Close Menu
    Top News

    ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆ

    September 24, 2026

    ಪರಿವರ್ತನಾ ಸೊಸೈಟಿಯಿಂದ ಪವರ್ (ಲೈನ್) ಮ್ಯಾನ್, ಸಿಬ್ಬಂದಿಗೆ ಗೌರವ ಸನ್ಮಾನ

    September 24, 2026

    ಕಿರಣ ಸ್ವಸಹಾಯ ಸೌಹಾರ್ದ ಸಹಕಾರಿಗೆ ರೂ.23.87 ಲಕ್ಷ ಲಾಭ; ಸದಸ್ಯರಿಗೆ ಶೇ.16 ಡಿವಿಡೆಂಡ್ ಘೋಷಣೆ

    September 24, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಪರಿವರ್ತನಾ ಸೊಸೈಟಿಯಿಂದ ಪವರ್ (ಲೈನ್) ಮ್ಯಾನ್, ಸಿಬ್ಬಂದಿಗೆ ಗೌರವ ಸನ್ಮಾನ
    News

    ಪರಿವರ್ತನಾ ಸೊಸೈಟಿಯಿಂದ ಪವರ್ (ಲೈನ್) ಮ್ಯಾನ್, ಸಿಬ್ಬಂದಿಗೆ ಗೌರವ ಸನ್ಮಾನ

    adminBy adminSeptember 24, 2026

    ಬಜ್ಪೆ: ಮೆಸ್ಕಾಂ ಇಲಾಖೆಯಲ್ಲಿ ಹಗಲಿರುಳೆನ್ನದೆ, ಮಳೆ-ಗಾಳಿ, ಬಿಸಿಲು-ಚಳಿ ಎನ್ನದೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡು ಕೆಲಸ ನಿರ್ವಹಿಸುತ್ತಿರುವ ಮೆಸ್ಕಾಂ ಸಿಬ್ಬಂದಿಗಳ ಸೇವೆಯನ್ನು ಗುರುತಿಸಿ ಬಜ್ಪೆಯ ಪರಿವರ್ತನಾ ಕೋ ಆಪರೇಟಿವ್‌ ಸೊಸೈಟಿ ವತಿಯಿಂದ ವಾರ್ಷಿಕ ಮಹಾಸಭೆಯಲ್ಲಿ ಗೌರವ ಸನ್ಮಾನ ನೆರವೇರಿಸಲಾಯಿತು.

    https://chat.whatsapp.com/FCEnlTkAKCC0MGPhXtX4i4
    ಪ್ರಸ್ತುತ ಬಜ್ಪೆ ಮೆಸ್ಕಾಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಪವರ್ ಮ್ಯಾನ್, ಕಿರಿಯ ಇಂಜಿನಿಯರ್, ಸಿಬ್ಬಂದಿ ವರ್ಗದವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಬಜ್ಪೆ ಮೆಸ್ಕಾಂನ ಕಿರಿಯ ಇಂಜಿನಿಯರ್ ದಿನೇಶ್ ಡಿ ಆರ್, ಸುಮನಾ ಎಂ ಬಿ, ಮಹಮ್ಮದ್ ಹುಸೇನ್ ಪಿಂಜಾರ ಅವರು, ಪರಿವರ್ತನಾ ಸೊಸೈಟಿ ನಮ್ಮನ್ನು ಗುರುತಿಸಿ ಸನ್ಮಾನಿಸಿರುವುದು ಅತ್ಯಂತ ಸ್ಲಾಘನೀಯ ಮತ್ತು ನಾವು ಎಂದಿಗೂ ಮರೆಯಲಾಗದ ಅನುಭವ ಎಂದು ಶ್ಲಾಘಿಸಿದರು.


    ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿದ್ದ ಬಜ್ಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್‌ ಪೂಜಾರಿ ಮಾತನಾಡಿ, ಪರಿಶ್ರಮದಿಂದ ಪರಿವರ್ತನೆ ಸಾಧ್ಯ. ಇದಕ್ಕೆ ಉದಾಹರಣೆ ಪರಿವತ೯ನಾ ಕೋ ಆಪರೇಟಿವ್ ಸೊಸೈಟಿ. ಸಿಬ್ಬಂದಿಗಳು ಗ್ರಾಹಕರೊಂದಿಗೆ ವ್ಯವಹರಿಸುವ ರೀತಿ, ಸಂಸ್ಥೆಯ ಸೇವೆ, ಈ ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ, ಮೆಸ್ಕಾಂ ಸಿಬ್ಬಂದಿಗಳನ್ನು ಯಾರು ಗುರುತಿಸಿದ ಸಂದರ್ಭದಲ್ಲಿ ಅವರನ್ನು ಗೌರವಿಸಿದ್ದು ಅತ್ಯಂತ ಸಂತೋಷದಾಯಕ ಎಂದರು.
    ಪರಿವರ್ತನಾ ಸೊಸೈಟಿ ಅಧ್ಯಕ್ಷರಾದ ಕೃಷ್ಣಾನಂದ ಡಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ವೈಶಾಲಿ, ನಿರ್ದೇಶಕರುಗಳಾದ ಜಯಲಕ್ಷ್ಮಿ, ರುಕ್ಕಯ್ಯ ಅಮೀನ್, ಆಲ್ವಿನ್ ಎಫ್ ಡಿಸೋಜ, ರಾಘವೇಂದ್ರ, ಕಮಲಾಕ್ಷ ಡಿ, ಪದ್ಮನಾಭ ಅಮೀನ್, ಯಮುನಾ, ನಂದಾಕ್ಷಿ, ಹರೀಶ್ ಎಂ.ಸಿ, ಎಂ.ಕೆ ಅಶ್ರಫ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಾವಣ್ಯ ಉಪಸ್ಥಿತರಿದ್ದರು.

     

    Bajpe Town Panchayath Banking Co Operative ministry Cooperative Cooperative Department Cooperative Registrar Lokesh Poojary Parivarthana Co Operative Society Bajpe Sahakara Spandana
    Previous Articleಕಿರಣ ಸ್ವಸಹಾಯ ಸೌಹಾರ್ದ ಸಹಕಾರಿಗೆ ರೂ.23.87 ಲಕ್ಷ ಲಾಭ; ಸದಸ್ಯರಿಗೆ ಶೇ.16 ಡಿವಿಡೆಂಡ್ ಘೋಷಣೆ
    Next Article ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆ

    Related Posts

    ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆ

    September 24, 2026

    ಕಿರಣ ಸ್ವಸಹಾಯ ಸೌಹಾರ್ದ ಸಹಕಾರಿಗೆ ರೂ.23.87 ಲಕ್ಷ ಲಾಭ; ಸದಸ್ಯರಿಗೆ ಶೇ.16 ಡಿವಿಡೆಂಡ್ ಘೋಷಣೆ

    September 24, 2026

    ರಾಯಚೂರಿನ ಶ್ರೀ ವಿಜಯ ವಿಕಾಸ ಪತ್ತಿನ ಸೌಹಾರ್ದ ಸಹಕಾರಿ ಸಂಘಕ್ಕೆ ನಿವ್ವಳ ರೂ.14.24 ಲಕ್ಷ ಲಾಭ , ಸದಸ್ಯರಿಗೆ 15% ಲಾಭಾಂಶ ಘೋಷಣೆ

    September 23, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆ

    September 24, 2026

    ಪರಿವರ್ತನಾ ಸೊಸೈಟಿಯಿಂದ ಪವರ್ (ಲೈನ್) ಮ್ಯಾನ್, ಸಿಬ್ಬಂದಿಗೆ ಗೌರವ ಸನ್ಮಾನ

    September 24, 2026

    ಕಿರಣ ಸ್ವಸಹಾಯ ಸೌಹಾರ್ದ ಸಹಕಾರಿಗೆ ರೂ.23.87 ಲಕ್ಷ ಲಾಭ; ಸದಸ್ಯರಿಗೆ ಶೇ.16 ಡಿವಿಡೆಂಡ್ ಘೋಷಣೆ

    September 24, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.