ಪ್ರಸ್ತುತ ರೆಪೋ ದರ 6.5% ರಷ್ಟು ಇದ್ದು, ಇದನ್ನು ಯಥಾಸ್ಥಿತಿ ಉಳಿಸಿಕೊಳ್ಳಲು ಕೇಂದ್ರ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ನಿರ್ಧರಿಸಿದೆ.
ಮುಂಬೈ (ಅಕ್ಟೋಬರ್ 6, 2023): ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಪ್ರಮುಖ ರೆಪೋ ದರವನ್ನು ಸತತ ನಾಲ್ಕನೇ ಬಾರಿಗೆ ಬದಲಾಯಿಸದೆ ಇರಲು ತೀರ್ಮಾನಿಸಿದೆ. ಸದ್ಯ ರೆಪೋ ದರ 6.5% ರಷ್ಟು ಇದ್ದು, ಇದನ್ನು ಬದಲಿಸದೆ ಇರಲು ನಿರ್ಧರಿಸಿದೆ.
RBI ಇದೀಗ ಸತತ 4 ನೇ ಬಾರಿಯೂ ತನ್ನ ರೆಪೋ ದರವನ್ನು ಬದಲಾಯಿಸದೇ ಇರಲು ತೀರ್ಮಾನಿಸಿದೆ ಹಾಗೂ ಕೇಂದ್ರ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ರೆಪೋ ದರ ಎಂದರೆ ಏನು ?
ರೆಪೋ ದರವು RBI ಇತರ ಬ್ಯಾಂಕ್‌ಗಳಿಗೆ ಸಾಲ ನೀಡುವ ಬಡ್ಡಿ ದರವಾಗಿದೆ.