ಗಂಗೊಳ್ಳಿ: ಉಡುಪಿ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಗಂಗೊಳ್ಳಿ ಟೌನ್ ಸೌಹಾರ್ದ ಕೋ -ಆಪರೇಟಿವ್ ಸೊಸೈಟಿ ಲಿಮಿಟೆಡ್ 2025-26ನೇ ಸಾಲಿನಲ್ಲಿ ರೂ. 1,42,72,616/- ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.17 ಡಿವಿಡೆಂಡ್ ಘೋಷಿಸಿದೆ.
https://chat.whatsapp.com/FCEnlTkAKCC0MGPhXtX4i4
ಗಂಗೊಳ್ಳಿಯ ಶ್ರೀ ವೀರವಿಠಲ ಸಭಾಭವನದಲ್ಲಿ ಭಾನುವಾರ ನಡೆದ ಸಂಘದ 106ನೇ ಸಾಮಾನ್ಯ ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಜಿ.ವೆಂಕಟೇಶ್ ಶೆಣೈ ಸದಸ್ಯರೆಲ್ಲರ ಒಪ್ಪಿಗೆ ಮೇರೆಗೆ 17% ಡಿವಿಡೆಂಡ್ ಘೋಷಿಸಿದರು.
ವರದಿ ಸಾಲಿನ ಅಂತ್ಯದಲ್ಲಿ ಸಂಘವು 4,114 ಸದಸ್ಯರು, 104.30 ಕೋಟಿ ಠೇವಣಿ, 89.44 ಸದಸ್ಯರ ಸಾಲ, 30.93 ಕೋಟಿ ಹೂಡಿಕೆ, 6.55 ಕೋಟಿ ವಿವಿಧ ನಿಧಿಗಳನ್ನು ಹೊಂದಿದ್ದು, ಸೌಹಾರ್ದ ಕಾಯಿದೆಯಡಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಸೌಹಾರ್ದ ಸಹಕಾರಿ ಸಂಘಗಳಲ್ಲಿ ಮುಂಚೂಣಿಯಲ್ಲಿದೆ. ಕಳೆದ ನವಂಬರ್ ನಲ್ಲಿ ಮಂಗಳೂರಿನಲ್ಲಿ ನಡೆದ ಸಹಕಾರ ಸಪ್ತಾಹದಲ್ಲಿ ಸಂಘಕ್ಕೆ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿಯೂ ಲಭಿಸಿದೆ.
ಉಡುಪಿ ಜಿಲ್ಲೆಯ ಮರವಂತೆ, ಸಿದ್ದಾಪುರ, ಸಾಸ್ತಾನ ಹಾಗೂ ಮಲ್ಪೆಗಳಲ್ಲಿ ಸಂಘದ ನೂತನ ಶಾಖೆಗಳನ್ನು ತೆರೆಯಲು ಸಾಮಾನ್ಯ ಸಭೆಯ ಅನುಮತಿ ಪಡೆಯಲಾಯಿತು.


ಗಂಗೊಳ್ಳಿಯ ರಥಬೀದಿಯಲ್ಲಿ ಹೈಮಾಸ್ಟ್ ದೀಪ, ಸ್ಥಳೀಯ ಗ್ರಾಮ ಪಂಚಾಯತ್‌ಗೆ ಬೀದಿದೀಪಗಳ ಕೊಡುಗೆ ಸೇರಿದಂತೆ ಹಲವು ಜನೋಪಯೋಗಿ ಕೊಡುಗೆಗಳನ್ನು ಅಧ್ಯಕ್ಷರು ಸಭೆಯಲ್ಲಿ ಘೋಷಿಸಿದರು.
ಸಂಘದ ನಿರ್ದೇಶಕ ನಾಗಪ್ರಸಾದ್ ಪೈ ಎಮ್.ಜಿ. ಸ್ವಾಗತಿಸಿ, ನಿರ್ದೇಶಕ ಎಸ್. ವೆಂಕಟರಮಣ ಆಚಾರ್ಯ ವಂದಿಸಿದರು. ಮುಖ್ಯ ಕಾರ್ಯನಿರ್ವಾಹಕ ಗಣೇಶ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಕಿರಿಯ ಸಹಾಯಕಿ ಪ್ರತೀಕ್ಷಾ ರಾಷ್ಟ್ರ ಗೀತೆ ಹಾಡಿದರು.
ಸಹಕಾರಿಯ ಉಪಾಧ್ಯಕ್ಷರಾದ ಜಿ.ವಿಶ್ವನಾಥ ಆಚಾರ್ಯ, ನಿರ್ದೇಶಕರಾದ ಎನ್. ಮಾಧವ ಕಿಣಿ, ಕೆ.ಪರಮೇಶ್ವರ ನಾಯಕ್, ರಾಮನಾಥ ಚಿತ್ತಾಲ್, ಬಿ.ರಾಘವೇಂದ್ರ ಪೈ, ನಗರ್ ಅಶ್ವಿನ್ ಕುಮಾರ್ ನಾಯಕ್, ಗೀತಾ ಜಿ. ನಾಯಕ್, ದೀಪಲಕ್ಷ್ಮಿ ನಾಯಕ್, ಕಿರಣ್ ಪಿಲಿಫ್ ಪಿಂಟೊ, ಮಹಾಬಲ ಪೂಜಾರಿ, ಸುರೇಶ್ ಜಿ ಉಪಸ್ಥಿತರಿದ್ದರು.


