ಕಂಕನಾಡಿಯಲ್ಲಿ ಐದನೇ ಶಾಖೆ ಶೀಘ್ರ ಮಂಗಳೂರು: ನಾಲ್ಕು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಆರಂಭವಾದ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ 2023 – 24ನೇ ಸಾಲಿನ ಆರ್ಥಿಕ ವರ್ಷ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ.
ಠೇವಣಿ ಸಂಗ್ರಹದಲ್ಲಿ ಕಳೆದ ಸಾಲಿನ 16.6 ಕೋಟಿಯಿಂದ ಈ ವರ್ಷ 31.07 ಕೋಟಿ ಏರಿಕೆಯೊಂದಿಗೆ ಶೇ.86 ಸಾಧನೆ ಮಾಡಿದೆ. ಸಾಲ ವಿತರಣೆಯಲ್ಲಿ ಶೇ.87 ಪ್ರಗತಿ ಮತ್ತು 122 ಲಕ್ಷ ರೂ. ನಿವ್ವಳ ಲಾಭ ಗಳಿಸಿ ಕಳೆದ ವರ್ಷಕ್ಕಿಂತ ಈ ಬಾರಿ ಶೇ.60 ಏರಿಕೆಯಾಗಿದೆ. ಶೇ.99 ಸಾಲ ವಸೂಲಾತಿ ಸೊಸೈಟಿಯ ಕಾರ್ಯಕ್ಷಮತೆ, ಕಾರ್ಯದಕ್ಷತೆಗೆ ಹಿಡಿದ ಕನ್ನಡಿಯಾಗಿದೆ.
ಆರಂಭದ ವರ್ಷಗಳಿಂದಲೂ ಸದಸ್ಯರಿಗೆ ಡಿವಿಡೆಂಡ್ ನೀಡುತ್ತಿದ್ದು, ಕಳೆದ ವರ್ಷ ಶೇ.20 ಡಿವಿಡೆಂಡ್ ನೀಡಿತ್ತು. ಈ ವರ್ಷ ಇನ್ನೂ ಹೆಚ್ಚಿನ ಡಿವಿಡೆಂಡ್ ನೀಡಲು ಅವಕಾಶವಿದೆ. ಮುಂದಿನ ತಿಂಗಳು ಕಂಕನಾಡಿಯಲ್ಲಿ ಐದನೇ ಶಾಖೆ ತೆರೆಯಲು ನಿಶ್ಚಯಿಸಿದೆ.
ಉರ್ವಸ್ಟೋರ್‌ನಲ್ಲಿ ಪ್ರಧಾನ ಕಚೇರಿ ಹಾಗೂ ಶಾಖೆಯೊಂದಿಗೆ 2019ರಲ್ಲಿ ಆರಂಭವಾದ ಶ್ರೀಶಾ ಸೊಸೈಟಿ ನಾಲ್ಕು ವರ್ಷಗಳಲ್ಲಿ ನಾಲ್ಕು ಸುಸಜ್ಜಿತ ಶಾಖೆಗಳನ್ನು ಹೊಂದಿದ್ದು (ಉರ್ವಸ್ಟೋರ್, ಮಂಗಳಾದೇವಿ, ಹಂಪನಕಟ್ಟೆ ಹಾಗೂ ದೇರಳಕಟ್ಟೆ) ಸಾವಿರಾರು ಸಂತೃಪ್ತ ಗ್ರಾಹಕರನ್ನು ಹೊಂದಿದೆ. ಎಲ್ಲ ಶಾಖೆಗಳು ಸಂಪೂರ್ಣ ಗಣಕೀಕೃತಗೊಂಡಿದ್ದು ಗ್ರಾಹಕರಿಗೆ ನಗುಮೊಗದ ಸೇವೆ ನೀಡುತ್ತಿದೆ.
ಸಮಾಜಸೇವಾ ಚಟುವಟಿಕೆ 18 ತಿಂಗಳಿನಿಂದ ಪ್ರತಿ ಮೊದಲ ಭಾನುವಾರ ಮಂಗಳೂರು ತಾಲೂಕಿನ ವಿವಿಧ ಗ್ರಾಮಾಂತರ ಸ್ಥಳಗಳಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗ ಮತ್ತು ಅತ್ತಾವರದ ಕೆಎಂಸಿ ಆಸ್ಪತ್ರೆ ಮತ್ತು ದೇರಳಕಟ್ಟೆ ಯೇನಪೋಯ ದಂತ ಆಸ್ಪತ್ರೆಯ ವೈದ್ಯರ ತಂಡದೊಂದಿಗೆ ಬೃಹತ್ ಉಚಿತ ವೈದ್ಯಕೀಯ -ದಂತ -ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಏರ್ಪಡಿಸುತ್ತಿದೆ. ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಗಳನ್ನು ಸಂಪೂರ್ಣ ಉಚಿತವಾಗಿ ಅತ್ತಾವರದ ಆಸ್ಪತ್ರೆಯಲ್ಲಿ ಮಾಡಲಾಗುತ್ತಿದೆ. ಕನ್ನಡಕಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಕಲೆಗೆ ಉತ್ತೇಜನ, ಅಶಕ್ತರಿಗೆ ನೆರವು ರಾಮಕೃಷ್ಣ ಆಶ್ರಮದ ಆಶ್ರಮ ಮತ್ತು ದಾಸಸಾಹಿತ್ಯ ಸೇವಾ ಪ್ರತಿಷ್ಠಾನ ಸಹಯೋಗದೊಂದಿಗೆ ರಾಜ್ಯದ ಹೆಸರಾಂತ ಗಾಯಕರಿಂದ ಹರಿದಾಸರ ಕೃತಿ ಕೀರ್ತನೆಗಳ ಗಾಯನ -ವ್ಯಾಖ್ಯಾನಗಳ ಕಾರ್ಯಕ್ರಮ ನಿರಂತರ ಆಯೋಜಿಸುತ್ತ ಬರುತ್ತಿದ್ದು ಇದು ಅಪಾರ ಜನಮನ್ನಣೆ ಗಳಿಸಿದೆ. ಜತೆಗೆ ಅನೇಕ ಅಶಕ್ತ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಲಾ/ ಕಾಲೇಜು ಶುಲ್ಕ ಭರಿಸುತ್ತಿದೆ. ದ.ಕ.ಜಿಲ್ಲಾ ನಿವೃತ್ತ ಯೋಧರ ಸಂಘಕ್ಕೆ ನಿವ್ವಳ ಲಾಭದ ಶೇ.1 ಹಣ (76,500 ರೂ.) ನೀಡಲಾಗಿದೆ. ಅಶಕ್ತರಿಗೆ ವೀಲ್ಚೇರ್, ವಾಕರ್‌ಗಳನ್ನು ನೀಡಲಾಗಿದೆ.
ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ಶ್ರೀಶಾ ಸೊಸೈಟಿ ತಾನು ಗಳಿಸಿದ ಲಾಭದ ದೊಡ್ಡ ಪಾಲನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುತ್ತ್ತಿದೆ. ಸೊಸೈಟಿಯ ಯೋಜನೆಗಳು ಸಾಕಾರಗೊಳ್ಳಲು ಸಂಸ್ಥೆಯ ಸಿಬ್ಬಂದಿ ವರ್ಗದ ಅವಿರತ, ಕಠಿಣ ಶ್ರಮ ಮತ್ತು ಸೂಕ್ತ ಸಮಯದಲ್ಲಿ ಸೂಕ್ತ ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಅನುಭವಿ ಆಡಳಿತ ಮಂಡಳಿಯೇ ಕಾರಣ.
ಎಂ.ಎಸ್.ಗುರುರಾಜ್
ಅಧ್ಯಕ್ಷರು, ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ