲ, ಬಿ.ಸಿ.ರೋಡ್ ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಣೆ
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಮೂಲಕ ಗ್ರಾಮೀಣ ಜನರ, ಕಡುಬಡವರ ಆರ್ಥಿಕಾಭಿವೃದ್ಧಿಗೆ ಕೊಡುಗೆ
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com