ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಆಶಯ
ಅಂತಾರಾಷ್ಟ್ರೀಯ ಸಹಕಾರ ದಿನ ಪ್ರಯುಕ್ತ ಸಹಕಾರದಿಂದ ಸಮೃದ್ಧಿ ಕಾರ್ಯಕ್ರಮ ಆಯೋಜನೆ
ಅಹಮದಾಬಾದ್: ಸಹಕಾರಿ ಕ್ಷೇತ್ರವನ್ನು ದೇಶದ ಆರ್ಥಿಕತೆಯ ಅತ್ಯಂತ ಬಲವಾದ ಸ್ತಂಭವನ್ನಾಗಿ ಮಾಡಿ ಅಭಿವೃದ್ಧಿಶೀಲ ಭಾರತದ ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಆಶಯ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ಸಹಕಾರ ದಿನದ ಪ್ರಯುಕ್ತ ಶನಿವಾರ ಗುಜರಾತ್‌ನ ಗಾಂಧಿನಗರದ ಮಹಾತ್ಮಾ ಮಂದಿರದಲ್ಲಿ ಆಯೋಜಿಸಿದ ‘ಸಹಕಾರದಿಂದ ಸಮೃದ್ಧಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹಕಾರಿ ಸಂಸ್ಥೆಗಳು ಮೆಕ್ಕಜೋಳವನ್ನು ಎಂ.ಎಸ್.ಪಿ.ಯಲ್ಲಿ ಖರೀದಿಸಲಿವೆ ಮತ್ತು ಅದರಿಂದ ಎಥೆನಾಲ್ ಉತ್ಪಾದನೆ ಮಾಡಲಾಗುವುದು ಎಂದರು.
ಗುಜರಾತ್ ಮುಖ್ಯಮಂತ್ರಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಕೇಂದ್ರ ಸಹಕಾರ ಸಚಿವ ಶ್ರೀ ಅಮಿತ್ ಶಾ ಸಹಕಾರಿ ಕ್ಷೇತ್ರದಲ್ಲಿ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಮಂತ್ರವನ್ನು ಸಾಕಾರಗೊಳಿಸಿದ್ದಾರೆ. ಗುಜರಾತಿನಲ್ಲಿ ಸಹಕಾರಿ ಸಂಸ್ಥೆಗಳು ವೈದ್ಯಕೀಯ ಕಾಲೇಜುಗಳಿಂದ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಂತಹ ಸೇವಾ ಕಾರ್ಯಗಳಲ್ಲಿ ಸಹಾಯ ಮಾಡುತ್ತಿದೆ. ಗುಜರಾತಿನಲ್ಲಿ ಸಹಕಾರಿ ಆಧಾರದ ಮೇಲೆ ಪ್ರಾಕೃತಿಕ ಕೃಷಿಯನ್ನು ಅಭಿವೃದ್ಧಿಪಡಿಸಲು 400 ಕ್ಕೂ ಹೆಚ್ಚು ಪ್ರಾಕೃತಿಕ ಕೃಷಿ ಸಹಕಾರಿ ಮಂಡಳಿಗಳನ್ನು ನಿರ್ವಹಿಸುತ್ತಿವೆ ಪ್ರಧಾನಮಂತ್ರಿ ಅವರ ‘ವಿಕಸಿತ ಭಾರತ@2047’ರ ಆಹ್ವಾನವನ್ನು ಸಹಕಾರಿ ಕ್ಷೇತ್ರ ‘ಸಹಕಾರದಿಂದ ಸಮೃದ್ಧಿ’ಯ ಮಂತ್ರದೊಂದಿಗೆ ಯಶಸ್ವಿ ಮಾಡಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಹಕಾರ ರಾಜ್ಯ ಸಚಿವ ಮುರಲೀಧರ್ ಮೊಹೋಲ್ ಮತ್ತು ಗುಜರಾತಿನ ಸಹಕಾರ ಸಚಿವ ಜಗದೀಶ ವಿಶ್ವಕರ್ಮ ಮತ್ತಿತರ ಸಹಕಾರಿ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.
ಗುಜರಾತ್ ಸರ್ಕಾರವು ರೈತರಿಗೆ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿ.ಎ.ಪಿ. ಖರೀದಿಯಲ್ಲಿ 50% ವಿಶೇಷ ಸಹಾಯವನ್ನು ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ. ಪರಂಪರೆಯ ಯೂರಿಯಾದ ಬದಲು ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿ.ಎ.ಪಿ (ದ್ರವ) ಬಳಕೆ ಮಾಡುವ ಮೂಲಕ ಯೂರಿಯಾದ ಬಳಕೆ ಕಡಿಮೆ ಮಾಡಬಹುದು. ಇದು ಬೆಳೆ ಮತ್ತು ಭೂಮಿಯ ಗುಣಮಟ್ಟದ ಜೊತೆಗೆ ಮಾನವನ ಆರೋಗ್ಯದಲ್ಲೂ ಸುಧಾರಣೆ ತರುತ್ತದೆ. ಸಹಕಾರಿ ಸಂಸ್ಥೆಗಳ ನಡುವೆ ಸಹಕಾರವನ್ನು ಉತ್ತೇಜಿಸಲು ಸಹಕಾರ ಕ್ಷೇತ್ರದ ಸಂಪೂರ್ಣ ಆರ್ಥಿಕ ವ್ಯವಹಾರವನ್ನು ಸಹಕಾರಿ ಕ್ಷೇತ್ರದಲ್ಲಿಯೇ ಮಾಡವಂತಾಗಬೇಕು.
ಅಮಿತ್ ಶಾ
ಕೇಂದ್ರ ಗೃಹ, ಸಹಕಾರ ಸಚಿವಸಹಕಾರಿ ಸಂಸ್ಥೆಗಳ ಸುದ್ದಿ ಪ್ರಕಟಣೆಗಾಗಿ ಮೇಲ್ ಮಾಡಿ:
ಇಮೇಲ್: sahakaraspandana@gmail.com
ಮಾಹಿತಿಗೆ ಸಂಪರ್ಕಿಸಿ: 9901319694.